ನಮ್ಮ ಮೆದುಳಿಗಾಗಲೀ, ಹೃದಯಕ್ಕಾಗಲೀ ಎಮರ್ಜನ್ಸಿ ಎಕ್ಸಿಟ್ ಇಲ್ಲ, ರಿಸ್ಟಾರ್ಟ್ ಬಟನ್ ಕೂಡಾ ಇಲ್ಲ, ಅಥವಾ ನಮ್ಮೆಲ್ಲ ದುಃಖದುಮ್ಮಾನಗಳನ್ನು ಹೊರಕಳಿಸಿ ಒಳಗೆ ತಾಜಾ ಗಾಳಿ ತೆಗೆದುಕೊಳ್ಳಲು ಕಿಟಕಿ ಕೂಡಾ ಇಲ್ಲ. ಪ್ರೀತಿಯ ವಿಷಯಕ್ಕೆ ಬಂದರೆ ಅವೆರಡೂ ಒಂದಾಗಿ ಹಟ ಹಿಡಿಯುತ್ತವೆ. ಆದರೆ, ನಿಮ್ಮನ್ನು ಕಳೆದುಕೊಳ್ಳಲು ಸಿದ್ಧರಿರುವವರಿಗಾಗಿ ನಿಮ್ಮನ್ನು ನೀವೇ ಕಳೆದುಕೊಳ್ಳುವುದೇಕೆ? 

ನಮ್ಮನ್ನು ಪ್ರೀತಿಸದವರನ್ನು ಪ್ರೀತಿಸುವುದೆಂದರೆ ಸಂತೋಷವೂ ಸಿಗುವುದಿಲ್ಲ, ಆತ್ಮವಿಶ್ವಾಸವೂ ಕುಗ್ಗುತ್ತದೆ, ಖಿನ್ನತೆಯೂ ಕಾಡುತ್ತದೆ, ನಮ್ಮ ಬಗ್ಗೆ ನಮಗೇ ಅತೃಪ್ತಿ ಶುರುವಾಗುತ್ತದೆ. ಹಾಗಾಗಿ, ಖಂಡಿತವಾಗಿಯೂ ಈ ಎಲ್ಲ ನೆಗೆಟಿವ್ ಚೈನ್‌ಲಿಂಕ್‌ಗಳಿಂದ ತಪ್ಪಿಸಿಕೊಂಡು ಹೋಗುವ ಅವಶ್ಯಕತೆ ಇದೆ. ಆದರೆ ಇದು ಹೇಳಿದಷ್ಟು ಸುಲಭವಿಲ್ಲ. ಇಂಥದೊಂದು ಸ್ಥಿತಿಯಿಂದ ಹೊರಬರಲು, ಪ್ರೀತಿಸದವರನ್ನು ದೂರವಿಟ್ಟು ಅವರ ಯೋಚನೆಗಳಿಂದ ಮುಕ್ತರಾಗಲು ಇಲ್ಲಿವೆ ಟಿಪ್ಸ್.

ಆಫೀಸ್‌ನಲ್ಲಿ ಫ್ಲರ್ಟಿಂಗ್ ಮಾಡಿದ್ರೆ ಲೈಫ್ ಬಿಂದಾಸ್ ಅಂತೆ!

1. ಅವರಿಗೆ ನಿಮ್ಮ ಅಗತ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಿ

ಒಂದು ದಿನ ನಿಮಗೆ ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಾರೆ ಎನಿಸಬಹುದು, ಮರುದಿನದಿಂದ ವಾರಗಟ್ಟಲೆ ಅವರು ಕಾಣೆಯಾಗಬಹುದು... ಇದರರ್ಥ ಅಲ್ಲಿ ಪ್ರೀತಿ ಇಲ್ಲ ಎಂದು. ನಿಮ್ಮ ಪ್ರೀತಿಯನ್ನು ಬೇರೆ ದೃಷ್ಟಿಯಲ್ಲಿ ನೋಡಲು ಪ್ರಯತ್ನಿಸಿ. ನಿಮ್ಮ ಪ್ರೇಮಿ ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂಬುದು ನಿಮಗೆ ಗೊತ್ತಾದರೆ, ನೀವು ಸರಿಯಾಗುವ ಹಾದಿಯಲ್ಲಿದ್ದೀರ ಎಂದರ್ಥ. 
ಮುಂದಿನ ಬಾರಿ ಈ ವ್ಯಕ್ತಿಗೆ ಕಾಲ್ ಅಥವಾ ಮೆಸೇಜ್ ಮಾಡುವ ಮುನ್ನ ಅವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಯೋಚಿಸಿ.

ನೀವು ಅವರ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುವುದನ್ನು ವ್ಯಕ್ತಪಡಿಸಿದಾಗಲೂ ಅವರು ಒಂದೇ ನೀವು ಹಾಗೆಯೇ ಅವರನ್ನು ಪ್ರೇಮಿಸಿಕೊಂಡಿರಲಿ ಎಂದು ಪ್ರತಿಕ್ರಿಯೆ ನೀಡುತ್ತಿರಬಹುದು ಇಲ್ಲವೇ ನಿಮ್ಮನ್ನು ಕಡೆಗಣಿಸುತ್ತಿರಬಹುದು. ಯಜಮಾನನ ಕಾಲಿಗೆ ಬೀಳುವ ಜೀತದಾಳಾಗಿರಲು ಬಯಸುವಿರಾ? ಅದಕ್ಕಿಂತಲೂ ಖುಷಿ ಕೊಡುವ ಬೇರೆ ಏನಾದರೂ ಮಾಡಬಹುದಲ್ಲವೇ?

ಮಗಳು ಹಸ್ತಮೈಥುನ ಮಾಡಿ ಕೊಳ್ತಾ  ಇದಾಳೆ?

2. ಗಮನಕ್ಕೆ ಬೇರೆ ಆಹಾರ ಕೊಡಿ

ಕಣ್ಣಿಂದ ದೂರ ಎಂದರೆ ಮನಸ್ಸಿನಿಂದಲೂ ದೂರ ಎಂಬ ಮಾತಿದೆ. ನಿಮ್ಮ ಏಕಮುಖ ಪ್ರವಾಹದ ಪ್ರೀತಿಯನ್ನು ನಿಲ್ಲಿಸಬೇಕೆಂದರೆ ಇದನ್ನು ಮಂತ್ರವಾಗಿಸಿಕೊಳ್ಳಿ. ನೀವು ಪ್ರೀತಿಸುವವರಿದ ಸಾಧ್ಯವಾದಷ್ಟು ದೂರಾಗಿ ಇರಿ. ಮೆಸೇಜ್ ಕಳುಹಿಸುವುದಾಗಲೀ, ಕಾಲ್ ಮಾಡುವುದು, ಮೀಟ್ ಆಗುವುದು ಎಲ್ಲದರಿಂದ ದೂರವಿರಿ. ಅವರ ಸೋಷ್ಯಲ್ ಮೀಡಿಯಾ ಅಪ್ಡೇಟ್‌ಗಳನ್ನು ಚೆಕ್ ಮಾಡುವ ದುರಭ್ಯಾಸ ಬಿಡಿ. ಸಾಧ್ಯವಾದರೆ, ಎಲ್ಲಾದರೂ ನೆಟ್ವರ್ಕ್ ಸಿಗದ ಜಾಗಕ್ಕೆ ಒಂದಿಷ್ಟು ದಿನಗಳ ಕಾಲ ಟ್ರಿಪ್ ಹೋಗಿಬನ್ನಿ.

ಒಂದು ವೇಳೆ ನೀವು ಈ ವ್ಯಕ್ತಿಯನ್ನು ಭೇಟಿ ಮಾಡುವುದನ್ನು ತಪ್ಪಿಸುವುದು ಸಾಧ್ಯವಾಗದೆ ಹೋದರೆ ಅವರ ಯೋಚನೆಗಳಿಂದ ದೂರ ಉಳಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅವರು ನೀವು ಕೆಲಸ ಮಾಡುವ ಪಕ್ಕದ ಡೆಸ್ಕ್‌ನಲ್ಲೇ ಇದ್ದರೂ, ಅವರ ಇರುವಿಕೆಯನ್ನು ಸಂಪೂರ್ಣ ಕಡೆಗಣಿಸಿ ನಿಮ್ಮ ಆಸೆ, ಕನಸುಗಳತ್ತ ಯೋಚನೆ ಹರಿಸಿ. 

ಪ್ರೇಮವೋ? ಕಾಮವೋ? ಕಂಡು ಹಿಡಿಯುವುದು ಹೇಗೆ?

3. ನಿಮ್ಮದೇ ಸಮಸ್ಯೆ ಇರುವ ವ್ಯಕ್ತಿ ಹುಡುಕಿ

ಸಂಬಂಧಗಳಲ್ಲಿ ಸಮಸ್ಯೆ ಹೊಂದಿರುವವರು ಖಂಡಿತಾ ನೀವೊಬ್ಬರೇ ಆಗಿರುವುದಿಲ್ಲ. ಒನ್ ಸೈಡೆಡ್ ಲವ್‌ನ ನೋವನ್ನು ಹಲವರು ಅನುಭವಿಸಿರುತ್ತಾರೆ. ನಿಮಗೆ ಹತ್ತಿರವಾಗಿರುವವರ ಬಳಿ ನಿಮ್ಮ ಫೀಲಿಂಗ್ಸ್ ಹೇಳಿಕೊಳ್ಳಿ. ಅವರಿಗೂ ಇಂಥ ಅನುಭವಗಳಿದ್ದರೆ ಅದರಿಂದ ಹೊರಬರಲು ಏನು ಮಾಡಿದರು ಕೇಳಿಕೊಳ್ಳಿ. ಕೆಲವೊಮ್ಮೆ ನಿಮಗೆ ಬೇಕಾಗಿರುವುದು, ನಿಮ್ಮ ಮಾತುಗಳನ್ನು ಕೇಳುವ, ಅರ್ಥ ಮಾಡಿಕೊಳ್ಳುವ ವ್ಯಕ್ತಿಯಷ್ಟೇ. ಹಾಗಂಥ ಇದೇ ಟಾಪಿಕ್ ಮಾತಾಡುತ್ತಾ ಅದರಲ್ಲೇ ಖುಷಿ ಕಾಣುವ ಅಭ್ಯಾಸಕ್ಕೆ ಬೀಳಬೇಡಿ. 

4. ನಿಮ್ಮ ಕಾಳಜಿ ವಹಿಸಿಕೊಳ್ಳಿ

ಕಪ್ಪು ಯೋಚನೆಗಳಲ್ಲಿ ಬಿದ್ದಾಗ ನೀವು ನಿಮ್ಮನ್ನು ಕಡೆಗಣಿಸಲು ಆರಂಭಿಸುತ್ತೀರಿ. ಕೇವಲ ನೋವಿನಲ್ಲಿದ್ದರೂ, ಈ ಬಗ್ಗೆ ನಿಮ್ಮಿಂದ ಬೇರೇನೂ ಮಾಡಲಾಗುತ್ತಿಲ್ಲವಾದರೂ ನಿಮ್ಮ ಆರೋಗ್ಯ ಹಾಗೂ ಸೌಂದರ್ಯದ ಕಾಳಜಿ ವಹಿಸಿ. ಹರ್ಬಲ್ ಟೀ ಮಾಡಿಕೊಂಡು ಅನುಭವಿಸುತ್ತಾ ಕುಡಿಯಿರಿ, ಶಾಪಿಂಗ್ ಹೋಗಿ, ಸ್ಪಾ ಮಾಡಿಸಿಕೊಳ್ಳಿ, ಹೊಸ ಹೇರ್‌ಸ್ಟೈಲ್ ಮಾಡಿಸಿ.

ಈ ಸಂದರ್ಭದಲ್ಲಿ ನಿಮ್ಮನ್ನು ನೀವು ಕುಡಿತ, ಸ್ಮೋಕಿಂಗ್ ಮುಂತಾದ ಚಟಗಳಿಗೆ ಒಡ್ಡಿಕೊಂಡು, ನಿಮ್ಮ ಪ್ರೇಮಿ ಇದನ್ನೆಲ್ಲ ನೋಡಿ ನೀವೆಷ್ಟು ನೋವಿನಲ್ಲಿದ್ದೀರಾ ಎಂಬುದನ್ನು ಅರಿತು ವಾಪಸ್ ಬರುತ್ತಾರೆ ಎಂದೆಲ್ಲ ಕನಸು ಕಾಣಬೇಡಿ. ಏಕೆಂದರೆ ಅವರು ಖಂಡಿತಾ ಬರುವುದಿಲ್ಲ. ನೀವು ಉತ್ತಮ ಸ್ಥಿತಿಯಲ್ಲಿದ್ದಾಗಲೇ ನಿಮ್ಮನ್ನು ಪ್ರೀತಿಸದವರು, ನೀವು ಹಾಳಾದಾಗ ಪ್ರೀತಿಸುತ್ತಾರಾ? 

5. ವರ್ಕೌಟ್ ಆರಂಭಿಸಿ

ನಿಮ್ಮ ಭಾವನೆಗಳನ್ನು ಬ್ಯಾಲೆನ್ಸ್‌ನಲ್ಲಿಡಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಬಹಳ ಪರಿಣಾಮಕಾರಿಯಾದುದು ಎಂದರೆ ದೈಹಿಕ ವ್ಯಾಯಾಮ. ಅವು ನಿಮ್ಮನ್ನು ನೆಗೆಟಿವಿಟಿಯಿಂದ ಹೊರತರುತ್ತವೆ. ಪ್ರತಿ ಬೆಳಗ್ಗೆ ಜಾಗಿಂಗ್ ಮಾಡಿ ಅಥವಾ ಫಿಟ್ನೆಸ್ ತರಗತಿಗೆ ಸೇರಿಕೊಳ್ಳಿ. ನಾಯಿ ಸಾಕಿ- ಪ್ರಾಣಿಗಳೊಂದಿಗೆ ಸಂಭಾಷಿಸುವುದರಿಂದ ಹಲವಾರು ಪಾಸಿಟಿವ್ ಎಮೋಶನ್ಸ್ ಅನುಭವಕ್ಕೆ ಬರುತ್ತವೆ. ನೃತ್ಯದಲ್ಲಿ ಆಸಕ್ತಿ ಇದ್ದರೆ ಡ್ಯಾನ್ಸ್ ಕ್ಲಾಸ್ ಸೇರಿಕೊಳ್ಳಿ. ಇದರಿಂದ ಫನ್ ಜೊತೆಗೆ ಉತ್ತಮ ಶೇಪ್‌ಗೆ ಕೂಡಾ ಬರುತ್ತೀರಿ.

ಪತಿ ಇಲ್ಲದೇ ನೀವು ಬ್ಯಾಂಕ್‌ಗೂ ಹೋಗೋಲ್ವಾ? ಇಲ್ಲವೆಂದರೆ ಓದಿ ಈ ಸುದ್ದಿ

6. ಸಿಟ್ಟಾಗಬೇಡಿ.

ಲವ್ ಫೇಲ್ಯೂರ್ ಎಂಬುದು ಬದುಕಿನ ಭಾಗ. ನೀವಂದುಕಂಡಂತೆ ಎಲ್ಲವೂ ಆಗಬೇಕೆಂದೇನಿಲ್ಲ. ಪ್ರಪಂಚ ನಡೆಯುತ್ತಿರುವುದು ನಿಮಗಾಗಿ ಅಲ್ಲ. ಹಾಗಾಗಿ, ನೀವಂದುಕೊಂಡಂತೆ ಆಗಲಿಲ್ಲ ಎಂದ ಮಾತ್ರಕ್ಕೆ ನಿಮ್ಮನ್ನು ನೀವು ದ್ವೇಷಿಸಿಕೊಳ್ಳುವುದು, ನಿಮ್ಮನ್ನು ಒಪ್ಪದವರನ್ನು ದ್ವೇಷಿಸುವುದು ಸರಿಯಲ್ಲ. ನಿಮಗೂ ಹ್ಯಾಪಿ ಎಂಡಿಂಗ್ ಇರುತ್ತದೆ. ಅದಕ್ಕಾಗಿ ಕಾಯಬೇಕಷ್ಟೇ. ನೀವು ಪ್ರೀತಿಸುವವರಿಗೆ ಕೆಟ್ಟದ್ದನ್ನು ಬಯಸಬೇಡಿ.

ಅವರು ನಿಮ್ಮನ್ನು ಪ್ರೀತಿಸಲಿಲ್ಲವೆಂದ ಮಾತ್ರಕ್ಕೆ ಕೆಟ್ಟವರೇನಲ್ಲ. ನಿೀವು ಅವರನ್ನು ಪ್ರೀತಿಸುವಾಗ ನಿಮ್ಮ ಹಿಂದೆ ಬೇರೆ ಯಾರಾದರೂ ಬಿದ್ದರೆ ಆಗ ನಿಮಗೆ ಅವರನ್ನು ಪ್ರೀತಿಸಲು ಸಾಧ್ಯವಾಗುವುದೇ? ಎಲ್ಲರಿದಗೂ ಅವರದೇ ಆದ ಆಯ್ಕೆಗಳು, ಇಷ್ಟಕಷ್ಟ ಇರುತ್ತವೆ.