ಬಾಯ್ ಫ್ರೆಂಡ್ ಇದ್ದು ಆತ ತನ್ನ ಹುಡುಗಿಗಾಗಿ ಕ್ರೇಜಿಯಾಗಿದ್ದರೆ, ವಾವ್ ಎಷ್ಟೊಂದು ಪ್ರೀತಿಸುತ್ತಾನೆ, ನನ್ನನ್ನು ಬಿಟ್ಟು ಇರೋದೇ ಇಲ್ಲ ಎಂದು ಅಂದುಕೊಂಡು ಪ್ರೀತಿ ಮಾಡಿಬಿಟ್ಟೀರಿ ಎಚ್ಚರ. ಲವ್ ಮಾಡುವ ಮುನ್ನ ನೈಜ ಪ್ರೀತಿಯೋ ಅಥವಾ ಬರಿ ಕಾಮವೋ ಅನ್ನೋದನ್ನು ತಿಳಿದುಕೊಳ್ಳಬೇಕು. ನಿಮ್ಮ ಸಂಗಾತಿ ಬಗ್ಗೆ ನಿಜ ಗೊತ್ತಾದರೆ ಮುಂದೆ ಜೀವನದಲ್ಲಿ ಸಮಸ್ಯೆ ಉಂಟಾಗೋದಿಲ್ಲ. ಹಾಗಾದರೆ ಅದು ನಿಜವಾದ ಪ್ರೀತಿಯೋ ಅಥವಾ ಕಾಮವೋ ಕಂಡು ಹಿಡಿಯೋದು ಹೇಗೆ?
 
ಕಣ್ಣು ಕಣ್ಣು ಬೆರೆತಾಗ: ಗಂಡು ಅಥವಾ ಹೆಣ್ಣು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ಆಗ, ಪ್ರೀತಿಯ ಆಳ ಅರಿವಾಗುತ್ತದೆ. ಇಬ್ಬರ ಮನಸ್ಸೂ ನಿಷ್ಕಲ್ಮಷವಾಗಿದ್ದು, ಒಬ್ಬರಿಗೊಬ್ಬರು ನೈಜ ಪ್ರೀತಿಯನ್ನು ತೋರಿಸುತ್ತಿದ್ದರೆ ನಿಜವಾದ ಪ್ರೇಮವೆಂದು ಭಾವಿಸಬಹುದು.

ಭವಿಷ್ಯದ ಬಗ್ಗೆ ಮೌನ: ಪ್ರೀತಿ ಪ್ರಾಕ್ಟಿಕಲ್ ಆಗಿರಬೇಕು. ಭವಿಷ್ಯ, ಸಂಸಾರದ ಬಗ್ಗೆಯೂ ತುಸು ಮಾತನಾಡಿದರೆ ಒಂದು ತೂಕವಿರುತ್ತದೆ. ವರ್ತಮಾನ ಕಾಲವನ್ನು ಫೀಲ್ ಮಾಡಿಕೊಳ್ಳಬೇಕು ನಿಜ. ಹಾಗಂತೆ ಭವಿಷ್ಯವನ್ನು ಮರೆ ಮಾಚಬಾರದು ಅಲ್ಲವೇ? ಪ್ರಬುದ್ಧ ಮಾತುಗಳನ್ನು ಆಡಿದರೆ, ಪ್ರೀತಿಗೊಂದು ಅರ್ಥ, ತೂಕ.

ಬೆಡ್ ರೂಮ್ ಬಗ್ಗೆ ಮಾತು: ಹುಡುಗಿ ಜೊತೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಬೆಡ್ ರೂಮ್ ಬಗ್ಗೆ, ಸೆಕ್ಸ್ ಬಗ್ಗೆ ಮಾತನಾಡಲು ಇಷ್ಟಪಟ್ಟರೆ, ಏನೇ ಮಾತನಾಡಿದರೂ ಡಬ್ಬಲ್ ಮೀನಿಂಗ್ ಅರ್ಥ ಹೊಂದುವಂತೆ ಮಾತನಾಡಿದರೆ ಆತನಿಗೆ ಬೇಕಾಗಿರುವುದು ಪ್ರೀತಿಯಲ್ಲ. ರೊಮ್ಯಾನ್ಸ್ ಇರಬೇಕು. ಹಾಗಂತ ಅದೇ ಜೀವನವಲ್ಲ.

ಸುಮ್ ಸುಮ್ನೆ ಟಚ್ ಮಾಡಿದರೆ: ಪ್ರೀತಿಸುತ್ತಿದ್ದಾನೆ ಎನ್ನೋ ಒಂದೇ ಕಾರಣಕ್ಕೆ ಎಲ್ಲಿಯಾಯಿತೋ ಅಲ್ಲಿ ಟಚ್ ಮಾಡಬಹುದು ಎಂದರ್ಥವಲ್ಲ. ಅದಕ್ಕೂ ಸಮಯ, ಸಂದರ್ಭ ಬರಬೇಕು. ವರ್ತನೆ ಯಾವತ್ತೂ ಅಸಭ್ಯ ಎನಿಸಬಾರದು.

ಬೇರೆ ಹುಡುಗಿಯರ ಜೊತೆ ಇದ್ದರೆ ನಿಮ್ಮನ್ನು ಅವಾಯ್ಡ್ ಮಾಡುವುದು: ಕೇವಲ ದೇಹವನ್ನು ನೋಡಿ ಪ್ರೀತಿಸುವ ಹುಡುಗರು ಬೇರೆ ಹುಡುಗಿಯರ ಮೇಲೂ ಕಣ್ಣಿಟ್ಟಿರುತ್ತಾರೆ. ಅವರೊಂದಿಗಿದ್ದಾಗ ಮತ್ತೊಬ್ಬಳನ್ನು ಅವೈಯ್ಡ್ ಮಾಡುತ್ತಾರೆ. ಇಲ್ಲಿ ನೈಜ ಪ್ರೇಮವಿಲ್ಲವೆಂದೇ ಅರ್ಥ.

ಸಮಸ್ಯೆಗೆ ಬಾಗದ ಮನಸ್ಸು: ನಿಮಗೆ ದೊಡ್ಡ ಸಮಸ್ಯೆ ಉಂಟಾದಾಗ ಅವರ ಬಳಿ ಹೋದರೆ ಅವರು ಅದನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ, ಸಾಂತ್ವಾನ ಹೇಳುವುದೂ ಇಲ್ಲ.