ಫ್ಯಾಷನ್ ಬದಲಾದಂತೆ ಡೇಟಿಂಗ್ ಟ್ರೆಂಡ್ ಬದಲಾಗುತ್ತಿದೆ. ಸ್ಪೀಡ್ ಡೇಟಿಂಗ್ ಯುವಜನರಲ್ಲಿ ಪ್ರಸಿದ್ಧಿ ಪಡೆಯುತ್ತಿದೆ, ಏಕೆಂದರೆ ಇದು ಸಮಯವನ್ನು ಉಳಿಸುತ್ತದೆ. 1990 ರಲ್ಲಿ ಯಹೂದಿ ಸಮುದಾಯದಲ್ಲಿ ಪ್ರಾರಂಭವಾದ ಇದು, ಈಗ ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ನಡೆಯುತ್ತದೆ. ಕಡಿಮೆ ಸಮಯದಲ್ಲಿ ಅನೇಕರನ್ನು ಭೇಟಿಯಾಗಲು ಇದು ಅವಕಾಶ ನೀಡುತ್ತದೆ, ಆದರೆ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ.

ಫ್ಯಾಷನ್ (Fashion) ಬದಲಾದಂತೆ ಡೇಟಿಂಗ್ ಟ್ರೆಂಡ್ (dating trend) ಕೂಡ ಬದಲಾಗ್ತಾನೆ ಇರುತ್ತೆ. ಯುವಕರು ಹೊಸ ಹೊಸ ಡೇಟಿಂಗ್ ಸ್ಟೈಲ್ ಗೆ ಹೊಂದಿಕೊಳ್ತಿದ್ದಾರೆ. ಕ್ಯಾಶುವಲ್ ಡೇಟಿಂಗ್, ಆನ್ಲೈನ್ ಡೇಟಿಂಗ್, ಸಿಚುವೇಶನಲ್ ಡೇಟಿಂಗ್ ಜೊತೆ ಈಗ ಸ್ಪೀಡ್ ಡೇಟಿಂಗ್ (speed dating) ಹೆಚ್ಚು ಪ್ರಸಿದ್ಧಿ ಪಡೆದಿದೆ. ಅನೇಕರು ಈ ಸ್ಪೀಡ್ ಡೇಟಿಂಗ್ ಆಯ್ಕೆ ಮಾಡಿಕೊಳ್ತಿದ್ದಾರೆ. ಇದಕ್ಕೆ ಅನೇಕ ಕಾರಣವಿದೆ. ಫಸ್ಟ್ ಒನ್, ಸಮಯ. ಜನ ಎಷ್ಟು ಬ್ಯುಸಿಯಾಗಿದಾರೆ ಅಂದ್ರೆ ಅವರಿಗೆ ಡೇಟಿಂಗ್ ಗೂ ಟೈಂ ಸಿಗದಂತಾಗಿದೆ. ಇಡೀ ದಿನ ಕೆಲಸದ ಹಿಂದೆ ಓಡ್ತಿರುವ ಜನರಿಗೆ ಸಂಬಂಧಕ್ಕೆ ಹೆಚ್ಚು ಸಮಯ ನೀಡೋಕೆ ಆಗ್ತಿಲ್ಲ. ಒಬ್ಬ ವ್ಯಕ್ತಿಯನ್ನು ತುಂಬಾ ದಿನ ಅಳೆದು, ತೂಗಿ, ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವಷ್ಟು ಪುರಸೊತ್ತು ಅವರಿಗೆ ಇಲ್ಲ. ಹಾಗಾಗಿ ಬಹುತೇಕರು ಈ ಸ್ಪೀಡ್ ಡೇಟಿಂಗ್ ಲೈಕ್ ಮಾಡ್ತಿದ್ದಾರೆ.

ಅಷ್ಟಕ್ಕೂ ಸ್ಪೀಡ್ ಡೇಟಿಂಗ್ ಶುರುವಾಗಿದ್ದು ಯಾವಾಗ? : ಅನೇಕರು ಸ್ಪೀಡ್ ಡೇಟಿಂಗ್ ಹೆಸರನ್ನು ಈಗ ಕೇಳ್ತಿದ್ದಾರೆ. 2025ರಲ್ಲಿ ಈ ಸ್ಪೀಡ್ ಡೇಟಿಂಗ್ ಹೆಚ್ಚು ಸುದ್ದಿಗೆ ಬಂದಿದೆ. ಆದ್ರೆ ಇದ್ರ ಇತಿಹಾಸ ಬಹಳ ಹಿಂದಿದೆ. 1990ರ ದಶಕದಲ್ಲಿ ಯಹೂದಿ ಸಮುದಾಯದಲ್ಲಿ ಇದು ಹೆಚ್ಚು ಪ್ರಸಿದ್ಧಿಗೆ ಬಂದಿತ್ತು. ಅನೇಕ ಹುಡುಗ ಹಾಗೂ ಹುಡುಗಿಯರು ಒಂದು ಸಮಾರಂಭದಲ್ಲಿ ಸೇರ್ತಾ ಇದ್ರು. ಪ್ರತಿಯೊಬ್ಬರ ಜೊತೆ ಅವರು ಸ್ವಲ್ಪ ಸಮಯ ಕಳೆಯುತ್ತಿದ್ದರು. ಅಲ್ಲಿಯೇ ಯಾರನ್ನು ಮತ್ತೊಮ್ಮೆ ಭೇಟಿಯಾಗ್ಬೇಕು, ಯಾರನ್ನು ಭೇಟಿಯಾಗುವ ಅವಶ್ಯಕತೆ ಇಲ್ಲ ಎಂಬುದನ್ನು ನಿರ್ಧರಿಸುತ್ತಿದ್ದರು. ಮದುವೆ ಉದ್ದೇಶದಿಂದ ಯಹೂದಿಗಳು ಈ ವಿಧಾನ ಫಾಲೋ ಮಾಡ್ತಿದ್ದರಾದ್ರೂ ಈಗಿನ ಯುವಕರು ಅದನ್ನು ಸ್ಪೀಡ್ ಡೇಟಿಂಗ್ ಆಗಿ ಬದಲಿಸಿಕೊಂಡಿದ್ದಾರೆ.

ಮಾತಾಡೋವಾಗ ಎಚ್ಚರ! ಅಶ್ವಿನಿ ದೇವತೆ ಅಸ್ತು ಅಂತಾವೆ ಅನ್ನೋಕೆ ವಿಕ್ಕಿ ಕೌಶಲ್‌, ಕತ್ರಿನಾ ಕೈಫ್‌ ಉದಾಹರಣೆ!

ಸ್ಪೀಡ್ ಡೇಟಿಂಗ್ ವಿಶೇಷ ಏನು? : ಒಬ್ಬರ ಜೊತೆಯೇ ಡೇಟಿಂಗ್ ಮಾಡಿ ವ್ಯಕ್ತಿತ್ವ ಟೆಸ್ಟ್ ಮಾಡೋಕೆ ಈಗ ಸಮಯ ಇಲ್ಲ. ಈ ಸ್ಪೀಡ್ ಡೇಟಿಂಗ್ ನಲ್ಲಿ ಅನೇಕರು ನಿಮಗೆ ಒಟ್ಟಿಗೆ ಸಿಗ್ತಾರೆ. ಒಂದೇ ನೋಟದಲ್ಲಿ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಜೊತೆ ಐದರಿಂದ 10 ನಿಮಿಷವಾದ್ರೂ ಕಳೆಯುವ ಅಗತ್ಯವಿದೆ. ಸಮಾರಂಭದಲ್ಲಿ ಪರಸ್ಪರ ಭೇಟಿಯಾಗಿ, ಮುಂದಿನ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಅನೇಕರು ಇಲ್ಲಿ ಒಟ್ಟಿಗೆ ಸಿಗೋದ್ರಿಂದ ಯುವಕರಿಗೆ ಸಮಯ ಉಳಿಯುತ್ತೆ. ಆದ್ರೆ ಒಟ್ಟಿಗೆ ಒಂದಿಷ್ಟು ಆಯ್ಕೆ ಸಿಗೋದ್ರಿಂದ ಗೊಂದಲ ಕಾಡೋದು ಇದೆ. 

ಸ್ಪೀಡ್ ಡೇಟಿಂಗ್ ನಲ್ಲಿ ಪಾಲ್ಗೊಳ್ಳೋದು ಹೇಗೆ? : ಆನ್ಲೈನ್ ಪ್ಲಾಟ್ಫಾರ್ಮ್ ಹಾಗೂ ಡೇಟಿಂಗ್ ಅಪ್ಲಿಕೇಷನ್ ಗಳು ಈ ಸ್ಪೀಡ್ ಡೇಟಿಂಗ್ ಈವೆಂಟ್ ಗಳನ್ನು ಆಯೋಜಿಸುತ್ತವೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಈ ಈವೆಂಟ್ ನಡೆಯುತ್ತದೆ. ಇಲ್ಲಿ ಅನೇಕ ಗೇಮ್, ಆಹಾರ ಸೇರಿದಂತೆ ಮನರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಈವೆಂಟ್ ನಲ್ಲಿ ಪಾಲ್ಗೊಳ್ಳುವ ಯುವಕ – ಯುವತಿ ದೊಡ್ಡ ಮಟ್ಟದಲ್ಲಿ ಹಣ ಪಾವತಿ ಮಾಡ್ಬೇಕು. ಇದ್ರ ಮುಖ್ಯ ಷರತ್ತೆಂದ್ರೆ ತಮ್ಮ ಮೊಬೈಲ್ ನಂಬರ್ ವಿನಿಮಯ ಮಾಡ್ಕೊಳ್ಳುವಂತಿಲ್ಲ. 

ಹನಿಮೂನ್ ನಲ್ಲೇ ನವದಂಪತಿ ಕಿತ್ತಾಟ, ಗೋವಾದಲ್ಲೇ ಪತಿ ಬಿಟ್ಟು ಫ್ಲೈಟೇರಿದ ಪತ್ನಿ!

ಈ ತಪ್ಪು ಮಾಡ್ಬೇಡಿ : ನೀವು ಸ್ಪೀಡ್ ಡೇಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದರೆ ಈವೆಂಟ್ ನಲ್ಲಿ ಪಾಲ್ಗೊಳ್ಳಬಹುದು. ಆದ್ರೆ ಸಿಗುವ 8 -10 ನಿಮಿಷದಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಬೇಡಿ. ಅವರ ಬಟ್ಟೆ, ಮುಖ ನೋಡಿ ವ್ಯಕ್ತಿತ್ವ ನಿರ್ಧರಿಸಲು ಹೋಗ್ಬೇಡಿ. ತರಾತುರಿಯಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ, ಬಯಸಿದ್ರೆ ಅವರ ಜೊತೆ ದೀರ್ಘಕಾಲ ಡೇಟಿಂಗ್ ಮಾಡಿ ನಂತ್ರ ಮದುವೆ ತೀರ್ಮಾನ ತೆಗೆದುಕೊಳ್ಳಿ.