ಏಕಸದಸ್ಯ ನ್ಯಾಯಮೂರ್ತಿ ವಿಭಾ ಕಂಕಣವಾಡಿ, ಪ್ರಸ್ತುತ ಪ್ರಕರಣದಲ್ಲಿ ತೀರ್ಪು ನೀಡಿದ್ದು, ತಂದೆ 73 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ದಿನಕ್ಕೆ ₹ 20 ಮಾತ್ರ ಕೂಲಿ ಕೆಲಸ ಮಾಡುತ್ತಿದ್ದಾರೆ ಅಂಥ ವೃದ್ಧ ತಂದೆಯನ್ನು ನೋಡಿಕೊಳ್ಳುವುದು ಮಗನ ಕರ್ತವ್ಯ ಎಂದು ಹೇಳಿದ್ದಾರೆ.

ಮುಂಬೈ (ಜುಲೈ 19): ವೃದ್ಧ ಹಾಗೂ ವಯೋಸಹಜ ಕಾಯಿಲೆಯಿಂದ ಬಳುತ್ತಿರುವ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಮಗನಾದವನು ನುಣುಚಿಕೊಳ್ಳಲು ಸಾಧ್ಯವಾವಿಲ್ಲ. ಮಗನೊಂದಿಗೆ ಬದುಕಲು ಜೀವನಾಂಶವನ್ನು ಪಾವತಿ ಮಾಡುವಂತೆ ತಂದೆಗೆ ಹೇಳಲು ಸಾಧ್ಯವಿಲ್ಲ ಎಂದು ಸಂಭಾಜಿನಗರದಲ್ಲಿರುವ (ಹಳೆಯ ಹೆಸರು ಔರಂಗಾಬಾದ್) ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. ಏಕಸದಸ್ಯ ನ್ಯಾಯಮೂರ್ತಿ ವಿಭಾ ಕಂಕಣವಾಡಿ ಈ ತೀರ್ಪನ್ನು ನೀಡಿದ್ದಾರೆ. ಮಗನೊಂದಿಗೆ ವಾಸಿಸಲು, ಆತ ಜೀವನಾಂಶವನ್ನು ನನ್ನಿಂದ ಕೇಳುತ್ತಿದ್ದಾನೆ ಎಂದು ತಂದೆಯ ಮನವಿಯ ವಿಚಾರಣೆಯ ವೇಳೆ ಈ ಅಂಶವನ್ನು ಹೇಳಿದ್ದಾರೆ. "ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಮಗನಾದವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅರ್ಜಿದಾರರು (ತಂದೆ) ತಾಯಿಯಂತೆ ಬಂದು ತನ್ನೊಂದಿಗೆ ಇರಬೇಕೆಂದು ಷರತ್ತು ಹಾಕುತ್ತಿದ್ದಾರೆಂದು ತೋರುತ್ತದೆ, ಮಗ ಅಂತಹ ಷರತ್ತು ವಿಧಿಸಲು ಸಾಧ್ಯವಿಲ್ಲ," ಎಂದು ನ್ಯಾಯಾಧೀಶರು ಜುಲೈ 8 ರಂದು ಹೇಳಿದ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಅಹ್ಮದ್‌ನಗರ ಜಿಲ್ಲೆಯ ಶೇವಗಾಂವ್‌ನ ಕೆಳ ಹಂತದ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ಜೀವನಾಂಶದ ಆದೇಶವನ್ನು ಪ್ರಶ್ನಿಸಿ ತಂದೆಯು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳ ಹಂತದ ನ್ಯಾಯಾಲಯ ನೀಡಿದ್ದ ಈ ಆದೇಶದ ವಿಚಾರಣೆಯ ವೇಳೆ ಕೋರ್ಟ್‌ ಈ ಮಾತನ್ನು ಹೇಳಿದೆ.

ತಂದೆ ಹಾಗೂ ತಾಯಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಆ ಕಾರಣದಿಂದಾಗಿ ತಾಯಿ ತನ್ನೊಂದಿಗೆ ವಾಸ ಮಾಡುತ್ತಿದ್ದಾರೆ. ಆದರೆ, ತಂದೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದು ಜಸ್ಟೀಸ್‌ ಕಂಕಣವಾಡಿ ಅವರ ಮುಂದೆ ಮಗ ಹೇಳಿಕೆ ನೀಡಿದ್ದರು. ಆದರೆ, ಇಂಥ ವಿಚಾರಗಳಲ್ಲಿ ತಂದೆ ಹಾಗೂ ತಾಯಿ ನಡುವಿನ ಭಿನ್ನಾಭಿಪ್ರಾಯದ ಈ ವಿಷಯಗಳನ್ನು ಪರಿಗಣಿಸಬೇಕಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಹೈಪರ್‌ ಟೆಕ್ನಿಕಲ್‌ ಆಗಿರಬಾರದು: "ದುರದೃಷ್ಟವಶಾತ್, ಈಗ ತಂದೆಗೆ ತನ್ನನ್ನು ತಾನೇ ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಇದಕ್ಕಾಗಿ ಬೇರೆಯವರನ್ನು ಅವರು ಅವಲಂಬಿಸಬೇಕಾಗಿದೆ, ತಂದೆಯ ದುಶ್ಚಟಗಳಿಂದಾಗಿ ತಾಯಿಯ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಮಗ ಹೇಳಲು ಪ್ರಯತ್ನಿಸುತ್ತಿದ್ದಾನೆ. ಈ ಕಾರಣದಿಂದ ತಂದೆಯೊಂದಿಗೆ ಅವರು ಒಟ್ಟಿಗೆ ವಾಸಿಸುತ್ತಿಲ್ಲ. ತನ್ನ ದುಶ್ಚಟಗಳಿಗಾಗಿ ಹಣ ನೀಡಬೇಕು ಎಂದು ತಂದೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಇಂಥ ವಿವಾದಿತ ಸಂಗತಿಗಳ ಬಗ್ಗೆ ತುಂಬಾ ಆಳವಾಗಿ ಹೋಗಲು ಸಾಧ್ಯವಿಲ್ಲ' ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: ತಂದೆ, ತಾಯಿ ಜೀವವಿರೋವರೆಗೆ ಮಗನಿಗೆ ಆಸ್ತಿ ಮೇಲೆ ಹಕ್ಕಿಲ್ಲ: ಕೋರ್ಟ್‌ ಮಹತ್ವದ ತೀರ್ಪು!

ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ:
 ದಿನಕ್ಕೆ 20 ರೂಪಾಯಿ ದುಡಿಯುವ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ತಂದೆಗೆ ಈಗ 73 ವರ್ಷ. ಇಂಥ ಇಳಿ ವಯಸ್ಸಿನಲ್ಲಿ ಅವರು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ವಿಷಯಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಹೈಪರ್ ಟೆಕ್ನಿಕಲ್ ಆಗಿರಬಾರದು ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ: Justice Pushpa Ganediwala Resign: ರೇಪ್‌ಗೆ ಹೊಸ ವಿಶ್ಲೇಷಣೆ ನೀಡಿದ್ದ ಹೈಕೋರ್ಟ್‌ ಜಡ್ಜ್‌ ರಾಜೀನಾಮೆ!

ಕೆಳ ನ್ಯಾಯಾಲಯವು ತೆಗೆದುಕೊಂಡ ವಿಧಾನವು ತುಂಬಾ ಹೈಪರ್ ಟೆಕ್ನಿಕಲ್ ಆಗಿ ಕಾಣುತ್ತದೆ ಮತ್ತು CrPC ಯ ಸೆಕ್ಷನ್ 125 ರ ಅಡಿಯಲ್ಲಿ ಅರ್ಜಿಗಳಿಗೆ ಬಂದಾಗ, ನ್ಯಾಯಾಲಯಗಳು ತಮ್ಮ ವಿಧಾನದಲ್ಲಿ ಹೈಪರ್ ಟೆಕ್ನಿಕಲ್ ಆಗಿರಲು ಸಾಧ್ಯವಿಲ್ಲ.ಒಬ್ಬ ವ್ಯಕ್ತಿಗೆ ಆರ್ಥಿಕ ಸ್ವರೂಪದಲ್ಲಿ ಅವನು ಅಥವಾ ಅವಳು ಬದುಕಲು ತಕ್ಷಣದ ಬೆಂಬಲಕ್ಕಾಗಿ ಈ ನಿಬಂಧನೆಯನ್ನು ಮಾಡಲಾಗಿದೆ. ಆದ್ದರಿಂದ, ಈ ಅಂಶಗಳನ್ನು ಪರಿಗಣಿಸಿ, ಅಂತಹ ತಾಂತ್ರಿಕ ವಿಧಾನಗಳನ್ನು ಪಕ್ಕಕ್ಕಿಟ್ಟು, ಈ ನ್ಯಾಯಾಲಯದ ಸಾಂವಿಧಾನಿಕ ಅಧಿಕಾರವನ್ನು ಈ ಪ್ರಕರಣದಲ್ಲಿ ಅನ್ವಯಿಸಲು ಅರ್ಹವಾಗಿದೆ' ಎಂದು ತೀರ್ಮಾನ ನೀಡಿದ್ದಾರೆ. ಹೀಗಾಗಿ, ತಂದೆಗೆ ತಿಂಗಳಿಗೆ ₹3,000 ಪಾವತಿಸುವಂತೆ ಮಗನಿಗೆ ಕೋರ್ಟ್ ಆದೇಶಿಸಿದೆ. ತಂದೆ ಪರ ವಕೀಲ ಎನ್.ಡಿ.ಬಟುಲೆ ವಾದ ಮಂಡಿಸಿದರೆ, ಪುತ್ರನ ಪರ ವಕೀಲರಾದ ಡಿ.ಆರ್.ಮಾರ್ಕ್ಡ್ ಮತ್ತು ಜಿ.ಪಿ.ದಾರಂದಾಲೆ ವಾದ ಮಂಡಿಸಿದ್ದರು.