Asianet Suvarna News Asianet Suvarna News

ಪುರುಷರ ಎದುರು ಚಡಪಡಿಕೆ ಯಾತಕ್ಕೆ? ಆತ್ಮವಿಶ್ವಾಸವಿಲ್ಲದ ಮಹಿಳೆಯರು ಹೇಗೆಲ್ಲ ಹಿಂಸೆ ಪಡ್ತಾರೆ ನೋಡಿ

ಬಹಳಷ್ಟು ಮಹಿಳೆಯರು ತಮ್ಮ ಪುರುಷ ಸಹೋದ್ಯೋಗಿ ಅಥವಾ ಯಾವುದೇ ಪುರುಷರ ಎದುರು ಕಂಫರ್ಟ್‌ ಆಗಿರುವುದಿಲ್ಲ. ಏನೋ ಒಂದು ರೀತಿಯ ಹಿಂಜರಿಕೆ ಅನುಭವಿಸುತ್ತಾರೆ. ಇದು ಆತ್ಮವಿಶ್ವಾಸದ ಕೊರತೆಯಿಂದ ಉಂಟಾಗುವ ಕಿರಿಕಿರಿ. ಇದನ್ನು ಅರಿತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಉತ್ತಮ.

Some signs that lack of confidence in woman around men
Author
First Published Aug 23, 2023, 7:58 PM IST

ಜನರನ್ನು ಎದುರಿಸಿ ಉತ್ತಮ ಸಂವಹನ ನಡೆಸುವುದು ಒಂದು ಕೌಶಲ. ಇದು ಎಲ್ಲರಲ್ಲೂ ಇರುವುದಿಲ್ಲ. ಆತ್ಮವಿಶ್ವಾಸದ ಕೊರತೆ ಇದ್ದರಂತೂ ನಾಲ್ಕು ಜನರನ್ನು ಎದುರಿಸುವುದು ಕಷ್ಟವಾಗುತ್ತದೆ. ಕೆಲವರು ವಿರುದ್ಧ ಲಿಂಗಿಗಳ ಎದುರು ಕಂಫರ್ಟ್‌ ಆಗಿರುವುದಿಲ್ಲ. ಕೆಲ ಪುರುಷರು ಮಹಿಳೆಯರ ಎದುರು ಏನೋ ಕಿರಿಕಿರಿ ಅನುಭವಿಸಿದರೆ, ಬಹಳಷ್ಟು ಮಹಿಳೆಯರು ಸಹ ಪುರುಷರ ಎದುರು ಒಂದು ರೀತಿಯ ಹಿಂಸೆ ಅನುಭವಿಸುತ್ತಾರೆ. ಏಕೆ ಹೀಗಾಗುತ್ತದೆ ಎನ್ನುವುದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಮೂಲತಃ ಆತ್ಮವಿಶ್ವಾಸದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. ಇವರ ಆತ್ಮವಿಶ್ವಾಸ ವಿರುದ್ಧ ಲಿಂಗಿಗಳ ಎದುರು ಹೆಚ್ಚು ಕುಗ್ಗುತ್ತದೆ. ಈ ಗುಣವನ್ನು ಅವರು ಕೆಲವು ಸಂಕೇತಗಳ ಮೂಲಕ ಅರಿವಿಲ್ಲದೇ ವ್ಯಕ್ತಪಡಿಸುತ್ತಾರೆ. ಒಂದೊಮ್ಮೆ ನೀವೂ ಸಹ ಈ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದರೆ ಎಚ್ಚೆತ್ತುಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದಕ್ಕೆ ಮುಂದಾಗಬೇಕು. ಪುರುಷರ ಎದುರು ಅಸುರಕ್ಷಿತ ಭಾವ ಅನುಭವಿಸುವ ಮಹಿಳೆಯರು ವ್ಯಕ್ತಪಡಿಸುವ ಸಂಕೇತಗಳು ಹೀಗಿರುತ್ತವೆ.

•    ಕಣ್ಣುಗಳನ್ನು ಸಂಧಿಸುವುದಿಲ್ಲ (Eye Contact)
ಬಹಳಷ್ಟು ಜನ ಈ ಸಮಸ್ಯೆ (Problem) ಎದುರಿಸುತ್ತಾರೆ. ಆತ್ಮವಿಶ್ವಾಸ (Confidence) ಕಡಿಮೆ ಇರುವ ಜನ ಎದುರಿನವರ ಕಣ್ಣುಗಳನ್ನು ನೋಡಿ ಮಾತನಾಡುವುದಿಲ್ಲ. ಅನೇಕ ಮಹಿಳೆಯರು (Woman) ಮುಖ್ಯವಾಗಿ ಪುರುಷರ (Men) ಎದುರು ಈ ಸಮಸ್ಯೆ ಅನುಭವಿಸುತ್ತಾರೆ. ನೇರವಾಗಿ ಮುಖ ನೋಡದೆ ಮಾತನಾಡುವುದು ಪರಿಣಾಮಕಾರಿಯಲ್ಲ. ಇದರಿಂದ ಯೋಚನೆಗಳು ಬೇರೆ ಕಡೆಗೆ ಹರಿಯುತ್ತವೆ. 

Personality Tips: ಸ್ಟ್ರಾಂಗ್ ಲೇಡೀಸ್ ಇಂತಹ ವಿಚಾರಗಳಿಗೆ ಎಂದಿಗೂ ರಾಜಿ ಮಾಡ್ಕೊಳೋದಿಲ್ಲ

•    ಏನೋ ಚಡಪಡಿಕೆ (Fidget)
ಈ ಭಾವನೆಯನ್ನು ಸುಲಭವಾಗಿ ಗುರುತಿಸಬಹುದು. ಪುರುಷರ ಎದುರು ಹಲವು ಮಹಿಳೆಯರು ಅಸುರಕ್ಷಿತ (Insecure) ಭಾವನೆ (Feel) ಅನುಭವಿಸುವ ಜತೆಗೆ ಚಡಪಡಿಕೆಯಲ್ಲಿರುತ್ತಾರೆ. ತಮ್ಮ ಡ್ರೆಸ್‌ ಬಗ್ಗೆ ಪದೇ ಪದೆ ಯೋಚಿಸಬಹುದು. ಮುಂಗುರಳನ್ನು ಹಿಂದಕ್ಕೆ ತಳ್ಳುತ್ತಿರಬಹುದು, ಸೀರೆಯ ಸೆರಗನ್ನು ಸರಿ ಮಾಡಿಕೊಳ್ಳುತ್ತಿರಬಹುದು. ಕುಳಿತುಕೊಂಡ ಭಂಗಿಯನ್ನು ಬದಲಿಸುತ್ತಿರಬಹುದು. ಅರಿಯದೇ ಎಸಗುವ ಈ ಸಣ್ಣ ಕ್ರಿಯೆ ಏಕಾಗ್ರತೆಯನ್ನು ಹಾಳು ಮಾಡಬಹುದು ಹಾಗೂ ಎನರ್ಜಿಯನ್ನು ಕಳೆಯಬಹುದು.

•    ಸ್ವಯಂ ತಮಾಷೆ (Self Comments)
ಕೆಲವು ಬಾರಿ ಮಾತನಾಡುವಾಗ ನಮ್ಮ ಬಗ್ಗೆ ನಾವೇ ತಮಾಷೆ ಮಾಡಿಕೊಳ್ಳುವುದು ಸಹಜ. ಧನಾತ್ಮಕ (Positive) ಗುಣಗಳನ್ನು ಹೇಳಿಕೊಳ್ಳದೆ ನಮ್ಮ ಅವಗುಣ ಅಥವಾ ಹಿಂಜರಿಕೆಗಳನ್ನು ಪದೇ ಪದೆ ತಮಾಷೆಯಾಗಿ ಹೇಳಿಕೊಳ್ಳುವುದು ಸಹ ಪುರುಷರ ಎದುರು ನಮ್ಮಲ್ಲಿರುವ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ಇಂತಹ ಗುಣಕ್ಕೂ ಹಲವು ಕಾರಣಗಳಿವೆ. ಮಹಿಳೆಯರು ನಿಜವಾಗಿಯೂ ತಮ್ಮ ಬಗ್ಗೆ ಹಾಗೆ ದೃಢವಾಗಿ ನಂಬಿಕೊಂಡಿರಬಹುದು ಅಥವಾ ಮೆಚ್ಚುಗೆಯನ್ನು ಬಯಸಿ ಇಂತಹ ಹೇಳಿಕೆ ನೀಡಬಹುದು. ಅಥವಾ ಬೇರೆಯವರು ತಮ್ಮ ಬಗ್ಗೆ ಏನಂದುಕೊಳ್ಳುತ್ತಾರೋ ಎನ್ನುವ ಆತಂಕವೂ ಇರಬಹುದು. ತಮ್ಮ ಬಗ್ಗೆ ಪಾಸಿಟಿವ್‌ ಮಾತನಾಡುವುದು ಅತ್ಯಂತ ಮುಖ್ಯ. ಬಡಾಯಿ ಕೊಚ್ಚುವುದಲ್ಲ. ಪದೇ ಪದೆ ತಮ್ಮನ್ನು ಕಡೆಗಣಿಸುವಂತಹ ಮಾತುಗಳಾಡಬಾರದು.

•    ಎಲ್ಲದಕ್ಕೂ ಅಂಗೀಕಾರ (Agree)
ಕೆಲವು ಮಹಿಳೆಯರು ಪುರುಷರ ಜತೆಗೆ ಕೂತು ಮಾತನಾಡುವ ಸಮಯದಲ್ಲಿ ಯಾವುದೋ ವಿಚಾರದ ಬಗ್ಗೆ ಅಸಮಾಧಾನ ಅಥವಾ ಸಹಮತ (Approval) ಇಲ್ಲವಾದರೂ ಸುಮ್ಮನೆ ತಲೆಹಾಕುತ್ತಾರೆ. ಇದು ಸಹ ಆತ್ಮವಿಶ್ವಾಸದ ಕೊರತೆಯನ್ನು ತೋರುತ್ತದೆ. ನಿರ್ಭಿಡೆಯಿಂದ ಅನಿಸಿದ್ದನ್ನು ಹೇಳುವ ಧೈರ್ಯ ಅವರಲ್ಲಿರುವುದಿಲ್ಲ. 

Personality Tips: ಯಶಸ್ವಿ ಜನ ತಮ್ಮ ಫ್ರೀ ಟೈಮನ್ನ ಕಳೆಯೋದೇ ಹೀಗೆ!

•    ಪದೇ ಪದೆ ಸಾರಿ (Sorry) ಕೇಳುವುದು
ಅಗತ್ಯವಿರಲಿ, ಇಲ್ಲದಿರಲಿ. ತಮ್ಮ ಅಭಿಪ್ರಾಯಗಳನ್ನು ಹೇಳುವಾಗ ಮಧ್ಯದಲ್ಲಿ ಸಾರಿ ಕೇಳುವ ಪರಿಪಾಠ ಸಹ ಆತ್ಮವಿಶ್ವಾಸ ಇಲ್ಲದಿರುವುದನ್ನು ಸೂಚಿಸುತ್ತದೆ. ತಮ್ಮ ತಪ್ಪು ಇಲ್ಲದಿದ್ದಾಗಲೂ ಅನೇಕರು ಸಾರಿ ಕೇಳುವುದು ಕಂಡುಬರುತ್ತದೆ.

•    ದೂರ ದೂರ ನಿಲ್ಲುವುದು
ಅನೇಕ ಮಹಿಳೆಯರು ಪುರುಷರ ಜತೆಗೆ ಕಂಫರ್ಟ್‌ (Comfort) ಆಗಿ ವರ್ತಿಸುವುದಿಲ್ಲ. ದೈಹಿಕವಾಗಿ ದೂರದೂರವೇ ನಿಲ್ಲುತ್ತಾರೆ. ಮಾತನಾಡುವಾಗ ಸಹಜವಾಗಿ ಎಷ್ಟು ಸಾಮೀಪ್ಯ ಇರಬೇಕೋ ಅಷ್ಟು ಹತ್ತಿರ ನಿಲ್ಲಲು ಹಿಂಜರಿಯುತ್ತಾರೆ. ಸಾಕಷ್ಟು ದೂರವೇ ನಿಲ್ಲುತ್ತಾರೆ. ಒಂದೊಮ್ಮೆ ಸಮೀಪಿಸಿದಾಗಲೂ ಕೈಗಳನ್ನು ಕಟ್ಟಿಕೊಂಡು ನಿಲ್ಲುವುದು ಕಂಡುಬರುತ್ತದೆ. ಆಂತರಿಕವಾಗಿ ಸ್ವ ಅರಿವು ಮೂಡಿಸಿಕೊಳ್ಳಲು ಹೆಣಗಾಡುವ ಮಹಿಳೆಯರು ಹೀಗೆ ಮಾಡುತ್ತಾರೆ. 

Follow Us:
Download App:
  • android
  • ios