ಪೋಷಕರಾಗಲು ಮಕ್ಕಳು ಹುಟ್ಟಿದರೆ ಸಾಲದು, ಸೂಕ್ತವಾಗಿ ಬೆಳೆಸಬೇಕು. ಆದರೆ ಕೆಲವರು ಪೋಷಕರಾಗಲು ಅರ್ಹರಲ್ಲ. ಇದೀಗ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣಾಗಿದೆ. ಈ ವಿಡಿಯೋ ನೋಡಿ ಇವರು ಪೋಷಕರಾಗಿರಲು ಅರ್ಹರೆ? ನೀವೇ ನಿರ್ಧರಿಸಿ.

ಮಕ್ಕಳ ಪಾಲನೆ, ಆರೈಕೆ ಅತ್ಯಂತ ಸೂಕ್ಷ್ಮ. ಮುಗ್ದ ಮನಸ್ಸಿಗಳನ್ನು ಅಷ್ಟೇ ನಾಜೂಕಾಗಿ ಬೆಳೆಸಬೇಕು. ಪೋಷಕರು, ಬೆಳೆಯುವ ವಾತಾವರಣ ಎಲ್ಲವೂ ಮಕ್ಕಳ ಬೆಳವಣಿಗೆಯಲ್ಲಿ ಪರಿಣಾಮ ಬೀರುತ್ತದೆ. ಮಕ್ಕಳು ಹುಟ್ಟಿಸಿದರೆ ಸಾಲದು, ಬೆಳೆಸಬೇಕು ಅನ್ನೋ ಮಾತಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಗಬಾರದು. ಆದರೆ ಹಲವು ಘಟನೆಗಳು ಇದಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡುತ್ತದೆ. ಈ ಪೋಷಕರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇವರು ನಿಜಕ್ಕೂ ಪೋಷಕರಾಗಿರಲು ಅರ್ಹರಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಹಾದಿ ಬೀದಿಯಲ್ಲಿ ಗಂಡ ಹೆಂಡತಿಯರ ಜಗಳದಲ್ಲಿ ಏನೂ ಅರಿದಯ ಮಕ್ಕಳು ಬಡವಾಗಿದ್ದು ಮಾತ್ರವಲ್ಲ, ಭಯಭೀತಗೊಂಡಿದ್ದಾರೆ, ಗಾಯಗೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೇರೆಂಟಿಂಗ್ ಕುರಿತು ಚರ್ಚೆಗೆ ನಾಂದಿ ಹಾಡಿದೆ. ಇಲ್ಲಿ ಹೆಂಡತಿ ಅಥವಾ ಗಂಡ ಸಂತ್ರಸ್ತನಲ್ಲ. ಮಕ್ಕಳು ಸಂತ್ರಸ್ತರು. ಈ ವಿಡಿಯೋದಲ್ಲಿ ಗಂಡ ಹೆಂಡತಿ ಜಗಳವಾಡುವ ದೃಶ್ಯವಿದೆ. ಒಂದು ಮಗುವನ್ನು ಹೆಂಡತಿ ಎತ್ತಿಕೊಂಡಿದ್ದಾರೆ. ಮತ್ತೊಂದು ಮಗು ಬೈಕ್ ಮೇಲೆ ಕುಳಿತಿದೆ. ಇತ್ತ ಗಂಡ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ ಮೇಲೆ ಏಕಾಏಕಿ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಇತ್ತ ಪತ್ನಿ ತಿರುಗಿಸಿ ತನ್ನ ಕೈಯಲ್ಲಿದ್ದ ಮಗುವನ್ನು ಎತ್ತಿ ಬಿಸಾಕಿ ತೆರಳಿದ್ದಾಳೆ.

ಕೈಯಲ್ಲಿದ್ದ ಏನು ಅರಿಯದ ಪುಟ್ಟ ಮಗುವನ್ನೇ ತಾಯಿ ಎತ್ತಿ ಬಿಸಾಕಿದ್ದಾಳೆ. ಗಂಡನ ಮೇಲಿನ ಕೋಪನ್ನು ಮಗುವಿನ ಮೇಲೆ ತೋರಿದ್ದಾಳೆ. ಮಗು ಗಾಯಗೊಂಡಿದೆ. ಇತ್ತ ಈಕೆ ನೇರವಾಗಿ ಸಾಗಿದ್ದಾಳೆ. ಇವರಿಬ್ಬರ ಜಗಳದಲ್ಲಿ ಒಂದು ಭಯ, ಆತಂಕದ ಜೊತೆ ಗಾಯಗೊಂಡಿದ್ದರೆ, ಮತ್ತೊಂದು ಮಗು ಭಯಭೀತಗೊಂಡಿದೆ. 

Scroll to load tweet…

ಬೆಂಗಳೂರಿನಲ್ಲೇ ನಡೆಯಿತಾ ಈ ಘಟನೆ?
ಈ ವಿಡಿಯೋ ಎಲ್ಲಿ ನಡೆದಿದೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ವಿಡಿಯೋದಲ್ಲಿ ಈಕೆ ಸಾಗುವ ದಾರಿಯಲ್ಲಿ ಕನ್ನಡದಲ್ಲಿ ಬರೆದಿರುವ ಕಲ್ಯಾಣ ಮಂಟಪದ ಸೈನ್ ಬೋರ್ಡ್ ಇದೆ. ಹೀಗಾಗಿ ಇದು ಕರ್ನಾಟಕದಲ್ಲಿ ನಡೆದಿದೆ ಅನ್ನೋದು ಸ್ಪಷ್ಟವಾಗುತ್ತಿದೆ. ಇನ್ನು ಈ ಬೋರ್ಡ್ ಪ್ರಕಾರ ಹೇಳುವುದಾದರೆ ಮಲ್ಲಸಂದ್ರದ ನಡಾವತಿ ರಸ್ತೆಯ ಶೇಶಪ್ಪ ಲೇಔಟ್ ಬಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಗಂಡ ಹೆಂಡತಿಯಾಗಿ ಈ ಜೋಡಿ ವಿಫಲರಾಗಿದ್ದರೆ, ಪೋಷಕರಾಗಿಯೂ ವಿಫಲರಾಗಿದ್ದಾರೆ. ಏನು ಅರಿಯದ ಮಕ್ಕಳ ಮೇಲೆ ತಮ್ಮ ಆಕ್ರೋಶ, ಬಡಿದಾಟ ತೋರಿರುವುದು ಅಪರಾಧ ಎಂದಿದ್ದಾರೆ. ಮಕ್ಕಳನ್ನು ಬೆಳೆಸುವಲ್ಲಿ ಎಚ್ಚರವಹಿಸಬೇಕು. ಪ್ರೀತಿಯಿಂದ ಬೆಳೆಸಿ, ಐಷಾರಾಮಿತನ ಮಕ್ಕಳು ಕೇಳುವುದಿಲ್ಲ, ಕೇವಲ ಪ್ರೀತಿ-ಆರೈಕೆ ಕೊಟ್ಟರೆ ಸಾಕು. ಈ ರೀತಿ ಜಗಳ ಮಾಡಿ ಮಕ್ಕಳ ಮೇಲೆ ತೀರಿಸಿಕೊಳ್ಳುವುದಾದರೆ ಪೋಷಕರಾಗುವುದೇ ಬೇಡ ಎಂದು ಹಲವರು ಸಲಹೆ ನೀಡಿದ್ದಾರೆ.