ದಾವಣೆಗೆರೆ ಕುಳ್ಳಿ ಅಂತಲೇ ಫೇಮಸ್‌ ಆಗಿರುವ ಮಾನ್ಸಿ ಅನುಗೆ ಹರೀಶ್‌ ಸಿಕ್ಕಿದ್ದು ಹೇಗೆ?

ಸೋಶಿಯಲ್‌ ಮೀಡಿಯಾದಲ್ಲಿ ಮಾನಸಿ ಅವರು ದಾವಣಗೆರೆ ಕುಳ್ಳಿ ಅಂತಲೇ ಫೇಮಸ್‌ ಆಗಿದ್ದಾರೆ. ಇತ್ತೀಚೆಗೆ ಅವರು ಹರೀಶ್‌ ಎನ್ನುವವರ ಜೊತೆ ಮಾನಸಿ ಮದುವೆಯಾಗಿತ್ತು. ಈ ಮದುವೆಗೆ 3000 ಜನರು ಬಂದಿದ್ದರು. ಈಗ ಲವ್‌, ಮದುವೆ ಬಗ್ಗೆ Anchor Pooja ಚಾನೆಲ್‌ ಜೊತೆ ಮಾನಸಿ ಮಾತನಾಡಿದ್ದಾರೆ.

ಕಮಿಟ್‌ ಆಗಿ ಮದುವೆ ಆಗೋಕೆ ಒಂದು ವರ್ಷ ತಗೊಂಡೆ! 
“ಕಾಲೇಜಿಗೆ ಹೋಗಬೇಕಾದರೆ ಎಲ್ಲರೂ ನನ್ನನ್ನು ರೇಗಿಸುತ್ತಿದ್ದರು. ಇದರಿಂದ ಬೇಸರ ಆಗಿ ಪದೇ ಪದೇ ನಾನು ಕಾಲೇಜ್‌ ಬದಲಾಯಿಸಿದೆ. ನಾನು ಸಣ್ಣ ಕಂಪೆನಿಯಲ್ಲಿ ಕೆಲಸ ಮಾಡುವಾಗ ಫ್ರೆಂಡ್‌ ಒಬ್ಬರಿಂದ ಹುಡುಗರ ಪರಿಚಯ ಆಗಿತ್ತು. ನಾನು ಶೋಗಳನ್ನು ಮಾಡಬೇಕು, ಮನೆಯ ಗೃಹ ಪ್ರವೇಶ ಆಗಬೇಕು, ಅಣ್ಣನ ಮದುವೆ ಆಗಬೇಕು ಅಂತ ಒಂದು ವರ್ಷ ಆದ್ಮೇಲೆ ನಾನು ಮದುವೆಯಾದೆ” ಎಂದು ಮಾನಸಿ ಅವರು ಹೇಳಿದ್ದಾರೆ.

ದಾವಣಗೆರೆ: ಹಕ್ಕಿಪಿಕ್ಕಿ ಬಾಲಕನ ಮರಕ್ಕೆ ಕಟ್ಟಿ ಇರುವೆ ಬಿಟ್ಟು ಚಿತ್ರಹಿಂಸೆ! ವಿಕೃತಿ ವಿಡಿಯೋ ವೈರಲ್!

ನನ್ನ ಲೈಫ್‌ ಚೆನ್ನಾಗಿದೆ! 
“ನಾನು ರೀಲ್ಸ್ ಮಾಡ್ತೀನಿ ಅಂತ ಗೊತ್ತಿದ್ದೇ ಮದುವೆಯಾದರು ಅನಿಸತ್ತೆ. ಈಗ ನನ್ನ ಲೈಫ್‌ ಚೆನ್ನಾಗಿದೆ. ಮದುವೆಗೆ ಮೂರು ತಿಂಗಳು ಇರಬೇಕಿದ್ರೆ ನಾನು ಮದುವೆ ಆಗ್ತಿದ್ದೀನಿ ಎನ್ನೋ ವಿಷಯ ಹೇಳಿಕೊಂಡೆ. ನಾವು ಫೋಟೋ ಹಾಕಿದ್ರೆ ಸಾಕು, ಅದನ್ನೇ ಫುಲ್‌ ಟ್ರೆಂಡಿಂಗ್‌ ಮಾಡುತ್ತಾರೆ. ನೋಡೋಕೆ ಚೆನ್ನಾಗಿದ್ದಾಳೆ, ಆದರೆ ಕುಳ್ಳಿ ಅಂತ ಕೆಲವರು ಹೀಯಾಳಿಸುತ್ತಾರೆ, ಆಗ ನಾನು ಜಗಳ ಮಾಡ್ತೀನಿ. ಜಗಳಗಂಟಿ ಅಂತಲೇ ನನ್ನ ಕರೆಯುತ್ತಾರೆ” ಎಂದು ಮಾನಸಿ ಅವರು ಹೇಳಿದ್ದಾರೆ.

ಕುಳ್ಳಿಯಾಗಿರೋದು ವರ! 
“ನನಗೆ ಮನೆಯವರಿಂದ ಕಷ್ಟ ಆಗಿಲ್ಲ, ನನ್ನ ಬಗ್ಗೆ ನೆಗೆಟಿವ್‌ ಮಾತು ಆಡಿ ಜನರೇ ಕಷ್ಟ ಕೊಟ್ಟಿದ್ದಾರೆ. ನನ್ನ ಮಗಳು ಚೆನ್ನಾಗಿದ್ರೆ ಮದುವೆ ಮಾಡಬಹುದಿತ್ತು ಅಂತ ತಾಯಿ ಕಣ್ಣೀರು ಹಾಕುತ್ತಿದ್ದಳು. ಆರಂಭದಲ್ಲಿ ಕುಳ್ಳಿಯಾಗಿರೋದು ಶಾಪ ಅಂತ ಭಾವಿಸ್ತಿದ್ದೆ. ಸೋಶಿಯಲ್‌ ಮೀಡಿಯಾದಲ್ಲಿ ನಾನು ಫೇಮಸ್‌ ಆದ್ಮೇಲೆ ಕುಳ್ಳಿಯಾಗಿರೋದು ವರ ಅಂತ ಭಾವಿಸ್ತೀನಿ” ಎಂದು ಮಾನಸಿ ಅವರು ಹೇಳಿದ್ದಾರೆ. 

“ನಾನು ಒಂದು ಹುಡುಗನನ್ನು ಪ್ರೀತಿಸುತ್ತಿದ್ದೆ. ಆರು ವರ್ಷಗಳಿಗೂ ಅಧಿಕ ಕಾಲ ನಾನು ಲವ್‌ ಮಾಡಿದ್ದೆ, ಬ್ರೇಕಪ್‌ ಆಯ್ತು. ನನಗೆ ಈಗ ಮದುವೆ ಆಗಿದೆ, ಅವರಿಗೂ ಮದುವೆ ಆಗುತ್ತಿದೆ. ಆಗ ನಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಾಗ ಮನೆಯಲ್ಲಿ ಸಮಸ್ಯೆ ಬಂತು. ನನಗೆ ಆ ಹುಡುಗನ ಬಗ್ಗೆ ಯೋಚನೆ ಮಾಡೋಕೆ ಇಷ್ಟ ಇಲ್ಲ. ಅವನು ಚೆನ್ನಾಗಿರಲಿ. ನನ್ನ ಗಂಡ ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ತಾರೆ, ನನ್ನ ಗಂಡ ನೋಡೋಕೆ ಚೆನ್ನಾಗಿಲ್ಲದಿದ್ರೂ ಕೂಡ ಅವರ ಮನಸ್ಸು ಒಳ್ಳೆಯದು” ಎಂದು ಮಾನಸಿ ಅವರು ಹೇಳಿದ್ದಾರೆ.

“ನನ್ನ ಗಂಡ ಲವ್‌ ಬಗ್ಗೆ ನಾನು ಪ್ರಶ್ನೆ ಮಾಡಿಲ್ಲ. ಹಳೆಯದನ್ನು ಅಲ್ಲೇ ಬಿಡಬೇಕು. ನಾವು ಯಾವಾಗಲೂ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಅನುಮಾನ ಬಂದ್ರೆ ನಾವು ಬದುಕೋಕೆ ಆಗೋದಿಲ್ಲ. ಅರ್ಧದಲ್ಲೇ ಕೈ ಕೊಟ್ಟು ಲವ್ ಮಾಡಿ ಬಿಟ್ಟು ಹೋಗೋರು ತುಂಬಾ ಜನ ಇದ್ದಾರೆ. ಫೇಕ್ ಲವ್ ಮಾಡ್ತಾರೆ, ನನ್ನ ಭೂತಕಾಲದ ಬಗ್ಗೆ ಅವರು ಪ್ರಶ್ನೆ ಮಾಡೋದಿಲ್ಲ” ಎಂದು ಮಾನಸಿ ಅವರು ಹೇಳಿದ್ದಾರೆ. “ಎಲ್ಲವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಬಾರದು, ಅದರಿಂದ ನಿಜಕ್ಕೂ ಏನು ಸಿಗೋದಿಲ್ಲ” ಎಂದು ಮಾನಸಿ ಅವರು ಹೇಳಿದ್ದಾರೆ.

ಬೆಂಗಳೂರು: ತಿರುಚಿದ ವಿಡಿಯೋ ತೋರಿಸಿ ನಿವೃತ್ತ ಎಂಜಿನಿಯರ್‌ಗೆ ₹2 ಕೋಟಿ ಸುಲಿಗೆ ಯತ್ನಿಸಿದ ಆರೋಪಿಗಳು ಅರೆಸ್ಟ್

ಕಿಪ್ಪಿ ಕೀರ್ತಿ ಬ್ರೇಕಪ್‌ ಬಗ್ಗೆ ಮಾತನಾಡಿದ ಮಾನಸಿ ಅವರು “ಕೀರ್ತಿ ಎಲ್ಲದನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಹಾಕುತ್ತಾಳೆ, ಅದೇ ತಪ್ಪು. ಹುಡುಗ ಹೋದೋನು ಹೋದ ಅಂತ ಅವಳು ಇರಬೇಕು. ನಾನು ಅವಳಿಗೆ ಇದೇ ಮಾತು ಹೇಳಿದೆ. ಮನಸ್ಸಿಂದ ಪ್ರೀತಿಸಿದ್ದರೆ ಇರುತ್ತಿದ್ದ, ರೂಪ ನೋಡಿ ಪ್ರೀತಿ ಮಾಡಿದ್ದರೆ ಇರೋದಿಲ್ಲ” ಎಂದು ಹೇಳಿದ್ದಾರೆ. ಮಾನಸಿ ಹಾಗೂ ಹರೀಶ್‌ ಅವರ ನಡುವೆ ಎರಡು ವರ್ಷಗಳ ನಡುವಿನ ವಯಸ್ಸಿನ ಅಂತರ ಇದೆ. ಮಾನಸಿಗೆ ಈಗ 26 ವರ್ಷ ಅಂತೆ, ಹರೀಶ್‌ ಅವರು ಆಸ್ಪತ್ರೆಯೊಂದರಲ್ಲಿ ರಿಸೆಪ್ಶನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. 

View post on Instagram

YouTube video player