Asianet Suvarna News Asianet Suvarna News

ತನ್ನಿಬ್ಬರು ಸೋದರರಿಗೆ ಕೊನೆಯ ಬಾರಿ ರಾಖಿ ಕಟ್ಟಿ ಪ್ರಾಣ ಬಿಟ್ಟ ಸೋದರಿ

ರಕ್ಷಾ ಬಂಧನದ ದಿನವೇ ಸೋದರಿಯೊಬ್ಬಳು ತನ್ನ ಇಬ್ಬರು ಸೋದರರಿಗೆ ರಾಖಿ ಕಟ್ಟಿ ಬಳಿಕ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ. ಆಕೆಯ ಸಾವಿನ ಹಿಂದೊಂದು ನೋವಿನ ಕತೆ ಇದೆ. 

sister passed away after tied rakhi to her two younger brothers for the last time in telangana akb
Author
First Published Aug 19, 2024, 3:04 PM IST | Last Updated Aug 19, 2024, 3:04 PM IST

ತೆಲಂಗಾಣ: ರಕ್ಷಾ ಬಂಧನದ ದಿನವೇ ಸೋದರಿಯೊಬ್ಬಳು ತನ್ನ ಇಬ್ಬರು ಸೋದರರಿಗೆ ರಾಖಿ ಕಟ್ಟಿ ಬಳಿಕ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ. ಆಕೆಯ ಸಾವಿನ ಹಿಂದೊಂದು ನೋವಿನ ಕತೆ ಇದೆ. ತೆಲುಗು ಮಾಧ್ಯಮಗಳ ವರದಿಯ ಪ್ರಕಾರ ಈ ಹುಡುಗಿ  ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರೀತಿಸುವಂತೆ ಯುವಕನೋರ್ವ ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಈಕೆ ತನ್ನ ಜೀವನವನ್ನು ಕೊನೆಗೊಳಿಸಲು ಯತ್ನಿಸಿದ್ದಳು. ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಈಕೆಯನ್ನು  ಪೋಷಕರು  ಹಾಗೂ ಸಂಬಂಧಿಗಳು ಮೆಹಬೂಬಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಕೆ ಸಾವನ್ನಪ್ಪಿದ್ದಾಳೆ. ಸಾಯುವುದಕ್ಕೂ ಮೊದಲು ಆಕೆ ತನ್ನಿಬ್ಬರು ಸೋದರರಿಗೆ ಕೊನೆಯದಾಗಿ ರಾಕಿ ಕಟ್ಟಿ ಕೊನೆಯುಸಿರೆಳೆದಿದ್ದಾಳೆ. 

ಹೀಗೆ ವಿಷ ಸೇವಿಸಿ ಜೀವನ ಕೊನೆಗೊಳಿಸಿದ ಯುವತಿ ನರಸಿಂಹುಲಪೇಟ್‌ ಮಂಡಲ್‌ನ ಬುಡಕಟ್ಟು ಸಮುದಾಯ ವಾಸಿಸುವ ಗ್ರಾಮದ ನಿವಾಸಿಯಾಗಿದ್ದು,, ಕೊಡದ್‌ ಎಂಬಲ್ಲಿಯ ಖಾಸಗಿ ಕಾಲೇಜಿನಲ್ಲಿ  2ನೇ ವರ್ಷದ ಪಾಲಿಟೆಕ್ನಿಕ್ ಓದುತ್ತಿದ್ದಳು.  ಕಾಲೇಜಿಗೆ ಹೋಗುತ್ತಿದ್ದ ಈಕೆಯನ್ನು ಹುಡುಗನೋರ್ವ ಪ್ರೀತಿಸು ಎಂದು ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದನ್ನು ಸಹಿಸಲಾಗದೇ ಆಕೆ ಸಾವಿಗೆ ಶರಣಾಗಿದ್ದಾಳೆ. 

ಪತಿ ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಸನ್ನಿ ಲಿಯೋನ್: ಫೋಟೋಸ್ ವೈರಲ್

ತನ್ನ ಸಾವು ಇನ್ನೇನು ಸಮೀಪಿಸುತ್ತಿದೆ ಎಂಬುದರ ಅರಿವಾಗುತ್ತಿದ್ದಂತೆ ಆಕೆ ತನ್ನ ಕಿರಿಯ ಸೋದರರಿಬ್ಬರಿಗೆ ಕೊನೆಯದಾಗಿ ರಾಖಿ ಕಟ್ಟುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಇದಾದ ನಂತರ ಆಕೆಯ ಇಬ್ಬರು ಸೋದರರನ್ನು ಆಸ್ಪತ್ರೆಗೆ ಕರೆಸಿದ್ದು, ಅಲ್ಲಿ ಆಕೆ ಅವರಿಬ್ಬರಿಗೆ ರಾಖಿ ಕಟ್ಟಿ ಹಣೆಗೆ ಮುತ್ತಿಟ್ಟಿದ್ದಾಳೆ. ಅಲ್ಲದೇ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಮ್ಮಂದಿರ ಬಳಿ ಭಾಷೆ ತೆಗೆದುಕೊಂಡಿದ್ದಾಳೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಭಾವುಕ ಕ್ಷಣಗಳು ಕಳೆದ ಸ್ವಲ್ಪ ಹೊತ್ತಿನಲ್ಲಿ ಆಕೆ ಸಾವನ್ನಪ್ಪಿದ್ದಾಳೆ. 

ಇದಾಗಿ ಸ್ವಲ್ಪ ಹೊತ್ತಿನಲ್ಲಿ ಆಕೆ ಸಾವನ್ನಪ್ಪಿದ್ದು, ಅಲ್ಲಿದ ಎಲ್ಲರನ್ನು ದುಃಖದ ಕಡಲಲ್ಲಿ ತೇಲುವಂತೆ ಮಾಡಿದೆ. ಆಕೆ ತಾನು ಸಾಯುತ್ತೇನೆ ಎಂಬುದನ್ನು ತಿಳಿದೇ ತಮ್ಮಂದಿರನ್ನು ಕರೆಸಿ ಆಸ್ಪತ್ರೆಯಲ್ಲೇ ಕೊನೆ ಬಾರಿ ರಾಖಿ ಕಟ್ಟಿದ್ದಾಳೆ ಎಂಬುದನ್ನು ತಿಳಿದ ಎಲ್ಲರೂ ಶಾಕ್‌ ಆಗಿದ್ದಲ್ಲದೇ ಆಕೆಯ ಅಕಾಲಿಕ ಸಾವಿಗೆ ಎಲ್ಲರೂ ಕಣ್ಣೀರಾಕಿದ್ದಾರೆ. ಆಕೆಯ ಹಠಾತ್ ಸಾವು ಕುಟುಂಬಸ್ಥರನ್ನು ದುಃಖದ ಕಡಲಲ್ಲಿ ತೇಲುವಂತೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹುಲ್ಲಾಪೇಟ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. 

ಇಂದು ರಕ್ಷಾ ಬಂಧನ: ಚೀನೀ ರಾಖಿಗಳು ಮಾಯ, ಮಾರುಕಟ್ಟೆಯಲ್ಲಿ ಸ್ವದೇಶಿ ರಾಖಿಗಳ ದರ್ಬಾರು 

ಇಲ್ಲಿದೆ ನೋಡಿ ಕಣ್ಣೀರು ತರಿಸುವ ವೀಡಿಯೋ:
 

 

Latest Videos
Follow Us:
Download App:
  • android
  • ios