ರೊಮ್ಯಾಂಟಿಕ್ ದಾಂಪತ್ಯಕ್ಕಿಲ್ಲಿವೆ Flirting tips

ದಾಂಪತ್ಯದಲ್ಲಿ ರೊಮ್ಯಾನ್ಸ್ ಇದ್ದರೆ ಏಕತಾನತೆಗೆ ಜಾಗವಿರುವುದಿಲ್ಲ. ಮದುವೆಗೂ ಮುಂಚೆ ಮಾಡುತ್ತಿದ್ದಂತೆಯೇ ನಂತರವೂ ಫ್ಲರ್ಟ್ ಮಾಡುವುದರಿಂದ ಜೀವನ ಸಂತೋಷಮಯವಾಗಿರುತ್ತದೆ.

Simple Ways To Romantically Flirt With Your Spouse

ದಾಂಪತ್ಯವೆಂದರೆ ಏಕಾತನತೆ ಇರಬಾರದು. ಪ್ರತಿಯೊಂದೂ ವಿಷಯಕ್ಕೂ ಇದು ಅಪ್ಲೈ ಆಗುತ್ತೆ. ಅದರಲ್ಲಿಯೂ ರೊಮ್ಯಾನ್ಸ್ ಅಂದರೆ ದಾಂಪತ್ಯದ ಸುಖ ಹೆಚ್ಚಿಸುವ ಟಾನಿಕ್ ಇದ್ದಂತೆ. ಸೆಕ್ಸ್ ಸಹ ಮೊನೋಟನಸ್ ಎನಿಸಿದರೆ, ಜೋಡಿಗಳ ನಡುವೆ ಮೂರನೇ ವ್ಯಕ್ತಿಯ ಪ್ರವೇಶವಾಗೋದು. ಅಷ್ಟಕ್ಕೂ ರೊಮ್ಯಾಂಟಿಕ್‌ ಲೈಫ್‌ನಲ್ಲಿ ಫ್ಲರ್ಟ್ ಅಂದ್ರೇನು ಅಂತ ಗೊತ್ತಾ? 

Married Life ಅಂದ್ರೆ ಸರಿದೂಗಿಸೋದು ಅಷ್ಟು ಸುಲಭದ ವಿಷಯವಲ್ಲ. ಅಲ್ಲಿ ಜಗಳವಿರುತ್ತೆ. ಪ್ರೀತಿ ಇರುತ್ತೆ. ರೊಮ್ಯಾನ್ಸ್ ಅಂತೂ ಇದ್ದೇ ಇರಬೇಕು. ಇರಲಿಲ್ಲವೆಂದರೆ ಅದನ್ನು ದಾಂಪತ್ಯವೆಂದು ಹೇಳುವುದಾದರೂ ಹೇಗೆ ಹೇಳಿ?  ಅದರಲ್ಲಿಯೂ ದಾಂಪತ್ಯದ ಸುಖಕ್ಕೆ ಪ್ರಮುಖ ಕಾರಣವಾಗಿರುವ ಸೆಕ್ಸ್‌ನಲ್ಲಿ ಏಕಾತಾನತೆ ಇರಲೇಬಾರದು. ಜೋಡಿಗೆ ಅದ್ಭುತ ಅನುಭವ ಸಿಗಬೇಕೆಂದರೆ ತರಲೆ ತರಲೆ ಮಾತುಗಳು, ಒಬ್ಬರಿಗೊಬ್ಬರಿಗೆ ಪ್ರೀತಿಯ ಹೊಗಳಿಕೆಯ ಜೊತೆಗೆ ‌ಗೌರವಯುತ ನಡೆ-ನುಡಿಯೂ ಅತ್ಯಗತ್ಯ. 

ಲೈಂಗಿಕತೆ (Sex) ಮತ್ತು ಪ್ರೀತಿ (Love) ಪ್ರತಿಯೊಬ್ಬರ ದಾಂಪತ್ಯ ಜೀವನಕ್ಕೆ ಸುಖದ ಮೆಟ್ಟಿಲುಗಳು. ಪತ್ನಿಯನ್ನು ತನ್ನಿಷ್ಟದಂತೆ ಬಳಸಬಹುದೆಂದು ಬಹುತೇಕ ಅಹಂ ಇರೋ ಪುರುಷರ ಏಕಮುಖ ಅಭಿಪ್ರಾಯ. ಆದರೆ, ಯಾವಾಗ ತರಲೆ, ಸಮಾನತೆ, ಗೌರವ ದಾಂಪತ್ಯದಲ್ಲಿ ಮೇಳೈಸುತ್ತೋ ಆಗ ದಾಂಪತ್ಯಕ್ಕೊಂದು ಅರ್ಥ ಬರುತ್ತದೆ. 

ಮೂಲತಃ ಹೆಣ್ಣು ಭಾವನಾಜೀವಿ. ಆದರೆ, ತಾನು ಬೆಳೆದ ವಾತಾವಾರಣದಿಂದ, ವಿಭಿನ್ನವಾದ ಪರಿಸರಕ್ಕೆ, ಸಂಸ್ಕೃತಿ (Culture) ಇರುವ ಪತಿ ಮನೆಗೆ ಸೇರಿದಾಗ ನಡೆದುಕೊಳ್ಳುವ ರೀತಿಯಿಂದ ತನ್ನಿಚ್ಛೆಯನ್ನು ವ್ಯಕ್ತಪಡಿಸುವ ಗೋಜಿಗೇ ಹೋಗುವುದಿಲ್ಲ. ಆದರೆ, ಗಂಡನೆಂಬ (Husband) ಸಖ ಸ್ವಲ್ಪ ಆಕೆಯ ಆಸೆ-ಆಕಾಂಕ್ಷೆಗಳಿಗೆ ಬೆಲೆ ಕೊಟ್ಟು ಬಿಟ್ಟರೆ, ಇನ್ನೇನು ಬೇಕು ಹೆಣ್ಣಿಗೆ ಹೇಳಿ? ಅಷ್ಟಕ್ಕೂ ಹೆಣ್ಣು ಸೆಕ್ಸ್‌ಗೂ ಮುನ್ನ ಹೆಣ್ಣು ಬಹಳಷ್ಟು ಅಂಶಗಳನ್ನು ಬಯಸುತ್ತಾಳೆ. 

Weird Love Story: ಆಕೆ ಮುತ್ತಿಟ್ಟು ನಿದ್ದೆ ಕೆಡಿಸಿದಳು, ಈತ ಆಕೆಗೆ ಬೇರೆ ಮದುವೆಯಾಗದಂತೆ ಮಾಡಿದ

ಮುತ್ತಲ್ಲಿರೋ (Kiss) ಗಮ್ಮತ್ತೇ ಬೇರೆ 
ಮುತ್ತಿಡೋ ಗಂಡನೆಂದರೆ ಹೆಣ್ಣಿಗೆ ಒಲವು ಹೆಚ್ಚು. ಪ್ರೀತಿ ತುಂಬಿದ ಮುತ್ತುಗಳಿಂದಲೇ Romance ಆರಂಭಿಸಿದರೆ ಮನಸ್ಸು ನಿರಾಳವಾಗುತ್ತದೆ. ಆತಂಕ ಎನ್ನುವುದು ಸಹಜವಾಗಿಯೇ ದೂರವಾಗುತ್ತದೆ. ಹೆಣ್ಣು ಮುಂದಿನ ನಡೆಗೆ ಮಾನಸಿಕವಾಗಿ, ಖುಷ್ ಖುಷಿಯಾಗಿ ಸನ್ನದ್ಧಳಾಗಿ ಬಿಡುತ್ತಾಳೆ.

ಫ್ಲರ್ಟ್ ಮಾಡಿ, ಏನು ಅಂತ ಇಲ್ ಓದಿ 
ಫ್ಲರ್ಟ್ ಎಂದರೆ ಮನಸ್ಸಿನಲ್ಲಿ ಮೂರನೇ ಸಂಬಂಧದ ಬಗ್ಗೆ ಯೋಚಿಸೋ ಅಗತ್ಯವಿಲ್ಲ. ಇದೊಂಥರಾ ರೊಮ್ಯಾಂಟಿಕ್ ಫ್ಲರ್ಟ್ (Romantic Flirt). ನೀ ಕೊಡೆ, ನಾ ಬಿಡೆ....ಎನ್ನುವ ರೀತಿ. ಕೊಡ್ತೀನಿ ಅಂತ ಹೇಳಿ ಸಂಗಾತಿಯನ್ನು ಆಟವಾಡಿಸಬಹುದು. ಸತಾಯಿಸಿ, ಸತಾಯಿಸಿ ಕೊಟ್ಟು ಬಿಟ್ಟರೆ ಹೆಣ್ಣು ಪೂರ್ತಿ ಸಂತೃಪ್ತಳಾಗುತ್ತಾಳೆ.

ಡರ್ಟಿ ಟಾಕ್ (Dirty Talk)
ಆತಂಕವನ್ನು (Stress) ದೂರ ಮಾಡಲು, ದೈಹಿಕ (Physical) ಹಾಗೂ ಮಾನಸಿಕ ಸುಖಕ್ಕೆ (Mental Satisfaction) ಹೆಣ್ಣು ಗಂಡು ದೈಹಿಕ ಸಂಪರ್ಕ (Physical Relationship) ಬಯಸುತ್ತಾರೆ. ಆಗ ಕೇವಲ ಗಂಭೀರ (Serious) ವಿಷಯಗಳ ಬಗ್ಗೆ ಮಾತನಾಡೋ ಬದಲು, ತುಸು ಡರ್ಟಿ ಟಾಕ್ (Dirty Talk) ಇರಲಿ.  ಎಷ್ಟೇ ಅಂದರೂ ನಾಲ್ಕು ಗೋಡೆ ಮಧ್ಯೆ ಗಂಡ-ಹೆಂಡತಿ ಮಾತ್ರವೇ ಇರೋದು ತಾನೇ? ಇಬ್ಬರಿಗೂ ಖುಷಿ ಎನಿಸುವಂಥ ಮಾತಲ್ಲಿ ಸ್ವಲ್ಪ ಹೊತ್ತಾದರೂ ತೊಡಗಿ ಕೊಳ್ಳಿ.

ಸಾಲ ಮರುಪಾವತಿಸದ ಯುವತಿಗೆ ಒಂದೇ ದಿನ 17 ಜನರ ಜೊತೆ ಸೆಕ್ಸ್ ಮಾಡೋ ಶಿಕ್ಷೆ !

Respect
ಹೆಂಡತಿ ಎಂದರೆ ಪ್ರೀತಿ, ರೊಮ್ಯಾನ್ಸ್ ಜೊತೆ ಗೌರವವನ್ನೂ ಬಯಸುತ್ತಾಳೆ ಎಂಬದುನ್ನು ಯಾವ ಗಂಡಸೂ ಮರೆಯಬಾರದು. ಅದೂ ಅಲ್ಲದೇ ಗಂಡ ಏನೇ ಹೇಳಿದರೂ ಹೆಣ್ಣು ಸಹಿಸಿಕೊಳ್ಳಬೇಕೆಂಬ ಮೆಂಟಾಲಿಟಿಯಿಂದ ದೂರವಾದರೆ ಬಹಳಷ್ಟು ಸಂಸಾರಗಳು ಸುಖಿಯಾಗಿರುತ್ತವೆ. ಕೈ ತುಂಬಾ ಸಂಬಳ (Salary) ತರುವ ಗಂಡ, ಕೇಳಿದ್ದನ್ನು ಕೊಡಿಸೋ ಒಲವು...ಏನೇ ಇದ್ದರೂ ಹೆಣ್ಣು ಕಡೆಯಾದಾಗಿ ಬಯಸುವುದು ಗೌರವವನ್ನು. ಇದೇ ಗೌರವವನ್ನು ಆಕೆ ಬೆಡ್ ಮೇಲೂ ನಿರೀಕ್ಷಿಸುತ್ತಾಳೆಂಬುದನ್ನು ಮರೆಯಬೇಡಿ. ಆಕೆಯ ಇಷ್ಟವನ್ನೂ ಅರಿತು ಗಂಡು ಮುನ್ನಡಿ ಇಡಲೆಂದು ಆಶಿಸುತ್ತಾಳೆ.  ಮಡದಿಯ ಮನಸ್ಸಿನಲ್ಲಿ ಏನಿದೆ, ಮೂಡ್ ಇದ್ಯಾ ಎಂಬುದನ್ನು ಅರಿತೇ ರೊಮ್ಯಾನ್ಸ್‌ಗೆ ಗಂಡ ಮುಂದಾದರೆ ದಂಪತಿಗಳಿಬ್ಬರೂ ಸುಖಾನುಭವ ಪಡೆಯಬಹದು.

ಪ್ರೀತಿ ಮಾತು
ಭರವಸೆಯುಳ್ಳ ಪ್ರೀತಿಯ ಮಾತುಗಳಿಗಾಗಿ ಹೆಣ್ಣು ಯಾವಾಗಲೂ ಹಂಬಲಿಸುತ್ತಾಳೆ. ಇದರಿಂದ ಆಕೆ ಭದ್ರತಾ (Secured) ಭಾವ ಹೊಂದುತ್ತಾಳೆ. ಆ ಭದ್ರತಾ ಭಾವವೇ ಆಕೆಗೆ ಎಲ್ಲಿಲ್ಲದ ವಿಶ್ವಾಸ ತುಂಬುತ್ತೆ. ಈ ವಿಶ್ವಾಸವೇ ಸಾಕು ಅವಳ ಸುಖ (Happiness), ನೆಮ್ಮದಿಯ (Peaceful) ನಿದ್ರೆಗೆ (Sleep). ಹೆಣ್ಣಿಗೆ ವಿಶ್ವಾಸವಿದೆ ಎಂದರೆ ಸಮಾಜವೂ ಗೊರವಿಸುತ್ತೆ. ಒಂದೊಳ್ಳೆಯ ಸಮಾಜದ ನಿರ್ಮಾಣಕ್ಕೆ  ಈ ವಿಶ್ವಾಸ ಇರುವ ಹೆಣ್ಣಿರುವ ಸಂಸಾರ ಮುನ್ನುಡಿ ಬರೆಯುತ್ತೆ.

Latest Videos
Follow Us:
Download App:
  • android
  • ios