Asianet Suvarna News Asianet Suvarna News

ಅಬ್ಬಾ, ಈ ಒಡಹುಟ್ಟಿದವರು ಎಷ್ಟು ಜಗಳವಾಡ್ತಾರೆ ಅಂತ ತಲೆ ಕೆಡಿಸಿಕೊಳ್ಳಬೇಡಿ, ಇದು ಒಳ್ಳೇದು!

ಮನೆಯಲ್ಲಿ ಮಕ್ಕಳಿದ್ರೆ ಗಲಾಟೆ ಸಾಮಾನ್ಯ. ಇಬ್ಬರ ಮಧ್ಯೆ ಆಗಾಗ ವಾದ – ಕಿತ್ತಾಟ ನಡೆಯುತ್ತಿರುತ್ತದೆ. ಅವರು ಜಗಳ ಮಾಡುವಾಗ ಪಾಲಕರು ತಲೆಕೆಡಿಸಿಕೊಳ್ಳಬೇಡಿ. ಅದ್ರಿಂದ ಏನೆಲ್ಲ ಲಾಭವಿದೆ ಗೊತ್ತಾ? 
 

Sibling Relations And Their Impact On Childrens Development roo
Author
First Published Jan 13, 2024, 1:14 PM IST

ಇಬ್ಬರು ಮಕ್ಕಳು ಮನೆಯಲ್ಲಿ ಇದ್ದರೆ ಸದಾ ಗಲಾಟೆ, ಜಗಳ. ಸಾಕಾಗಿ ಹೋಯ್ತು ಇವರನ್ನು ಸಂಭಾಳಿಸೋದು ಅಂತಾ ಪಾಲಕರು ಗೊಣಗ್ತಾರೆ. ಇಡೀ ದಿನ ಒಂದಲ್ಲ ಒಂದು ವಿಷ್ಯಕ್ಕೆ ಸಹೋದರ – ಸಹೋದರಿಯರ ಮಧ್ಯೆ ಕಚ್ಚಾಟ ನಡೆಯುತ್ಲೇ ಇರುತ್ತದೆ. ನಿಮ್ಮ ಮನೆಯಲ್ಲೂ ಮಕ್ಕಳು ಗಲಾಟೆ ಮಾಡ್ತಿದ್ದರೆ, ವಾದ ಮಾಡ್ತಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗ್ಬೇಡಿ. ಇದ್ರಿಂದ ನಷ್ಟಕ್ಕಿಂತ ಲಾಭವೇ ಇದೆ. ನಿಮ್ಮ ಮಕ್ಕಳ ಭವಿಷ್ಯದ ಜೊತೆ ಸಿಬ್ಲಿಂಗ್ಸ್ ಗಲಾಟೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಅವರ ಭವಿಷ್ಯದಲ್ಲಿ ಈ ಗಲಾಟೆ ನೆರವಿಗೆ ಬರಲಿದೆ. ಯಸ್. ಹೀಗಂತ ನಾವು ಹೇಳಿಲ್ಲ. ಸಂಶೋಧಕರು ಹೇಳಿದ್ದಾರೆ. 

ಒಡಹುಟ್ಟಿದವರು (Siblings) ನಮ್ಮ ಮೊದಲ ಬಾಲ್ಯದ ಸಹಚರರು ಮತ್ತು ನಮ್ಮ ಮೊದಲ ಪ್ರತಿಸ್ಪರ್ಧಿಗಳು. ಬಾಲ್ಯ (Childhood) ದಲ್ಲಿ ಒಡಹುಟ್ಟಿದವರ ಜೊತೆ ಸದಾ ಜಗಳ ನಡೆಯುತ್ತಿರುತ್ತದೆ. ಪ್ರೌಢಾವಸ್ಥೆಯಲ್ಲಿ ಒಡಹುಟ್ಟಿದವರು ಸ್ನೇಹ ಮತ್ತು ಭಾವನಾತ್ಮಕ ಬೆಂಬಲ ನೀಡುತ್ತಾರೆ.  ಸಂಕಷ್ಟ ಕಾಲದಲ್ಲಿ ನಮ್ಮ ಬೆನ್ನಿಗೆ ನಿಲ್ಲುವವರು ನಮ್ಮ ಒಡಹುಟ್ಟಿದವರು. ಅವರು ನಮ್ಮ ಜೊತೆಯೇ ಬೆಳೆದು ಬಂದಿರುವ ಕಾರಣ ನಮ್ಮನ್ನು ಸರಿಯಾಗಿ ನೆನಪಿಟ್ಟುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ವಿಶ್ವದ ಏಕೈಕ  ವ್ಯಕ್ತಿಗಳು ಅವರಾಗಿರುತ್ತಾರೆ. ಭವಿಷ್ಯ (Future) ದಲ್ಲಿ ಒಬ್ಬರಿಗೊಬ್ಬರು ನೆರವಾಗ್ತಾರೆ ಎನ್ನುವ ಕಾರಣಕ್ಕೇ ಪಾಲಕರು ಇಬ್ಬರು ಮಕ್ಕಳನ್ನು ಹೊಂದಬಯಸ್ತಾರೆ. ಕೆಲ ಸಹೋದರರು ಅಥವಾ ಸಹೋದರಿಯರ ಮಧ್ಯೆ ಶತ್ರುತ್ವ ಬೆಳೆದ್ರೂ ಆಪತ್ಕಾಲದಲ್ಲಿ ಎಲ್ಲವನ್ನೂ ಮರೆತು ಬರ್ತಾರೆ ಅವರು. 

ಹಿಂದೂ-ಮುಸ್ಲಿಂ ಮಗಳಿಗೆ ಕ್ರೈಸ್ತ ಸಂಪ್ರದಾಯದ ಮದುವೆ: ಆಮೀರ್​ ಖಾನ್​ ಕಣ್ಣೀರಿಂದೇ ಭಾರಿ ಚರ್ಚೆ!

ಒಡಹುಟ್ಟಿದವರು ಚಿಕ್ಕವರಿರುವಾಗ ಶತ್ರುಗಳಂತೆ ಆಡೋದು ಸಾಮಾನ್ಯ. ಪಾಲಕರು ಒಬ್ಬರ ಮೇಲೆ ಹೆಚ್ಚು ಪ್ರೀತಿ ತೋರಿಸ್ತಾರೆ, ಒಬ್ಬರು ಎಲ್ಲ ಕ್ಷೇತ್ರದಲ್ಲಿ ಮುಂದಿದ್ದಾರೆ ಎಂಬುದೆಲ್ಲ ಈ ಗಲಾಟೆಗೆ ಕಾರಣವಾದ್ರೂ ಇದು ಕ್ಷಣಿಕವಾಗಿರುತ್ತದೆ. ಮನೆಯಲ್ಲಿ ಎಷ್ಟೇ ಕಿತ್ತಾಡಿದ್ರೂ ಹೊರಗಿನವರ ಜೊತೆ ಹೋರಾಡುವಾಗ ಇಬ್ಬರೂ ಒಂದಾಗ್ತಾರೆ. ಈಗ ಸಂಶೋಧಕರು ಕೂಡ ಈ ಕಚ್ಚಾಟ ಒಳ್ಳೆಯದು ಎಂದಿದ್ದಾರೆ. 

ಕೇಂಬ್ರಿಡ್ಜ್ ವಿಶ್ವವಿದ್ಯಾಲಯ (Cambridge University) ದ ಸಂಶೋಧಕರು ಬಾಲ್ಯದ ಒಡಹುಟ್ಟಿದವರ ವಾದಗಳು, ಭವಿಷ್ಯದ ಯಶಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಪತ್ತೆ ಮಾಡಿದ್ದಾರೆ.  ವಿವಾದಗಳಲ್ಲಿ ತೊಡಗುವುದು, ವಿಶೇಷವಾಗಿ ಕಿರಿಯ ಸಹೋದರರು ತಮ್ಮ ಹಿರಿಯರೊಂದಿಗೆ ವಾದ – ವಿವಾದ ಮಾಡುವುದು ಅವರ ಭವಿಷ್ಯದ ಸಾಧನೆಗಳನ್ನು ವರ್ಧಿಸುತ್ತದೆ. ಈ ವಾದಗಳು ಮಕ್ಕಳ ಸಾಮಾಜಿಕ ಸಾಮರ್ಥ್ಯ, ಶಬ್ದಕೋಶ ಮತ್ತು ಒಟ್ಟಾರೆ ಅವರ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. 

ಒಡಹುಟ್ಟಿದವರ ಜಗಳ ಪ್ರಯೋಜನಕಾರಿ ಎಂದು ಅಧ್ಯಯನವು ಸೂಚಿಸುತ್ತದೆ. ಇದು ಮಕ್ಕಳ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ತಮ್ಮ ಮಕ್ಕಳ ನಿರಂತರ ಜಗಳದಿಂದ ಬೇಸತ್ತ ಪೋಷಕರು, ಇದು ಸಾಮಾಜಿಕ ಸಾಮರ್ಥ್ಯಗಳ ಕಲಿಕೆಯ ಭಾಗವಾಗಿದೆ ಎಂಬುದನ್ನು ಅರಿಯಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಗಂಡ- ಹೆಂಡ್ತಿ ಸಂಬಂಧ ಉಳೀಬೇಕು ಅಂದ್ರೆ… ಆವಾಗವಾಗ ರಿಚಾರ್ಜ್ ಮಾಡಲೇಬೇಕು!

ಮನೆಯಲ್ಲಿರುವ ಕಿರಿಯ ಮಕ್ಕಳು, ಹಿರಿಯ ಮಕ್ಕಳಿಂದ ಅನೇಕ ವಿಷ್ಯಗಳನ್ನು ಕಲಿಯುತ್ತಾರೆ. ದೊಡ್ಡವರನ್ನು ನೋಡಿಯೇ ಅವರು ಮುಂದೆ ಬರ್ತಾರೆ. ಇದು ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ನೆರವಾಗುತ್ತದೆ. ಅವರ ಸಾಮಾಜಿಕ ಕೌಶಲ್ಯ ಬಲವಾಗುವ ಕಾರಣ  ಅವರು ವಯಸ್ಕರಾದ್ಮೇಲೆ ಹೆಚ್ಚು ಜನಪ್ರಿಯರಾಗುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.  ವಿಜ್ಞಾನಿಗಳು 250 ಮಕ್ಕಳ ಮೇಲೆ ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ. ಒಡಹುಟ್ಟಿದವರ ಮಧ್ಯೆ ನಡೆಯುವ ಕ್ರಿಯೆಗಳು ಅವರ ಸಾಮಾಜಿಕ ತಿಳುವಳಿಕೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಇದು ಮಕ್ಕಳ ಸ್ಪರ್ಧಾತ್ಮಕ ಶ್ರೇಣಿಯನ್ನು ಅಭಿವೃದ್ಧಿಪಡಿಸುತ್ತದೆ.  ಶಾಲೆಯಲ್ಲಿ ಹೆಚ್ಚು ಜನಪ್ರಿಯವಾಗಲು ಮತ್ತು ಯಶಸ್ವಿಯಾಗಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 

Latest Videos
Follow Us:
Download App:
  • android
  • ios