ಗಂಡ- ಹೆಂಡ್ತಿ ಸಂಬಂಧ ಉಳೀಬೇಕು ಅಂದ್ರೆ… ಆವಾಗವಾಗ ರಿಚಾರ್ಜ್ ಮಾಡಲೇಬೇಕು!
ಪ್ರೀತಿಸಿ ಮದುವೆಯಾಗಿ ಎಷ್ಟೊ ವರ್ಷ ಜೊತೆಯಾಗಿ ಜೀವನ ಸಾಗಿಸಿದ ನಂತರವೂ ಹಲವಾರು ಸೆಲೆಬ್ರಿಟಿಗಳು ಡೀವೋರ್ಸ್ ನೀಡುತ್ತಿರೋ ವಿಷ್ಯ ನಿಜವಾಗಿಯೂ ಶಾಕಿಂಗ್ ಆಗಿದೆ ಅಲ್ವಾ?, ಮದುವೆಯಾಗಿ ಒಂದೆರಡು ವರ್ಷದಲ್ಲಿ ಇಬ್ಬರ ನಡುವೆ ಹೊಂದಾಣಿಕೆ ಆಗುತ್ತಾ? ಇಲ್ವಾ? ಅನ್ನೋದು ಗೊತ್ತಾಗುತ್ತೆ. ಹಾಗಾದರೆ ಒಬ್ಬರು ಇಷ್ಟು ವರ್ಷಗಳ ಕಾಲ ಜೊತೆಗಿದ್ರೂ ಡಿವೋರ್ಸ್ ನೀಡೋದಕ್ಕೆ ಏನು ಕಾರಣ?
ಕನ್ನಡದಲ್ಲಿ ಸೂರ್ಯವಂಶ, ಓ ನನ್ನ ನಲ್ಲೆ, ಕವಚ ಚಿತ್ರಗಳಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್ (Isha koppikar) 14 ವರ್ಷಗಳ ದಾಂಪತ್ಯದ ನಂತರ ಇದೀಗ ಪತಿಗೆ ಡೀವೋರ್ಸ್ (divorce) ನೀಡಿದ್ದಾರೆ. ಇಶಾ ಮತ್ತು ಅವರ ಪತಿ ಟಿಮ್ಮಿ ನಾರಂಗ್ ಇಬ್ಬರೂ ವಿಚ್ಛೇದನಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ, ಆದರೆ ಮದುವೆಯಾದ ಅನೇಕ ವರ್ಷಗಳ ನಂತರ ಬೇರ್ಪಡುವ ನಿರ್ಧಾರ ವಿಚಿತ್ರವಾಗಿ ತೋರುತ್ತೆ ಅಲ್ವಾ?. ಅದೇ ರೀತಿ ಅಮೀರ್ ಖಾನ್-ಕಿರಣ್ ರಾವ್ (15 ವರ್ಷ), ದಿಯಾ ಮಿರ್ಜಾ-ಸಾಹಿಲ್ ಸಂಗಾ (11 ವರ್ಷ), ಸೊಹೈಲ್ ಖಾನ್-ಸೀಮಾ ಸಜ್ದೇಹ್ (24 ವರ್ಷ), ಅರ್ಜುನ್ ರಾಂಪಾಲ್-ಮೆಹರ್ ಜೆಸಿಯಾ (21 ವರ್ಷ) ಗಳ ನಂತರ ಡೀವೋರ್ಸ್ ಪಡೆದಿದ್ದಾರೆ. ಯಾಕೆ ಹೀಗಾಗುತ್ತೆ?
ಈ ಎಲ್ಲಾ ಡಿವೋರ್ಸ್‌ಗಳನ್ನು ನೋಡಿದಾಗ ಇತ್ತೀಚಿಗೆ ಮದುವೆಯಾಗಿ ವರ್ಷಗಳು ಹೆಚ್ಚಾಗುತ್ತಿದ್ದಂತೆ, ಇಬ್ಬರ ನಡುವೆ ಪ್ರೀತಿಯೇ ಕಡಿಮೆಯಾಗುತ್ತದೆಯೇ ಎನ್ನುವ ದೊಡ್ಡ ಸಂಶಯ ಮೂಡುತ್ತದೆ. ಮದುವೆಯಾಗಿ ವರ್ಷಗಳು ಕಳೆದಂತೆ, ನಿಮ್ಮ ಸಂಬಂಧದಲ್ಲಿ ಅದೇ ಮೊದಲಿನ ಮೋಡಿ, ಪ್ರೀತಿ, ಸೆಳೆತ ಕಾಪಾಡಿಕೊಳ್ಳಲು ನೀವು ಬಯಸಿದರೆ, ಕಾಲಕಾಲಕ್ಕೆ ನಿಮ್ಮ ಸಂಬಂಧವನ್ನು ರೀಚಾರ್ಜ್ (recharge your relationship) ಮಾಡುವುದು ಮುಖ್ಯ.
ಮದುವೆಯಾಗಿ ಹೊಸದರಲ್ಲಿದ್ದ ಪ್ರೀತಿ, ಆಕರ್ಷಣೆ ಮದುವೆಯಾಗಿ ಹತ್ತು, ಇಪ್ಪತ್ತು ವರ್ಷ ಕಳೆದರೂ ಉಳಿಯಬೇಕು ಎಂದು ನೀವು ಬಯಸಿದ್ರೆ ಅದಕ್ಕಾಗಿ ನೀವು ಒಂದಿಷ್ಟು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಇಲ್ಲವಾದರೆ ಸಂಸಾರ ಹಾಳಾಗೋದು ಖಚಿತ.
ಹಳೆಯ ದಿನಗಳನ್ನು ನೆನಪಿಸಿಕೊಳ್ಳಿ
ನಿಮ್ಮ ಸಂಬಂಧದಲ್ಲಿ ನಿಮಗೂ ಬೇಸರವಾಗುತ್ತಿದ್ದರೆ, ಈ ವಿಷಯವನ್ನು ನಿಮ್ಮ ಸಂಗಾತಿಯಿಂದ ಮರೆ ಮಾಚುವ ಬದಲು ಅವರೊಂದಿಗೆ ಮಾತನಾಡಿ. ಸಂಬಂಧದಲ್ಲಿ ಯಾವ ವಿಷಯಗಳು ಮರೆಯಾಗಿವೆ ಎಂದು ಅವರಿಗೆ ತಿಳಿಸಿ. ಮೊದಲು, ನಾವು ಡೇಟಿಂಗ್ ಗೆ ಹೋಗುತ್ತಿದ್ದೆವು, ಪರಸ್ಪರ ಸರ್ಪ್ರೈಸ್ ನೀಡುತ್ತಿದ್ದೆವು, ಪರಸ್ಪರ ಜೊತೆಯಾಗಿ ಸಮಯ ಕಳೆಯುತ್ತಿದ್ದೆವು. ಅದನ್ನೆಲ್ಲಾ ನಿಮ್ಮ ಸಂಗಾತಿ ಜೊತೆ ಮಾತನಾಡಿ, ನಿಮ್ಮ ವೈವಾಹಿಕ ಜೀವನದಲ್ಲಿ (married life) ಸಂತೋಷ ತುಂಬಿರಲು ಮತ್ತೆ ಮೊದಲು ಮಾಡುತ್ತಿದ್ದ ಕೆಲಸಗಳನ್ನೆಲ್ಲಾ ಮಾಡಿ.
ಟ್ರಾವೆಲ್ ಪ್ಲ್ಯಾನ್ ಮಾಡಿ
ಒಟ್ಟಿಗೆ ಪ್ರವಾಸವನ್ನು ಪ್ಲ್ಯಾನ್ (travel plan) ಮಾಡಿ. ಸಂಬಂಧವನ್ನು ಚಾರ್ಜ್ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಪ್ರಯಾಣ ಮಾಡುವಾಗ, ನೀವು ಜೀವನದಲ್ಲಿ ಎಂದೋ ಕಳೆದು ಹೋಗಿರುವ ಆ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುತ್ತೀರಿ, ಇದರಿಂದ ಇಬ್ಬರ ನಡುವೆ ಪ್ರೀತಿ, ಸಂತೋಷ ಹೆಚ್ಚುತ್ತದೆ.
ಜೊತೆಯಾಗಿ ಸಮಯ ಕಳೆಯೋದು
ಸಂಬಂಧದಲ್ಲಿ ಪರಸ್ಪರ ಸ್ಪೇಸ್ ನೀಡುವುದು ಮುಖ್ಯ ಅನ್ನೋದು ಸುಳ್ಳಲ್ಲ. ಆದರೆ ಸ್ವಲ್ಪ ಸಮಯದ ನಂತರ, ಕಪಲ್ಸ್ ಜೊತೆಯಾಗಿ ಸಮಯ ಕಳೆಯೋದಕ್ಕೆ ಆದ್ಯತೆ ನೀಡಬೇಕು. ಹೆಚ್ಚೇನೂ ಬೇಡ, ಜೊತೆಯಾಗಿ ಚಹಾ ಕುಡಿಯಿರಿ, ವಾರಾಂತ್ಯದಲ್ಲಿ ಒಟ್ಟಿಗೆ ಮೂವಿ ನೋಡಿ ಅಥವಾ ಡಿನ್ನರ್ ಡೇಟ್ (dinner date) ಮಾಡಿ. ಅಡುಗೆಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡುವುದು ಇವೆಲ್ಲಾ ತುಂಬಾನೆ ರೊಮ್ಯಾಂಟಿಕ್ ಆಗಿರುತ್ತೆ.
ಸರ್ಪ್ರೈಸ್ ಕೊಡಿ
ನಿಮಗೆ ಎಷ್ಟೇ ವಯಸ್ಸಾಗಿರಬಹುದು, ಅಥವಾ ನಿಮ್ಮ ಮದುವೆಯಾಗಿ ಎಷ್ಟೋ ಸಮಯ ಆಗಿರಬಹುದು, ಆದರೆ ನಿಮ್ಮ ಸಂಗಾತಿ ಆವಾಗವಾಗ ಸರ್ಪೈಸ್ (surprise) ನೀಡೋ ಅಭ್ಯಾಸವನ್ನು ಎಂದಿಗೂ ಕಡಿಮೆ ಮಾಡಬೇಡಿ.ಇದು ಸಂಬಂಧ ಗಟ್ಟಿಯಾಗುವಂತೆ ಮಾಡುತ್ತೆ.
ಇಬ್ಬರು ಸೇರಿ ಕನಸಿನ ಲೋಕ ಸೃಷ್ಟಿಸಿ
ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಕನಸು ಇರುತ್ತೆ. ಅದರಲ್ಲೂ ದಂಪತಿಗಳಿಗೆ ಕಾಮನ್ ಆಗಿ ಒಂದು ಕನಸು ಇದ್ದೇ ಇರುತ್ತೆ ಉದಾಹರಣೆ ಮನೆಕೊಂಡು ಕೊಳ್ಳೋದು, ಫಾರಿನ್ ಟ್ರಿಪ್ ಮಾಡೋದು, ದೇಶ ಸುತ್ತೋದು ಇತ್ಯಾದಿ. ಇಂತಹ ಕನಸುಗಳಿಗೆ ಮತ್ತೆ ಮತ್ತೆ ಜೀವ ನೀಡಿ. ಇಬ್ಬರು ಜೊತೆಯಾಗಿ ಸೇರಿ ಆ ಕನಸುಗಳನ್ನು ಈಡೇರಿಸಿ.