ಸಂಜಯ್ ಕಪೂರ್ ಹೀಗೆ ಹಠಾತ್ ನಿಧನರಾಗಬಹುದು ಎಂಬ ಸಣ್ಣ ಊಹೆಯೂ ಅವರ ಕುಟುಂಬಕ್ಕೆ ಇರಲಿಲ್ಲ, ಹೀಗಾಗಿಯೇ 4 ವರ್ಷಗಳಿಂದ ಮಾತು ಬಿಟ್ಟಿದ್ದ ತಂಗಿಗೆ ಈಗ ಬೇಕೆಂದರೆ ಮಾತನಾಡುವುದಕ್ಕೆ ಆತನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
Sibling Relationships: ಅಣ್ಣ ತಂಗಿ ಅಕ್ಕ ತಮ್ಮ ಹೀಗೆ ಯಾರೇ ಇರಲಿ ಒಡಹುಟ್ಟಿದವರ ಜೊತೆಗಿನ ಒಡನಾಟ ಬಹಳ ಅಮೋಘವಾದುದು, ನಾವು ಎಷ್ಟೇ ಕಿತ್ತಾಡಲಿ ಸಹೋದರ ಸಹೋದರಿಯರ ನಡುವೆ ಏನಾದರು ಕಷ್ಟ ನೋವು ಎಂದು ಬಂದಾಗ ಆತನ/ಆಕೆಯ ಕಷ್ಟಕ್ಕೆ ಧಾವಿಸಿ ಬಂದು ಬಿಡುತ್ತೇವೆ. ನಾವೆಷ್ಟೇ ಕಿತ್ತಾಟ ನಡೆಸಿರಲಿ, ಆದರೆ ನಮ್ಮ ಸೋದರ ಸೋದರಿಯರ ಜೊತೆ ಭೇರೆ ಯಾರಾದರೂ ಕಿತ್ತಾಡಲು ಬಂದರೆ ಜೊತೆ ನಿಂತು ಬಿಡುತ್ತೇವೆ.
ಪ್ರೀತಿಯನ್ನು ಯಾವತ್ತೂ ತೋರಿಸಿಕೊಳ್ಳುವುದೇ ಇಲ್ಲ, ಇಲ್ಲಿ ಕಿತ್ತಾಟವೇ ಪ್ರೀತಿ, ಅಣ್ಣ ತಮ್ಮನ ಜೊತೆ ಅಕ್ಕ ತಂಗಿಯ ಜೊತೆ ಕಿತ್ತಾಟ ನಡೆಸಿಲ್ಲ ಎಂದರೆ ಏನೋ ಅಸಮಾಧಾನ ಈ ರೀತಿಯ ಬಂಧವೇ ಒಡಹುಟ್ಟಿದವರ ಜೊತೆಗೆ ಬಹುತೇಕರಿಗೆ ಇರುವ ಬಂಧ. ಆದರೆ ಕೆಲವೊಮ್ಮೆ ಬೆಳೆಯುತ್ತಾ ಬೆಳೆಯುತ್ತಾ ಕೆಲವರು ಸಹೋದರ ಸಹೋದರಿಯರೇ ಶತ್ರುಗಳಾಗಿ ಬಿಡುತ್ತಾರೆ. ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಂಡು ಆತನೇ/ಆಕೆಯೇ ಮೊದಲು ಮಾತನಾಡಲಿ, ಆತನೇ ಕರೆ ಮಾಡಲಿ ಎಂಬ ಹಠ ಅಹಂಕಾರಕ್ಕೆ ಬಿದ್ದು, ಈ ಮಧುರ ಬಾಂಧವ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ.
ಇನ್ಸ್ಟಾದಲ್ಲಿ ಸಂಜಯ್ ಸಹೋದರಿ ಭಾವುಕ ಬರಹ
Mandira Kapoor Heartfelt Post: ಆದರೆ ಜೀವನ ನಾವು ಎನಿಸಿದಂತೆ ಇರುವುದಿಲ್ಲ, ಕೆಲವೊಮ್ಮೆ ನಾವು ಹೀಗೆ ಹಠ ಮಾಡಿದ್ದಕ್ಕೆ ಪಾಶ್ಚತಾಪ ಪಡುವಂತಹ ಹಾಗೂ ಮುಂದೆದೂ ಈ ಜಗಳವನ್ನು ನಿಲ್ಲಿಸಿ ಮಾತನಾಡುವಂತಹ ಕ್ಷಣವೇ ಬದುಕಿನಲ್ಲಿ ಬಾರದೇ ಹೋಗಬಹುದು. ಈ ವೇಳೆ ಕಳೆದು ಹೋದ ಗಳಿಗೆಗಾಗಿ ಜೀವನಪೂರ್ತಿ ಕೊರಗುವಂತಹ ಸ್ಥಿತಿ ನಿರ್ಮಾಣವಾಗಬಹುದು. ಇಂತಹ ಸ್ಥಿತಿ ಈಗ ನಿರ್ಮಾಣವಾಗಿರುವುದು, ಇತ್ತೀಚೆಗೆ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಸಹೋದರಿಗೆ.
ಹೌದು ಸಂಜಯ್ ಕಪೂರ್ ಅವರ ಸೋದರಿ ಮಂಧಿರಾ ಕಪೂರ್ (Mandira Kapoor) ಅವರು ಈಗ ಅಣ್ಣನ ಜೊತೆ ಮಾತನಾಡುವುದಕ್ಕೆ, ತಾನು ಆತನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಆತನಿಗೆ ಹೇಳುವುದಕ್ಕೆ ಒಂದು ಅವಕಾಶ ಸಿಕ್ಕರೆ ನನ್ನ ಬಳಿ ಇರುವುದೆಲ್ಲವನ್ನು ದೇವರಿಗೆ ಕೊಟ್ಟು ಬಿಡುವೆ ಎಂದು ಹೇಳಿ ಭಾವುಕರಾಗಿದ್ದು, ಅವರ ಈ ಪೋಸ್ಟ್ ಸಂಬಂಧಗಳಲ್ಲಿ ಹಠ ಸಾಧಿಸುತ್ತಾ ಇರುವ ಸುಂದರ ಕ್ಷಣಗಳನ್ನು ಹಾಳು ಮಾಡಿಕೊಳ್ಳುತ್ತಿರುವ ಅನೇಕರಿಗೆ ಪಾಠವಾಗಿದೆ.
ಜೂನ್ 13ರಂದು ತೀರಿಕೊಂಡಿದ್ದ ಸಂಜಯ್ ಕಪೂರ್
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿಯೂ ಆಗಿರುವ ಉದ್ಯಮಿ ಸಂಜಯ್ ಕಪೂರ್(Sunjay Kapoor Death) ಅವರು ಜೂನ್ 12ರಂದು ಲಂಡನ್‌ನಲ್ಲಿ ಫೋಲೋ ಆಡುವ ವೇಳೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಯನ್ನು ಜೂನ್ 19ರಂದು ದೆಹಲಿಯಲ್ಲಿ ಮಾಡಲಾಯ್ತು. ಜೂನ್ 22 ರಂದು ದೆಹಲಿಯಲ್ಲಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಬಾಲಿವುಡ್ ನಟಿ ಕರೀಷ್ಮಾ ಕಪೂರ್(Karishma Kapoor), ಕರೀನಾ ಕಪೂರ್ ಹಾಗೂ ಮಕ್ಕಳು ಹಾಗೂ ಕುಟುಂಬದವರು ಭಾಗಿಯಾಗಿ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಿದ್ದರು.
ಅಣ್ಣನೊಂದಿಗೆ 4 ವರ್ಷಗಳಿಂದ ಮಾತು ಬಿಟ್ಟಿದ್ದ ಮಂಧಿರಾ
ಇದಾದ ನಂತರ ಸಂಜಯ್ ಕಪೂರ್ ಸೋದರಿ ತಮ್ಮ ಇನಸ್ಟಾ ಖಾತೆಯಲ್ಲಿ ಅಗಲಿದ ಅಣ್ಣನನ್ನು ನೆನೆದು ಭಾವುಕ ಬರಹವನ್ನು ಬರೆದುಕೊಂಡಿದ್ದರು, ಈ ಬರಹ ಅನೇಕರ ಕಣ್ಣುಗಳನ್ನು ತೇವಗೊಳಿಸಿದೆ. ಸದಾ ಆರೋಗ್ಯವಾಗಿದ್ದ, ಫಿಟ್‌ನೆಸ್ ಕಡೆ ಹೆಚ್ಚಿನ ಗಮನವನ್ನು ಕೊಟ್ಟಿದ್ದ ಸಂಜಯ್ ಕಪೂರ್ ಹೀಗೆ ಹಠಾತ್ ನಿಧನರಾಗಬಹುದು ಎಂಬ ಸಣ್ಣ ಊಹೆಯೂ ಅವರ ಕುಟುಂಬಕ್ಕೆ ಇರಲಿಲ್ಲ, ಹೀಗಾಗಿಯೇ 4 ವರ್ಷಗಳಿಂದ ಮಾತು ಬಿಟ್ಟಿದ್ದ ತಂಗಿಗೆ ಈಗ ಬೇಕೆಂದರೆ ಮಾತನಾಡುವುದಕ್ಕೆ ಆತನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಅಣ್ಣ ಸಂಜಯ್ ಕಪೂರ್ ಜೊತೆಗೆ ಕಳೆದ ಬಾಲ್ಯದ ಹಲವು ಫೋಟೋಗಳ ನೆನಪುಗಳನ್ನು ಹಂಚಿಕೊಂಡು ಅವರು ಭಾವುಕರಾಗಿದ್ದಾರೆ.
ಅವರ ಬರಹದ ಸಾರಾಂಶ ಹೀಗಿದೆ ನೋಡಿ, ನಾನು ಹಾಗೂ ನನ್ನ ಸೋದರ ಕಳೆದ ನಾಲ್ಕು ವರ್ಷಗಳಿಂದ ಮಾತನಾಡುತ್ತಿರಲಿಲ್ಲ, ಅಹಂಕಾರ, ಹಠ ಹಾಗೂ ಸಹೋದರ-ಸಹೋದರಿಯರ (Sister Brother Relationship)ನಡುವಿನ ನೈಸರ್ಗಿಕ ಉತ್ಸಾಹದಿಂದಾಗಿ ಈ ಮೂರ್ಖತನದ ಜಗಳವು ಹುಚ್ಚುತನದ ಮಟ್ಟಕ್ಕೆ ಏರಿತು. ಇಬ್ಬರು ಅದ್ಭುತ ಪೋಷಕರೊಂದಿಗೆ ನಮ್ಮ ಬಾಲ್ಯದ ದಿನಗಳು ತುಂಬಾ ಖುಷಿಯಿಂದ ಕೂಡಿತ್ತು.
ನಾವು ಬಚ್ಚಿಡುತ್ತಿದ್ದ ರಹಸ್ಯಗಳು, ತಡವಾಗಿ ಎದ್ದೇಳುವುದು. ನಂತರ ಅದಕ್ಕಿಂತಲೂ ವಿಳಂಬವಾಗಿ ಮನೆಯಿಂದ ಹೊರಗೆ ಹೋಗುವುದು, ನಾವು ಮೂವರು ವರ್ಷಗಳ ಕಾಲ ಮಾಡುತ್ತಿದ್ದ ಮೂರ್ಖತನದ ಹಾಸ್ಯಗಳು, ಇತರರು ನಮ್ಮನ್ನು ದಿಟ್ಟಿಸಿ ನೋಡುತ್ತಿದ್ದಾಗ ನಾವು ಗಂಟೆಗಟ್ಟಲೆ ನಗುತ್ತಿದ್ದಿದ್ದು, ಹೀಗೆ ಅವನು ಯಾವಾಗಲೂ ನನ್ನನ್ನು ಮತ್ತು ನನ್ನ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು ಅವನೊಬ್ಬ ನಿಜವಾದ ಅಣ್ಣ ಮತ್ತು ಸ್ನೇಹಿತ.
ಆ ಕ್ಷಣಗಳು ಮತ್ತೆಂದೂ ಬರದು
ಆದರೆ ಕೊನೆಯಲ್ಲಿ ನಡೆದದ್ದು ಮಾತ್ರ ಭಯಾನಕ ಮತ್ತು ಅರ್ಥಹೀನ ಎರಡೂ ಆಗಿತ್ತು. ನಾನು ಅವನೊಂದಿಗೆ ಮತ್ತೆ ಎಂದಿಗೂ ನನ್ನ ಕ್ಷಣಗಳನ್ನು ಕಳೆಯುವುದಿಲ್ಲ. ನಾವು ಎಂದಿಗೂ ನಾವಾಗಿರುವುದಿಲ್ಲ ಮತ್ತು ಆಗಿ ಹೋಗಿರುವುದನ್ನು ಇನ್ನೆಂದು ಸರಿಪಡಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಹಾಗೆಯೇ ನನ್ನ ಹೃದಯವೂ ಕೂಡ ಒಡೆದು ಹೋಗಿದೆ. ಇತ್ತೀಚಿನ ಕೆಲ ವರ್ಷ ನಮ್ಮ ನಡುವೆ ಮಾತುಕತೆ ಇಲ್ಲಿದ್ದರೂ, ನಾನು ಅವನನ್ನು ಪ್ರೀತಿಸುತ್ತಿದ್ದೇನೆ ಹಾಗೂ ಅವನು ನನ್ನಂತೆಯೇ ಅದೇ ಭಾವನೆಯನ್ನು ಹೊಂದಿದ್ದಾನೆ ಎಂಬ ಖಚಿತತೆ ನನಗಿದೆ. ಮುಂದೊಂದು ದಿನ ನಾವು ಮೊದಲ 47 ವರ್ಷಗಳ ಕಾಲ ಇದ್ದಂತೆಯೇ ಅದ್ಭುತವಾಗಿರುತ್ತೇವೆ ಎಂದು ನಂಬುತ್ತೇನೆ. ಇದರ ಬಗ್ಗೆ ನನಗೆ ಖಚಿತವಾಗಿದೆ ಮತ್ತು ಸ್ವಲ್ಪ ಸಮಾಧಾನವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಆದರೆ ಅವನನ್ನು ನನ್ನ ಜೀವನದಲ್ಲಿ ಮತ್ತೆಂದು ನೋಡಲು ಸಾಧ್ಯವಿಲ್ಲ ಎಂಬುದು ಕಠುವಾದ ಸತ್ಯ. ಅವನು ನಮ್ಮ ತಂದೆಯ ಜೊತೆ ಇರುತ್ತಾನೆ ಹಾಗೂ ಮುಂದೊಂದು ದಿನ ನಾವೆಲ್ಲರೂ ಜೊತೆಯಾಗಿ ಇರುತ್ತೇವೆ. ಈ ದುಖಃದ ಕ್ಷಣದಲ್ಲಿ ಕರುಣೆಯ ಮಾತುಗಳಿಂದ ಸಂತಾಪ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.
ನೋಡಿದ್ರಲ್ಲ, ಸಣ್ಣ ಹಠದ ಕಾರಣಕ್ಕೆ ಅಣ್ಣನ ಜೊತೆ ಮಾತೇ ಬಿಟ್ಟಿದ್ದ ಮಂದಿರಾಗೆ ಈಗ ಬೇಕು ಎಂದರೂ ಅಣ್ಣ ಮತ್ತೆ ಸಿಗಲಾರ ಜೀವನವೇ ಹೀಗೆ, ಹೀಗಾಗಿ ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಸಿಟ್ಟು ಮಾಡಿಕೊಂಡು ಹಠ ಮಾಡುವ ಮುನ್ನ ಯೋಚನೆ ಮಾಡಿ. ಈ ಕ್ಷಣ ಮುಂದಿಲ್ಲ ಎಂಬಂತೆ ಜೀವಿಸಿ ಯಾರು ಯಾವಾಗ ಬೇಕಾದರೂ ಯಾವುದೇ ಕ್ಷಣದಲ್ಲದರೂ ಬದುಕಿನ ಯಾತ್ರೆ ಮುಗಿಸಿ ಹೊರಡುವಂತಹ ಸ್ಥಿತಿ ಇರುವಾಗ ಹಠ ಸಾಧಿಸಿ ಮುಂದೆ ಕೊರಗಬೇಡಿ.
ಸಂಜಯ್ ಕಪೂರ್ ಅವರು ಒಟ್ಟು 3 ಮದುವೆಯಾಗಿದ್ದು, 1996ರಲ್ಲಿ ಅವರು ನಂದಿತಾ ಮೆಹ್ತಾನಿ ಅವರನ್ನು ಮದುವೆಯಾಗಿದ್ದರು 2000ದವರೆಗೆ ಅವರು ಜೊತೆಯಾಗಿದ್ದರು. ಇದಾದ ನಂತರ 2003ರಲ್ಲಿ ಅವರು ಕರೀಷ್ಮಾ ಕಪೂರ್ ಅವರನ್ನು ಮದುವೆಯಾಗಿದ್ದರು, 2016ರವರೆಗೆ 13 ವರ್ಷಗಳ ಕಾಲ ಅವರು ಜೊತೆಯಾಗಿದ್ದರು, ಇವರಿಗೆ ಸಮೈರಾ ಕಿಯಾನ ಎಂಬ ಇಬ್ಬರು ಮಕ್ಕಳೂ ಇದ್ದಾರೆ. ಇದಾದ ನಂತರ 2017ರಲ್ಲಿ ಸಂಜಯ್ ಕಪೂರ್ ಪ್ರಿಯಾ ಸಚ್‌ದೇವ್ ಅವರನ್ನು ಮದುವೆಯಾಗಿದ್ದು, ಈ ಮದುವೆಯಲ್ಲಿ ಒಬ್ಬ ಮಗನಿದ್ದಾನೆ.
