"ಆಂತರಿಕ ಸೌಂದರ್ಯ ಮುಖ್ಯ" ಎಂಬುದು ಆ ಚಿತ್ರದ ಸಂದೇಶವಾಗಿತ್ತು. ಆದರೆ ಇಂದಿನ ಶ್ರೆಕ್ಕಿಂಗ್ ಹೃದಯಸ್ಪರ್ಶಿಯಾಗಿರುವ ಈ ಕಾಲ್ಪನಿಕ ಕಥೆ ಇದ್ದಂಗಿಲ್ಲ.

ಸ್ವಲ್ಪ ಹೊತ್ತು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಗ್ರೂಪ್‌ನಲ್ಲಿ ಸುತ್ತಾಡಿ ಬಂದರೆ ನಿಮಗೆ ಇತ್ತೀಚಿನ ಡೇಟಿಂಗ್ ಟ್ರೆಂಡ್ ಶ್ರೆಕ್ಕಿಂಗ್ ಬಗ್ಗೆ ಗೊತ್ತಾಗುತ್ತದೆ. ಮೊದಲಿದು ವಿದೇಶದಲ್ಲಿತ್ತು, ಆದರೀಗ ಭಾರತಕ್ಕೂ ಕಾಲಿಟ್ಟಾಯ್ತು. ಅಷ್ಟಕ್ಕೂ ಶ್ರೆಕ್ಕಿಂಗ್ ಅಂದ್ರೆನು? ಹೆಸರೇ ವಿಚಿತ್ರವಿದೆಯಲ್ಲಾ ಅಂದುಕೊಳ್ತೀರಾ?, ನಿಮಗೂ ಈ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಇದ್ರೆ ಮುಂದೆ ಓದಿ...

ಶ್ರೆಕ್ಕಿಂಗ್ ಹೆಸರು ಅನಿಮೇಟೆಡ್ ಚಿತ್ರವೊಂದರ ಪಾತ್ರ ಶ್ರೆಕ್‌ನಿಂದ ಬಂದಿದೆ. ಚಿತ್ರದಲ್ಲಿ ಹಸಿರು ರಾಕ್ಷಸ ರಾಜಕುಮಾರಿ ಫಿಯೋನಾಳನ್ನು ಪ್ರೀತಿಸುತ್ತಾನೆ. "ಪ್ರೀತಿ ನೋಟದಲಿಲ್ಲ, ಆಂತರಿಕ ಸೌಂದರ್ಯ ಮುಖ್ಯ" ಎಂಬುದು ಚಿತ್ರದ ಸಂದೇಶವಾಗಿತ್ತು. ಆದರೆ ಇಂದಿನ ಶ್ರೆಕ್ಕಿಂಗ್ ಹೃದಯಸ್ಪರ್ಶಿಯಾಗಿರುವ ಈ ಕಾಲ್ಪನಿಕ ಕಥೆ ಇದ್ದಂಗಿಲ್ಲ. ಬದಲಾಗಿ ಇದು ನಿಮಗಿಂತ "ಕಡಿಮೆ ಆಕರ್ಷಕ" ಎಂದು ನೀವು ಭಾವಿಸುವ ವ್ಯಕ್ತಿಯೊಂದಿಗೆ ಉದ್ದೇಶಪೂರ್ವಕವಾಗಿ ಡೇಟಿಂಗ್ ಮಾಡುವುದರ ಬಗ್ಗೆ. ಏಕೆಂದರೆ ಈ ಡೇಟಿಂಗ್ ಸಂತೋಷ ನೀಡುವುದಲ್ಲದೆ, ಸುರಕ್ಷಿತವಾಗಿರುತ್ತಂತೆ!

ಈ ಡೇಟಿಂಗ್ ಕುರಿತು ಮಾತನಾಡಿರುವ 29 ವರ್ಷದ ಯುವತಿಯೋರ್ವಳು ಒಮ್ಮೆ ತಾನು ಸ್ವಲ್ಪವೂ ಆಕರ್ಷಿತನಾಗದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಏಕೆಂದರೆ ಅವನು ಸ್ಥಿರವಾಗಿದ್ದ. ನಾಟಕೀಯತೆ ಇರಲಿಲ್ಲ. ಸ್ವೀಟ್ ಪರ್ಸನ್. ಎಲ್ಲರೂ ನನ್ನನ್ನು ಪಡೆದ ಆತ ಅದೃಷ್ಟವಂತ ಎಂದು ಹೇಳಿದರು. ಆದರೆ ಆರು ತಿಂಗಳ ನಂತರ ನನಗೆ ಬೇಸರವಾಯ್ತು. ಅವನು ನನ್ನನ್ನು ನಿಜವಾಗಿಯೂ ಇಷ್ಟಪಟ್ಟಿದ್ದರಿಂದ ನನಗೆ ತಪ್ಪಿತಸ್ಥ ಭಾವನೆ ಬಂತು. ಆದರೆ ನಾನು ಶಾಶ್ವತವಾಗಿ ಈ ಸಂಬಂಧ ಮುಂದುವರೆಸಲು ಸಾಧ್ಯವಾಗಲಿಲ್ಲ. ಬ್ರೇಕಪ್ ಮಾಡಿಕೊಳ್ಳುವುದು ನೋವಿನಿಂದ ಕೂಡಿತ್ತು. ಕೊನೆಗೆ ನಾನು ಈ ಕಥೆಯಲ್ಲಿ ಖಳನಾಯಕಿಯಾದೆ ಎಂದು ಹೇಳಿಕೊಂಡಿದ್ದಾಳೆ.

ಹೀಗೆ ಇಬ್ಬರು ಮಹಿಳೆಯರು ಶ್ರೆಕ್ಕಿಂಗ್ ಬಗ್ಗೆ ಹೇಳಿಕೊಂಡಿದ್ದು, ಶ್ರೆಕ್ಕಿಂಗ್ ತಮಗೆ ತಾತ್ಕಾಲಿಕ ನೆಮ್ಮದಿ ನೀಡಿತು, ಆದರೆ ದೀರ್ಘಕಾಲ ಮುಂದುವರೆಸಲು ಸರಿ ಹೋಗಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಚೆನ್ನಾಗಿ ಕಾಣುವವರೊಂದಿಗೆ ಡೇಟಿಂಗ್ ಮಾಡುವ ಆತಂಕ ಅಥವಾ ಮೋಸ ಹೋಗುವ ಭಯದಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ, ಕೆಲವರು ಸಾಮಾನ್ಯರಂತೆ ಕಾಣುವವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆಗ ತಾವು ಸುರಕ್ಷಿತ, ಪ್ರೀತಿಪಾತ್ರಳಾಗಿರಬಹುದು ಎಂಬುದು ಲೆಕ್ಕಚಾರ. ಆದರೆ ಇದೆಲ್ಲಾ ತಾರ್ಕಿಕವಾಗಿ ತೋರುತ್ತದೆ. ನಿಜ ಜೀವನದಲ್ಲಿ ಗೊಂದಲಮಯವಾಗಿರುತ್ತದೆ.

ಈ ಕುರಿತು ಸಂಬಂಧ ಸಲಹೆಗಾರ್ತಿ ಶೀತಲ್ ವೊಹ್ರಾ, ಶ್ರೆಕ್ಕಿಂಗ್ ತಪ್ಪು ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿರುವುದರಿಂದ ಅದು ಅಪಾಯಕಾರಿ ಎಂದು ಹೇಳುತ್ತಾರೆ. "ಯಾರನ್ನಾದರೂ 'ನಿಮಗಿಂತ ಕಡಿಮೆ' ಎಂದು ನೀವು ಭಾವಿಸುವ ಕಾರಣ ಅವರನ್ನು ಆಯ್ಕೆ ಮಾಡುವುದು ಮೊದಲ ದಿನದಿಂದಲೇ ಅಸಮತೋಲನ ಸೃಷ್ಟಿಸುತ್ತದೆ. ನೀವು ಮೊದಲಿಗೆ ಸುರಕ್ಷಿತವಾಗಿರಬಹುದು, ಆದರೆ ನಂತರ, ಅಸಮಾಧಾನ ಅಥವಾ ಅಪರಾಧವು ನುಸುಳುತ್ತದೆ. ನಿಜವಾದ ಅನ್ಯೋನ್ಯತೆ ಸಮಾನತೆಯಿಂದ ಬರುತ್ತದೆ, ಸಮಾಧಾನದಿಂದಲ್ಲ," ಎಂದು ತಿಳಿಸಿದ್ದಾರೆ.

ನೀವೂ "ಶ್ರೆಕ್" ಮಾಡಬೇಕೇ?
ಸಂಬಂಧಗಳು ಸೌಂದರ್ಯ ಸ್ಪರ್ಧೆಗಳಲ್ಲ. ಸಂತೋಷವಾಗಿರಲು ನಿಮಗೆ ಮಾದರಿ ಗೆಳೆಯ ಅಥವಾ ಗೆಳತಿ ಅಗತ್ಯವಿಲ್ಲ. ಸುರಕ್ಷಿತವಾಗಿರಲು ನಿಮ್ಮ ಮಾನದಂಡಗಳನ್ನು ಕಡಿಮೆ ಮಾಡುವುದು ಒಂದು ಬಲೆ. ದೈಹಿಕ ಆಕರ್ಷಣೆ ಸಮೀಕರಣದ ಒಂದು ಭಾಗ ಮಾತ್ರ. ಅದು ಮುಖ್ಯವಲ್ಲ ಎಂದು ನಟಿಸುವುದು ಆಹಾರದಲ್ಲಿ ರುಚಿ ಮುಖ್ಯವಲ್ಲ ಎಂದು ಹೇಳುವಂತಿದೆ. ಅಂದರೆ ನೀವು ಶಾಶ್ವತವಾಗಿ ಸಪ್ಪೆಯಾದ ಖಿಚಡಿಯನ್ನು ತಿಂದು ತೃಪ್ತರಾಗಿದ್ದೀರಿ ಎಂದು ನಟಿಸಲು ಸಾಧ್ಯವಿಲ್ಲ ಎಂದು ಶೀತಲ್ ಹೇಳುತ್ತಾರೆ.

ಶ್ರೆಕ್ ನಲ್ಲಿ, ರಾಜಕುಮಾರಿ ಫಿಯೋನಾ ತನ್ನ ನಿಜವಾದ ಪ್ರೀತಿಯೊಂದಿಗೆ ಇರಲು ಒಬ್ಬ ರಾಕ್ಷಸಿಯಾಗಿ ಬದಲಾದಳು. ಆದರೆ ನಿಜ ಜೀವನದಲ್ಲಿ, "ನಿಮಗಿಂತ ಕೆಳಮಟ್ಟದಲ್ಲಿದ್ದಾರೆ" ಎಂದು ನೀವು ಭಾವಿಸುವ ಕಾರಣ ಯಾರನ್ನಾದರೂ ಡೇಟಿಂಗ್ ಮಾಡುವುದು ಉದಾತ್ತವಲ್ಲ, ಅದು ನಿಮ್ಮಿಬ್ಬರಿಗೂ ಅನ್ಯಾಯವಾಗಿದೆ. ನೀವು ಕಾಲ್ಪನಿಕ ಕಥೆಯ ಅಂತ್ಯವನ್ನು ಬಯಸಿದರೆ, ಪ್ರಾಮಾಣಿಕವಾಗಿರುವುದರೊಂದಿಗೆ ಪ್ರಾರಂಭಿಸಿ... ನಿಮ್ಮೊಂದಿಗೆ ಮತ್ತು ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯೊಂದಿಗೆ.