ಎರಡು ವರ್ಷ ಹಿಂದಿನ ಘಟನೆ. ನನ್ನ ಬದುಕಿನ ಅತೀ ಆಘಾತಕರ ಸುದ್ದಿ ನನ್ನ ಕಿವಿಗೆ ಬಿತ್ತು. ಒಣ ಕೆಮ್ಮು ಬಂತು ಅಂತ ವೈದ್ಯರ ಬಳಿ ಹೋಗಿದ್ದೆ. ಏನೋ ವೈರಲ್ ಇನ್‌ಫೆಕ್ಷನ್ ಆಗಿರುತ್ತೆ ಅಂತ ಅಂದುಕೊಂಡಿದ್ದೆ. ಆದರೆ ನನ್ನ ಟೆಸ್ಟ್‌ ರಿಪೋರ್ಟ್ಸ್ ಬಂದಾಗ ಡಾಕ್ಟರ್ ನಿಮ್ಮ ಪಾಲಕರ ಬಳಿ ಮಾತಾಡಬೇಕು ಅಂದರು. ನನಗೇಗಾಗಿದೆ, ದಯವಿಟ್ಟು ಹೇಳಿ ಅಂತ ಡಾಕ್ಟರ್ ಹತ್ರ ಅಂಗಲಾಚಿದೆ. ಆಗ ಅವರಂದರು, 'ನಿಮಗಾಗಿರೋದು ಲ್ಯುಕೇಮಿಯಾ ಅರ್ಥಾತ್ ರಕ್ತದ ಕ್ಯಾನ್ಸರ್!

ಭಯದಲ್ಲಿ ಅಕ್ಷರಶಃ ನಡುಗುತ್ತಿದ್ದೆ. ಆಗ ನಾನಿದ್ದದ್ದು ಸೂರತ್ನಲ್ಲಿ. ನನ್ನ ಅಪ್ಪ ಅಮ್ಮ ಎಲ್ಲ ಬಾಂಬೆಯಲ್ಲಿದ್ದರು. ಅಪ್ಪನಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ಆ ದಿನವೇ ಅವರು ಬಂದು ಟ್ರೀಟ್‌ಮೆಂಟ್‌ಗೋಸ್ಕರ ನನ್ನ ಮನೆಗೆ ಕರೆದುಕೊಂಡು ಹೋದರು.

 

 

ಪ್ರತೀ ಎರಡು ವಾರಕ್ಕೊಮ್ಮೆ ಕಿಮೋ ಥೆರಪಿ. ಅದು ಲೈಫ್‌ನ ಅತೀ ಬೇಸರದ ಘಟ್ಟ. ಪ್ರತೀ ಸಲ ಕಿಮೋ ಆದಾಗಲೂ ವಾಂತಿ ಆಗುತ್ತಿತ್ತು. ವಿವರಿಸಲಾಗದಷ್ಟೂ ನೋವು. ನಾನು ನೋವಿಂದ ಹೊರಳಾಡುತ್ತಾ ಒದ್ದಾಡುತ್ತಿರುವಾಗ ನನ್ನ ತಂಗಿ ಹತ್ತಿರ ಬರುತ್ತಿದ್ದಳು. ಕಷ್ಟಪಟ್ಟು ಅಳು ತಡೆದುಕೊಂಡು ನನ್ನ ಸಮಾಧಾನ ಮಾಡಲು ನೋಡುತ್ತಿದ್ದಳು.
 

ಕಿಮೋ ಶುರುವಾದ ಕೆಲವು ದಿನಗಳಲ್ಲೇ ತಲೆಯ ಅಲ್ಲಲ್ಲಿ ಕೂದಲು ಹೋಗುತ್ತಿತ್ತು. ತಿಂಗಳಾಗುವಷ್ಟರಲ್ಲಿ ಇಡೀ ತಲೆ ಬಾಲ್ಡ್ ಆಗಿತ್ತು. ಬಹಳ ಬೇಗ ಕಿರಿಕಿರಿಯಾಗುತ್ತಿತ್ತು. ನನ್ನ ಈ ನೋವು ಯಾವತ್ತೂ ಕಡಿಮೆ ಆಗಲ್ಲ ಅಂತಲೇ ಅನಿಸುತ್ತಿತ್ತು. ನನ್ನ ತಂಗಿ ಮೇಲೆ ಸಿಕ್ಕಾಪಟ್ಟೆ ರೇಗಾಡುತ್ತಿದ್ದೆ. ನನ್ನ ನೋವು ನಿನಗೆ ಅರ್ಥ ಆಗಲ್ಲ ಅಂತ ಬೈಯ್ಯುತ್ತಿದ್ದೆ. ನಾನೆಷ್ಟು ಅವಳ ಮನಸ್ಸು ನೋಯಿಸಿದರೂ ಅವಳು ತಕ್ಷಣ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದಳು, 'ನಾನು ನಿನ್ನ ಜೊತೆಗಿರ್ತೀನಿ' ಅನ್ನುತ್ತಿದ್ದಳು.

 

ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು...

 

ಇದಾದ ಒಂದೆರಡು ದಿನಗಳಲ್ಲೇ ಅವಳು ನನ್ನ ರೂಮ್ ಗೆ ಬಂದಾಗ ಆಘಾತಗೊಳ್ಳುವ ಸರದಿ ನನ್ನದು. ಅವಳ ತಲೆಯೂ ನನ್ನ ತಲೆಯ ಹಾಗೇ ಬಾಲ್ಡ್ ಆಗಿತ್ತು! ನನ್ನ ತಂಗಿ ನನಗಾಗಿ ತಲೆಕೂದಲನ್ನು ಬೋಳಿಸಿಕೊಂಡಿದ್ದಳು. ಈಗ ಅವಳೂ ನನ್ನ ಥರವೇ ಕಾಣುತ್ತಿದ್ದಳು. 'ಆಯುಶೀ...' ಅನ್ನುತ್ತಾ ಬಿಕ್ಕಿಬಿಕ್ಕಿ ಅಳೋದುಬಿಟ್ಟು ನನಗಾಗ ಏನೂ ಉಳಿದಿರಲಿಲ್ಲ. ನಾನಾಗ ಕುಸಿದಿದ್ದೆ. ಯಾಕೆ ಹೀಗೆ ಮಾಡಿದೆ ಅಂತ ಕೇಳುವಷ್ಟು ಧೈರ್ಯವೂ ನನಗಿರಲಿಲ್ಲ. ಅವಳ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಳು. ನಾವಿಬ್ಬರೂ ಬಹಳ ಹೊತ್ತು ಅಳುತ್ತಾ ಕೂತಿದ್ದೆವು.

 

ಒತ್ತಡಮುಕ್ತ ಅಮ್ಮನಾಗಲು ಇಲ್ಲಿವೆ ಗೋಲ್ಡನ್ ಟಿಪ್ಸ್

 

ಆ ದಿನದಿಂದ ನನ್ನ ಪ್ರತೀ ಹೆಜ್ಜೆಯಲ್ಲೂ ಅವಳಿದ್ದಾಳೆ, ನಾನು ಒಂಟಿಯಲ್ಲ ಅನ್ನೋ ಭಾವನೆ ಬಂತು. ನನ್ನ ಕೀಮೋ ಸೆಷನ್ ಇರುವಾಗಲೆಲ್ಲ ಅವಳು ಬರುತ್ತಿದ್ದಳು, ನನ್ನ ಜೊತೆಗೇ ಇರುತ್ತಿದ್ದಳು, ಅವಳ ಅಷ್ಟೂ ಸಮಯ ನನ್ನದೇ ಆಗಿರುತ್ತಿತ್ತು. ನಾವಿಬ್ಬರೂ ಜೊತೆಯಾಗಿ ಪ್ರಾರ್ಥನೆ ಮಾಡುತ್ತಿದ್ದೆವು, ಕಾರ್ಡ್ಸ್ ಆಡ್ತಾ ಇದ್ದೆವು, ಮಧ್ಯರಾತ್ರಿಯ ತನಕ ಪಟ್ಟಾಂಗ ಹೊಡೆಯುತ್ತಾ ಸ್ನಾಕ್ಸ್ ತಿನ್ನೋ ನಮ್ಮ ಹಿಂದಿನ ಚಾಳಿ ಮುಂದುವರಿಸಿದ್ದೆವು. ಫುಲ್ ಸಿನಿಮಾ ನೋಡಲಾಗದಿದ್ದರೂ ಕಾಮಿಡಿ ಸೀನ್‌ಗಳನ್ನು ನೋಡಿ ಹೊಟ್ಟೆ ಹಣ್ಣಾಗುವಂತೆ ನಗುತ್ತಿದ್ದೆವು. ನಮ್ಮಿಬ್ಬರ ತಲೆಗೂದಲೂ ಒಂದೇ ರೀತಿ ಬೆಳೆಯಲಾರಂಭಿಸಿತು, ಯಾರ ಕೂದಲು ಬೇಗ ಬೆಳೆಯುತ್ತೆ ಅಂತ ನಮ್ಮ ನಡುವೆ ಕಾಂಪಿಟೀಶನ್ ಮಾಡುತ್ತಿದ್ದೆವು. ನನ್ನ ಒಂದು ನಗುವಿಗಾಗಿ ಅವಳು ಏನು ಮಾಡಲೂ ಸಿದ್ಧವಿದ್ದಳು.

 

ಮಗಳಿಗೆ ತಾಯಿಯೇ ಗುರು; ಮುಟ್ಟಿನ ಸ್ವಚ್ಛತೆ ಪಾಠ ಅವಳೇ ಮಾಡಲಿ

 

ಇಷ್ಟೊತ್ತಿಗೆ ವೈದ್ಯರು ನನ್ನ ಕಂಡೀಶನ್ ಅವರ ನಿರೀಕ್ಷೆಗೂ ಮೀರಿ ಅತ್ಯುತ್ತಮವಾಗಿ ಸುಧಾರಣೆಯಾಗ್ತಿರೋದನ್ನು ಹೇಳಿದರು. ದೀಪಾವಳಿ ಹಬ್ಬದ ಹೊತ್ತಿಗೆ ನನ್ನ ಕೀಮೋ ಹಾಗೂ ಎಲ್ಲ ಮೆಡಿಕೇಶನ್‌ಗಳೂ ಮುಗಿಯುತ್ತವೆ ಅನ್ನೋ ಶುಭ ಸುದ್ದಿಯನ್ನೂ ನೀಡಿದರು. ನಾವಿಬ್ಬರೂ ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ಪ್ಲ್ಯಾನ್ ಮಾಡಿದೆವು. ಎಲ್ಲೆಲ್ಲ ಔಟಿಂಗ್ ಹೋಗ್ಬೇಕು, ಏನೇನೆಲ್ಲ ತಿನ್ನಬೇಕು ಅನ್ನೋದರ ಬಗ್ಗೆ ದೊಡ್ಡ ಲೀಸ್ಟ್ ರೆಡಿಯಾಗಿತ್ತು. ಜೊತೆಗೆ ನಾವಿಬ್ಬರೂ ಒಟ್ಟಿಗೆ ಸೆಲೂನ್‌ಗೆ ಹೋಗಿ ಕೂಲ್ ಆದ ಹೇರ್‌ಸ್ಟೈಲ್ ಮಾಡಿಸಿಕೊಳ್ಳಲೂ ಡಿಸೈಡ್ ಮಾಡಿದೆವು.