Asianet Suvarna News Asianet Suvarna News

Sexual Education: ಹೆಂಡತಿ ಸನ್ನಿ ಲಿಯೋನ್‌ ಥರ ಕಾಣಿಸಿದ್ರೆ ಮಾತ್ರ ಗಂಡನಿಗೆ ಉದ್ರೇಕ, ಇದೆಂಥಾ ಗೀಳು!

ಕೆಲವೊಮ್ಮೆ ಕೆಲವು ದಂಪತಿಗಳ ಲೈಂಗಿಕ ಜೀವನ ಊಹಿಸಲೂ ಅಸಾಧ್ಯವಾದಷ್ಟು ವಿಲಕ್ಷಣವಾಗಿರುತ್ತದೆ. ಕೆಲವರಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ಕೆಲವು ಬಗೆಯ ಗೀಳು ಅಥವಾ fetish ಇರುತ್ತದೆ. ಅಂಥ ಒಂದು ಗೀಳಿನ ಬಗ್ಗೆ ಹೆಂಡತಿಯ ಪ್ರಶ್ನೆ ಹಾಗೂ ವೈದ್ಯರ ಉತ್ತರ ಇಲ್ಲಿದೆ. 

sexual fetish of husband to see wife as Sunny Leone
Author
First Published Aug 23, 2024, 9:47 AM IST | Last Updated Aug 23, 2024, 10:05 AM IST


ಪ್ರಶ್ನೆ: ನಾನು ಇಪ್ಪತ್ತಾರು ವರ್ಷದ ಯುವತಿ. ನನ್ನ ಗಂಡನಿಗೆ ಇಪ್ಪತ್ತೆಂಟು ವರ್ಷ. ಮದುವೆಯಾಗಿ ಆರು ತಿಂಗಳಾಗಿದೆ. ನಾವಿಬ್ಬರೂ ಒಳ್ಳೆಯ ಕೆಲಸದಲ್ಲಿದ್ದೇವೆ. ಚೆನ್ನಾಗಿ ಸಂಬಳ ಬರುತ್ತದೆ. ಸಾಕಷ್ಟು ಏಕಾಂತ, ಸೆಕ್ಸ್‌ (sex) ಎಲ್ಲ ಇದೆ. ಇಬ್ಬರಲ್ಲೂ ಸೆಕ್ಸ್‌ ಬಗ್ಗೆ ಆಸಕ್ತಿ, ಅಭಿರುಚಿ, ಆನಂದ ಎಲ್ಲವೂ ಇದೆ. ಇಬ್ಬರೂ ಆಗಾಗ ಸೆಕ್ಸ್‌ನಲ್ಲಿ ಆನಂದ, ಉದ್ರೇಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಪೋರ್ನ್‌ ನೋಡುತ್ತೇವೆ. ಆದರೆ, ಇದರಿಂದ ಒಂದು ಸಣ್ಣ ಸಮಸ್ಯೆ ಶುರುವಾಯಿತು. ನನ್ನ ಗಂಡ ಸನ್ನಿ ಲಿಯೋನ್‌ ಪೋರ್ನ್‌ (sunny leone porn) ಅನ್ನು ಹೆಚ್ಚು ನೋಡುತ್ತಾನೆ. ಆತ ಸನ್ನಿ ಲಿಯೋನ್‌ ಥರದ ಡ್ರೆಸ್‌ನಲ್ಲಿ ನನ್ನನ್ನು ನೋಡಲು ಇಷ್ಟಪಟ್ಟ. ನಾನು ಕೂಡ ಇದು ಕುತೂಹಲಕಾರಿಯಾಗಿದೆ ಎಂದುಕೊಂಡು ಆರಂಭದಲ್ಲಿ ಒಂದೆರಡು ಬಾರಿ ಸನ್ನಿ ಲಿಯೋನ್‌ ಥರ ಡ್ರೆಸ್‌ ಧರಿಸಿದೆ. ಇದರಿಂದ ನಮ್ಮ ಸೆಕ್ಸ್‌ ಲೈಫ್‌ ಇನ್ನಷ್ಟು ಸ್ಪೈಸಿ ಆಯ್ತೇನೋ ನಿಜ. ಆದರೆ ಗಂಡನಿಗೆ ಇದರಿಂದ ಇನ್ನಷ್ಟು ಉತ್ಸಾಹ ಉಂಟಾಗಿದೆ. ಆತ ಆನ್‌ಲೈನ್‌ನಲ್ಲಿ ಸನ್ನಿ ಲಿಯೋನ್‌ ಧರಿಸಿದ ಥರದ ಡ್ರೆಸ್‌ಗಳನ್ನು ತರಿಸುತ್ತಾನೆ. ಅದರಲ್ಲಿ ನನ್ನನ್ನು ನೋಡಲು ಇಷ್ಟಪಡುತ್ತಾನೆ. ಇವು ದುಬಾರಿ ಡ್ರೆಸ್‌ಗಳು. ಅವನ ಸಂಬಳದ ಬಹುಪಾಲು ಇದಕ್ಕಾಗಿಯೇ ಹೋಗುತ್ತಿದೆ. ನಾವಿಬ್ಬರೂ ಇದರಿಂದ ಹೆಚ್ಚಿನ ಆನಂದವನ್ನೇನೋ ಪಡುತ್ತಿದ್ದೇವೆ. ಆದರೆ ಸಂಬಳದ ಹಣವೆಲ್ಲ ಅದಕ್ಕೇ ಹೋಗುತ್ತಿರುವುದು ನನ್ನ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ಸನ್ನಿ ಲಿಯೋನ್ ಡ್ರೆಸ್ ಧರಿಸದೇ ಹೋದಾಗ ಮೊದಲಿನ ಉತ್ಸಾಹ ಗಂಡನಲ್ಲಿ ಕಂಡುಬರುತ್ತಿಲ್ಲ ಅನ್ನಿಸಲು ಶುರುವಾಗಿದೆ. ನನ್ನ ಗಂಡನಲ್ಲಿ ಇದಕ್ಕೆ ಸಂಬಂಧಿಸಿದ ಪರ್ಸನಾಲಿಟಿ ಡಿಸಾರ್ಡರ್‌ (Personality disorder) ಅಥವಾ ಯಾವುದಾದರೂ ಲೈಂಗಿಕ ಸಮಸ್ಯೆ (sexual disorder) ಕೂಡ ಇರಬಹುದಾ? 

ಉತ್ತರ: ನಿಮ್ಮ ಸಮಸ್ಯೆ ಕುತೂಹಲಕಾರಿಯಾಗಿದೆ. ಇದರಲ್ಲಿ ಲೈಂಗಿಕ ವರ್ತನೆಯ ಜಟಿಲತೆ ಹಾಗೂ ಮನಿ ಮೇಂಟೇನೆನ್ಸ್‌ನ ಸಮಸ್ಯೆ ಕೂಡ ಸೇರಿಕೊಂಡಿದೆ. ಇದನ್ನು ನೀವಿಬ್ಬರೂ ಕೂತು ಮಾತನಾಡಿ ಪರಿಹರಿಸಿಕೊಳ್ಳಬೇಕು. ಅದಕ್ಕೂ ಮುನ್ನ ಈ ವರ್ತನೆಯ ಬಗ್ಗೆ ಕೆಲವು ಮಾತು.

ಗಂಡಸರಲ್ಲೂ, ಹೆಂಗಸರಲ್ಲೂ ಕೆಲವು ಲೈಂಗಿಕ ವರ್ತನೆಗಳಿರುತ್ತವೆ. ಉದಾಹರಣೆಗೆ ಒಂದನ್ನು ಹೇಳುವುದಾದರೆ, ಇಣುಕು ಕಾಮ ಅಥವಾ ವೊವೆಯರಿಸಂ. ಇದು ಬೇರೊಬ್ಬರ ಸೆಕ್ಸ್‌ ಅನ್ನು ನೋಡಿ ತಾವು ಉದ್ರೇಕಗೊಳ್ಳುವುದು. ಇದು ಒಂದು ಬಗೆಯ ಫೆಟಿಶ್.‌ ಫೆಟಿಶ್‌ (fetish) ಕೂಡ ಒಂದು ಬಗೆಯ ಲೈಂಗಿಕಾಸಕ್ತಿ. ಹೀಗೆ ಹಲವು ಬಗೆಯ ಲೈಂಗಿಕಾಸಕ್ತಿಗಳಿರಬಹುದು. ಪೋರ್ನ್‌ (porn) ನೋಡುವುದು ಕೂಡ ಒಂದು ಲೈಂಗಿಕಾಸಕ್ತಿ. ಆದರೆ ಇದು ಯಾವಾಗ ಫೆಟಿಶ್‌ ಆಗುತ್ತದೆ ಗೊತ್ತೆ?

Alia Bhat: 'ಫಸ್ಟ್ ನೈಟ್ ಅನ್ನೋದು...'' ರಣಬೀರ್ ಜೊತೆಗೆ ಮೊದಲ ರಾತ್ರಿ ಬಗ್ಗೆ ಮೌನ ಮುರಿದ ಆಲಿಯಾ ಭಟ್!
 

ಪೋರ್ನ್‌ ನೋಡಿ ಉದ್ರೇಕಗೊಂಡು ಮೈಥುನದಲ್ಲಿ ತೊಡಗುವುದು ಸಾಮಾನ್ಯ. ಆದರೆ, ಪೋರ್ನ್‌ ನೋಡದೇ ಕಾಮೋದ್ರೇಕವೇ ಉಂಟಾಗುವುದಿಲ್ಲ ಎಂದರೆ ಅದು ಫೆಟಿಶ್.‌ ಕೆಲವರು ಸಂಗಾತಿಗಳ ಒಳಚಡ್ಡಿಯನ್ನು ನೋಡಿ ಅಥವಾ ಮೂಸಿ ಉದ್ರೇಕಗೊಳ್ಳುತ್ತಾರೆ. ಆದರೆ ಒಳಚಡ್ಡಿ ಉಪಯೋಗಿಸದೇ ಉದ್ರೇಕವೇ ಉಂಟಾಗುವುದಿಲ್ಲ ಎಂದಾದರೆ ಅದು ಫೆಟಿಶ್.‌ ಇದನ್ನು ಗಮನಿಸಿ. ನಿಮ್ಮ ಗಂಡ ಸನ್ನಿ ಲಿಯೋನ್‌ ದಿರಿಸಿನಲ್ಲಿ ನಿಮ್ಮನ್ನು ನೋಡದಿದ್ದರೆ ಅವರಿಗೆ ಉದ್ರೇಕವೇ ಉಂಟಾಗುವುದಿಲ್ಲ ಎಂಬ ಹಂತಕ್ಕೆ ಮುಟ್ಟಿದ್ದರೆ ಅದನ್ನು ಫೆಟಿಶ್‌ ಎನ್ನಬಹುದು. ಇಲ್ಲವಾದರೆ, ಅದರ ಬಗ್ಗೆ ಹೆಚ್ಚಿನ ಕಾಳಜಿ ಅಥವಾ ಚಿಂತೆ ಬೇಡ.

ಇನ್ನು, ಇದರಿಂದ ಆಗುತ್ತಿರುವ ಆರ್ಥಿಕ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ನೀವು ಕುಳಿತು ಮಾತನಾಡಿಕೊಳ್ಳಬೇಕು. ಇದರಿಂದ ಆಗುತ್ತಿರುವ ಖರ್ಚಿನ ಬಗ್ಗೆ ಅವರಿಗೆ ಮನದಟ್ಟು ಮಾಡಿಸಿ. ಅದರ ಉಳಿತಾಯದಿಂದ ಆಗುವ ದೀರ್ಘಕಾಲಿಕ ಲಾಭಗಳ ಬಗ್ಗೆ ತಿಳಿಸಿ. ನೀವು ನಿಮ್ಮ ಗಂಡನ ಲೈಂಗಿಕ ಕಾಮನೆಯನ್ನು ತಣಿಸುವ ಬೇರೆ ವರ್ತನೆಗಳನ್ನು ರೂಢಿಸಿಕೊಳ್ಳಬಹುದು. ಸನ್ನಿ ಲಿಯೋನ್‌ ಡ್ರೆಸ್‌ ಅಲ್ಲದೇ ಬೇರೆ ಯಾವ ಯಾವ ವಿಧದಿಂದ ನಿಮ್ಮ ಗಂಡನನ್ನು ಉದ್ರೇಕಗೊಳಿಸಬಹುದು ಎಂಬುದನ್ನು ಅನ್ವೇಷಿಸಿ. ಹೊಸ ಹೊಸ ಲೈಂಗಿಕ ಭಂಗಿಗಳು, ಸಾಹಸಗಳಲ್ಲಿ ತೊಡಗಿ. ಇದು ನಿಮಗಿಬ್ಬರಿಗೂ ಇಷ್ಟವಾಗಬಹುದು. ಆಗ ನಿಮ್ಮ ಗಂಡನಲ್ಲಿ ತಾನಾಗಿಯೇ ಸನ್ನಿ ಲಿಯೋನ್‌ ಗೀಳು ಬಿಟ್ಟುಹೋಗಬಹುದು.

ಪೋಷಕರು ಮಾಡೋ ಈ ತಪ್ಪಿನಿಂದ ಮಕ್ಕಳು ಮಂಗಳಮುಖಿರಾಗ್ತಾರಾ?
 

Latest Videos
Follow Us:
Download App:
  • android
  • ios