Feelfree: ಬಾಯ್‌ಫ್ರೆಂಡ್‌ನ ವಿಚಿತ್ರ ಲೈಂಗಿಕ ಆಸಕ್ತಿ, ಸರಿಪಡಿಸೋಕೆ ಸಾಧ್ಯವಾ?

ಲಿಂಗ ಪರಿವರ್ತಿತರಿಂದ ರತಿಸುಖ ಪಡೆಯಬಯಸುವ ಬಾಯ್‌ಫ್ರೆಂಡ್‌, ಇದೇನೀ ವಿಚಿತ್ರ ಸಮಸ್ಯೆ?

 

Sexual attraction on transgenders is it normal or weird

ಪ್ರಶ್ನೆ: ನಾನು ಇಪ್ಪತ್ತೆರಡು ವರ್ಷದ ಯುವತಿ. ಒಂದು ಮಲ್ಟಿನ್ಯಾಷನಲ್‌ ಕಂಪನಿಯಲ್ಲಿ ಕೆಲಸ ಮಾಡ್ತಿದೇನೆ. ನನಗೊಬ್ಬ ಬಾಯ್‌ಫ್ರೆಂಡ್ (Boyfriend) ಇದ್ದಾನೆ. ನಾವಿಬ್ಬರೂ ಸೇರಿಕೊಂಡು ಒಂದು ಫ್ಲ್ಯಾಟ್ ಮಾಡಿಕೊಂಡಿದ್ದು, ಅಲ್ಲಿ ಲಿವಿಂಗ್ ಟುಗೆದರ್ (Live in) ಮಾಡಿಕೊಂಡಿದ್ದೇವೆ. ಅವನೂ ನನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಸಾಮಾನ್ಯವಾಗಿ ನಾವಿಬ್ಬರೂ ಎರಡು ದಿನಕ್ಕೊಮ್ಮೆಯಂತೆ ಸೆಕ್ಸ್ (Sex) ಮಾಡುತ್ತೇವೆ. ಸಾಕಷ್ಟು ಸುಖವೂ ನಮ್ಮಿಬ್ಬರಿಗೂ ಪರಸ್ಪರರಿಂದ ಸಿಗುತ್ತಿದೆ. ವಿಷಯ ಅದಲ್ಲ. ಇತ್ತೀಚೆಗೆ ನನ್ನ ಗೆಳೆಯನಲ್ಲಿ ಒಂದು ವಿಚಿತ್ರ ಪ್ರವೃತ್ತಿಯನ್ನು ಗಮನಿಸಿದ್ದೇನೆ. ನಾವಿಬ್ಬರೂ ಆಗಾಗ ಪೋರ್ನ್ (Porn) ನೋಡುವುದುಂಟು. ಸಹಜ ರತಿಕೇಳಿಯ ದೃಶ್ಯಗಳನ್ನೇ ಇಬ್ಬರೂ ನೋಡುತ್ತೇವೆ. ಇದು ನಮ್ಮ ಕಾಮೋದ್ರೇಕಕ್ಕೆ ಸಹಾಯ ಮಾಡುತ್ತದೆ ಅನ್ನುವುದು ಕಾರಣ. ಆದರೆ ಇತ್ತೀಚೆಗೆ ನನ್ನ ಗೆಳೆಯ ಲಿಂಗ ಪರಿವರ್ತಿತರ (ಟ್ರಾನ್ಸ್‌ಜೆಂಡರ್) (Transgenders) ಸೆಕ್ಸ್ ವಿಡಿಯೋಗಳನ್ನು ಹೆಚ್ಚು ಹೆಚ್ಚಾಗಿ ನೋಡುತ್ತಿದ್ದಾನೆ. ನಾನು ಇಲ್ಲದಾಗಲೂ ಅವನು ಈ ಪೋರ್ನ್ ದೃಶ್ಯಗಳನ್ನು ನೋಡುವುದು ನನ್ನ ಗಮನಕ್ಕೆ ಬಂದಿದೆ. ಸಹಜ ಸೆಕ್ಸ್‌ಗಿಂತ ಹೆಚ್ಚು ಕಾಮೋದ್ರೇಕ ಅವನಿಗೆ ಅದರಿಂದ ಉಂಟಾಗುತ್ತಿದೆ ಎನ್ನುವುದೂ ನನ್ನ ಅರಿವಿಗೆ ಬಂದಿದೆ. ನಮ್ಮ ಕಂಪನಿಯಲ್ಲಿ ಒಬ್ಬ ಟ್ರಾನ್ಸ್‌ಜೆಂಡರ್ ಉದ್ಯೋಗಿ ಇದ್ದಾರೆ. ಅವರೂ ನಮ್ಮದೇ ವಯಸ್ಸಿನವರು. ಇತ್ತೀಚೆಗೆ ನನ್ನ ಗೆಳೆಯ ಅವರ ಜೊತೆ ಹೆಚ್ಚಾಗಿ ಸಲಿಗೆಯಿಂದಿರುತ್ತಾನೆ. ಅವರ ರೂಮಿಗೂ ಆಗಾಗ ಹೋಗಿ ಬರುತ್ತೇನೆ. ಇತ್ತೀಚೆಗೆ ಒಂದು ರಾತ್ರಿ ಅವರ ರೂಮಿನಲ್ಲಿ ಇದ್ದು ಬಂದ. ಅವರ ಜೊತೆ ಸೆಕ್ಸ್ ಹಂಚಿಕೊಂಡಿದ್ದಾನೆ ಎಂಬ ಅನುಮಾನ ನನಗೆ. ಈ ಬಗ್ಗೆ ಕೇಳಲು ಆತಂಕವಾಗುತ್ತದೆ. ಇದೊಂದು ಲೈಂಗಿಕ ಪ್ರವೃತ್ತಿಯಾ ಅಥವಾ ಕಾಯಿಲೆಯಾ? ನಾವಿಬ್ಬರೂ ಮುಂದುವೆಯಾದರೆ, ಆತನ ಈ ಪ್ರವೃತ್ತಿಯಿಂದ ಮುಂದೆ ದಾಂಪತ್ಯದಲ್ಲಿ ಸಮಸ್ಯೆ ಆಗಬಹುದಾ? ಮಾರ್ಗದರ್ಶನ ಮಾಡಿ.

Feel free: ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

ಉತ್ತರ: ನೀವು ವಿವರಿಸಿದ್ದು ನೋಡಿದರೆ, ನಿಮ್ಮ ಗೆಳೆಯ ಟ್ರಾನ್ಸ್‌ಜೆಂಡರ್‌ (ಲಿಂಗಪರಿವರ್ತಿತ ಅಥವಾ ಸಾಮಾನ್ಯ ಭಾಷೆಯಲ್ಲಿ ಕರೆಯುವಂತೆ ಮಂಗಳಮುಖಿ) ವ್ಯಕ್ತಿಗಳಿಂದ ಕಾಮೋದ್ರೇಕಕ್ಕೆ ಒಳಗಾಗುವ ವ್ಯಕ್ತಿಯಂತೆ ಕಾಣುತ್ತಾರೆ. ಇವರಲ್ಲಿ ಸಾಮಾನ್ಯವಾಗಿ ಎರಡು ವಿಧವಿದೆ. ಕೆಲವರು ಹುಟ್ಟಾ ಪುರುಷ ಅಥವಾ ಸ್ತ್ರೀ ಆಗಿರುತ್ತಾರೆ; ಆದರೆ ಸಂಭೋಗಕ್ಕೆ (Intercourse) ಲಿಂಗಪರಿವರ್ತಿತರನ್ನು ಆರಿಸಿಕೊಳ್ಳುತ್ತಾರೆ. ಇವರಿಗೆ ಪಾರಿಭಾಷಿಕ ಭಾಷೆಯಲ್ಲಿ ಸ್ಕೋಲಿಯೋಸೆಕ್ಷುಯಲ್ (Skoliosexual) ಎಂದು ಕರೆಯುವುದುಂಟು. ಇನ್ನೊಂದು ವಿಧವೆಂದರೆ, ಹುಟ್ಟಾ ಗಂಡು ಅಥವಾ ಹೆಣ್ಣು ಆಗಿದ್ದು, ವಿರುದ್ಧ ಲಿಂಗಿಯತ್ತಲೂ ಲಿಂಗಪರಿವರ್ತಿತರತ್ತಲೂ ಸಮಾನವಾಗಿ ಆಕರ್ಷಿತರಾಗುತ್ತಾರೆ. ಇನ್ನು ಕೆಲವರಿದ್ದಾರೆ; ಇವರು ಏಕಕಾಲಕ್ಕೆ ವಿರುದ್ಧ ಲಿಂಗಿಯತ್ತಲೂ, ಲಿಂಗವೇ ಇಲ್ಲದವರತ್ತಲೂ, ಸಲಿಂಗದವರತ್ತಲೂ ಆಕರ್ಷಿರತರಾಗುವವರು. ಇವರಿಗೆಲ್ಲ ಪಾರಿಭಾಷಿಕ ಪದಗಳಿವೆ- ಆದರೆ ಅದು ಇಲ್ಲಿ ಅಗತ್ಯವಿಲ್ಲ. 
ಇವೆಲ್ಲವೂ ನಿಜಕ್ಕೂ ಸಮಸ್ಯೆಗಳಲ್ಲ. ಕಾಯಿಲೆಗಳೂ ಅಲ್ಲ. ಇವುಗಳಿಗೆ ಚಿಕಿತ್ಸೆಗಳಿಲ್ಲ. ಇವು ಪ್ರತೀ ವ್ಯಕ್ತಿಯ ಲೈಂಗಿಕ ಆದ್ಯತೆಗಳು. ಹೇಗೆ ನೀವು ಹೆಣ್ಣಾಗಿ ಜನಿಸಿ, ಗಂಡಿನತ್ತ ಲೈಂಗಿಕ ಆಕರ್ಷಣೆ ಹೊಂದಿರುವಿರೋ, ಹಾಗೆಯೇ ಇವರು ಗಂಡಾಗಿ ಜನಿಸಿ, ಲಿಂಗಪರಿವರ್ತಿತರತ್ತ ಆಕರ್ಷಣೆ ಹೊಂದಿರುತ್ತಾರೆ. ಅವರ ಜೊತೆ ಸಂಭೋಗಿಸಲು ಬಯಸುತ್ತಾರೆ.

Sex as exercise: ಸೆಕ್ಸ್ ಮಾಡಿದ್ರೆ ಬೇರೆ ವ್ಯಾಯಾಮ ಬೇಕಿಲ್ವಾ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್?

ಹಾಗಾದರೆ ಇಲ್ಲಿ ನಿಮ್ಮ ಸಮಸ್ಯೆ ಏನು?
ಇಲ್ಲಿ ನಿಮ್ಮ ಸಮಸ್ಯೆ ನಿಮ್ಮ ಗೆಳೆಯ ಲಿಂಗಪರಿವರ್ತಿತರತ್ತ ಆಕರ್ಷಿತರಾಗುವುದಲ್ಲ. ಬದಲಾಗಿ ನಿಮ್ಮ ಬದಲಾಗಿ ಬೇರೊಬ್ಬರಿಂದ ಲೈಂಗಿಕ ಸುಖ ಪಡೆಯುತ್ತಿದ್ದಾನೆ, ಕಾಮಸುಖಕ್ಕಾಗಿ ನಿಮ್ಮ ಬದಲು ಬೇರೊಬ್ಬರನ್ನು ಅವಲಂಬಿಸುತ್ತಿದ್ದಾನೆ ಅನ್ನುವುದು. ಇದು ದಾಂಪತ್ಯದಲ್ಲಿ ಮಾಡುವ ವಂಚನೆಯಂತೆಯೇ ವಂಚನೆ. ನೀವು ಮಾಡಬೇಕಾದ್ದೇನೆಂದರೆ, ನಿಮ್ಮ ಗೆಳೆಯ ಇನ್ನೊಬ್ಬರ ಜೊತೆ ಸೆಕ್ಸ್ ಹೊಂದಿದ್ದಾರೆಯೇ ಎಂಬುದನ್ನು ಮಾತನಾಡಿ ಖಚಿತಡಿಸಿಕೊಳ್ಳುವುದು. ನಿಮಗಿಂತ ಹೆಚ್ಚು ಸುಖವನ್ನು ಅವರು ಬೇರೊಬ್ಬರಿಂದ ಹೊಂದುತ್ತಿದ್ದಾರೆ ಎಂದೆನಿಸಿದರೆ, ಅವರನ್ನು ಬಿಟ್ಟುಬಿಟ್ಟು ನಿಮ್ಮ ದಾರಿ ನೋಡಿಕೊಳ್ಳುವುದು. ಭಾವನಾತ್ಮಕವಾಗಿ ಇದು ಸಂಕಟಕರ ಎನಿಸಿದರೂ ಬೇರೆ ದಾರಿಯಿಲ್ಲ. ಇಷ್ಟಿದ್ದರೂ ಹೊಂದಿಕೊಂಡು ಬದುಕುಬಹುದು ಎನಿಸಿದರೆ ಅದೂ ನಿಮ್ಮ ಆಯ್ಕೆಯೇ. ನಿಮ್ಮ ಭಾವನಾತ್ಮಕ ದೃಢತೆಯನ್ನು ಅದು ಅವಲಂಬಿಸಿದೆ.  

Feelfree: ರೂಮ್‌ಮೇಟ್‌ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?

Latest Videos
Follow Us:
Download App:
  • android
  • ios