Asianet Suvarna News Asianet Suvarna News

'ಸೆಕ್ಸ್‌' ಅನ್ನು ಕ್ರೀಡೆಯಾಗಿ ಪರಿಗಣಿಸಿದ ಸ್ವೀಡನ್, ಜೂ.8ಕ್ಕೆ ಮೊದಲ ಯುರೋಪಿಯನ್‌ ಸೆಕ್ಸ್‌ ಚಾಂಪಿಯನ್‌ಷಿಪ್‌!

ಸ್ವೀಡಿಷ್ ಸೆಕ್ಸ್ ಫೆಡರೇಶನ್ ಈವೆಂಟ್ ಅನ್ನು ಆಯೋಜನೆ ಮಾಡಲಿದೆ. ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್ 2023ರ ಜೂನ್ 8 ರಂದು ಪ್ರಾರಂಭವಾಗಲಿದ್ದು, ಹಲವಾರು ವಾರಗಳ ಕಾಲ ನಡೆಯಲಿದೆ.ಭಾಗವಹಿಸುವವರು ಪ್ರತಿ ದಿನ ಆರು ಗಂಟೆಗಳ ಕಾಲ ಸ್ಪರ್ಧೆ ಮಾಡಬೇಕಿರುತ್ತದೆ.
 

Sex Recognised as Sport in Sweden First European Sex Championship To Be Held on June 8 san
Author
First Published Jun 1, 2023, 6:31 PM IST

ನವದೆಹಲಿ (ಜೂ.1): ಯುರೋಪ್‌ ರಾಷ್ಟ್ರ ಸ್ವೀಡನ್‌, ಸೆಕ್ಸ್‌ ಅನ್ನು ಕ್ರೀಡೆಯಾಗಿ ಪರಿಗಣನೆ ಮಾಡಿದೆ. ಅದರೊಂದಿಗೆ ಮೊಟ್ಟಮೊದಲ ಆವೃತ್ತಿಯ ಯುರೋಪಿಯನ್‌ ಸೆಕ್ಸ್‌ ಚಾಂಪಿಯನ್‌ಷಿಪ್‌ಗೆ ದಿನಾಂಕವನ್ನು ಕೂಡ ಪ್ರಕಟ ಮಾಡಿದೆ. ಇದೇ ಜೂನ್‌ 8 ರಂದು ಮೊದಲ ಆವೃತ್ತಿಯ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಹಲವಾರು ವಾರಗಳ ಕಾಲ ನಡೆಯಲಿದೆ. ಸ್ವೀಡಿಷ್‌ ಸೆಕ್ಸ್‌ ಫೆಡರೇಷನ್‌ ಈ ಟೂರ್ನಮೆಂಟ್‌ ಅನ್ನು ಆಯೋಜನೆ ಮಾಡಲಿದೆ. ಎಷ್ಟು ವಾರಗಳ ಕಾಲ ಈ ಚಾಂಪಿಯನ್‌ಷಿಪ್‌ ನಡೆಯಲಿದೆ ಎನ್ನುವ ಮಾಹಿತಿ ಸದ್ಯ ಅಪೂರ್ಣವಾಗಿದ್ದು, ಒಂದು ದಿನಕ್ಕೆ 6 ಗಂಟೆಗಳ ಕಾಲ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಬೇಕಿದೆ.  ಈ ಸಮಯದಲ್ಲಿ, ಸ್ಪರ್ಧಿಗಳು, ತಮ್ಮ ಲೈಂಗಿಕ ಕ್ರಿಯೆ ಅಥವಾ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸರಿಸುಮಾರು 45 ನಿಮಿಷಗಳಿಂದ ಒಂದು ಗಂಟೆಯವರೆಗಿನ ಸಮಯ ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ. ವರದಿಗಳ ಪ್ರಕಾರ, ಈಗಾಗಲೇ 20ಕ್ಕೂ ಅಧಿಕ ದೇಶದ ಸ್ಪರ್ಧಿಗಳು ಯುರೋಪಿಯನ್‌ ಸೆಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್‌ನ ವಿಜೇತರನ್ನು ಮೂರು ತೀರ್ಪುಗಾರರು ಮತ್ತು ಪ್ರೇಕ್ಷಕರ ರೇಟಿಂಗ್‌ಗಳ ಸಂಯೋಜನೆಯ ಮೂಲಕ ನಿರ್ಧರಿಸಲಾಗುತ್ತದೆ.

ಅಂತಿಮ ಮೌಲ್ಯಮಾಪನದ ಸಮಯದಲ್ಲಿ, ಪ್ರೇಕ್ಷಕರಿಂದ 70% ಮತಗಳನ್ನು ಪರಿಗಣಿಸಲಾಗುತ್ತದೆ, ಆದರೆ ಉಳಿದ 30% ತೀರ್ಪುಗಾರರ ಮತಗಳಿಂದ ಬರುತ್ತದೆ. ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್‌ನ ಸ್ಪರ್ಧಿಗಳು ಸೆಡಕ್ಷನ್, ಓರಲ್‌ ಸೆಕ್ಸ್‌, ಸಂಭೋಗ, ಸ್ಪರ್ಧಿಗಳ ವಸ್ತ್ರವಿನ್ಯಾಸ ಇತ್ಯಾದಿ ಸೇರಿದಂತೆ 16 ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ.


ಇಡೀ ಚಾಂಪಿಯನ್‌ಷಿಪ್‌ ಸ್ವೀಡನ್‌ನ ಗೊಥೆನ್‌ಬರ್ಗ್‌ನಲ್ಲಿ ನಡೆಯಲಿದೆ ಎಂದು ಸ್ವೀಡನ್‌ ಸೆಕ್ಸ್‌ ಫೆಡರೇಷನ್‌ ಮಾಹಿತಿ ನೀಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಫೆಡರೇಷನ್‌ನ ಅಧ್ಯಕ್ಷ ಡ್ರಾಗನ್‌ ಬ್ರಾಟಿಚ್‌, 'ಸೆಕ್ಸ್‌ಅನ್ನು ಕ್ರೀಡೆಯಾಗಿ ಪರಿಗಣನೆ ಮಾಡಿರುವುದು ಬಹಳ ಖುಷಿಯ ವಿಚಾರ. ಇದು ಮಾನಸಿಕ ಹಾಗೂ ದೈಹಿಕ ಸುಸ್ಥಿತಿಗೆ ಕಾರಣವಾಗಿತ್ತದೆ. ಸ್ಪರ್ಧಿಗಳು ತಮ್ಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ತರಬೇತಿಯೂ ಅಗತ್ಯವಿದೆ' ಎಂದು ತಿಳಿಸಿದ್ದಾರೆ.

ಪ್ರತಿ ವಿಭಾಗದಲ್ಲಿ, ಟೂರ್ನಿಯಲ್ಲಿ ಭಾಗವಹಿಸುವವರು 5 ರಿಂದ 10 ಅಂಕಗಳನ್ನು ಪಡೆಯಲಿದ್ದಾರೆ,  ಸಾರ್ವಜನಿಕರು ಮತ್ತು ಮೂರು ಜಡ್ಜ್‌ಗಳ ಸಮಿತಿಯಿಂದ ಅಂಕಗಳನ್ನು ನೀಡಲಾಗುತ್ತದೆ. ಟೂರ್ನಿಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ, ಅತೀ ಕಡಿಮೆ ಅಂಕ ಪಡೆಯುವವರು ಪ್ರತಿ ಹಂತದಿಂದ ಎಲಿಮಿನೇಟ್‌ ಆಗುತ್ತಾರೆ. ಲೈಂಗಿಕ ದೃಷ್ಟಿಕೋನ ಅಥವಾ ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಇದರಲ್ಲಿ ಸ್ಪರ್ಧೆ ಮಾಡಲಿದ್ದಾರೆ. "ಲೈಂಗಿಕ ದೃಷ್ಟಿಕೋನವು ಯುರೋಪಿಯನ್ ರಾಷ್ಟ್ರಗಳು ಅಳವಡಿಸಿಕೊಳ್ಳುವ ಕ್ರೀಡಾ ತಂತ್ರಗಳ ಭಾಗವಾಗಬಹುದು" ಎಂದು ಸ್ಪರ್ಧೆಯ ಸಂಘಟಕರು ಹೇಳಿದ್ದಾರೆ.

ಸೇಫ್‌ ಸೆಕ್ಸ್‌ಗಲ್ಲ, ಅಮಲೇರಿಸಿಕೊಳ್ಳೋಕೆ ಕಾಂಡೋಮ್‌!

"ಜನರು ಬಯಸಿದ ಫಲಿತಾಂಶಗಳನ್ನು ಸಾಧಿಸಲು, ಅವರು ಇತರ ಯಾವುದೇ ಕ್ರೀಡೆಯಂತೆ ತರಬೇತಿ ಪಡೆಯಬೇಕು. ಆದ್ದರಿಂದ, ಅವರ ಮುಂದಿನ ತಾರ್ಕಿಕ ಹೆಜ್ಜೆ ಇದರಲ್ಲೂ ಇಡಲು ಸಾಧ್ಯವಾಗಲಿದೆ' ಎಂದು ಬ್ರಾಟಿಚ್ ಹೇಳಿದ್ದಾರೆ. ಬಹುಶಃ ಜಗತ್ತಿನಲ್ಲಿರುವ ಏಕೈಕ ಕ್ರೀಡೆ ಇದಾಗಿದ್ದು, ಎದುರಾಳಿ ಪಡೆಯುವ ಸಂತೋಷದ ಪ್ರಮಾಣದಲ್ಲಿ ಅಂಕ ನಿಗದಿಯಾಗಲಿದೆ. ಎದುರಾಳಿಯು ಸಂತುಷ್ಟನಾಗದೇ ಇದ್ದಲ್ಲಿ ಅಂಕವನ್ನು ಕಳೆದುಕೊಳ್ಳುತ್ತಾನೆ. ಇದು ಅತ್ಯಂತ ಕ್ರಾಂತಿಕಾರಿ ಕ್ರೀಡೆಯಾಗಿದ್ದು, ನಮ್ಮ ಜಗತ್ತಿಗೆ ಬಹಳ ವಿಶಿಷ್ಟವಾಗಿದೆ ಎಂದು ಬ್ರಾಟಿಚ್‌ ತಿಳಿಸಿದ್ದಾರೆ.

ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್‌ ಹೈಕೋರ್ಟ್‌!

Follow Us:
Download App:
  • android
  • ios