ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್ ಹೈಕೋರ್ಟ್!
ಪತ್ನಿ ನನ್ನೊಂದಿಗೆ ಸೆಕ್ಸ್ ಸಂಬಂಧ ಹೊಂದಲು ನಿರಾಕರಿಸುತ್ತಿದ್ದಾಳೆ. ಜೊತೆಯಾಗಿ ಮಲಗದೇ ದೀರ್ಘಕಾಲವಾಯಿತು ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಅಲಹಾಬಾದ್ ಹೈಕೋರ್ಟ್ ಡೈವೋರ್ಸ್‌ಗೆ ಅಂಗೀಕರಿಸಿದೆ. ದೀರ್ಘಕಾಲದವರೆಗೆ ಸಂಗಾತಿಗೆ ಸೆಕ್ಸ್‌ಗೆ ನಿರಾಕರಿಸುವುದು ಮಾನಸಿಕ ಕ್ರೌರ್ಯ ಎಂದು ಕೋರ್ಟ್ ಈ ವೇಳೆ ಹೇಳಿದೆ.
ಲಕ್ನೋ (ಮೇ.25): ಸೂಕ್ತ ಕಾರಣಗಳಿಲ್ಲದೆ ಸಂಗಾತಿಗೆ ದೀರ್ಘಕಾಲ ಲೈಂಗಿಕ ಸಂಬಂಧ ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿ ನನ್ನೊಂದಿಗೆ ಲೈಂಗಿಕವಾಗಿ ಬೆರೆಯದೇ ಬಹಳ ವರ್ಷಗಳಾಯಿತು. ನನ್ನೊಂದಿಗೆ ಸಂಬಂಧ ಹೊಂದಲು ನಿರಾಕರಿಸುತ್ತಿದ್ದಾಳೆ ಈ ಕಾರಣಕ್ಕಾಗಿ ನನಗೆ ವಿಚ್ಛೇದನ ನೀಡಬೇಕು ಎಂದು ವ್ಯಕ್ತಿಯೊಬ್ಬ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುನೀತ್ ಕುಮಾರ್ ಹಾಗೂ ರಾಜೇಂದ್ರ ಕುಮಾರ್, ಈ ಮದುವೆಯಿಂದ ಮಾನಸಿಕವಾಗಿ ಕ್ರೌರ್ಯವಾದಂತಾಗಿದೆ ಎನ್ನುವ ತೀರ್ಪು ನೀಡಿ ವಿಚ್ಛೇದನಕ್ಕೆ ಅನುಮತಿ ನೀಡಿದ್ದಾರೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ರ ಅಡಿಯಲ್ಲಿ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಪತಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಮದುವೆಯಾಗಿ ದೀರ್ಘಕಾಲವಾದರೂ, ಸಂಗಾತಿಗೆ ಲೈಂಗಿಕ ಸಂಬಂಧ ಅನುಮತಿ ನೀಡದೇ ಇರುವುದು, ಸೂಕ್ತ ಕಾರಣವೇ ಇಲ್ಲದೆ ಸಂಭೋಗದಲ್ಲಿ ಭಾಗಿಯಾಗದೇ ಇರುವುದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿರುತ್ತದೆ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು. ವ್ಯಕ್ತಿಯೊಂದಿಗೆ ಮದುವೆಯ ಬಂದ ಹೊಂದಲು ಆತನೊಂದಿಗೆ ಜೀವನವನ್ನು ಮುಂದುವರಿಸಲು ಅಲ್ಲಿ ಯಾವುದೇ ಸ್ಪಷ್ಟ ದೃಷ್ಟಿಕೋನಗಳೇ ಕಾಣೋದಿಲ್ಲ. ಮದುವೆಯ ಬಂಧಕ್ಕೆ ಇಬ್ಬರನ್ನೂ ಶಾಶ್ವತವಾಗಿ ಬಂಧಿಸಲು ಪ್ರಯತ್ನಿಸುವ ಮೂಲಕ ಏನನ್ನೂ ಸಾಬೀತು ಮಾಡಲಾಗುವುದಿಲ್ಲ. ಬದಲಾಗಿ ಅವರ ಏಳ್ಗೆಯನ್ನು ನಿಲ್ಲಿಸಿದಂತಾಗುತ್ತದೆ' ಎಂದು ಕೋರ್ಟ್ ತನ್ನ ತೀರ್ಪುನಲ್ಲಿ ಹೇಳಿದೆ.
ಮದುವೆಯಾದ ಬಳಿಕ ಪತ್ನಿಯ ವರ್ತನೆಯಲ್ಲಿ ತೀವ್ರ ತರದ ಬದಲಾವಣೆಗಳಾಗಿದೆ. ಆಕೆ ತನ್ನೊಂದಿಗೆ ಸಹಬಾಳ್ವೆ ನಡೆಸಲು ನಿರಾಕರಿಸಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಗಂಡ ಹೇಳಿರುವ ಪ್ರಕಾರ, ಇವರಿಬ್ಬರೂ ಕೆಲ ಕಾಲ ಒಂದೇ ಮನೆಯಲ್ಲಿ ವಾಸವಿದ್ದರೂ, ಬಳಿಕ ಪತ್ನಿ ಸ್ವಯಂ ಪ್ರೇರಣೆಯಿಂದ ಕೆಲ ಸಮಯದ ಬಳಿಕ ತನ್ನ ಹೆತ್ತವರ ಮನೆಯಲ್ಲಿ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದಾಳೆ ಎಂದು ತಿಳಿಸಿದ್ದಾರೆ.
ಮದುವೆಯಾದ ಆರು ತಿಂಗಳ ನಂತರ, ಪತಿ ತನ್ನ ವೈವಾಹಿಕ ಜೀವನದ ಜವಾಬ್ದಾರಿಗಳನ್ನು ಪೂರೈಸಲು ವೈವಾಹಿಕ ಮನೆಗೆ ಹಿಂತಿರುಗುವಂತೆ ಮನವೊಲಿಸಲು ಪ್ರಯತ್ನಿಸಿದಾಗ, ಆಕೆ ಬರಲು ನಿರಾಕರಿಸಿದ್ದಾರೆ. 1994ರ ಜುಲೈನಲ್ಲಿ ಗ್ರಾಮದಲ್ಲಿ ನಡೆದ ಪಂಚಾಯ್ತಿ ಮೂಲಕ ಪತಿ ಪತ್ನಿಗೆ ₹22,000 ಶಾಶ್ವತ ಜೀವನಾಂಶ ನೀಡಿದ ನಂತರ ದಂಪತಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಪತ್ನಿ ಮರು ಮದುವೆಯಾಗಿದ್ದಾಳೆ. ಇದರ ಬೆನ್ನಲ್ಲಿಯೇ ಪತಿ ಮಾನಸಿಕ ಕ್ರೌರ್ಯ ಹಾಗೂ ಪತ್ನಿ ದೀರ್ಘಕಾಲ ತೊರೆದು ಹೋಗಿರುವ ಕಾರಣ ವಿಚ್ಛೇದನವನ್ನು ಕೋರಿದ್ದರು. ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಸಾಕಷ್ಟು ಸಮನ್ಸ್ ಜಾರಿ ಮಾಡಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಪತ್ರಿಕೆಯಲ್ಲಿ ಈ ಕುರಿತಾಗಿ ಜಾಹೀರಾತು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.
ಕೋರ್ಟ್ ಹಾಲ್‌ನಲ್ಲಿ ಕುಳಿತು ಮಹಿಳಾ ಜಡ್ಜ್‌ಗೆ ಗುರಾಯಿಸುತ್ತಿದ್ದ ವಕೀಲನಿಗೆ ನೋಟಿಸ್!
ಆದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯ ಅರ್ಜಿಯನ್ನು ವಜಾ ಮಾಡಲಾಗಿತ್ತು. ಈ ಮದುವೆಯಲ್ಲಿ ಯಾವುದೇ ರೀತಿಯ ಕ್ರೌರ್ಯ ಇಲ್ಲ ಎನ್ನುವ ಕಾರಣ ನೀಡಿದ ಅರ್ಜಿಯನ್ನು ವಜಾ ಮಾಡಿತ್ತು. ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರ, ಪತಿಯ ಪ್ರಕರಣವನ್ನು ವಜಾಗೊಳಿಸುವಾಗ ಕೌಟುಂಬಿಕ ನ್ಯಾಯಾಲಯವು ಹೈಪರ್-ಟೆಕ್ನಿಕಲ್ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಹೈಕೋರ್ಟ್ ಟೀಕೆ ಮಾಡಿದೆ. ಹೀಗಾಗಿ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯವನ್ನು ರದ್ದುಗೊಳಿಸಿತು ಮತ್ತು ಮೇಲ್ಮನವಿದಾರರಿಗೆ ವಿಚ್ಛೇದನದ ತೀರ್ಪು ನೀಡಿತು. ಅರ್ಜಿದಾರರನ್ನು ವಕೀಲರಾದ ಎಂ ಇಸ್ಲಾಂ, ಅಹ್ಮದ್ ಸಯೀದ್ ಮತ್ತು ಅಜೀಂ ಅಹ್ಮದ್ ಕಾಜ್ಮಿ ಪ್ರತಿನಿಧಿಸಿದ್ದರು.
ಮಗುವಾದ ನಂತರವೂ ಮಹಿಳಾ ಉದ್ಯೋಗಿ ಹೆರಿಗೆ ರಜೆ ತೆಗೆದುಕೊಳ್ಳಬಹುದು, ಹೈಕೋರ್ಟ್ ಮಹತ್ವದ ತೀರ್ಪು