ದೈನಂದಿನ ಒತ್ತಡದಲ್ಲಿ ಲೈಂಗಿಕ ಆಸಕ್ತಿಯೇ ಬತ್ತಿ ಹೋಗಿದೆ ಎನ್ನುವುದು ಬಹಳ ಜನರ ಕಂಪ್ಲೇಂಟು. ಆದರೆ, ಎಂತಹ ಒತ್ತಡದಲ್ಲೂ ಸಂಪೂರ್ಣ ಸಸ್ಯಾಹಾರಿಯಾಗಿದ್ದರೆ ಸೆಕ್ಸ್ ಉತ್ಸಾಹ ಬತ್ತುವುದಿಲ್ಲ. 

ಸುಖೀ ಬದುಕಿಗೆ ಸಕ್ರಿಯ ಲೈಂಗಿಕ ಜೀವನದ ಕೊಡುಗೆ ಅಮೂಲ್ಯ. ಇಂದಿನ ಒತ್ತಡಮಯ ಬದುಕಿನಲ್ಲಿ ಅನೇಕರು ಲೈಂಗಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಔಷಧಗಳ ಮೊರೆ ಹೋಗುತ್ತಾರೆ. ಶಕ್ತಿವರ್ಧಕ ಟಾನಿಕ್ ಗಳನ್ನು ಸೇವನೆ ಮಾಡುತ್ತಾರೆ. ಆದರೆ, ಸೆಕ್ಸ್ (Sex) ಕುರಿತಾಗಿ ಬ್ರಿಟನ್ (Bfritain) ನ ಪತ್ರಕರ್ತೆಯೊಬ್ಬರ ಅನುಭವ ಕೇಳಿದರೆ ಎಲ್ಲರೂ ಅವರಂತೆಯೇ ಜೀವನಶೈಲಿ (LifeStyle) ರೂಢಿಸಿಕೊಳ್ಳುವುದು ಗ್ಯಾರೆಂಟಿ!

ಬ್ರಿಟನ್ ನ ಖ್ಯಾತ ಪತ್ರಿಕೆ “ದ ಸನ್’ (The Sun) ನಲ್ಲಿ ಪತ್ರಕರ್ತೆಯಾಗಿರುವ ಜಾರ್ಜೆಟ್ ಕಲಿ (Georgette Culley) ಎಂಬಾಕೆ ಇತ್ತೀಚೆಗೆ ತಮ್ಮ ಸೆಕ್ಸ್ ಬದುಕು ಯಾವುದರಿಂದ ಉತ್ತಮವಾಯಿತು, ಇದರಿಂದಾಗಿ, ತಮ್ಮ ಹಾಗೂ ಬಾಯ್ ಫ್ರೆಂಡ್ ನಡುವಿನ ಸಂಬಂಧ ಹೇಗೆ ಗಾಢವಾಗುತ್ತ ಸಾಗಿತು ಎನ್ನುವುದನ್ನು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಅವರ ಲೈಂಗಿಕಾಸಕ್ತಿ ಯಾವುದರಿಂದ ಹೆಚ್ಚು ಜಾಗೃತಗೊಂಡಿತಂತೆ ಗೊತ್ತಾ? ಪಕ್ಕಾ ಸಸ್ಯಾಹಾರ(Vegan Food)ದಿಂದ!

ಅಚ್ಚರಿಯಾಗಬಹುದು. ಸಸ್ಯಾಹಾರದ ಕುರಿತು ಬಹಳಷ್ಟು ಕಲ್ಪನೆಗಳಿವೆ. ಸಸ್ಯಾಹಾರಿಗಳಿಗೆ ಲೈಂಗಿಕಾಸಕ್ತಿ ಕಡಿಮೆ ಎನ್ನುವ ಭಾವನೆಯೇ ಎಲ್ಲೆಡೆ ಸಾಮಾನ್ಯವಾಗಿದೆ. ಮಾಂಸಾಹಾರ (Non-Vegetarian) ತಿನ್ನದಿರುವ ಸ್ನೇಹಿತರನ್ನು “ಅವನ ಕೈಲಿ ಏನಾಗುತ್ತೆ? ಪುಳಿಚಾರು’ ಎಂದು ಲೇವಡಿ ಮಾಡುವುದನ್ನೂ ಕೇಳಿರುತ್ತೇವೆ. ಆದರೆ, ಜಾರ್ಜೆಟ್, “ಸಸ್ಯಾಹಾರದಿಂದ ಲೈಂಗಿಕ ಶಕ್ತಿ ಜಾಗೃತಗೊಳ್ಳುತ್ತದೆ’ ಎಂದಿದ್ದಾರೆ. ಅವರಿಗಂತೂ ಸ್ವತಃ ಆ ಅನುಭವವಾಗಿದ್ದು, ಅದನ್ನವರು ಹಂಚಿಕೊಂಡಿದ್ದಾರೆ.

ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

ಜಾರ್ಜೆಟ್ ಮಾಂಸಾಹಾರ ಸೇವನೆ ಮಾಡಿದ್ದ ಸಮಯದಲ್ಲಿ ಲೈಂಗಿಕ ಆಸಕ್ತಿಯೇ ಬತ್ತಿ ಹೋಗಿ ಮಲಗಿ ನಿದ್ರೆ (Sleep_ ಮಾಡಿದರೆ ಸಾಕಪ್ಪಾ ಸಾಕು ಎನಿಸಿತ್ತು. ಹೀಗೆಯೇ ಹಲವು ಬಾರಿ ಪುನರಾವರ್ತನೆಯಾಗಿ ಇಬ್ಬರ ನಡುವೆ ಅಸಮಾಧಾನವೂ ಮೂಡಿತ್ತು. ಆದರೆ, ಜಾರ್ಜೆಟ್ ಒಮ್ಮೆ ಸಸ್ಯಾಹಾರ ಸೇವನೆ ಮಾಡಿದ್ದರು. ಅಂದು ಅವರಿಗೆ ನಿದ್ರೆ ಹಾಗೂ ಒಂದು ರೀತಿಯ ಮೈಭಾರ ಹತ್ತಿರ ಸುಳಿಯಲಿಲ್ಲ. ಇದರಿಂದಾಗಿ ಲೈಂಗಿಕಾಸಕ್ತಿ ನಶಿಸದೆ ಕ್ರಿಯಾಶೀಲವಾಗಿರಲು ಸಾಧ್ಯವಾಯಿತು. ಹೀಗಾಗಿ, ಜಾರ್ಜೆಟ್ ಈಗ ಕೇವಲ ಶಾಕಾಹಾರಿಯಾಗಿ ಬದಲಾಗಿದ್ದಾರೆ. 
ಅವರೇ ಹೇಳಿಕೊಂಡಿರುವಂತೆ, 'ಕಳೆದ ಆರು ತಿಂಗಳಿಂದ ನಾನು ಸಂಪೂರ್ಣ ಶಾಕಾಹಾರಿಯಾಗಿ ಬದಲಾಗಿದ್ದೇನೆ. ನನ್ನ ಸೊಂಟದ ಸುತ್ತ ಇರುವ ಬೊಜ್ಜು ಕರಗಿದೆ. ದೇಹದ ಆಲಸ್ಯ ತೊಲಗಿ ಉತ್ಸಾಹ ಮೂಡಿದೆ. ಅಷ್ಟೇ ಅಲ್ಲ. ಸೆಕ್ಸ್ ಆಸಕ್ತಿಯೂ ವೃದ್ಧಿಸಿದೆ. ಈಗ ನಾವು ಮೊದಲಿಗಿಂತ ಹೆಚ್ಚು ಸಮಯ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇವೆ. ನನ್ನ ಬಾಯ್ ಫ್ರೆಂಡ್ ನನ್ನನ್ನು ಮೊದಲಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾನೆ’. 

ಖುಷಿಯ ಹಾರ್ಮೋನ್ (Harmone) ಹೆಚ್ಚಳ

ಇದು ಕೇವಲ ಅಭಿಪ್ರಾಯವಲ್ಲ, ಇದರ ಹಿಂದೆ ವಿಜ್ಞಾನವೂ ಇದೆ. ಹೆಚ್ಚಿನ ಪ್ರಮಾಣದಲ್ಲಿ ಶಾಕಾಹಾರವನ್ನೇ ಸೇವನೆ ಮಾಡುವುದರಿಂದ ರಕ್ತಸಂಚಾರ ಸುಗಮವಾಗುತ್ತದೆ. ದೇಹದ ಆಲಸ್ಯ ಕಡಿಮೆಯಾಗಲು ಹಾಗೂ ಲೈಂಗಿಕಾಸಕ್ತಿ ಹೆಚ್ಚಲು ಇದು ಕಾರಣವಾಗುತ್ತದೆ. ಹಸಿರು ಸೊಪ್ಪು ಹಾಗೂ ತರಕಾರಿ, ಕೆಂಪು ಮೆಣಸಿನಕಾಯಿ, ಒಣಹಣ್ಣುಗಳಲ್ಲಿ ವಿಟಮಿನ್ ಬಿ, ಝಿಂಕ್ ಅತ್ಯುತ್ತಮ ಪ್ರಮಾಣದಲ್ಲಿರುತ್ತವೆ. ಇವು ಟೆಸ್ಟಾಸ್ಟಿರಾನ್ ಹಾರ್ಮೋನ್ ಸ್ರವಿಕೆಯನ್ನು ಉತ್ತೇಜಿಸುತ್ತವೆ. ಇದು ಖುಷಿ ನೀಡುವ ಹಾರ್ಮೋನ್ ಆಗಿರುವುದರಿಂದ ಸೆಕ್ಸ್ ಬಯಕೆಯೂ ಹೆಚ್ಚುತ್ತದೆ.

ಇದಕ್ಕೆ ಬದಲಾಗಿ, ಮಾಂಸ(Meat), ಮೊಟ್ಟೆ (Egg) ಹಾಗೂ ಡೈರಿ (Dairy) ಉತ್ಪನ್ನಗಳಲ್ಲಿ ಕೊಬ್ಬು ಮತ್ತು ಸ್ಯಾಚುರೇಟೆಡ್ (Saturated) ಪ್ರಾಣಿಜನ್ಯ ಕೊಬ್ಬು ಹೆಚ್ಚಾಗಿರುವುದರಿಂದ ರಕ್ತದ ಪರಿಚಲನೆಗೆ ಅಷ್ಟು ಹಿತವಾಗುವುದಿಲ್ಲ. ಸೊಂಟದ ಭಾಗಕ್ಕೆ ರಕ್ತದ ಹರಿವಿನ ಕೊರತೆ ಉಂಟಾಗುತ್ತದೆ. ಪರಿಣಾಮವಾಗಿ, ಪುರುಷರು ನಪುಂಸಕರೂ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಜಾರ್ಜೆಟ್.

ತಪ್ಪಿಸಲು ಆಯುರ್ವೇದ ವಿಧಾನಗಳು..

ನಿಮಗೆ ಶೀಘ್ರ ಪರಿಣಾಮ ಬೇಕೆಂದಲ್ಲಿ ದಿನವೂ ವ್ಯಾಯಾಮ ಮಾಡಿ ಮತ್ತು ಫ್ಲವೊನಾಯ್ಡ್ ಭರಿತ ಆಹಾರ ತೆಗೆದುಕೊಳ್ಳಿ. ಸ್ಟ್ರಾಬೆರಿ, ಬ್ಲೂಬೆರಿ ಹಾಗೂ ಸೇಬಿನ ಸೇವನೆ ಹೆಚ್ಚಿಸಿ ಎಂದೂ ಅವರು ಸಲಹೆ ನೀಡಿದ್ದಾರೆ. ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಫ್ಲವೊನಾಯ್ಡ್ ಭರಿತ (flavonoid) ಆಹಾರದಿಂದ ಪುರುಷರ ನಿಮಿರುವ ಸಮಸ್ಯೆಯ ಅಪಾಯ ಶೇ.20ರಷ್ಟು ಕಡಿಮೆಯಾಗುತ್ತದೆ.