Asianet Suvarna News Asianet Suvarna News

ಪ್ರೀತಿ ಕುರುಡು ಏಕೆ ಎಂಬುದಕ್ಕೆ ಉತ್ತರ ಕಂಡುಕೊಂಡ ವಿಜ್ಞಾನಿಗಳು!

ಯಾರಿಗೆ ಯಾರೊಂದಿಗೆ ಯಾವಾಗ ಹೇಗೆ ಬೇಕಾದರೂ ಲವ್ ಆಗಬಹುದು. ಮೂರನೆಯವರಿಗೆ ಅಲ್ಲಿ ಲಾಜಿಕ್ ಮಿಸ್ ಆದಂತೆ ಕಾಣಿಸಬಹುದು. ಆದರೆ, ಪ್ರೀತಿಯಲ್ಲಿರುವವರಿಗೆ ಈ ಲಾಜಿಕ್ ತಿಳಿಯುವುದಿಲ್ಲ. ಅದಕ್ಕೇ ಲವ್ ಈಸ್ ಬ್ಲೈಂಡ್ ಎನ್ನುವುದು. 

Scientists get the Answer To Why Love Is Blind skr
Author
First Published Jan 10, 2024, 3:54 PM IST

ಕೆಲವೊಮ್ಮೆ ರಾಜಕುಮಾರಿಗೆ ಭಿಕ್ಷುಕನ ಮೇಲೆ ಲವ್ ಆಗಬಹುದು, 40ರ ಮಹಿಳೆಗೆ 20ರ ಹುಡುಗನ ಮೇಲೆ ಪ್ರೀತಿಯಾಗಬಹುದು. ಯಾರಿಗೆ ಯಾರೊಂದಿಗೆ ಯಾವಾಗ ಹೇಗೆ ಬೇಕಾದರೂ ಲವ್ ಆಗಬಹುದು. ಪ್ರೀತಿಗೆ ಜಾತಿ, ವಯಸ್ಸು, ಹಣ, ಭವಿಷ್ಯ ಯಾವುದೂ ಕಾಣಿಸುವುದಿಲ್ಲ.  ಪ್ರೀತಿಯಲ್ಲಿರುವವರಿಗೆ ಲಾಜಿಕ್ ತಿಳಿಯುವುದಿಲ್ಲ. ಅದಕ್ಕೇ ಲವ್ ಈಸ್ ಬ್ಲೈಂಡ್ ಎನ್ನುವುದು. 

ಪ್ರೀತಿಯಲ್ಲಿರುವವರ ವರ್ತನೆಯೇ ವಿಶೇಷ. ಅವರು ಸಾಮಾನ್ಯವಾಗಿದ್ದುದಕ್ಕಿಂತ ಭಿನ್ನ ವ್ಯಕ್ತಿತ್ವದವರಾಗಿ ಕಾಣಿಸುತ್ತಾರೆ. ಅವರು ಮತ್ತೊಂದು ಜಗತ್ತಿನಲ್ಲೇ ವಿಹರಿಸುತ್ತಿರುತ್ತಾರೆ. ಪುರಾತನ ಗ್ರೀಕರು ಪ್ರೀತಿಯ ಕುರಿತಾಗಿ ಸಾಕಷ್ಟು ತತ್ತ್ವಚಿಂತನೆ ಮಾಡಿದ್ದಾರೆ. ಇದೊಂದು ಅದ್ಭುತ ಅನುಭವ ಎಂದು ಗುರುತಿಸಿದ್ದಾರೆ. ಇದುವರೆಗೂ ನಮಗೆ ಸಿಕ್ಕ ಅತ್ಯಂತ ಹಳೆಯ ಕವಿತೆ ವಾಸ್ತವವಾಗಿ ಸುಮಾರು 2000 BC ಯ ಪ್ರೇಮ ಕವಿತೆಯಾಗಿದೆ. ಅಂದರೆ, ಪ್ರೇಮವೆಂಬುದು ಬಹಳ ವಿಶೇಷವೆಂಬುದನ್ನು ಹಿಂದಿನಿಂದಲೂ ಕಂಡುಕೊಳ್ಳಲಾಗಿದೆ. 

ಬಿಲಿಯನೇರ್ ಆಗಿದ್ರೂ ಇನ್ಫಿ ಮೂರ್ತಿ ವರಿಸಲು ಸುಧಾಮೂರ್ತಿ ಇಷ್ಟೆಲ್ಲಾ ಕಂಡೀಷನ್ಸ್‌ ಹಾಕಿದ್ರಂತೆ!

ಪ್ರೀತಿ ಕುರುಡು ಎಂಬುದು ನಿಜವೇ ಎಂದು ಒಪ್ಪಿಕೊಳ್ಳುವ ವಿಜ್ಞಾನಿಗಳು, ಅದು ಏಕೆ ಎಂಬುದನ್ನು ಕೂಡಾ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವು ಪ್ರೀತಿ ಏಕೆ ಕುರುಡು ಎಂಬ ವಿಷಯವಾಗಿ ಅಧ್ಯಯನ ನಡೆಸಿ ಉತ್ತರ ಪಡೆದಿದ್ದಾರೆ. 

ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ (ANU), ಕ್ಯಾನ್‌ಬೆರಾ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಆ ಮೊದಲ ಪ್ರಣಯದಲ್ಲಿ ನಮ್ಮ ಪ್ರೀತಿಪಾತ್ರರನ್ನು ಸಿಂಹಾಸನದ ಮೇಲಿಟ್ಟು ಮೆರೆಸಲು ಮೆದುಳಿನ ಒಂದು ಭಾಗವು ಹೇಗೆ ಕಾರಣವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಬಿಹೇವಿಯರಲ್ ಸೈನ್ಸಸ್ ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಅಧ್ಯಯನಕ್ಕಾಗಿ ತಂಡವು 'ಪ್ರೀತಿಯಲ್ಲಿ' ಬಿದ್ದ 1,556 ಯುವ ವಯಸ್ಕರನ್ನು ಸಮೀಕ್ಷೆ ಮಾಡಿದೆ. ನಾವು ಪ್ರೀತಿಸುತ್ತಿರುವಾಗ, ನಮ್ಮ ಮೆದುಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಇದು ನಮ್ಮ ಪ್ರೀತಿಯನ್ನು ನಮ್ಮ ಜೀವನದ ಕೇಂದ್ರವನ್ನಾಗಿ ಮಾಡುತ್ತದೆ ಎಂದು ಅವರು ಕಂಡುಕೊಂಡರು. 

ಅವರ ಪ್ರಕಾರ, ಪ್ರಣಯ ಪ್ರೇಮವು ಮೆದುಳನ್ನು ಬದಲಾಯಿಸುತ್ತದೆ, ಪ್ರೀತಿಯಲ್ಲಿ ಬೀಳುವಾಗ ಮೆದುಳು ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದೇ ಪ್ರೀತಿಯ ಆರಂಭದಲ್ಲಿ ನಾವು ಅನುಭವಿಸುವ ಉತ್ಕಟ ಉತ್ಸಾಹಕ್ಕೆ ಕಾರಣ. 

ಮಾನವನು ಮಂಗನಿಂದ ರೂಪಾಂತರ ಹೊಂದಿದ ಬಳಿಕ, ಐದು ಮಿಲಿಯನ್ ವರ್ಷಗಳ ಹಿಂದೆ ಮೊದಲ ಬಾರಿಗೆ ಪ್ರಣಯ ಪ್ರೀತಿಯು ಆರಂಭವಾಯಿತು ಎನ್ನುತ್ತಾರೆ ಈ ಅಧ್ಯಯನದ ಪ್ರಮುಖ ಸಂಶೋಧಕ ಮತ್ತು ಪಿಎಚ್‌ಡಿ ವಿದ್ಯಾರ್ಥಿ ಆಡಮ್ ಬೋಡ್.

ಪ್ರೀತಿ, ಮಮಕಾರ ತೋರೋ ಅಮ್ಮ, ಬೈತಾಳೆ, ಮಕ್ಕಳು ಏನ್ ಮಾಡಿದ್ರೂ ಬೆನ್ನಿಗಿರ್ತಾಳೆ; ಅಮ್ಮನೆಂದ್ರೆ ವೈವಿಧ್ಯ!

'ಪ್ರಣಯ ಪ್ರೇಮದಲ್ಲಿ ಆಕ್ಸಿಟೋಸಿನ್ ವಹಿಸುವ ಪಾತ್ರವನ್ನು ನಾವು ತಿಳಿದಿದ್ದೇವೆ. ನಾವು ಪ್ರೀತಿಪಾತ್ರರ ಜೊತೆ ಸಂವಹನ ನಡೆಸಿದಾಗ ನಮ್ಮ ನರಮಂಡಲ ಮತ್ತು ರಕ್ತಪ್ರವಾಹದಾದ್ಯಂತ ಅದರ ಅಲೆಗಳು ಪರಿಚಲನೆಗೊಳ್ಳುತ್ತವೆ' ಎಂದು ವಾರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಡಾ ಕವನಾಗ್ ಹೇಳುತ್ತಾರೆ.

'ಆದರೆ, ಆಕ್ಸಿಟೋಸಿನ್ ಡೋಪಮೈನ್‌ನೊಂದಿಗೆ ಸಂಯೋಜಿಸುವ ಕಾರಣದಿಂದಾಗಿ ಪ್ರೀತಿಪಾತ್ರರು ನಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ' ಎಂದು ಅಧ್ಯಯನ ಕಂಡುಕೊಂಡಿದೆ.

Follow Us:
Download App:
  • android
  • ios