ಸಾರಾ ತೆಂಡೂಲ್ಕರ್ ಡೇಟಿಂಗ್, ಮದುವೆ ಕುರಿತು ಸಾಕಷ್ಟು ಬಾರಿ ಚರ್ಚೆಯಾಗಿದೆ. ಈ ಬಾರಿ ಅತ್ತಿಗೆ ಸಾನಿಯಾ ಚಂದೋಕ್ ಮದುವೆ ಸುಳಿವು ನೀಡಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಸಚಿನ್ ಈ ವಿಚಾರ ಮಾತನಾಡುವುದು ಬೇಡ, ಇಲ್ಲಿಗೆ ಬಿಡಿ ಎಂದು ಸೂಚಿಸಿದ್ದಾರೆ. ಸಾರಾ ಹಂಚಿಕೊಂಡ ವಿಡಿಯೋದಲ್ಲಿದೆ ಸುಳಿವು.
ಮುಂಬೈ (ನ.09) ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆಯಾಗುತ್ತಿದ್ದರಾ? ಹುಡುಗ ಯಾರು? ಇದೀಗ ಮತ್ತೆ ಈ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈಗಾಲೇ ಹಲವು ಬಾರಿ ಸಾರಾ ಮದುವೆ, ಡೇಟಿಂಗ್, ರಿಲೇಶನ್ಶಿಪ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಸಚಿನ್ ಕುಟುಂಬಸ್ಥರೇ ಮದುವೆ ಸುಳಿವು ನೀಡಿದ್ದಾರೆ. ಸಾರಾ ತೆಂಡೂಲ್ಕರ್ ಹಂಚಿಕೊಂಡ ವಿಡಿಯೋದಲ್ಲಿ ಈ ಸುಳಿವು ಸಿಕ್ಕಿದೆ. ಸಾರಾ ತೆಂಡೂಲ್ಕರ್ ಅತ್ತಿಗೆ ಸಾನಿಯಾ ಚಂದೋಕ್ ಈ ಕುರಿತು ಸುಳಿವು ನೀಡಿದ್ದಾರೆ. ಸಾರಾ ಹುಡುಗನ ಅಡ್ರೆಸ್ ರಿವೀಲ್ ಮಾಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.
ಸಚಿನ್ ಹಾಗೂ ಸಾನಿಯಾ ಮಾತಿನಲ್ಲಿದೆ ಸುಳಿವು
ಸಾರಾ ತೆಂಡೂಲ್ಕರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಆದರೆ ವಿಳಂಬವಾಗಿ ಪೋಸ್ಟ್ ಮಾಡಿದ್ದಾರೆ. ಸಾರಾ ತೆಂಡೂಲ್ಕರ್ ಹುಟ್ಟಹಬ್ಬಕ್ಕೆ ಕುಟುಂಬಸ್ಥರು ಒಬ್ಬೊಬ್ಬರಾಗಿ ಬಂದು ಕೇಕ್ ಮೇಲೆ ದೀಪದ ಕಡ್ಡಿ ಬೆಳಗಿ ಶುಭಕೋರುತ್ತಾ ಇಟ್ಟಿದ್ದಾರೆ. ಸಾರಾ ತೆಂಡೂಲ್ಕರ್ ಎಲ್ಲಾ ಕನಸುಗಳು ನನಸಾಗಲಿ, ಸಾರಾ ತೆಂಡೂಲ್ಕರ್ ಉದ್ಯಮ, ಹೊಸ ಕಚೇರಿಯಲ್ಲಿ ಯಶಸ್ಸು ಸಿಗಲಿ ಎಂದು ಒಬ್ಬೊಬ್ಬರೇ ಹಾರೈಸಿದ್ದಾರೆ. ಇದರಲ್ಲಿ ಸಾರಾ ತೆಂಡೂಲ್ಕರ್ ಅತ್ತಿಗೆ ಸಾನಿಯಾ ಚಂದೋಕ್ ಹಾಗೂ ತಂದೆ ಸಚಿನ್ ತೆಂಡೂಲ್ಕರ್ ಶುಭ ಹಾರೈಕೆ ಹಾಗೂ ಮಾತುಗಳು ತೀವ್ರ ಕುತೂಹಲಕ್ಕೆ ಹಾಗೂ ಸಾರಾ ಮದುವೆ ಕುರಿತು ಚರ್ಚೆಗೆ ನಾಂದಿ ಹಾಡಿದೆ.
ಸಾನಿಯಾ ನೀಡಿದ ಸುಳಿವೇನು
ಸಹೋದರ ಅರ್ಜುನ್ ತೆಂಡೂಲ್ಕರ್ ಪತ್ನಿ ಸಾನಿಯಾ ಚಂದೋಕ್ ಸರದಿ ಆಗಮಿಸುತ್ತಿದ್ದಂತೆ ಕಡ್ಡಿ ಬೆಳಗಿ ಕೇಕ್ ಮೇಲೆ ಚುಚ್ಚಿ ಶುಭಕೋರಿದ್ದಾರೆ. ಈ ವೇಳೆ ಈ ವರ್ಷ ಸಾರಾಗೆ ಬಾಂದ್ರಾದ ಪೆರಿ ಕ್ರಾಸ್ ರಸ್ತೆಯಲ್ಲಿ ವಾಸವಿರುವ ಒಳ್ಳೆಯ ಪಾರ್ಟ್ನರ್ ಸಿಗಲಿ. ಮದುವೆಯಾದ ಬಳಿಕ ನಾವು ಹಾಗೂ ಸಾರಾ ಹತ್ತಿರದಲ್ಲೇ ಇರಬಹುದು ಎಂದು ಶುಭಕೋರಿದ್ದಾರೆ. ಸಾರಾ ತೆಂಡೂಲ್ಕರ್ ಶುಭಕೋರುವಾಗ ಅಚಾನಕ್ಕಾಗಿ ಸಾರಾ ತೆಂಡೂಲ್ಕರ್ ಹುಡುಗನ ಅಡ್ರೆಸ್ ರಿವೀಲ್ ಮಾಡಿದ್ರಾ, ಈ ಕುರಿತು ಗೊತ್ತಿದ್ದೇ ಸುಳಿವು ನೀಡಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇತರರಂತೆ ಇದು ಶುಭ ಹಾರೈಕೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಕೊನೆಯದಾಗಿ ಸಚಿನ್ ಶುಭಾಶಯದಲ್ಲಿ ಇದರ ರಹಸ್ಯ ಅಡಗಿತ್ತು
ಸಚಿನ್ ಶುಭಾಶಯದ ನಡುವೆ ರಹಸ್ಯ
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ಈ ವರ್ಷ ಉತ್ತಮ ಒಬ್ಬ ಎಂದು ಮಾತು ಆರಂಭಿಸಿ ತಕ್ಷಣವೇ ಈ ಎಲ್ಲಾ ಮಾತುಗಳನ್ನು ಇಲ್ಲಿಗೆ ಬಿಡುತ್ತೇನೆ. ಈ ಕುರಿತು ಹೆಚ್ಚಿನ ಚರ್ಚೆ, ಮಾತುಗಳು ಬೇಡ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಸಾರಾ ಸಂಭ್ರಮದ ವಿಡಿಯೋ ರೆಕಾರ್ಡ್ ಆಗುತ್ತಿದೆ ಅನ್ನೋ ಅರಿವಿದ್ದ ಸಚಿನ್ ತೆಂಡೂಲ್ಕರ್ ತಕ್ಷಣವೇ ಚರ್ಚೆಗಳಿಗೆ ತೆರೆ ಏಳೆದಿದ್ದಾರೆ. ಈ ಮೂಲಕ ಮಾಧ್ಯಮಗಳ ಮುಂದೆ ಚರ್ಚಿಸುವ ಬದಲು ಕುಟುಂಬದಲ್ಲಿ ಈ ಕುರಿತು ಮಾತುಕತೆ ನಡೆಸಲು ಸಚಿನ್ ಆಗ್ರಹಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕುಟುಂಬ ಸಾರಾ ತೆಂಡೂಲ್ಕರ್ ಮದುವೆ ಕುರಿತ ಮಾತುಕತೆಯಲ್ಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಸಾರಾ ತೆಂಡೂಲ್ಕರ್ ಸ್ವಂತ ಉದ್ಯಮ ಆರಂಭಿಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮ ಸ್ವಂದ ಉದ್ಯಮದ ಕಚೇರಿಯಲ್ಲಿ ದೀಪಾವಳಿ ಆಚರಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಕುಟುಂಬಸ್ಥರು ಸೇರಿದಂತೆ ಸಹೋದ್ಯೋಗಿಗಳ ಜೊತೆ ಸಾರಾ ತೆಂಡೂಲ್ಕರ್ ದೀಪಾವಳಿ ಆಚರಿಸಿದ್ದಾರೆ. ಇತ್ತ ಸಾರಾ ಮದುವೆ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.














