Asianet Suvarna News Asianet Suvarna News

ಸಿಟ್ಟಾದ ಮಡದಿ ಒಳ್ಳೆ ಮೂಡ್‌ಗೆ ಬರಬೇಕು ಅಂದ್ರೆ ಹೀಗೆ ಮಾಡಿ!

ಕೆಲವೊಮ್ಮೆ ಹೆಂಡ್ತಿ ಸಿಟ್ಟು ಮಾಡ್ಕೊಂಡ್ರೆ ಕಾರಣನೇ ಗೊತ್ತಾಗಲ್ಲ. ಸಿಟ್ ಮಾಡ್ಕೊಂಡ ಹೆಂಡ್ತೀನ ಮರಳಿ ಒಳ್ಳೆ ಮೂಡ್‌ಗೆ ಕರೆತರೋಕೆ ಬೆಸ್ಟ್ ಟಿಪ್ಸ್ ಇಲ್ಲಿದೆ.

 

relationship tips to bring angered wife to good mood bni
Author
First Published Oct 17, 2023, 3:58 PM IST | Last Updated Oct 17, 2023, 3:58 PM IST

ಎಲ್ಲೋ ಹುಟ್ಟಿ ಬೆಳೆದ ಹುಡುಗಿ ಒಬ್ಬ ಹುಡುಗನ ಲೈಫಲ್ಲಿ ಬಂದು ಅವನ ಲೈಫೇ ಅವಳಾಗೋದು ಅಂದ್ರೆ ಸಣ್ ವಿಚಾರ ಅಲ್ಲ. ಇದನ್ನೆಲ್ಲ ರೊಮ್ಯಾಂಟಿಕ್ ಆಗಿ ಏನೇನೋ ಹೇಳಬಹುದು. ಆದ್ರೆ ಪ್ರಾಕ್ಟಿಕಲ್ ಪ್ರಾಬ್ಲೆಂ ಬರೋದು ಹೆಂಡತಿ ಮುನಿಸಿಕೊಂಡಾಗ. ಎಷ್ಟೋ ಸಲ ಗಂಡಸರಿಗೆ ಹೆಂಡತಿ ಮುನಿಸಿಗೆ ಕಾರಣವೇ ತಿಳಿಯೋದಿಲ್ಲ. ಮತ್ತೆ ಕೆಲವು ಸಲ ಕಾರಣವೂ ಇರೋದಿಲ್ಲ. ಹಾರ್ಮೋನಲ್ ಬದಲಾವಣೆಗಳು, ಮೂಡ್ ಸ್ವಿಂಗ್‌ಗಳು ಇಂಥಾ ಕಾರಣಗಳು ಬಂದಾಗ ರೀಸನ್ ಇಲ್ದೇ ಅವಳು ಜಗಳ ಆಡಬಹುದು. ಹೀಗೆ ಅವಳ ಜಗಳಕ್ಕೆ ಏನು ಕಾರಣ ಅಂತ ಜಾಸ್ತಿ ಹುಡುಕಾಡೋ ಪ್ರಯತ್ನ ಮಾಡಿದ್ರೆ ಕೆಲವೊಮ್ಮೆ ಉತ್ತರನೇ ಸಿಗದೇ ನಿಮಗೂ ಜಗಳ ಆಡಬೇಕು ಅನಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ. ಅದರ ಬದಲು ಬೇರೆ ಥರ ಇದ್ದರೆ ಅವಳೂ ಖುಷ್ ನೀವೂ ಖುಷ್.

- ಸ್ವಲ್ಪ ಹೊತ್ತು ಅವರನ್ನು ಅವರಷ್ಟಕ್ಕೆ ಬಿಡಿ, ಏನಾಯ್ತು, ಯಾಕಾಯ್ತು ಅಂತೆಲ್ಲ ಪ್ರಶ್ನೆ ಮಾಡಬೇಡಿ. ಸಿಕ್ಕಾಪಟ್ಟೆ ಉದ್ವೇಗದಲ್ಲಿರುವಾಗ ನೀವೇನಾದರೂ ಮಾತಾಡಿಸಿದ್ರೆ ಜ್ವಾಲಾಮುಖಿಯೇ ಸಿಡಿದು ಬಿಡಬಹುದು. ಆಮೇಲೂ ಜ್ವಾಲಾಮುಖಿ ಸಿಡಿಯೋದನ್ನು ತಪ್ಪಿಸೋದಕ್ಕಾಗಲ್ಲ, ಆದರೆ ಆಗ ಪ್ರಖರತೆ ಸ್ವಲ್ಪ ಕಮ್ಮಿ ಇರುತ್ತೆ.

- ನೀವು ಮಾತಾಡಿಸುವಾಗ ಅವಳು ನೀವು ಹೇಳಿದ್ದಕ್ಕೆಲ್ಲ ಸ್ಪಂದಿಸಬೇಕು ಅನ್ನೋ ನಿರೀಕ್ಷೆ ಬೇಡ. ಸಿಟ್ಟಲ್ಲಿರೋ ಅವಳು ಖಾರವಾಗಿಯೇ ಪ್ರತಿಕ್ರಿಯೆ ನೀಡ್ತಾಳೆ. ಅದಕ್ಕೆ ಸಿದ್ಧವಾಗಿರಿ. ಅವಳ ಮನಸ್ಸಲ್ಲಿರುವ ನೋವೆಲ್ಲ ಆಚೆ ಬಂದರೆ ಸಮಾಧಾನವಾಗ್ತಾಳೆ ಅನ್ನೋದು ಗೊತ್ತಿರಲಿ.

- ಅವಳು ಸಿಟ್ಟಲ್ಲಿ ಎಷ್ಟೇ ಬೈದಿರಲಿ. ಅದು ಉದ್ದೇಶಪೂರ್ವಕವಾಗಿ ಆಗಲೀ ದ್ವೇಷದಿಂದಲಾಗಲೀ ಆಗಿರಲ್ಲ. ಹೀಗಾಗಿ ಅವಳು ಸಿಟ್ಟು ಮಾಡ್ಕೊಂಡ ಹೊತ್ತಲ್ಲಿ ಆಡಿದ ಮಾತಿನ ಪ್ರತೀ ಪದವನ್ನೂ ಭೂತಗನ್ನಡಿಯಲ್ಲಿಟ್ಟು ನೋಡಬೇಡಿ.

- ಅವಳ ಸಿಟ್ಟಿಳಿದು ಸಮಾಧಾನ ಆದ ಮೇಲೆ ಪಕ್ಕ ಕೂತು ಸಮಾಧಾನದ ಮಾತುಗಳನ್ನು ಹೇಳಿ.

ಕಾಮಸೂತ್ರದ ಈ ಸಲಹೆ ಪಾಲಿಸಿದ್ರೆ, ಗಂಡ ಹೆಂಡತಿ ಜಗಳ ಆಗುವುದೇ ಇಲ್ಲ!

- ನಿಮ್ಮ ಸಮಾಧಾನ, ನೀವು ಆಕೆಯ ದುಃಖ ಅರ್ಥ ಮಾಡಿಕೊಂಡ ರೀತಿಗೆ ಅವಳು ಕ್ಷಣದಲ್ಲಿ ಸಮಾಧಾನ ಪಡುತ್ತಾಳೆ.

- ಕೋಪ ಬಂದಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರಾದರೂ ಒಬ್ಬರು ಸೋಲಲೇಬೇಕು. ಹೆಂಡತಿ ಕೋಪಿಸಿಕೊಂಡಾಗ (anger) ಗಂಡ ಕೂಡ ಕೋಪ ಮಾಡಿಕೊಂಡರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಗಂಡ ಸ್ವಲ್ಪ ಶಾಂತವಾದರೆ ಅಥವಾ ಸೈಲೆಂಟ್ ಆಗಿ ಬಿಟ್ಟರೆ ಹೆಂಡತಿಯ ಕೋಪ ಸ್ವಲ್ಪ ಹೊತ್ತಿನಲ್ಲಿ ಕಡಿಮೆಯಾಗುತ್ತದೆ ಮತ್ತು ಪರಿಸ್ಥಿತಿ ತಿಳಿಯಾಗುತ್ತದೆ. ಹಾಗಾಗಿ ಚಿಕ್ಕ ವಿಷಯವನ್ನು ದೊಡ್ಡದು ಮಾಡಲು ಹೋಗಲೇ ಬಾರದು.​

- ಜಗಳ ಆಡುವ ಸಂದರ್ಭದಲ್ಲಿ ಬರುವಂತಹ ಕೋಪ ಬೇರೆ ಬೇರೆ ತರಹದ ಮಾತುಗಳನ್ನು ಬಾಯಿಂದ ಹೊರಡಿಸುತ್ತದೆ. ಅಂತಹ ಪದಗಳನ್ನು ಉಪಯೋಗಿಸಿ ಜಗಳವನ್ನು ಮತ್ತಷ್ಟು ದೊಡ್ಡದು ಮಾಡುವ ಬದಲು ಮಾತನಾಡುವಾಗ ಸ್ವಲ್ಪ ಆಲೋಚಿಸಿ ಮಾತನಾಡಿ.

ಏಕೆಂದರೆ ನೀವು ಮಾತನಾಡುವ ಪದಗಳು ನಿಮ್ಮ ಜೀವನ ಸಂಗಾತಿಯನ್ನು ಮತ್ತಷ್ಟು ಕೆಣಕಿದಂತೆ ಆಗಬಹುದು. ಹಾಗಾಗಿ ನಿಮ್ಮ ಮಾತುಗಳ ಬಗ್ಗೆ ಗಮನವಿರಲಿ ಮತ್ತು ಹಿಡಿತವಿರಲಿ.

- ಕೋಪ ಬಂದಂತಹ ಸಂದರ್ಭದಲ್ಲಿ ಜಗಳ ಆಡಿ ಆನಂತರದಲ್ಲಿ ನಿಮ್ಮ ಸಂಗಾತಿ (life partner) ಅದರ ಬಗ್ಗೆ ಕೊರಗುತ್ತಾರೆ ಮತ್ತು ಒಳಗೊಳಗೆ ನೋವು ಅನುಭವಿಸುತ್ತಾರೆ. ಹಾಗಾಗಿ ಇದು ಮುಂದಿನ ದಿನಗಳಲ್ಲಿ ಪದೇ ಪದೇ ನಡೆದರೆ ನಿಮ್ಮ ಸಂಗಾತಿಗೆ ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆ ಎದುರಾಗಬಹುದು. ಹೀಗಾಗಿ ಸಾಧ್ಯವಾದಷ್ಟು ನಿಮ್ಮ ಸಂಗಾತಿಯನ್ನು ಸಮಾಧಾನಪಡಿಸಿ.

- ಕೆಲವೊಂದು ವಿಚಾರಗಳು ಜಗಳದ ಪರಿಸ್ಥಿತಿಯನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಜಗಳ ಇನ್ನು ಸ್ವಲ್ಪ ಹೊತ್ತು ಜೋರಾಗಿ ಮುಂದುವರೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಒಂದು ವೇಳೆ ಇಂತಹ ಪರಿಸ್ಥಿತಿಯಲ್ಲಿ ಇದ್ದರೆ, ಅಲ್ಲಿಂದ ಪಲಾಯನ ಮಾಡುವುದು ಉತ್ತಮ. ಪರಿಸ್ಥಿತಿ ತಣ್ಣಗಾದ ಮೇಲೆ ವಾಪಸ್ ಬಂದರೆ ಆಯಿತು.

ಕೆಲವರಿಗೆ ತಾಳ್ಮೆ ಹೆಚ್ಚಾಗಿರುತ್ತದೆ, ಇನ್ನು ಕೆಲವರಿಗೆ ಕೋಪ ಹೆಚ್ಚಾಗಿರುತ್ತದೆ. ಅಂತಹವರಿಗೆ ಒಂದು ವೇಳೆ ನೀವು ಸಣ್ಣದಾಗಿ ಏನಾದರೂ ಹೇಳಿದರೆ ಅದು ಅವರ ಕೋಪವನ್ನು ಮತ್ತಷ್ಟು ಕೆರಳಿಸುತ್ತದೆ. ಹಾಗೆಂದು ನೀವು ಎಲ್ಲವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ನಿಮ್ಮ ಸಂಗಾತಿಗೆ ಮೊದಲೇ ಹೇಳಿ ಬಿಡಿ. ಆಗ ಮುಂದಿನ ದಿನಗಳಲ್ಲಿ ಜಗಳ ದೊಡ್ಡದಾಗುವ ಪ್ರಸಂಗವೇ ಬರುವುದಿಲ್ಲ.​

ಸಿಟ್ಟು ಅನ್ನೋದು ಈ ಕ್ಷಣ ಬಂದು ಮರುಕ್ಷಣ ಕರಗಿ ಹೋಗುವಂತಿರಬೇಕು.

Latest Videos
Follow Us:
Download App:
  • android
  • ios