Asianet Suvarna News Asianet Suvarna News

Relationship Tips : ನಶೆಯಲ್ಲಿ ಸೆಕ್ಸ್ ಇಷ್ಟವಾದ್ರೂ, ಭವಿಷ್ಯದಲ್ಲಿದೆ ಹಬ್ಬ!

ನನಗೊಂದು ಮುದ್ದಾದ ಮಗು ಬೇಕೇಬೇಕು… ವೀಕೆಂಡ್ ನಲ್ಲಿ ಪಾರ್ಟಿ, ವೀಕ್ ಡೇನಲ್ಲಿ ಒಂದು ಪೆಗ್ ಆಲ್ಕೋಹಾಲ್ ಇಲ್ಲ ಅಂದ್ರೆ ಹೇಗೆ ಎನ್ನುವವರು ನೀವಾಗಿದ್ದರೆ ಎರಡರಲ್ಲಿ ಒಂದನ್ನು ಮಾತ್ರೆ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಅತಿಯಾದ ಆಲ್ಕೋಹಾಲ್ ಚಟ ಮಕ್ಕಳನ್ನು ಪಡೆಯುವ ಕನಸಿಗೆ ಅಡ್ಡಿಯಾಗುತ್ತೆ ಎಚ್ಚರ.   
 

Relationship Tips Effects Of Alcohol On Mens Sexual Health roo
Author
First Published Jun 5, 2023, 2:33 PM IST

ಮದ್ಯಪಾನಿಗಳ ಸಂಖ್ಯೆ ಈಗಿನ ದಿನಗಳಲ್ಲಿ ಅತ್ಯಧಿಕವಾಗಿದೆ. ಸಣ್ಣ ವಯಸ್ಸಿನಲ್ಲೇ ಪಾರ್ಟಿ, ಫ್ರೆಂಡ್ಸ್ ಹೆಸರಿನಲ್ಲಿ ಮಕ್ಕಳು ಆಲ್ಕೋಹಾಲ್ ಸೇವನೆ ಮಾಡ್ತಿದ್ದಾರೆ. ಹುಡುಗರಿಗೆ ಸಮಾನವಾಗಿ ಅಲ್ಲದೆ ಹೋದ್ರೂ ಮದ್ಯಪಾನ ಮಾಡೋದ್ರಲ್ಲಿ ಹುಡುಗಿಯರೇನೂ ಕಡಿಮೆಯಿಲ್ಲ. ವೀಕೆಂಡ್ ಬಂದ್ರೆ ಬಾರ್ ಮುಂದೆ ಜನರ ಸಂಖ್ಯೆ ಹೆಚ್ಚಿರುತ್ತದೆ. ಮದ್ಯಪಾನ ಆ ಕ್ಷಣಕ್ಕೆ ಹಿತವೆನ್ನಿಸಿದ್ರೂ ಅದು ಮಾಡುವ ಗಂಭೀರ ಸಮಸ್ಯೆ ಒಂದೆರಡಲ್ಲ. ಪುರುಷರಿಗೆ ಹಾಗೂ ಮಹಿಳೆಯರಿಗೆ ಇದ್ರ ಪರಿಣಾಮ ಭಿನ್ನವಾಗಿರುತ್ತದೆ.

ವಿಪರೀತ ಮದ್ಯಪಾನ (Alcohol) ಮಾಡುವ ಪುರುಷರು ಸಾಕಷ್ಟು ಆರೋಗ್ಯ ತೊಂದರೆಗಳು ಎದುರಿಸುತ್ತಾರೆ. ಇದ್ರಲ್ಲಿ ಲೈಂಗಿಕ (Sex) ಜೀವನ ಕೂಡ ಸೇರಿದೆ. ಮದ್ಯಪಾನ ಮಾಡಿದ್ರೆ ಶಾರೀರಿಕ ಸಂಬಂಧ ಬೆಳೆಸೋದು ಸುಲಭ ಎನ್ನುವವರು ಅನೇಕರಿದ್ದಾರೆ. ಆದ್ರೆ ತಜ್ಞ (Experts ) ರ ಪ್ರಕಾರ ಇದು ತಪ್ಪು ಕಲ್ಪನೆ. ಆಲ್ಕೋಹಾಲ್ ಲೈಂಗಿಕ ಸುಖವನ್ನು ಸಂಪೂರ್ಣ ಹಾಳು ಮಾಡುತ್ತದೆ.  ಆಲ್ಕೋಹಾಲ್ ಅವರ ಲೈಂಗಿಕ ಕಾರ್ಯಕ್ಷಮತೆ, ಕಾಮಾಸಕ್ತಿ ಮತ್ತು ಫಲವತ್ತತೆಯ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.  ನಾವಿಂದು ಲೈಂಗಿಕ ಜೀವನ ಹಾಗೂ ಆಲ್ಕೋಹಾಲ್ ಇದ್ರ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಹೆಂಡ್ತಿ, ಗಂಡನಿಂದ ಯಾವಾಗ್ಲೂ ಈ ವಿಷ್ಯಕೇಳೋಕೆ ಬಯಸ್ತಾಳಂತೆ

ಶಾರೀರಿಕ ಸುಖ ನಾಶ ಮಾಡುತ್ತೆ ಆಲ್ಕೋಹಾಲ್ :
ವೀರ್ಯದ (Sperms) ಗುಣಮಟ್ಟದಲ್ಲಿ ಇಳಿಕೆ :
ಆಲ್ಕೋಹಾಲ್ ಸೇವನೆ ವೀರ್ಯದ ಗುಣಮಟ್ಟದ ಮೇಲಾಗುತ್ತದೆ. ಆರೋಗ್ಯಕ ವೀರ್ಯದಿಂದ ಸಂತಾನ ಸಾಧ್ಯ. ಆದ್ರೆ ವೀರ್ಯದ ಗುಣಮಟ್ಟ ಕಡಿಮೆಯಾದ್ರೆ ಫಲವತ್ತತೆ ಕಷ್ಟವಾಗುತ್ತದೆ. ಮದ್ಯಪಾನ ಮಾಡುವವರ ವೀರ್ಯದ ಗುಣಮಟ್ಟ, ಆಕಾರ ಹಾಗೂ ಚಲನಶೀಲತೆ ಎಲ್ಲದರಲ್ಲೂ ಬದಲಾವಣೆಯಾಗುತ್ತದೆ ಎಂದು ಅನೇಕ ಸಂಶೋದನೆಗಳು ಹೇಳಿವೆ. ಸ್ವಾಭಾವಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗೋದಿಲ್ಲ. ಐವಿಎಫ್ ವೇಳೆಯೂ ಇದ್ರ ದುಷ್ಪರಿಣಾಮವನ್ನು ನಾವು ನೋಡ್ಬಹುದಾಗಿದೆ.

ಒಳ್ಳೆಯ ಪ್ರದರ್ಶನಕ್ಕೆ ಅಡ್ಡಿ : ಅತಿಯಾದ ಮದ್ಯಪಾನದಿಂದ ಶೀರ್ಘ ಸ್ಖಲನ ಸಮಸ್ಯೆ ಎದುರಾಗುತ್ತದೆ. ಆಲ್ಕೊಹಾಲ್,ನರಮಂಡಲವನ್ನು ನಿಧಾನಗೊಳಿಸುತ್ತದೆ. ಇದು ಲೈಗಿಕ ಆಸಕ್ತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲದ ಆಲ್ಕೊಹಾಲ್ ಸೇವನೆ ಮಾಡೋದ್ರಿಂದ ಹಾರ್ಮೋನುಗಳ ಬಿಡುಗಡೆಯಲ್ಲಿ  ಅಸಮತೋಲ ಕಾಣಬಹುದು. ಟೆಸ್ಟೋಸ್ಟೆರಾನ್ ಉತ್ಪಾದನೆಗೆ ಇದ್ರಿಂದ ಅಡ್ಡಿಯಾಗುತ್ತದೆ. ಇದು ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆ ವಂಶಾಭಿವೃದ್ಧಿ ಮೇಲೆ ದೊಡ್ಡ ಹೊಡೆತವನ್ನು ನೀಡುತ್ತದೆ.

Asexuality : ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ವಾ? ಇದಕ್ಕಿದ್ಯಾ ಚಿಕಿತ್ಸೆ?

ವಿಫಲವಾಗ್ಬಹುದು ಐವಿಎಫ್ (IVF) : ಈತ ತಂತ್ರಜ್ಞಾನ ಮುಂದುವರೆದಿದೆ, ಮಕ್ಕಳನ್ನು ಐವಿಎಫ್ ಮೂಲಕ ಪಡೆಯಬಹುದು ಅಂತಾ ನೀವು ಹೇಳ್ಬಹುದು. ಆದ್ರೆ ನಿಮ್ಮ ಅತಿಯಾದ ಕುಡಿತ, ಐವಿಎಫ್ ಮೇಲೂ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ದಂಪತಿಯ ಆಲ್ಕೋಹಾಲ್ ಸೇವನೆ, ಐವಿಎಫ್ ವಿಫಲತೆಗೆ ಕಾರಣವಾಗಬಹುದು. ಔಧಿಯ ಮೇಲೆ ಆಲ್ಕೋಹಾಲ್ ಪ್ರಭಾವ ಬೀರುವ ಕಾರಣ, ಔಷಧಿ ಕೆಲಸ ಮಾಡೋದಿಲ್ಲ. ಹಾರ್ಮೋನ್ ನಲ್ಲಿ ಬದಲಾವಣೆ ಕಂಡು ಬರುತ್ತದೆ.  ಐವಿಎಫ್ ಚಿಕಿತ್ಸೆ ಯಶಸ್ವಿಯಾಗೋದು ಕಷ್ಟವಾಗುತ್ತದೆ. ಮೊದಲೇ ಹೇಳಿದಂತೆ ವೀರ್ಯದ ಗುಣಮಟ್ಟ ಹಾಳಾಗಿರುವ ಕಾರಣ ಐವಿಎಫ್ ಸಂದರ್ಭದಲ್ಲಿ ಯಶಸ್ವಿ ಫಲೀಕರಣ ಹಾಗೂ ಆರೋಗ್ಯಕರ ಭ್ರೂಣ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಪುರುಷರು ಏನು ಮಾಡ್ಬೇಕು? : ಮದ್ಯಪಾನ ಆರೋಗ್ಯವನ್ನು ನಾನಾ ರೀತಿಯಲ್ಲಿ ಹಾಳು ಮಾಡುವ ಕಾರಣ ಮದ್ಯಪಾನದಿಂದ ಪುರುಷರು ಹೊರಗಿರುವುದು ಒಳ್ಳೆಯದು. ಉತ್ತಮ ಜೀವನಶೈಲಿ ರೂಢಿಸಿಕೊಂಡು ಆಲ್ಕೋಹಾಲ್ ಕಡಿಮೆ ಮಾಡಿದಲ್ಲಿ ಅಥವಾ ಅದನ್ನು ಸಂಪೂರ್ಣವಾಗಿ ತ್ಯಜಿಸಿದಲ್ಲಿ ಲೈಂಗಿಕ ಜೀವನ ಹಾಗೂ ದಾಂಪತ್ಯ ಜೀವನ ಸುಖಮಯವಾಗಿರಲು ಸಾಧ್ಯ. ಆರೋಗ್ಯಕರ ಮಕ್ಕಳ ಕನಸು ಕಾಣ್ತಿರುವ ದಂಪತಿ ಮೊದಲು ಆಲ್ಕೋಹಾಲ್ ನಿಂದ ದೂರವಾಗ್ಬೇಕು.  ಮದ್ಯಪಾನ ಎಷ್ಟು ಸುಖ ನೀಡುತ್ತೆ ಎಂಬುದರ ಬಗ್ಗೆ ಆಲೋಚನೆ ಮಾಡುವ ಬದಲು ಅದರ ಅಡ್ಡಪರಿಣಾಮದ ಬಗ್ಗೆ ಚಿಂತಿಸಬೇಕು. 
 

Follow Us:
Download App:
  • android
  • ios