Kannada

ಐ ಲವ್ ಯೂ

ಈ ಮೂರು ಸಿಂಪಲ್‌ ವರ್ಡ್ಸ್‌ ಹೆಂಡ್ತಿಯ ಮುಖದಲ್ಲಿ ನಗು ತರಿಸಲು ಸಾಕಾಗುತ್ತದೆ. ದಿನ ಅದೆಷ್ಟೇ ಒತ್ತಡದಿಂದ ಕೂಡಿದ್ದರೂ ಗಂಡ ಐ ಲವ್ ಯೂ ಎಂದರೆ ಪತ್ನಿ ಮನಸಾರೆ ನಕ್ಕು ಹಗುರಾಗುತ್ತಾಳೆ.

Kannada

ನೀನೆಷ್ಟು ಸುಂದರವಾಗಿದ್ದೀ

ಹೆಣ್ಣುಮಕ್ಕಳಿಗೆ ಹೊಗಳಿಕೆ ಯಾವಾಗಲೂ ಖುಷಿ ನೀಡುತ್ತದೆ. ಇದಕ್ಕೆ ಹೆಂಡತಿಯೂ ಹೊರತಲ್ಲ. ಯು ಆರ್ ಬ್ಯೂಟಿಫುಲ್ ಎಂದರೆ ಆಕೆ ಖುಷಿಗೊಳ್ಳುತ್ತಾಳೆ. ಇದು ಅವಳ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ.

Image credits: others
Kannada

ಥ್ಯಾಂಕ್ಯೂ

ಗಂಡ-ಹೆಂಡತಿಯ ಮಧ್ಯೆ ಥ್ಯಾಂಕ್ಸ್ ಯಾಕೆ ಎಂದು ಹಲವರು ಪ್ರಶ್ನಿಸಬಹುದು. ಆದರೆ ಪತ್ನಿ ಮಾಡಿದ ಅಡುಗೆ, ಮನೆ ಕೆಲಸವನ್ನು ಪ್ರಶಂಸುವುದು ಆಕೆಯ ಮನಸ್ಸಿಗೆ ಖುಷಿಯನ್ನುಂಟು ಮಾಡುವ ವಿಚಾರವಾಗಿದೆ.

Image credits: others
Kannada

ನಿನ್ನ ಬಗ್ಗೆ ಹೆಮ್ಮೆಯಿದೆ

ಪತ್ನಿ ಮಾಡುವ ಉತ್ತಮ ಕೆಲಸಗಳ ಬಗ್ಗೆ ಯಾವಾಗಲೂ ಹೆಮ್ಮೆ ಪಡಿ. ಕೆಲಸದ ಬಗೆಗಿನ ಆಕೆಯ ಪರಿಶ್ರಮ, ಸಾಧನೆಗೆ ಯಾವಾಗಲೂ ಮೆಚ್ಚುಗೆ ಸೂಚಿಸಿ.

Image credits: others
Kannada

ದಿನ ಹೇಗಿತ್ತು ಎಂದು ಕೇಳಿ

ಎಷ್ಟೇ ಒತ್ತಡದ ದಿನವಾಗಿದ್ದರೂ ಪತ್ನಿಯ ಬಳಿ ಹೌ ವಾಸ್ ಯುವರ್ ಡೇ ಎಂದು ಕೇಳುವುದನ್ನು ಮರೆಯಬೇಡಿ. ಇದು ಪತ್ನಿಯ ಬಗೆಗಿರುವ ಕಾಳಜಿ, ಅಕ್ಕರೆಯನ್ನು ತೋರಿಸುತ್ತದೆ.

Image credits: Getty
Kannada

ನಿನಗಾಗಿ ನಾನಿದ್ದೇನೆ

ಗಂಡ ಯಾವಾಗಲೂ ಜೊತೆಗಿದ್ದಾನೆ ಎಂಬ ಭಾವನೆ ಹೆಣ್ಣಿಗೆ ಹೆಚ್ಚು ಸೇಫ್ ಭಾವನೆಯನ್ನು ಉಂಟು ಮಾಡುತ್ತದೆ. ಹೀಗಾಗಿ ನಿನಗಾಗಿ ನಾನಿದ್ದೇನೆ ಎಂದು ಭರವಸೆ ನೀಡುವುದನ್ನು ಮರೆಯಬೇಡಿ.

Image credits: others

ಮಕ್ಕಳ ಮಧ್ಯೆ ಫೈಟ್ ಆಗ್ಬಾರ್ದು ಅಂದ್ರೆ ಹೀಗ್ ಮಾಡಿ

ಆನ್‌ಲೈನ್‌ನಲ್ಲಿ ಸೂಕ್ತ ಸಂಗಾತಿಯನ್ನು ಹುಡುಕೋದು ಹೇಗೆ?

ಔರಂಗಜೇಬನ ಮಗಳು ಕೃಷ್ಣನ ಪರಮ ಭಕ್ತೆಯಾಗಿದ್ದು ಹೇಗೆ?

ಮದುವೆಯ ನಂತರ ಮಹಿಳೆಯರ ಸ್ವಭಾವ ಯಾಕೆ ಬದಲಾಗುತ್ತದೆ?