ಪ್ರೀತಿಗೂ ಬಂತು, ಯಾವುದೆಲ್ಲ ಗ್ಯಾರಂಟಿ ಇಲ್ಲವೋ, ಅವಕ್ಕೆಲ್ಲ ವಿಮಾ ಸೆಕ್ಯುರಿಟಿ ಅಂತಿದದಾರೆ ನಟ್ಟಿಗರು!

ಪ್ರೀತಿಸಿದ ವ್ಯಕ್ತಿ ನಿಮಗೆ ಸಿಕ್ಕೇ ಸಿಗ್ತಾರೆ ಎನ್ನುವ ಭರವಸೆ ಇದ್ರೆ ನೀವೂ ಪ್ರೀತಿ ವಿಮೆ ಖರೀದಿ ಮಾಡ್ಬಹುದು. ಪ್ರೇಮಿಗೆ ಖರ್ಚು ಮಾಡಿದ ಹಣವನ್ನು ಈ ಮೂಲಕ ಉಳಿಸ್ಬಹುದು. ಅಷ್ಟಕ್ಕೂ ಈ ಪಾಲಿಸಿ ಏನು ಎಂಬ ವಿವರ ಇಲ್ಲಿದೆ. 
 

relationship Lovers Got Love Insured roo

ಆರೋಗ್ಯ, ಆಸ್ತಿ, ಕಾರು, ಪ್ರಯಾಣದ ವಿಮೆ ಬಗ್ಗೆ ನೀವು ಕೇಳಿರ್ತೀರಿ. ಅನೇಕರು ಈ ವಿಮೆಗಳನ್ನು ಮಾಡಿಸಿಕೊಂಡಿರ್ತೀರಿ ಕೂಡ. ಆದ್ರೆ ಚೀನಾದ ವ್ಯಕ್ತಿಯೊಬ್ಬ ಸಂಬಂಧದ ವಿಮೆ ಮಾಡಿಸಿಕೊಂಡಿದ್ದಾನೆ. ಬರೀ ವಿಮೆ ಮಾಡಿದ್ದು ಮಾತ್ರವಲ್ಲದೆ ಅದನ್ನು ಕ್ಲೈಮ್ ಮಾಡಲು ಮುಂದಾಗಿದ್ದಾನೆ. ಸಂಬಂಧ, ಪ್ರೀತಿ, ಭಾವನೆಗೆ ಸಂಬಂಧಿಸಿದ್ದು ಎನ್ನುವ ಕಾರಣ ಹೇಳಿ ವಿಮೆ ಕಂಪನಿ ಹಣ ನೀಡಲು ನಿರಾಕರಿಸಿತ್ತು. ನಿಯಮದಂತೆ ವ್ಯಕ್ತಿ ವಿಮೆ ಪಾವತಿ ಮಾಡ್ತಿದ್ದ ಕಾರಣ, ಆತನಿಗೆ ಹಣ ನೀಡಬೇಕೆಂದು ಕೋರ್ಟ್ ಆದೇಶ ಮಾಡಿದೆ. ಅಷ್ಟಕ್ಕೂ ಆತನ ಕಥೆ ಏನು ಎಂಬುದು ಇಲ್ಲಿದೆ.

ಆತ ಚೀನಾ (China) ಮೂಲದವನು. ಹೆಸರು ಲಿಯು. 2018 ರಲ್ಲಿ ಲಿಯು, ಲವ್ ಇನ್ಶುರೆನ್ಸ್ (Insurance) ಪಾಲಿಸಿಯನ್ನು ಖರೀದಿಸಿದ್ದ. ಈ ಪಾಲಿಸಿಯನ್ನು ತನ್ನ ಗೆಳತಿಗೆ ಉಡುಗೊರೆ (Gift) ಯಾಗಿ ನೀಡಿದ್ದ. ಈ ವಿಮೆ ಮಾರಾಟ ಮಾಡುವ ಸಂದರ್ಭದಲ್ಲಿ, ಕಂಪನಿ 10 ಸಾವಿರ ಯುವಾನ್ ಅಂದರೆ ಅಂದಾಜು 1 ಲಕ್ಷದ 15 ಸಾವಿರ ಕವರೇಜ್ ನೀಡುವುದಾಗಿ ಭರವಸೆ ನೀಡಿತ್ತು. 3 ರಿಂದ 10 ವರ್ಷಗಳೊಳಗೆ ಇಬ್ಬರ ನಡುವಿನ ಸಂಬಂಧ ಮದುವೆಗೆ ಬಂತು ನಿಂತಲ್ಲಿ ವಿಮಾ ಮೊತ್ತವನ್ನು ಕ್ಲೈಮ್ ಮಾಡಬಹುದು ಎಂದು ಕಂಪನಿ ಷರತ್ತು ವಿಧಿಸಿತ್ತು. ಬರೀ ಈ ವ್ಯಕ್ತಿಗೆ ಮಾತ್ರವಲ್ಲ ಕಂಪನಿ ದೇಶಾದ್ಯಂತ ಇಂತಹ 15 ಸಾವಿರಕ್ಕೂ ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಿರುವುದು ಕೋರ್ಟ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪಾಲಿಸಿಯನ್ನು ಖರೀದಿಸಿದ ಮೂರು ವರ್ಷಗಳ ನಂತರ ಲಿಯು ತನ್ನ ಪ್ರೇಮಿಯನ್ನು ಮದುವೆಯಾಗಿದ್ದ. ವಿಮೆ ಕಂಪನಿ ಷರತ್ತು ಪೂರೈಸಿದ್ದ ಕಾರಣ ವಿಮೆ ಕ್ಲೈಮ್ ಮಾಡಲು ಮುಂದಾಗಿದ್ದ. ಆದ್ರೆ ವಿಮಾ ಕಂಪನಿ ಹಣ ನೀಡಲು ನಿರಾಕರಿಸಿತ್ತು. ಪ್ರೀತಿ ಮತ್ತು ಸಂಬಂಧವು ಭಾವನಾತ್ಮಕ ಸ್ಥಿತಿ ಎಂದಿತ್ತು.

ಶಾಸ್ತ್ರಕ್ಕೆ ಇಟ್ಟಿದ್ದ ಊಟವನ್ನೂ ಗುಳುಂ ಮಾಡಿದ್ರಂತೆ ಅಮೃತಧಾರೆ ಗೌತಮ್​! ಆ ಘಟನೆ ತಿಳಿಸಿದ ಪತ್ನಿ ಚೈತ್ರಾ

ಇದನ್ನು ಪ್ರಶ್ನೆಸಿ ಲಿಯು ಕೋರ್ಟ್ ಮೆಟ್ಟಿಲೇರಿದ್ದ. ಸ್ಥಳೀಯ ನ್ಯಾಯಾಲಯ, ಇದು ಭಾವನೆಗೆ ಸಂಬಂಧಿಸಿದ ವಿಷ್ಯವೆಂದು ವಿಮಾ ಕಂಪನಿ ಪರ ತೀರ್ಪು ನೀಡಿತ್ತು. ಆದ್ರೆ ಲಿಯು ಹೈಕೋರ್ಟ್ ಮೊರೆ ಹೋಗಿದ್ದಲ್ಲದೆ, ವಿಮಾ ಕಂತು ಪಾವತಿ ಮಾಡಿದ ದಾಖಲೆಗಳನ್ನು, ಕಂಪನಿ ನೀಡಿದ್ದ ದಾಖಲೆಗಳನ್ನು ಕೋರ್ಟ್ ಮುಂದೆ ನೀಡಿದ್ದ. ವಿಚಾರಣೆ ನಡೆಸಿದ ಕೋರ್ಟ್ ಲಿಯು ಪರ ತೀರ್ಪು ನೀಡಿದೆ. ವಿಮಾ ಕಂಪನಿ, ಲಿಯುಗೆ 1 ಲಕ್ಷ 15 ಸಾವಿರ ನೀಡುವಂತೆ ಆದೇಶ ನೀಡಿದೆ.

ಶ್...ಗಂಡನೊಟ್ಟಿಗೆ ಸಂಬಂಧ ಚೆನ್ನಾಗಿರ್ಬೇಕಂದ್ರೆ ಈ ಗುಟ್ಟನ್ನು ಅಪ್ಪಿತಪ್ಪಿಯೂ ಹೇಳ್ಬೇಡಿ!

ಈ ದಿನಗಳಲ್ಲಿ ಚೀನಾ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಸಣ್ಣ ಮತ್ತು ದೊಡ್ಡ ಕಂಪನಿಗಳು ಪ್ರೀತಿಯ ವಿಮೆಯನ್ನು ಒದಗಿಸುವುದಾಗಿ ಹೇಳಿಕೊಳ್ಳುತ್ತವೆ. ಇವುಗಳಲ್ಲಿ ಹೆಚ್ಚಿನವು ನೋಂದಣಿಯಾಗಿರೋದಿಲ್ಲ. ಅಲ್ಲದೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತವೆ. ತಮ್ಮ ಸಂಬಂಧಗಳ ಬಗ್ಗೆ ಅಸುರಕ್ಷಿತರಾಗಿರುವ ಯುವಕರು, ಡೇಟಿಂಗ್ ಸಮಯದಲ್ಲಿ ತಮ್ಮ ಪಾಲುದಾರರ ಮೇಲೆ ಬಹಳಷ್ಟು ಹಣವನ್ನು ಖರ್ಚು ಮಾಡುವ ಪ್ರೇಮಿಗಳು, ಆರ್ಥಿಕ ಮತ್ತು ಭಾವನಾತ್ಮಕ ಹೂಡಿಕೆಗಳ ಭದ್ರತೆಯನ್ನು ಬಯಸುತ್ತಾರೆ.

ಪ್ರೀತಿಯ ವಿಮೆ ಇತರ ವಿಮೆಗಿಂತ  ಭಿನ್ನವಾಗಿದೆ. ಕಾರು, ಆಸ್ತಿ ವಿಮೆಯಲ್ಲಿ, ಇವುಗಳಿಗೆ ಹಾನಿಯಾದಾಗ ವಿಮೆ ಸಿಕ್ಕಿದ್ರೆ ಪ್ರೀತಿಯಲ್ಲಿ, ಪ್ರೀತಿ ಸಿಕ್ಕಿದ ಮೇಲೆ ವಿಮೆ ಕ್ಲೈಮ್ ಮಾಡಬಹುದು. ಪ್ರೀತಿ ಮುರಿದುಬಿದ್ದಲ್ಲಿ ಹಣ ಸಿಗೋದಿಲ್ಲ. ನಿಗದಿತ ಸಮಯಕ್ಕೆ ಮದುವೆಯಾದ್ರೆ ವಿಮಾ ಕಂಪನಿ ಹಣ ನೀಡುತ್ತದೆ. ವಿಮಾ ಕಂಪನಿಯಿಂದ ಹಣ ಪಡೆಯುವ ಆಸೆಗೆ ಬೀಳುವ ಜನರು ತಮ್ಮ ಸಂಗಾತಿ ತಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಭರವಸೆಯಲ್ಲಿ ಇಂಥ ವಿಮೆಯನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ. 
 

Latest Videos
Follow Us:
Download App:
  • android
  • ios