Asianet Suvarna News Asianet Suvarna News

Relationship Tips: ದಾಂಪತ್ಯ ಜೀವನ ಇತರರೊಂದಿಗೆ ಕಂಪೇರ್ ಮಾಡೋದನ್ನು ಬಿಟ್ಬಿಡಿ

ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ಬಿರುಕು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಬಾರಿ ಇದಕ್ಕೆ ಮತ್ತೊಬ್ಬರ ಜೊತೆ ತಮ್ಮ ಸಂಬಂಧವನ್ನು ಕಂಪೇರ್ ಮಾಡಿಕೊಳ್ಳುವುದು ಕಾರಣವಾಗುತ್ತದೆ. ಅವರು ಎಲ್ಲೆಲ್ಲಾ ಟ್ರಿಪ್ ಹೋಗ್ತಾರೆ, ಅವ್ರು ಕಾರ್ ತಗೊಂಡಿದ್ದಾರೆ, ಹೊಸ ಮನೆ ಖರೀದಿಸಿದ್ದಾರೆ ಮೊದಲಾದ ಕಾರಣಗಳು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ.

Reasons You Should Stop Comparing Your Relationship To Others Vin
Author
First Published Nov 26, 2022, 4:22 PM IST

ಮದುವೆ (Marriage) ಎಂಬುದು ಪ್ರತಿಯೊಬ್ಬರ ಜೀವನದ ಒಂದು ಮುಖ್ಯವಾದ ಘಟನೆಯಾಗಿದೆ. ಯಾಕೆಂದರೆ ಜೀವನಪೂರ್ತಿ ನಾವು ನಮ್ಮ ಜೀವನವನ್ನು ಅದೇ ಸಂಗಾತಿ (Partner)ಯೊಂದಿಗೆ ಕಳೆಯಬೇಕು. ಆದುದರಿಂದ ಮದುವೆಗೂ ಮುನ್ನ ಒಬ್ಬರನ್ನೊಬ್ಬರು ಸರಿಯಾಗಿ ತಿಳಿದುಕೊಳ್ಳೋದು ಮುಖ್ಯ. ಆದರೆ ಕೆಲವೊಮ್ಮೆ ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ಬಿರುಕು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಬಾರಿ ಇದಕ್ಕೆ ಮತ್ತೊಬ್ಬರ ಜೊತೆ ತಮ್ಮ ಸಂಬಂಧ (Relationship)ವನ್ನು ಕಂಪೇರ್ ಮಾಡಿಕೊಳ್ಳುವುದು ಕಾರಣವಾಗುತ್ತದೆ. ಅವರು ಎಲ್ಲೆಲ್ಲಾ ಟ್ರಿಪ್ ಹೋಗ್ತಾರೆ, ಅವ್ರು ಕಾರ್ ತಗೊಂಡಿದ್ದಾರೆ, ಹೊಸ ಮನೆ ಖರೀದಿಸಿದ್ದಾರೆ ಮೊದಲಾದ ಕಾರಣಗಳು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ.

ಸಂಬಂಧವನ್ನು ಇತರ ದಂಪತಿ (Couple)ಗಳಿಗೆ ಹೋಲಿಸುವುದು ಮತ್ತು ಇತರರು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಎಂಬ ಗ್ರಹಿಕೆಯಲ್ಲಿ ಪ್ರತಿದಿನ ಬದುಕುವುದು ನಿಮ್ಮ ಪ್ರೀತಿಯ ಜೀವನವನ್ನು ಅಪಾಯಕ್ಕೆ ಸಿಲುಕಿಸಬಹುದು. ಮಾನಸಿಕ ಆರೋಗ್ಯ ತಜ್ಞರು ಸಂಬಂಧದಲ್ಲಿ ಇಂಥಾ ಹೋಲಿಕೆಗಳನ್ನು ಕಡಿಮೆ ಮಾಡುವಂತೆ ಸೂಚಿಸುತ್ತಾರೆ. ಮಾತ್ರವಲ್ಲ, ಸಂಬಂಧಗಳು ಮತ್ತೊಬ್ಬರಿಗೆ ಹೋಲಿಸಿ (Comparison) ನೋಡಿದಾಗ ಏನೆಲ್ಲಾ ಸಮಸ್ಯೆಯಾಗಬಹುದು ಎಂಬುದನ್ನು ವಿವರಿಸ್ತಾರೆ.

ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಉಳಿಸಿಕೊಳ್ಳೋದು ಕಷ್ಟವೇನಿಲ್ಲ ಬಿಡಿ…

ಸಂಬಂಧಗಳು ಹೋಲಿಸಿದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ?

1. ಮಾತನಾಡುವುದು ಕಡಿಮೆಯಾಗುತ್ತದೆ: ಸಂಬಂಧದಲ್ಲಿ ಹೋಲಿಕೆಗಳು ಅತಿರೇಕವಾದಾಗ, ಸಂಗಾತಿಗಳ ಮಧ್ಯೆ ಸಂವಹನದಲ್ಲಿ ಸ್ಥಗಿತ ಅಥವಾ ಕೊರತೆಯು ಸುಲಭವಾಗಿ ಸಂಭವಿಸಬಹುದು. ನಿಮ್ಮಿಂದ ಬರುವ ಕಾಮೆಂಟ್‌ಗಳು ಪುನರಾವರ್ತಿತ, ಕಿರಿಕಿರಿ ಮತ್ತು ಪ್ರಚೋದಿಸುವಂತೆ ಪಾಲುದಾರರಿಗೆ ಅನಿಸಬಹುದು. ಮತ್ತೊಬ್ಬರು ಸಂಗಾತಿಗೆ ಹೆಚ್ಚು ಸಮಯ ಕೊಡುವುದನ್ನು ನೋಡಿ ನಮ್ಮ ಸಂಬಂಧ ಸರಿಯಾಗಿಲ್ಲ ಎಂದು ಅನಿಸಿ ಇಬ್ಬರೂ ಪರಸ್ಪರ ಮಾತನಾಡುವುದನ್ನು ಕಡಿಮೆ ಮಾಡಬಹುದು.

2. ಇಬ್ಬರ ನಡುವೆ ಹೆಚ್ಚು ಜಗಳ: ಸಂಬಂಧದಲ್ಲಿ ಇರುವವರು ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಒಬ್ಬೊಬ್ಬರ ಔದ್ಯೋಗಿಕ ಜೀವನ, ವೈಯುಕ್ತಿಕ ಸಮಸ್ಯೆಗಳು ಬೇರೆ ಬೇರೆ ಇರುತ್ತವೆ. ಅದಕ್ಕೆ ತಕ್ಕಂತೆ ಒತ್ತಡವೂ (Pressure) ಇರಬಹುದು. ಹೀಗಾಗಿ ಸಂಗಾತಿಗೆ ನೀಡುವ ಸಮಯವೂ ವ್ಯತ್ಯಸ್ಥವಾಗಿರಬಹುದು. ಆದರೆ ಇದನ್ನು ಮತ್ತೊಬ್ಬರಿಗೆ ಕಂಪೇರ್ ಮಾಡಿ ನೋಡಿದಾಗ ಸಂಬಂಧದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳುತ್ತದೆ. ಇಬ್ಬರ ನಡುವೆ ಹೆಚ್ಚು ಜಗಳವಾಗಬಹುದು.

ಸ್ನೇಹಿತರ ನಡುವೆ ಪ್ರೀತಿ ಹುಟ್ಟಿದಾಗ…. ಏನು ಬದಲಾವಣೆ ನಿಮ್ಮಲ್ಲಾಗಬೇಕು?

3. ಒಟ್ಟಾರೆ ಅಸಮಾಧಾನ ಹೆಚ್ಚಳ: ಯಾವುದೇ ಸಂಬಂಧವನ್ನು ಮತ್ತೊಬ್ಬರ ಜೀವನಕ್ಕೆ ಕಂಪೇರ್ ಮಾಡಿ ನೋಡಿದಾಗ ಅಸಮಾಧಾನ ಹೆಚ್ಚುತ್ತದೆ. ಸಣ್ಣಪುಟ್ಟ ವಿಷಯಗಳೂ ಇಷ್ಟವಾಗದೇ ಇರಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ನಡೆಸುತ್ತಿರುವ ಜೀವನದ ಗುಣಮಟ್ಟವನ್ನು ನೀವು ನಿಜವಾಗಿಯೂ ಅಸ್ತಿತ್ವದಲ್ಲಿರುವ ಸನ್ನಿವೇಶಗಳಿಂದ ಸಮರ್ಥಿಸುವುದಕ್ಕಿಂತ ಹೆಚ್ಚು ನಕಾರಾತ್ಮಕ ರೀತಿಯಲ್ಲಿ ಮೌಲ್ಯಮಾಪನ ಮಾಡಬಹುದು. ಪರಿಣಾಮವಾಗಿ, ನೀವು ಹೊಂದಿರುವ ವ್ಯಕ್ತಿಯೊಂದಿಗೆ ನೀವು ಏಕೆ ಇದ್ದೀರಿ ಎಂದು ನೀವು ಆಶ್ಚರ್ಯ ಪಡಲು ಪ್ರಾರಂಭಿಸಬಹುದು. ಇದು ಸಂಬಂಧ ಹದಗೆಡಲು ಕಾರಣವಾಗುತ್ತದೆ.

ಸಂಬಂಧವನ್ನು ಹೋಲಿಸುವುದನ್ನು ನಿಲ್ಲಿಸುವುದು ಹೇಗೆ ?
ಯಾವಾಗಲೂ ನೀವು ಅನುಭವಿಸುತ್ತಿರುವ ಜೀವನ, ನಿಮ್ಮ ಸಂಬಂಧಗಳ ಬಗ್ಗೆ ಉತ್ತಮ ಮನೋಭಾವ ಇಟ್ಟುಕೊಳ್ಳಿ. ಯಾರ ಜೀವನವೂ ಪರಿಪೂರ್ಣವಲ್ಲ. ಎಲ್ಲರ ಜೀವನದಲ್ಲಿಯೂ ಸಮಸ್ಯೆಗಳಿರುತ್ತವೆ. ಹೀಗಾಗಿ ಜೀವನ (Life)ವನ್ನು, ಸಂಬಂಧವನ್ನು ನೋಡುವ ದೃಷ್ಟಿ ಪ್ರತಿಯೊಬ್ಬರದೂ ವ್ಯತ್ಯಸ್ಥವಾಗಿರುತ್ತದೆ. ಎಲ್ಲಾ ಸಂಗಾತಿಗಳು ಒಂದೇ ರೀತಿ ವರ್ತಿಸಬೇಕೆಂದಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ಪ್ರೀತಿ ಕಡಿಮೆಯಿದೆ ಎಂಬ ಅರ್ಥವೂ ಇಲ್ಲ. ಹೀಗಾಗಿ ಪ್ರೀತಿಯ ಸಂಬಂಧವನ್ನು ಮತ್ತೊಬ್ಬರಿಗೆ ಕಂಪೇರ್ ಮಾಡುವುದು ನಿಲ್ಲಿಸಬೇಕು. ಇದರಿಂದ ಜೀವನದಲ್ಲಿ ಖುಷಿ ಖುಷಿಯಾಗಿರಬಹುದು.

Relationship Tips: ಮದುವೆಯಾದ ಬಳಿಕ ಎಕ್ಸ್‌ ಜತೆ ಸಂಪರ್ಕದಲ್ಲಿರ್ಬೇಕಾ, ಬೇಡ್ವಾ?

Follow Us:
Download App:
  • android
  • ios