ಸ್ನೇಹಿತರ ನಡುವೆ ಪ್ರೀತಿ ಹುಟ್ಟಿದಾಗ…. ಏನು ಬದಲಾವಣೆ ನಿಮ್ಮಲ್ಲಾಗಬೇಕು?
ಒಬ್ಬ ಹುಡುಗ ಮತ್ತು ಹುಡುಗಿ ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಅನ್ನೋ ಫಿಲ್ಮೀ ಡೈಲಾಗ್ ನೀವು ಬಹಳಷ್ಟು ಸಲ ಕೇಳಿರುತ್ತೀರಿ. ಆದರೆ ನಿಜ ಜೀವನದಲ್ಲೂ ಕೆಲವೊಮ್ಮೆ ಇದು ನಿಜಾ ಎನಿಸುತ್ತೆ. ಸ್ನೇಹಿತರಾಗಿದ್ದ ಇಬ್ಬರ ನಡುವೆ ಹೇಗೆ ಪ್ರೀತಿ ಬೆಳೆಯಿತು ಅನ್ನೋದೆ ತಿಳಿಯೋದಿಲ್ಲ. ಈ ಬದಲಾದ ಸಂಬಂಧವನ್ನು ಜೀವಂತವಾಗಿಡಲು ನೀವೇನು ಮಾಡಬೇಕು ಅನ್ನೋದನ್ನು ನೋಡೋಣ.
ಸಾಮಾನ್ಯವಾಗಿ, ಹೆಚ್ಚಿನ ಸಂಬಂಧಗಳು ಸ್ನೇಹದಿಂದ (friendship turn into love) ಪ್ರಾರಂಭವಾಗುತ್ತವೆ. ಆದರೆ ಅದೇ ಸ್ನೇಹ ಸಂಬಂಧ ಯಾವಾಗ ಪ್ರೀತಿಯಾಗಿ ಬದಲಾಗುತ್ತದೆ ಎಂದು ತಿಳಿಯೋದೇ ಇಲ್ಲ. ಸ್ನೇಹ ಸಂಬಂಧವನ್ನು ಪ್ರೀತಿಯನ್ನಾಗಿ ಪರಿವರ್ತಿಸಲು ಜನ ತುಂಬಾ ತಡ ಮಾಡ್ತಾರೆ. ಇಬ್ಬರ ನಡುವೆ ಈಗ ಕೇವಲ ಸ್ನೇಹ ಮಾತ್ರ ಉಳಿದಿಲ್ಲ, ಪ್ರೀತಿಯು ಚಿಗುರೊಡೆಯುತ್ತಿದೆ ಎಂದು ತಿಳಿದಾಗ ಅವರು ಆ ಪ್ರೀತಿಯನ್ನು ಮಧುರವಾಗಿಸಲು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾದಾಗ, ಅದನ್ನು ಸುಂದರಗೊಳಿಸಲು ನೀವೇನು ಮಾಡಬೇಕು? ಅನ್ನೋದನ್ನು ನಾವಿಂದು ನೋಡೋಣ.
ಈ ಅಭ್ಯಾಸಗಳನ್ನು ಬೆಳೆಸಿ (make these habits)
ಸ್ನೇಹ ಸಂಬಂಧವು ಪ್ರೀತಿಯಾಗಿ ಬದಲಾದಾಗ, ಇಬ್ಬರು ವ್ಯಕ್ತಿಗಳ ಅನೇಕ ಹವ್ಯಾಸಗಳು ಒಂದೇ ಆಗಿರುತ್ತವೆ .ಹಾಗಾಗಿ, ನೀವು ಸಂಗಾತಿಯೊಂದಿಗೆ ನಿಮ್ಮ ನೆಚ್ಚಿನ ಹವ್ಯಾಸವನ್ನು ಮಾಡಬಹುದು. ಉದಾಹರಣೆಗೆ, ಡೇಟಿಂಗ್‌ಗೆ ಹೋಗುವುದರಿಂದ ಹಿಡಿದು ಈಜು ಮತ್ತು ಕಲಾ ಪ್ರದರ್ಶನದಂತಹ ಹವ್ಯಾಸಗಳನ್ನು ಜೊತೆಯಾಗಿ ಟ್ರೈ ಮಾಡೋ ಮೂಲಕ, ನಿಮ್ಮಿಬ್ಬರ ಸಂಬಂಧ ಮತ್ತಷ್ತು ಗಟ್ಟಿಯಾಗುವಂತೆ ಮಾಡಬೇಕು.
ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ (understand each other)
ಯಾವುದೇ ಸಂಬಂಧವನ್ನು ಬಲಪಡಿಸಲು, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಿಮ್ಮ ಸಂಗಾತಿಯ ನಡವಳಿಕೆ ಗಮನಿಸುವ ಮೂಲಕ ಅವರನ್ನು ಅರ್ಥಮಾಡಿಕೊಳ್ಳಲು ಸಹ ನೀವು ಪ್ರಯತ್ನಿಸಬಹುದು. ಸಂಗಾತಿಯ ಇಷ್ಟಗಳು ಮತ್ತು ಇಷ್ಟವಿಲ್ಲದಿರುವಿಕೆಗಳನ್ನು ತಿಳಿಯಲು, ಅವರೊಂದಿಗೆ ಡೇಟ್ ಗೆ ಹೋಗಬೇಕು. ಇದರಿಂದ ಅರ್ಥಮಾಡಿಕೊಳ್ಳಲು ಸುಲಭವಾಗುತ್ತೆ.
ತಪ್ಪುಗಳನ್ನು ಸಹ ಸ್ವೀಕರಿಸಿ (accept the mistakes)
ಫ್ರೆಂಡ್ ಶಿಪ್ ಅನ್ನು ಪ್ರೀತಿಯಾಗಿ ಪರಿವರ್ತಿಸಿದ ನಂತರ, ಸಂಗಾತಿಯ ಒಳ್ಳೆಯ ಗುಣಗಳು ಮತ್ತು ಅವರ ನ್ಯೂನತೆಗಳನ್ನು ಸಮಾನವಾಗಿ ಸ್ವೀಕರಿಸಿ. ಒಂದು ವೇಳೆ ಒಬ್ಬರಿಂದ ತಪ್ಪಾದರೆ, ಆ ತಪ್ಪನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂದು ಒಬ್ಬರಿಗೊಬ್ಬರು ಪ್ರಾಮಿಸ್ ಮಾಡಿ. ಇದು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವುದಲ್ಲದೆ, ನಿಮ್ಮ ಸಂಬಂಧವೂ ಸಹ ತುಂಬಾ ಬಲಗೊಳ್ಳುತ್ತದೆ.
ಎಲ್ಲವನ್ನೂ ತುಂಬಾ ಸಿರಿಯಸ್ ಆಗಿ ತೆಗೊಳೋದು ಬೇಡ
ಸ್ನೇಹಿತರಾಗಿದ್ದಾಗ ಪೂರ್ತಿಯಾಗಿ ಎಂಜಾಯ್ ಮಾಡುತ್ತಿದ್ದವರು, ಪ್ರೀತಿ ಬೆಳೆದ ಮೇಲೆ ಎಲ್ಲವನ್ನೂ ಸೀರಿಯಸ್ ಆಗಿ ಥಿಂಕ್ ಮಾಡಲು ಆರಂಭಿಸುತ್ತಾರೆ. ಇದರಿಂದಾಗಿ ಇಬ್ಬರ ನಡುವಿನ ಸ್ನೇಹದ ಮೇಲೆ ಪರಿಣಾಮ ಬೀರಬಹುದು. ಆದುದರಿಂದ ಪ್ರೀತಿ ಬೆಳೆದ ಮೇಲೆಯೂ ನೀವೂ ಸ್ನೇಹಿತರಂತೆ ಎಂಜಾಯ್ ಮಾಡಿದರೆ ಲೈಫ್ ಚೆನ್ನಾಗಿರುತ್ತೆ.
ಜೊತೆಯಾಗಿ ಸ್ನೇಹಿತರೊಂದಿಗೆ ಎಂಜಾಯ್ ಮಾಡಿ (enjoy with your friends)
ಸಾಮಾನ್ಯವಾಗಿ, ಫ್ರೆಂಡ್ ಶಿಪ್ ಅನ್ನು ಪ್ರೀತಿಯಾಗಿ ಪರಿವರ್ತಿಸಿದ ನಂತರ, ಕಪಲ್ಸ್ ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡ್ತಾರೆ. ಆದರೆ ಪಾರ್ಟಿ ಮಾಡುವ ಮೂಲಕ ಅಥವಾ ನಿಮ್ಮ ಕಾಮನ್ ಸ್ನೇಹಿತರೊಂದಿಗೆ ಒಟ್ಟಿಗೆ ಸೇರುವ ಮೂಲಕ ಎಂಜಾಯ್ ಮಾಡ್ತಾ, ನೀವು ನಿಮ್ಮ ಸಂಬಂಧದ ಹಳೆಯ ನೆನಪುಗಳನ್ನು ಮೆಲುಕು ಹಾಕಬಹುದು..
ಸಾಥ್ ನೀಡಿ
ಸ್ನೇಹಿತರಾಗಿರೋದ್ರಿಂದ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಹೆಚ್ಚಿನ ಎಲ್ಲಾ ವಿಷ್ಯಗಳೂ ಗೊತ್ತಿರುತ್ತೆ. ಇಂತಹ ಸಂದರ್ಭದಲ್ಲಿ ನಿಮ್ಮ ಸ್ನೇಹ ಪ್ರೀತಿಗೆ ತಿರುಗಿದಾಗ ಒಬ್ಬರಿಗೊಬ್ಬರು ಹೆಚ್ಚಿನ ರೀತಿಯಲ್ಲಿ ಸಾಥ್ ನೀಡಬೇಕು. ತನ್ನ ಸ್ನೇಹಿತೆ ಅಥವಾ ಸಂಗಾತಿಯ ಎಲ್ಲಾ ಕನಸುಗಳಿಗೆ ಬೆನ್ನೆಲುಬಾಗಿ ನಿಂತು, ಕನಸು ನನಸು ಮಾಡುವ ಸ್ಪೂರ್ತಿ ತುಂಬಿದಾಗ ಆ ಸ್ನೇಹ ಚೆನ್ನಾಗಿರುತ್ತೆ.