Asianet Suvarna News Asianet Suvarna News

ಯುವಕರಿಗೇಕೆ ವಯ್ಯಾರದ ಆಂಟಿಯರೇ ಹೆಚ್ಚು ಇಷ್ಟವಾಗ್ತಾರೆ?

ಕೆಲವು ಯುವಕರು ಹಾಗೆಯೇ, ಅಮ್ಮನ ವಯಸ್ಸಿನ ಆಂಟಿಯರ ಮೇಲೆ ಎಲ್ಲಿಲ್ಲದ ವ್ಯಾಮೋಹ. ಇವರ ಫ್ರೆಂಡ್ಸ್ ಎಲ್ಲರೂ ತಮ್ಮ ಜೂನಿಯರ್ ಅಥವಾ ಕ್ಲಾಸ್‌ಮೇಟ್ಸ್ ಪ್ರೀತಿಯಲ್ಲಿ ಬಿದ್ದರೆ, ಇವರು ಮಾತ್ರ ವಯಸ್ಸಾದ ಮಹಿಳೆಯರ ಬೆನ್ನ ಹಿಂದೆ ಬೀಳುತ್ತಾರೆ. ಯಾಕೆ ಹೀಗೆ?

Reasons Why Men Have Relationships With Older Women Vin
Author
First Published Oct 2, 2022, 12:13 PM IST

ಕಾಲ ಬದಲಾಗಿದೆ. ಸಂಬಂಧಗಳಿಗೆ ಹಿಂದಿನ ಕಾಲದಲ್ಲಿದ್ದ ಪಾವಿತ್ರ್ಯತೆ ಈಗ ಉಳಿದಿಲ್ಲ. ವಯಸ್ಸಿನ ಅಂತರವಿಲ್ಲದೆ ಪುರುಷರು, ಮಹಿಳೆಯರು ಸಂಬಂಧವನ್ನಿಟ್ಟುಕೊಳ್ಳುತ್ತಾರೆ. ಅದರಲ್ಲೂ ಯುವಕರು ತಮಗಿಂತ ವಯಸ್ಸಾದ ಮಹಿಳೆಯರೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಸಂಬಂಧಕ್ಕೆ ವಯಸ್ಸು ಅಡ್ಡಿಯಲ್ಲ ಎನ್ನುತ್ತಾರೆ. ಆದರೂ ಯುವಕರು ವಯಸ್ಸಾದ ಮಹಿಳೆಯರನ್ನೇ ಹೆಚ್ಚು ಇಷ್ಟಪಡಲು ಕಾರಣವೇನು ಇಲ್ಲಿದೆ ಹೆಚ್ಚಿನ ಮಾಹಿತಿ.

ಅನುಭವ ಮುಖ್ಯ ಕಾರಣ: ಲೈಂಗಿಕ ಕ್ರಿಯೆ (Sex)ಯಲ್ಲಿ ಮಹಿಳೆಯರು ಹೆಚ್ಚು ಸಕ್ರಿಯವಾಗಿರಬೇಕೆಂದು ಪುರುಷರು (Men) ಬಯಸುತ್ತಾರೆ. ಹೀಗಾಗಿ ತಮಗಿಂತ ಹಿರಿಯ ವಯಸ್ಸಿನ ಪಾರ್ಟ್‌ನರ್‌ನ್ನು ಹುಡುಕಿಕೊಳ್ಳುತ್ತಾರೆ. ವಯಸ್ಸಾದ ಮಹಿಳೆಯರು (Woman) ಹೆಚ್ಚು ಲೈಂಗಿಕವಾಗಿ ಪ್ರಬುದ್ಧರಾಗಿದ್ದಾರೆ. ಅವರು ಪುರುಷರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಪುರುಷರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂಬುದು ಪುರುಷರ ಭಾವನೆ. ಇದು ಪುರುಷರು ಮಹಿಳೆಯರನ್ನು ಉತ್ತಮವಾಗಿ ತೃಪ್ತಿಪಡಿಸಲು ಸಹಾಯ ಮಾಡುತ್ತದೆ.

ಈ ವಿಷ್ಯಗಳನ್ನು ಪುರುಷರು ಯಾರಿಗೂ ಹೇಳಬಾರದು, ಹೇಳಿದ್ರೆ ಮರ್ಯಾದೆ ಹರಾಜು!

ಭಾವನಾತ್ಮಕ ಸಂಬಂಧ: ಭಾವನಾತ್ಮಕ ಸಂಬಂಧ (Emotional attachment) ಎಲ್ಲಾ ರೀತಿಯ ಸಂಬಂಧಗಳಿಗೂ ಅಗತ್ಯವಾಗಿದೆ. ಮೊದಲು ಇದು ಸ್ನೇಹದಿಂದ ಆರಂವಾಗಬಹುದು. ನಂತರ ಇದು ವಿಶೇಷ ಸಂಬಂಧಕ್ಕೆ ಮುಂದುವರಿಯಬಹುದು. ಕೆಲಸದ ಸ್ಥಳದಲ್ಲಿ ವಯಸ್ಸಾದ ಮಹಿಳೆಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಾಗ ಇಂತಹ ಸಂಬಂಧಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಸಾಮಾನ್ಯವಾಗಿ, ಪುರುಷರು ಚಿಂತಿತರಾಗಿದ್ದಾರೆ ಮತ್ತು ಹಾಸಿಗೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಒತ್ತಡವನ್ನು ಹೊಂದಿರುತ್ತಾರೆ. ಆದರೆ ಈ ಬಗ್ಗೆ ಅನುಭವ ಹೊಂದಿರುವ ಮಹಿಳೆಯರು ಸಿಕ್ಕಾಗ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ಪ್ರಬುದ್ಧರಾಗಿದ್ದಾರೆ. ಈ ವ್ಯವಹಾರಗಳು ಲೈಂಗಿಕವಾಗಿ ಪ್ರಚೋದಿಸುತ್ತವೆ.

ಹಣಕಾಸಿನ ಸಮಸ್ಯೆಯಿರುವುದಿಲ್ಲ: ಇವತ್ತಿನ ಕಾಲದಲ್ಲಿ ಪುರುಷರ ಹಾಗೆಯೇ ಮಹಿಳೆಯರು ಸಹ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಅದರಲ್ಲೂ ಹಿರಿಯ ವಯಸ್ಸಿನ ಮಹಿಳೆಯರು ಆರ್ಥಿಕವಾಗಿ (Financial) ಸದೃಢರಾಗಿರುತ್ತಾರೆ. ಈಗ ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಪುರುಷರು ಮತ್ತು ಮಹಿಳೆಯರು ಇಬ್ಬರೂ ಹಣವನ್ನು ಹೊಂದಿದ್ದಾರೆ. ಕೆಲವು ಹೆಂಗಸರು ಹಣ ಕೊಟ್ಟು ಕೆಲವು ಗಂಡಸರನ್ನು ತಮ್ಮ ಕಷ್ಟಕಾಲದಲ್ಲಿ ಜೊತೆಯಾಗಿ ಇಟ್ಟುಕೊಳ್ಳುತ್ತಾರೆ. ಯುವಕರು ಇಂಥಾ ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ. ಅಂತಹ ಮಹಿಳೆಯರು ಆ ವ್ಯಕ್ತಿಯ ಕುಟುಂಬಕ್ಕೆ ಹಣ (Money) ಬೇಕಾದಾಗ ಎಲ್ಲವನ್ನೂ ಕೊಟ್ಟು ಸಹಾಯ ಮಾಡುತ್ತಾರೆ.

50 ವರ್ಷದ ವ್ಯಕ್ತಿ ಮದುವೆಯಾದ 25ರ ಯುವತಿ, ನಾನೇನ್ ಪಾಪ ಮಾಡ್ದೆ ಕೇಳ್ತಿದ್ದಾಳೆ!

ಆಧುನಿಕ ನಕಲಿ ಸಂಬಂಧ: ಇತ್ತೀಚಿನ ದಿನಗಳಲ್ಲಿ ಆಧುನಿಕ ರೀತಿಯ ನಕಲಿ ಸಂಬಂಧಗಳು ಹೆಚ್ಚಾಗುತ್ತಿವೆ. ಜನರು ಪ್ರೀತಿಯನ್ನು ಬಿಟ್ಟು ಉಳಿದೆಲ್ಲಾ ಮೋಜಿಗಾಗಿ ಸಂಬಂಧಗಳ ಮೊರೆ ಹೋಗುತ್ತಾರೆ. ಹೀಗಾಗಿ ಸಂಬಂಧಗಳ ಗಾಢತೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ವಯಸ್ಸಿನ ವ್ಯತ್ಯಾಸ ಸಹ ಗಣನೆಗೆ ಬರುವುದಿಲ್ಲ. ಪುರುಷರು ತಮ್ಮ ಭಯ (Fear) ಮತ್ತು ಆತಂಕಗಳನ್ನು ತೊಡೆದುಹಾಕಲು ತನಗಿಂತ ವಯಸ್ಸಾದ ಮಹಿಳೆಯೊಂದಿಗೆ ಸಂಬಂಧ ಹೊಂದುವುದು ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾರೆ. 

ಹಿರಿಯ ಮಹಿಳೆಯರು ಉತ್ತಮ ಸಲಹೆ ನೀಡುತ್ತಾರೆ: ಹಿರಿಯ ಮಹಿಳೆಯರು ಜೀವನದಲ್ಲಿ ಹೆಚ್ಚು ಅನುಭವವನ್ನು (Experience) ಹೊಂದಿರುತ್ತಾರೆ. ಹೀಗಾಗಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಾಗ ಸಮರ್ಥವಾಗಿ ಸಲಹೆಯನ್ನು (Suggestion) ನೀಡುತ್ತಾರೆ. ಮಾತ್ರವಲ್ಲ ಇಂಥಾ ಮಹಿಳೆಯರು ತಮ್ಮ ಜೊತೆಯಲ್ಲಿರುವ ಪುರುಷರೊಂದಿಗೆ ಸಂಬಂಧದಲ್ಲಿ ಸಂಪೂರ್ಣ ತೃಪ್ತಿಯನ್ನು ನೀಡುತ್ತಾರೆ. ಇದು ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸಂಗಾತಿಗಳಿಬ್ಬರಿಗೂ ಹೆಚ್ಚು ಆಹ್ಲಾದಕರ ಅನುಭವವನ್ನು ಹೊಂದಲು ಸಹಾಯ ಮಾಡುತ್ತದೆ.

Follow Us:
Download App:
  • android
  • ios