Asianet Suvarna News Asianet Suvarna News

Relationship Tips : ಇಷ್ಟಪಟ್ಟು ಪ್ರೀತಿಸಿ ಮದುವೆಯಾದವರು ದೂರವಾಗೋದ್ಯಾಕೆ?

ಪ್ರೀತಿ ಇಲ್ಲದ ಮೇಲೆ ಸಂಬಂಧಕ್ಕೆ ಬೆಲೆ ಇಲ್ಲ. ನೀನೇ ಎಲ್ಲ ಎಂದು ಬದುಕು ಶುರು ಮಾಡುವ ಪ್ರೇಮ ಜೋಡಿ ಮದುವೆಯಾದ ಒಂದೇ ತಿಂಗಳಲ್ಲಿ ಬೆನ್ನು ಹಾಕಿ ಕುಳಿತುಕೊಳ್ತಾರೆ. ಇಬ್ಬರ ಮಧ್ಯೆ ಮೊದಲಿದ್ದ ಪ್ರೀತಿ ಸತ್ತು ಹೋಗಿರುತ್ತದೆ. ಸ್ವರ್ಗದಿಂದ ನರಕಕ್ಕೆ ಬಂದ ಅನುಭವವಾಗುತ್ತದೆ.

Reasons Of Love Marriages Break
Author
Bangalore, First Published Jan 8, 2022, 7:01 PM IST

ಲವ್ ಮ್ಯಾರೇಜ್ (Love Marriage ) ಮತ್ತು ಅರೇಂಜ್ಡ್ ಮ್ಯಾರೇಜ್(Arranged Marriage) ಇದ್ರ ಬಗ್ಗೆ ಸದಾ ಚರ್ಚೆಗಳಾಗುತ್ತಿರುತ್ತವೆ. ಇದರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಪ್ರಶ್ನೆಗಳು ಏಳ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ (Love)ಸಿ ಮದುವೆ(Marriage)ಯಾಗುವುದು ಸಾಮಾನ್ಯವಾಗಿದೆ. ಲವ್ ಮ್ಯಾರೇಜ್ ಫ್ಯಾಷನ್ (Fashion )ಕೂಡ ಹೌದು. ಪ್ರೀತಿಸಿ ಮದುವೆಯಾದವರಲ್ಲಿ ಹೊಂದಾಣಿಕೆ ಹೆಚ್ಚು ಎಂದು ಅನೇಕರು ನಂಬಿದ್ದಾರೆ. ನಾವಿಲ್ಲಿ ಇದು ತಪ್ಪು ಎನ್ನುತ್ತಿಲ್ಲ. ಆದ್ರೆ ಪ್ರೀತಿಸಿ ಮದುವೆಯಾದವರೂ ಕೆಲವೊಂದು ತೊಂದರೆಗಳನ್ನು ಎದುರಿಸುತ್ತಾರೆ. ಅನೇಕ ಪ್ರೇಮ ವಿವಾಹಗಳು ಮುರಿದು ಬಿದ್ದಿವೆ. ಪ್ರೇಮ ವಿವಾಹ ವಿಚ್ಛೇದನಕ್ಕೆ ಹೋಗಲು ಕಾರಣವೇನು? ದಂಪತಿ ಮಧ್ಯೆ ಮೂಡುವ ಸಮಸ್ಯೆಗಳು ಏನು ಎಂಬುದನ್ನು ನಾವಿಲ್ಲಿ ಹೇಳ್ತೆವೆ.  

ಪ್ರೇಮ ವಿವಾಹ ಮುರಿದು ಬೀಳಲು ಕಾರಣಗಳು : 

ಹಿರಿಯರ ಅನುಪಸ್ಥಿತಿ : ಪ್ರೀತಿಯಲ್ಲಿ ಬಿದ್ದವರು ಪ್ರಪಂಚ ಮರೆಯುತ್ತಾರೆ. ತಮ್ಮ ಸುತ್ತಲೂ ಗೋಡೆ ಕಟ್ಟಿಕೊಂಡಿರುತ್ತಾರೆ. ಪ್ರೀತಿಸಿದ ವ್ಯಕ್ತಿ ಬಿಟ್ಟು ಅವರಿಗೆ ಮತ್ಯ್ತಾರೂ ಕಾಣಿಸುವುದಿಲ್ಲ. ಭಾರತದಲ್ಲಿ ಈಗ್ಲೂ ಪ್ರೇಮ ವಿವಾಹವನ್ನು ಎಲ್ಲ ಕುಟುಂಬಗಳು ಒಪ್ಪಿಕೊಳ್ಳುವುದಿಲ್ಲ. ಪ್ರೀತಿಯಲ್ಲಿ ಬಿದ್ದವರು,ಹಿರಿಯರ ಮಾತು ದಿಕ್ಕರಿಸಿ ಮದುವೆಯಾಗ್ತಾರೆ. ಕುಟುಂಬಸ್ಥರಿಂದ ದೂರವಾಗಿ ಸಂಸಾರ ಶುರು ಮಾಡ್ತಾರೆ. ಆದ್ರೆ ಸಂಸಾರ ಎಂಬುದು ಕೇವಲ ಇಬ್ಬರಲ್ಲ. ಎರಡು ಕುಟುಂಬಗಳು ಒಂದಾಗಬೇಕು. ಅನೇಕ ಬಾರಿ ಹಿರಿಯರ ಮಾರ್ಗದರ್ಶನ ಅಗತ್ಯವಿರುತ್ತದೆ. ಹಿರಿಯರಿಂದ ದೂರವಾದ ದಂಪತಿಗೆ ಯಾವುದೇ ಕಠಿವಾಣವಿರುವುದಿಲ್ಲ. ಈಗ್ಲೂ ಅನೇಕ ದಾಂಪತ್ಯ ಗಟ್ಟಿಯಾಗಿರಲು ಹಿರಿಯರ ಸಲಹೆ,ಭಯ ಕಾರಣವಾಗಿದೆ. ಆದ್ರೆ ಪ್ರೇಮ ವಿವಾಹದಲ್ಲಿ ಭಯ,ಸಲಹೆ ಸಿಗುವುದಿಲ್ಲ.  

ವಾಸ್ತವದ ಅರಿವು : ಪ್ರೀತಿ ಕುರುಡು ಎಂಬ ಗಾದೆಯಿದೆ. ಪ್ರೀತಿಸುವಗ ಪ್ರತಿಯೊಂದು ವಸ್ತುವೂ ಸುಂದರವಾಗಿ ಕಾಣುತ್ತದೆ. ಸ್ವರ್ಗದಲ್ಲಿ ತೇಲಿದ ಅನುಭವವಾಗುತ್ತದೆ. ಆದ್ರೆ ಮದುವೆ ಮದುವೆಯೇ. ಮದುವೆಯಾದ್ಮೇಲೆ ಸಂಗಾತಿಯ ನಿಜ ಸ್ವರೂಪ ಹೊರ ಬರುತ್ತದೆ. ಕನಸಿನ ಲೋಕದಿಂದ ಬಡಿದೆಬ್ಬಿಸಿದ ಅನುಭವವಾಗುತ್ತದೆ. 

ಅವಸರದ ಮದುವೆ : ಪ್ರೇಮವಿವಾಹ ಪಾಪವಲ್ಲ. ತಪ್ಪೂ ಅಲ್ಲ. ಆದರೆ ಮದುವೆ ತಮಾಷೆಯಲ್ಲ. ಇಬ್ಬರು ಜೀವನ ಪರ್ಯಂತ ಒಟ್ಟಿಗೆ ಬಾಳಬೇಕು. ಬೇಕೆಂದಾಗ ಮದುವೆಯಾಗಿ ಬೇಡವಾದಾಗ ಹೊರ ನಡೆಯಲು ಇದು ಅತಿಥಿಗೃಹವಲ್ಲ. ಹಾಗಾಗಿ ಯಾವಾಗಲೂ ಸರಿಯಾಗಿ ಆಲೋಚನೆ ಮಾಡಿ ನಿರ್ಧಾರಕ್ಕೆ ಬರಬೇಕು. ಪ್ರೀತಿಸಿದ ತಕ್ಷಣ ಮದುವೆಯ ಆತುರಕ್ಕೆ ಬೀಳುವ ಅವಶ್ಯಕತೆಯಿಲ್ಲ. ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. ಮದುವೆಯ ನಿರ್ಧಾರವು ಕೊನೆಯದಾಗಿರಲಿ. ಮೊದಲು ನಿಮ್ಮ ಸಂಬಂಧಕ್ಕೆ ಅವಕಾಶ ನೀಡಿ. ಜೀವನ ಪರ್ಯಂತ ಇವರ ಜೊತೆ ಸಂತೋಷವಾಗಿರಬಲ್ಲಿರಾ ಎಂಬುದನ್ನು ಆಲೋಚಿಸಿ. ಆಕರ್ಷಣೆ ಮತ್ತು ನಿಜವಾದ ಪ್ರೀತಿಯ ನಡುವೆ ತುಂಬಾ ತೆಳುವಾದ ಗೆರೆಗಳಿರುವುದರಿಂದ, ಹೃದಯ ಮತ್ತು ಮನಸ್ಸ ಎರಡರ ಮಾತನ್ನು ಸರಿಯಾಗಿ ಆಲಿಸಿ. ಸಂಗಾತಿ ಸೌಂದರ್ಯ,ಅವರ ಐಷಾರಾಮಿ ಬದುಕು,ಅವರ ಮಾತು ಹೀಗೆ ಯಾವುದೋ ಒಂದನ್ನು ನೋಡಿ ಮದುವೆ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ.

Climate Change: ಪಕ್ಷಿಗಳಲ್ಲೂ ಡೈವೋರ್ಸ್: ಹೊಸ ಸಂಗಾತಿ ಹುಡುಕುತ್ತಿರುವ ಕಡಲು ಕೋಳಿಗಳು!

ಸಮಯ : ಪ್ರೇಮ ವಿವಾಹ ಮುರಿದು ಬೀಳಲು ಸಮಯ ಕೂಡ ಪ್ರಮುಖ ಕಾರಣ. ಮದುವೆಗೆ ಮುಂಚೆ ಇಬ್ಬರು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದರು. ಆದರೆ ವಿವಾಹದ ನಂತ್ರ ಬದುಕು ಬದಲಾಗುತ್ತದೆ. ಅನೇಕ ಜವಾಬ್ದಾರಿಗಳು ಹೆಗಲ ಮೇಲೆ ಬರುತ್ತವೆ. ಇದ್ರಿಂದಾಗಿ ಪರಸ್ಪರ ಸಮಯ ನೀಡುವುದು ಕಷ್ಟವಾಗುತ್ತದೆ. ಇದನ್ನು ಕೆಲವರು ತಪ್ಪಾಗಿ ತಿಳಿದುಕೊಂಡು ಸಂಗಾತಿಯಿಂದ ದೂರವಾಗ್ತಾರೆ. ಮತ್ತೆ ಕೆಲವರು ಸಿಗುವ ಸಮಯವನ್ನೂ ಸಂಗಾತಿಗೆ ನೀಡದೆ ನಿರ್ಲಕ್ಷ್ಯ ಮಾಡ್ತಾರೆ. ಇವೆರಡೂ ಸಂಬಂಧ ಹಾಳಾಗಲು ಕಾರಣವಾಗುತ್ತದೆ.

Friendship ಉಳಿಸಿಕೊಳ್ಬೇಕಂದ್ರೆ ನೀವೇನ್ ಮಾಡ್ಬೇಕು?

ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವುದು : 
ಪ್ರೇಮ ವಿವಾಹಕ್ಕಿಂತ ಮೊದಲು ಇಬ್ಬರು, ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಒಳ್ಳೆಯ ಹಾಗೂ ಕೆಟ್ಟ ಸ್ವಭಾವ ಗೊತ್ತಿರುತ್ತದೆ. ಇದೇ ಕೆಲವು ಬಾರಿ ಸಂಬಂಧ ಹಾಳಾಗಲು ಕಾರಣವಾಗುತ್ತದೆ. ಸಂಗಾತಿ ಕೆಟ್ಟ ಹವ್ಯಾಸವನ್ನು ಜಗಳದ ಸಂದರ್ಭದಲ್ಲಿ ಎತ್ತಿ ಹೇಳುವುದ್ರಿಂದ ಗಲಾಟೆ ದೊಡ್ಡದಾಗುತ್ತದೆ. ಸಂಗಾತಿ ಈ ಮಾತು ಮನಸ್ಸು ಹಾಳು ಮಾಡುತ್ತದೆ. ಇಬ್ಬರ ಮಧ್ಯೆ ಮನಸ್ತಾಪವನ್ನು ಹೆಚ್ಚು ಮಾಡುತ್ತದೆ.

Follow Us:
Download App:
  • android
  • ios