ಮಡದಿ ಪ್ರಾಮಾಣಿಕಳಾಗಿರಬಹುದು, ಆದರೆ ಎಲ್ಲವನ್ನೂ ಹೇಳಿ ಕೊಳ್ಳೋಲ್ಲ ಅವಳು!
ಸಂಬಂಧದಲ್ಲಿ ಮುಚ್ಚುಮರೆ ಇರ್ಬಾರದು ನಿಜ. ಆದ್ರೆ ಕೆಲವೊಂದು ಸಂದರ್ಭ ಹಾಗೂ ಪ್ರೀತಿ ಉಳಿಸಿಕೊಳ್ಳೋಕೆ ಮುಚ್ಚುಮರೆ ಅನಿವಾರ್ಯವಾಗುತ್ತದೆ. ಪತ್ನಿ, ಪತಿಯಿಂದ ಕೆಲ ವಿಷ್ಯ ಮರೆಮಾಡ್ತಾಳೆ. ಅದಕ್ಕೆ ಕಾರಣವೇನು ?
ವ್ಯಕ್ತಿಯೊಬ್ಬ ತನ್ನೆಲ್ಲ ಭಾವನೆಗಳನ್ನು ತೆರೆದಿಡುವ ಜಾಗ ಸಂಗಾತಿ ಮಡಿಲು. ದಾಂಪತ್ಯ ಜೀವನದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬಲವಾಗಿ ನಂಬಿದಾಗ ಮಾತ್ರ ಸುಖ ದಾಂಪತ್ಯ ಸಾಧ್ಯ. ಇಬ್ಬರ ಮಧ್ಯೆ ಗೌರವ, ಪ್ರೀತಿ, ವಿಶ್ವಾಸವಿರಬೇಕು. ಇಬ್ಬರು ತೆರೆದ ಮನಸ್ಸಿನಿಂದ ಬಾಳ್ವೆ ನಡೆಸಿದ್ರೆ ದಾಂಪತ್ಯ ಸುಖ ದುಪ್ಪಟ್ಟಾಗುತ್ತದೆ ಎಂಬ ಮಾತಿದೆ. ದಾಂಪತ್ಯದಲ್ಲಿ ಔಪಚಾರಿಕತೆಯ ಅಗತ್ಯತೆ ಇರೋದಿಲ್ಲ. ಸಂಗಾತಿಗಳು ಮನಸ್ಸು ಬಿಚ್ಚಿ ಮಾತನಾಡಿದಾಗ ಸಮಸ್ಯೆ ಬಗೆಹರಿಯುತ್ತದೆ. ಜಗಳವಾದ್ರೂ ಪರವಾಗಿಲ್ಲ ನೋವನ್ನು, ಕೋಪವನ್ನು ಮನಸ್ಸಿನಲ್ಲಿ ಮುಚ್ಚಿಡಬೇಡಿ ಎಂದು ತಜ್ಞರು ಹೇಳ್ತಾರೆ.
ಇಷ್ಟೆಲ್ಲದರ ಮಧ್ಯೆಯೂ ಅನೇಕ ದಂಪತಿ ಎಲ್ಲವನ್ನೂ ಸಂಗಾತಿ ಮುಂದೆ ಹೇಳೋದಿಲ್ಲ. ಕೆಲ ವಿಷ್ಯಗಳನ್ನು ಮುಚ್ಚಿಡ್ತಾರೆ. ಪತ್ನಿ (Wife) ಯಾದವಳು ಕೆಲ ಸಂಗತಿಯನ್ನು ಪತಿಗೆ ಹೇಳೋದಿಲ್ಲ. ಆಕೆ ಮುಚ್ಚಿಡಲು ಕೆಲ ವಿಶೇಷ ಕಾರಣವಿದೆ. ಪತ್ನಿ ಯಾಕೆ ಕೆಲ ಸಂಗತಿಯನ್ನು ಪತಿಯಿಂದ ಮರೆಮಾಡ್ತಾಳೆ ಎಂಬುದನ್ನು ನಾವಿಂದು ಹೇಳ್ತೆವೆ.
ಪತಿ ಭಾವನೆ ಅರಿಯೋದಿಲ್ಲ ಎನ್ನುವ ಕಾರಣ : ಸಾಮಾನ್ಯವಾಗಿ ಎಲ್ಲ ಮಹಿಳೆ (Woman) ಯರು ಭಾವನೆಗೆ ಹೆಚ್ಚು ಬೆಲೆ ನೀಡ್ತಾರೆ. ಪುರುಷರು ಅದನ್ನು ಪ್ರಾಕ್ಟಿಕಲ್ ಆಗಿ ನೋಡಲು ಬಯಸ್ತಾರೆ. ಇಬ್ಬರ ಸ್ವಭಾವದಲ್ಲಿ ಭಿನ್ನತೆ ಇರುತ್ತದೆ. ಪತಿಯ ಈ ಪ್ರಾಕ್ಟಿಕಲ್ ಜೀವನಕ್ಕೆ ಪತ್ನಿ ಸ್ವಲ್ಪ ಹಿಂದೇಟು ಹಾಕ್ತಾಳೆ. ತನ್ನ ಭಾವನೆಯನ್ನು ಪತಿ ಮುಂದೆ ಹೇಳಿದ್ರೆ ಆತ ಬೈಯ್ಯಬಹುದು ಇಲ್ಲವೆ ನಗಬಹುದು ಎಂದು ಭಾವಿಸುವ ಪತ್ನಿ ಕೆಲ ವಿಷ್ಯವನ್ನು ಆತನಿಗೆ ಹೇಳೋದಿಲ್ಲ. ತನ್ನಲ್ಲಿಯೇ ಅದನ್ನು ಮರೆಮಾಡುವ ಪ್ರಯತ್ನ ನಡೆಸ್ತಾಳೆ.
Valentine Day : ಪ್ರೀತಿ ಸಿಗ್ಬೇಕೆಂದ್ರೆ ಪ್ರೇಮಿಗಳ ದಿನ ಬಟ್ಟೆ ಮೇಲೆ ಗಮನವಿರಲಿ
ಸಂಬಂಧ (Relationship) ದಲ್ಲಿ ಸಮತೋಲನ : ಮದುವೆಯಾದ್ಮೇಲೆ ಮಹಿಳೆ ಬರೀ ಹೆಂಡತಿ ಮಾತ್ರವಲ್ಲ, ಅತ್ತಿಗೆ, ಸೊಸೆ, ತಾಯಿ, ಮಗಳು ಹೀಗೆ ನಾನಾ ಸಂಬಂಧವನ್ನು ನಿಭಾಯಿಸಬೇಕಾಗುತ್ತದೆ. ಕೆಲವೊಂದು ವಿಷ್ಯವನ್ನು ಪತಿಗೆ ಹೇಳಿದಾಗ ಅಲ್ಲಿನ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿರುತ್ತದೆ. ಮನೆಯಲ್ಲಿ ಶಾಂತತೆ ಕಾಪಾಡಿಕೊಳ್ಳಲು ತನ್ನ ಮೇಲೆ ಬೇರೆಯವರು ಆರೋಪ ಮಾಡಿದ್ರೂ ಅದನ್ನು ಪತಿಗೆ ಹೇಳದೆ ಮುಚ್ಚಿಡುತ್ತಾಳೆ ಪತ್ನಿ.
ಹಣಕಾಸಿನ ವಿಷ್ಯ : ಭಾರತ (India) ದ ಬಹುತೇಕ ಮನೆಗಳಲ್ಲಿ ಕುಟುಂಬ ನಿರ್ವಹಣೆ ಪತ್ನಿಯ ಹೊಣೆ. ಆಕೆ ಕೈಗೆ ಪತಿ ಒಂದಿಷ್ಟು ಹಣವನ್ನು ನೀಡಿ ತಿಂಗಳ ಖರ್ಚು ನೋಡಿಕೊಳ್ಳುವ ಜವಾಬ್ದಾರಿವಹಿಸುತ್ತಾನೆ. ಈ ಸಮಯದಲ್ಲಿ ಮನೆ ತೂಗಿಸಿಕೊಂಡು ಹೋಗುವ ಜೊತೆಗೆ ತನಗಾಗಿ ಸ್ವಲ್ಪ ಹಣ ಉಳಿಸುವುದು ಆಕೆಗೆ ಅನಿವಾರ್ಯವಾಗಿರುತ್ತದೆ. ಹಾಗಾಗಿ ಹಣಕಾಸಿನ ವಿಷ್ಯದಲ್ಲಿ ಮಹಿಳೆ ಸುಳ್ಳು ಹೇಳ್ತಾಳೆ. ಗಂಡನಿಗೆ ತಿಳಿಯದೆ ಸ್ವಲ್ಪ ಹಣವನ್ನು ಸೇವ್ ಮಾಡ್ತಾಳೆ. ಆಕೆಯ ಈ ಕೆಲಸ ಆಪತ್ಕಾಲದಲ್ಲಿ ನೆರವಿಗೆ ಬರುತ್ತದೆ.
ಗಂಡನ ಸ್ವಭಾವಕ್ಕೆ ತಕ್ಕಂತೆ ಬರುತ್ತೆ ಸುಳ್ಳು : ಮೊದಲೇ ಹೇಳಿದಂತೆ ಪ್ರತಿಯೊಬ್ಬರ ಸ್ವಭಾವವೂ ಭಿನ್ನವಾಗಿರುತ್ತದೆ. ಪತಿ ಯಾವ ಮಾತಿಗೆ ಹೇಗೆ ಪ್ರತಿಕ್ರಿಯೆ ನೀಡ್ತಾನೆ ಎಂಬುದು ಮಹಿಳೆಗೆ ತಿಳಿದಿರುತ್ತದೆ. ಕೋಪದ ವ್ಯಕ್ತಿಯಾಗಿದ್ರೆ ಕೆಲವೊಂದು ವಿಷ್ಯವನ್ನು ಮರೆಮಾಚುವುದು ಅನಿವಾರ್ಯವಾಗುತ್ತದೆ. ದುಂದುಗಾರನಾಗಿದ್ದರೆ ಹಣದ ವಿಷ್ಯದಲ್ಲಿ ಸುಳ್ಳು ಹೇಳ್ಬೇಕಾಗುತ್ತದೆ. ಅನುಮಾನದ ವ್ಯಕ್ತಿಯಾಗಿದ್ದರೆ ಆ ಸಂದರ್ಭದಲ್ಲಿ ಕೂಡ ಪತ್ನಿ ಸುಖ ಸಂಸಾರಕ್ಕಾಗಿ ಕೆಲ ಸುಳ್ಳು ಹೇಳ್ತಾಳೆ. ಕೆಲ ವಿಷ್ಯವನ್ನು ಮುಚ್ಚಿಡುತ್ತಾಳೆ.
ಕ್ರಶ್ ಅಥವಾ ಮೊದಲ ಪ್ರೀತಿ : ಪತ್ನಿಯಾದವಳು ಎಂದಿಗೂ ತನ್ನ ಪತಿಗೆ ತನ್ನ ಮೊದಲ ಕ್ರಶ್ ಬಗ್ಗೆ ಅಥವಾ ಮಾಜಿ ಪ್ರೇಮಿಯ ನೆನಪಿನ ಬಗ್ಗೆ ಹೇಳೋದಿಲ್ಲ. ಆಕೆ ಎಲ್ಲ ವಿಷ್ಯವನ್ನು ನಿಮ್ಮ ಬಳಿ ಹಂಚಿಕೊಳ್ತಾಳೆ ಎಂದ್ರೂ ಇದನ್ನು ಆಕೆ ಮುಚ್ಚಿಡ್ತಾಳೆ.
Malaika Arora : ಗಂಡಸ್ರಿಗೆ ದಾಂಪತ್ಯ ಉಳಿಸಿಕೊಳ್ಳುವ ಗುಟ್ಟು ಹೇಳಿದ್ದಾಳೆ ನಟಿ
ರೋಗವನ್ನು ಮುಚ್ಚಿಡ್ತಾಳೆ ಪತ್ನಿ : ಬಹುತೇಕ ಮಹಿಳೆಯರು ಒಂದಲ್ಲ ಒಂದು ಶಾರೀರಿಕ ಸಮಸ್ಯೆಯನ್ನು ಎದುರಿಸ್ತಿರುತ್ತಾರೆ. ಆದ್ರೆ ಅದನ್ನು ಪತಿ ಮುಂದೆ ಹೇಳೋದಿಲ್ಲ. ವಿಷ್ಯ ಹೇಳಿ ಆತನಿಗೆ ನೋವು ನೀಡೋದು ಇವರಿಗೆ ಕಷ್ಟವಾಗುತ್ತದೆ.