ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ 15 ಜೋಡಿಗಳನ್ನು ಮತ್ತೆ ಒಂದುಗೂಡಿಸಿದ ಲೋಕ ಅದಾಲತ್
ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ 15 ಜೋಡಿಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಮತ್ತೆ ಒಗ್ಗಟ್ಟಾಗಿ ಜೀವನ ಮಾಡುವಂತೆ ಮಾಡಲಾಗಿದೆ.
ರಾಯಚೂರು (ಜು.08): ರಾಜ್ಯಾದ್ಯಂತ ಇಂದು ಮೆಗಾ ಲೋಕ್ ಅದಾಲತ್ ನಡೆಯುತ್ತಿದೆ. ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ 15 ಜೋಡಿಗಳು ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಡೈವೋರ್ಸ್ ಬೇಡವೆಂದು ಮತ್ತೆ ಒಗ್ಗಟ್ಟಾಗಿ ಜೀವನ ಮಾಡುವುದಕ್ಕೆ ಮುಂದಾಗಿದ್ದಾರೆ.
ಕೌಟುಂಬಿಕ ಜೀವನದಲ್ಲಿ ಹಾಗೂ ದಾಂಪತ್ಯದಲ್ಲಿ ವಿರ ಸಮೂಡಿದ್ದರಿಂದ ವಿವಾಹ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದ 15 ಜೋಡಿಗಳು ಈಗ ಮರಳಿ ಸಂಸಾರ ಜೀವನದತ್ತ ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಕುಟುಂಬ ನ್ಯಾಯಾಲಯದಲ್ಲಿ ಜರುಗಿದ ಲೋಕ ಅದಾಲತ್ ನಲ್ಲಿ ವಿಶೇಷ ಕಾರ್ಯಕ್ರಮವಾಗಿದೆ. ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಬಂದಿದ್ದ ಹಲವು ಜೋಡಿಗಳನ್ನು ರಾಜೀಸಂದಾನ ಮೂಲಕ ಒಂದುಗೂಡಿ ಜೀವನ ಮಾಡುವುದಕ್ಕೆ ಒಪ್ಪಿಕೊಂಡು ನ್ಯಾಯಾಲಯದಲ್ಲಿಯೇ ಹಾರ ಬದಲಾಯಿಸಿಕೊಂಡರು.
ಜುಲೈ 8ರಂದು ಮೆಗಾ ಲೋಕ್ ಅದಾಲತ್: 20 ಲಕ್ಷ ಕೇಸ್ ಇತ್ಯರ್ಥ ಗುರಿ
ತಿಳಿ ಹೇಳಿ ಒಂದುಗೂಡಿಸಿದ ನ್ಯಾಯಾಧೀಶರು: ಹಲವು ವರ್ಷದಿಂದ ಬೇರ್ಪಟ್ಟು ವಿಚ್ಚೇದನಕ್ಕಾಗಿ ನ್ಯಾಯಾಲಯ ಮೊರೆ ಹೊಕ್ಕ ಹಲವು ಜೋಡಿಗಳಿಗೆ ತಿಳಿ ಹೇಳಿ ಒಗ್ಗೂಡಿಸುವ ಕೆಲಸದಲ್ಲಿ ರಾಯಚೂರು ಜಿಲ್ಲಾ ಕುಟುಂಬ ನ್ಯಾಯಾಲಯ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಮಾರುತಿ ಬಗಾಡೆ, ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ವರ, ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಧಯಾನಂದ ಸೇರಿ ನ್ಯಾಯವಾದಿಗಳು, ದಂಪತಿಗಳು, ಕುಟುಂಬಸ್ಥರು ಹಾಗೂ ನ್ಯಾಯಾಲಯದ ಸಿಬ್ಬಂದಿ ಭಾಗಿಯಾಗಿದ್ದರು.
ಅಪಘಾತ ಪ್ರಕರಣಕ್ಕೆ 1.15 ಕೋಟಿ ಪರಿಹಾರ: ಇನ್ನು ಅಪಘಾತ ಪ್ರಕರಣ ಒಂದರಲ್ಲಿ ಸಂತ್ರಸ್ತ ವ್ಯಕ್ತಿಗೆ ವಿಮಾ ಕಂಪನಿಯಿಂದ 1.15ಕೋಟಿ ಪರಿಹಾರ ಘೋಷಣೆ ಮಾಡಲಾಗಿದೆ. ಅಪಘಾತ ಪ್ರಕರಣ ದಲ್ಲಿ ಕೆಳ ನ್ಯಾಯಾಲಯ 97 ಲಕ್ಷ ಪರಿಹಾರದ ತೀರ್ಪು ನೀಡಿತ್ತು. ಆದರೆ, ಇದನ್ನು ಕೊಡಲೊಪ್ಪದ ವಿಮಾ ಕಂಪನಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಇಂದು ಬೆಂಗಳೂರಿನ ಹೈಕೋರ್ಟ್‌ನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಭಾಗವಹಿಸಿದ ವಿಮಾ ಕಂಪನಿಯು ಕೆಳ ಹಂತದ ನ್ಯಾಯಾಲಯ ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಅಂದರೆ 1.15 ಕೋಟಿ ಪರಿಹಾರ ನೀಡಲು ವಿಮಾ ಕಂಪನಿ ಒಪ್ಪಿಗೆ ನೀಡಿದೆ ಎಂದು ನ್ಯಾ.ಸೋಮಶೇಖರ್ ಅವರಿಂದ ಮಾಹಿತಿ ನೀಡಿದರು.
ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ
ಹೈಕೋರ್ಟ್ ನ್ಯಾಯಮೂರ್ತಿ ನರೇಂದರ್ ನೇತೃತ್ವದಲ್ಲಿ ಲೋಕ್ ಅದಾಲತ್: ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ನರೇಂದರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಶನಿವಾರ ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಗಳಿಂದಲೂ ಮಧ್ಯಸ್ಥಿಕೆ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಕೋರ್ಟ್ ಕೇಸ್‌ಗಳ ಇತ್ಯರ್ಥಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವ್ಯಾಜ್ಯದಾರರು ಮುಂದೆ ಬಂದು ಕೇಸ್ ಇತ್ಯರ್ಥಕ್ಕೆ ನ್ಯಾಯಮೂರ್ತಿಗಳ ಮನವಿ ಮಾಡುತ್ತಿದ್ದಾರೆ. ಇಂದು ಸುಮಾರು 25 ಲಕ್ಷ ಪ್ರಕರಣಗಳ ಇತ್ಯರ್ಥ ಮಾಡುವ ಗುರಿ ಹೊಂದಿದ್ದೇವೆ. ಹೈಕೋರ್ಟ್ ಮಾತ್ರವಲ್ಲ ರಾಜ್ಯದ ಎಲ್ಲಾ ಕೋರ್ಟ್ ಗಳಲ್ಲಿಯೂ ನಡೆಯುತ್ತಿರುವ ಲೋಕ್ ಅದಾಲತ್ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಜಿ.ನರೇಂದರ್ ಮಾಹಿತಿ ನೀಡಿದರು.