ಪೋರ್ನ್ ನೋಡುವುದು ನಮಗೆ ಮನರಂಜನೆ. ಪೋರ್ನ್ ಶೂಟಿಂಗ್‌ನಲ್ಲಿ ಭಾಗವಹಿಸುವುದು ನಟ- ನಟಿಯರಿಗೆ ಮನರಂಜನೆ ಅಥವಾ ಸುಖ ಇರಬಹುದು ಎಂದು ನೀವೆಂದುಕೊಂಡರೆ ತಪ್ಪು. ಹಾಗಿದ್ದರೆ ಅವರ ಸಂಕಷ್ಟಗಳೇನು?

ಪೋರ್ನ್ ನಟ ನಟಿಯರಿಗೆ ಅವರದ್ದೇ ಆದ ಒಂದಿಷ್ಟು ಸಮಸ್ಯೆಗಳು, ಚಾಲೆಂಜ್‌ಗಳು ಇರುತ್ತವೆ. ದಿನಕ್ಕೆ ಪೋರ್ನ್ ನಟಿಯೊಬ್ಬಳು ಲಕ್ಷದವರೆಗೂ ದುಡಿಯಬಹುದು. ಪೋರ್ನ್ ನಟ ಜನಪ್ರಿಯನಾದರೆ ಆತನೂ ಡಾಲರ್‌ಗಟ್ಟಲೆ ದುಡಿಯುತ್ತಾನೆ. ಇಲ್ಲಿ ನಟಿಯರದ್ದು ಒಂದು ಬಗೆಯ ಸಮಸ್ಯೆ, ಚಾಲೆಂಜ್‌ ಆದರೆ ನಟರದ್ದು ಮತ್ತೊಂದು ಬಗೆಯ ಚಾಲೆಂಜ್‌. 

1. ವಾರದಲ್ಲಿ ಒಮ್ಮೆ ಮಾತ್ರ ಶೂಟಿಂಗ್‌ ಭಾಗಿಯಾಗೋದು ಸಾಧ್ಯವಾಗುತ್ತೆ!
ಸಾಮಾನ್ಯರಲ್ಲಿ ಕೆಲವು ನಿಮಿಷಗಳಲ್ಲಿ ಮುಗಿದುಹೋಗುವ ಸೆಕ್ಸ್‌ ಇಲ್ಲಿ ಗಂಟೆಗಟ್ಟಲೆ ನಡೆಯುತ್ತೆ. ಬಹಳ ಇಂಟೆನ್ಸ್ ಆದ ಈ ಸೆಕ್ಸ್‌ನಲ್ಲಿ ಭಾಗಿಯಾದ ಮೇಲೆ ಒಂದು ವಾರದವರೆಗೆ ರೆಸ್ಟ್ ಬೇಕಾಗುತ್ತದೆ. ನಮ್ಮ ಅಂಗಗಳು ಇದರಿಂದ ಚೇತರಿಸಿಕೊಳ್ಳಬೇಕು, ಮತ್ತೊಂದು ಆಟಕ್ಕೆ ಇದು ಸಿದ್ಧತೆ. ಒಂದು ವೇಳೆ ಹಣದ ಆಸೆಗೆ ಬಿದ್ದು ಹೆಚ್ಚು ದಿನ ಪೋರ್ನ್ ಶೂಟಿಂಗ್‌ನಲ್ಲಿ ಭಾಗವಹಿಸಿದರೆ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಪರ್ಫಾಮ್ ಮಾಡುವ ಆಸಕ್ತಿ ಹೊರಟುಹೋಗುತ್ತದೆ. 

2. ಗಾಯಗಳ ಸಮಸ್ಯೆ
ಪೋರ್ನ್ ಶೂಟ್‌ಗಳಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವಾಗ ಗಾಯದ ಸಮಸ್ಯೆ ಉಂಟಾಗೋದು ಸಾಮಾನ್ಯ. ಆವಾಗ ನಮ್ಮನ್ನು ಮನೆಗೆ ಕಳಿಸುತ್ತಾರೆ. ಗಾಯ ಇಟ್ಟುಕೊಂಡು ನಾವು ಈ ಶೂಟ್‌ನಲ್ಲಿ ಭಾಗಿಯಾಗುವ ಹಾಗಿಲ್ಲ. ಅದೇ ರೀತಿ ಅನಾರೋಗ್ಯವಿದ್ದರೂ ನಾವಿದರಿಂದ ದೂರ ಇರಬೇಕು. ಸಣ್ಣ ನೆಗಡಿ ಆದರೂ ಪೋರ್ನ್ ಶೂಟ್‌ಗಳಲ್ಲಿ ಭಾಗಿಯಾಗುವ ಹಾಗಿಲ್ಲ. ಸೆಕ್ಸ್ ಮಾಡುವಾಗ ಆಕ್ಷೀ ಬಂದರೆ ಆಟ ಮುಂದುವರಿಯೋದು ಕಷ್ಟ. 

3. ಆ ಮನಸ್ಥಿತಿ ತಂದುಕೊಳ್ಳೋದು ಚಾಲೆಂಜಿಂಗ್‌
ಉಳಿದ ಕೆಲಸಗಳಲ್ಲಿ ಇರಬೇಕಾದ್ದಕ್ಕಿಂತ ಹೆಚ್ಚಿನ ತಲ್ಲೀನತೆ ಇದರಲ್ಲಿರಬೇಕು. ನಮ್ಮ ಮನಸ್ಸನ್ನು ಇದಕ್ಕೆ ಸಿದ್ಧಪಡಿಸಿಕೊಳ್ಳಬೇಕಾದ್ದು ದೊಡ್ಡ ಚಾಲೆಂಜ್. ಏಕೆಂದರೆ ಸಾಮಾನ್ಯ ಜನರು ಕತ್ತಲಲ್ಲಿ ನಡೆಸುವ ಈ ಕ್ರಿಯೆಯನ್ನು ನಾವು ಶಾರ್ಪ್ ಲೈಟ್‌ಗಳ ಮುಂದೆ ಮಾಡಬೇಕು. ನಾವು ನಗ್ನರಾಗಿರುತ್ತೇವೆ. ನಮ್ಮ ಸುತ್ತ ಇರುವ ಕ್ಯಾಮರಮೆನ್ ಗಳು, ಟೆಕ್ನೀಷಿಯನ್‌ಗಳು ಬಟ್ಟೆ ತೊಟ್ಟಿರುತ್ತಾರೆ. ಆ ಕಣ್ಣು ಕೋರೈಸುವ ಲೈಟ್‌ಗಳ ಎದುರು, ಬಟ್ಟೆ ತೊಟ್ಟ ಅಪರಿಚಿತ ಜನರ ಎದುರು ಸೆಕ್ಸ್ ಮಾಡೋದು ಅದೂ ಅಷ್ಟು ಹೊತ್ತು ತೊಡಗಿಸಿಕೊಳ್ಳೋದು ಬಹಳ ಕಷ್ಟ.

ಇದನ್ನೂ ಓದಿ: Sex Life: ಕನ್ಯತ್ವ ಕಳೆದುಕೊಂಡ ನಂತರ ಹುಡುಗಿಯರು ಈ ಕೆಲಸ ಮಾಡುತ್ತಾರೆ

4. ನಟರ ಸಮಸ್ಯೆ ಇನ್ನೊಂದು ರೀತಿಯದ್ದು..
ಪೋರ್ನ್ ಶೂಟಿಂಗ್‌ನಲ್ಲಿ ನಟಿಯರದ್ದೊಂದು ಸಮಸ್ಯೆಯಾದರೆ ನಟರ ಸಮಸ್ಯೆ ಮತ್ತೊಂದು ಅವರು ವೀರ್ಯ ಸ್ಖಲನವನ್ನು ಬಹಳ ಹೊತ್ತು ತಡೆ ಹಿಡಿದಿರಬೇಕು. ನಿರ್ದೇಶಕರ ಸೂಚನೆಯಂತೆ ಹೊರ ಬಿಡಬೇಕು. ನಡುವೆ ಎಲ್ಲಾದರೂ ವೀರ್ಯ ಹೊರಬಂದರೆ ಅವರ ಕತೆ ದೇವರಿಗೇ ಪ್ರೀತಿ. 

5 . ಫಿಟ್‌ನೆಸ್‌ ಇರಲೇಬೇಕು
ನಟಿ ಇರಲಿ, ನಟ ಇರಲಿ, ಪೋರ್ನ್ ಶೂಟ್‌ನಲ್ಲಿ ಇಡೀ ದೇಹ ಬೆತ್ತಲಾಗಿರುತ್ತದೆ. ಸಣ್ಣ ಬೊಜ್ಜೂ ಎದ್ದು ಕಾಣುತ್ತದೆ. ಹೀಗಾಗಿ ಈ ಫೀಲ್ಡ್‌ನಲ್ಲಿರುವಾಗ ಫಿಟ್‌ನೆಸ್‌ ಇರಲೇಬೇಕು. ಒಂಚೂರು ಬೊಜ್ಜಿದ್ದರೂ ಇಂಡಸ್ಟ್ರಿ ಮಂದಿ ಸಹಿಸೋದಿಲ್ಲ. ಫೋರ್ನ್ ಶೂಟ್ ಇದ್ದಾಗ ದೇಹ ನಜ್ಜುಗೊಜ್ಜಾಗಿರುತ್ತದೆ. ಹೀಗಿರುವಾಗ ಎಕ್ಸರ್‌ಸೈಸೂ ಬೇಡ, ಏನೂ ಬೇಡ, ಸುಮ್ಮನೆ ಬಿದ್ದುಕೊಳ್ಳೋಣ ಅಂತ ಅನಿಸೋದೇ ಹೆಚ್ಚು. ಆದರೆ ಹಾಗೆ ಬಿದ್ದುಕೊಳ್ಳಲೂ ಪ್ರೊಫೆಶನ್ ಬಿಡಲ್ಲ. ಇತರರು ವೀಕೆಂಡಲ್ಲಿ ಮಜವಾಗಿ ಜಂಕ್‌ ಫುಡ್ ಮತ್ತೊಂದು ತಿನ್ನುತ್ತಿದ್ದರೆ ನಾವು ಮಾತ್ರ ಅವುಗಳತ್ತ ಕಣ್ಣೆತ್ತಿಯೂ ನೋಡೋ ಹಾಗಿಲ್ಲ.

ಇದನ್ನೂ ಓದಿ: ಪೋರ್ನ್ ಸ್ಟಾರ್ ಖುಲ್ಲಂಖುಲ್ಲ ಸೆಕ್ಸ್ ಮಾಡೋ ಬಗ್ಗೆ ಏನ್ ಹೇಳ್ತಾರೆ ?

6. ಜನ ಸಾಮಾನ್ಯರ ವರ್ತನೆ
ಪೋರ್ನ್ ಸೈಟ್‌ಗಳಲ್ಲಿ ನಮ್ಮ ವೀಡಿಯೋಗಳನ್ನು ಬಹಳ ಮಂದಿ ನೋಡುತ್ತಾರೆ. ಎಷ್ಟೋ ಜನರ ಲೈಂಗಿಕ ನಿರಾಸಕ್ತಿ ಇದನ್ನು ನೋಡೋದರ ಮೂಲಕ ಸರಿಹೋಗಿದೆ. ಸೆಕ್ಸ್‌ ನಿರಾಸಕ್ತಿಯಿಂದ ದಾಂಪತ್ಯ ಜೀವನ ವಿಚ್ಛೇದನದತ್ತ ಹೋಗಿದ್ದೂ ಮತ್ತೆ ಸರಿ ಹೋಗಿದ್ದಿದೆ. ನಮ್ಮ ವೀಡಿಯೋಗಳನ್ನು ಎನ್‌ಜಾಯ್‌ ಮಾಡುವ ಜನ, ನಾವು ಹೊರಗೆ ಬಂದರೆ ನಮ್ಮನ್ನು ಗೇಲಿ ಮಾಡುತ್ತಾರೆ. ಮನಸ್ಸು ನೋಯುವಂತೆ ಮಾತಾಡುತ್ತಾರೆ. ನಮ್ಮ ಆತ್ಮಗೌರವಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಾರೆ. ಒಂಥರಾ ಟೇಕನ್ ಫಾರ್ ಗ್ರ್ಯಾಂಟೆಡ್ ರೀತಿಯ ನಡವಳಿಕೆಗಳು ನಮ್ಮ ಮನಸ್ಸನ್ನು ಸದಾ ನೋಯಿಸುತ್ತಿರುತ್ತವೆ. 

ಇದನ್ನೂ ಓದಿ: ಭಾರತದಲ್ಲೂ ಬೆತ್ತಲೆ ಕಮ್ಯುನಿಟಿಗಳಿವೆ, ಬಟ್ಟೆ ಅಂದ್ರೆ ಆಗೋಲ್ಲ ಇವರಿಗೆ!

ನನ್ನದೊಂದು ರಿಕ್ವೆಸ್ಟ್ ನಾವೂ ನಿಮ್ಮ ಹಾಗೆ ರಕ್ತ ಮಾಂಸ ಮನಸ್ಸು ಎಲ್ಲ ಇರುವ ಮನುಷ್ಯ ಜೀವಿಗಳು. ನಮ್ಮನ್ನೂ ಉಳಿದವರ ಹಾಗೇ ಟ್ರೀಟ್‌ ಮಾಡಿ. ನಮ್ಮ ಕುರಿತಾದ ನಿಮ್ಮ ಅತಿ ಕುತೂಹಲ, ಅಗೌರವದ ನಡವಳಿಕೆ ಕಡಿಮೆ ಮಾಡಿ. ನೀವೂ ಬದುಕಿ, ನಮ್ಮನ್ನೂ ಬದುಕಲು ಬಿಡಿ.