ಹೊಸಬರನ್ನು ನೋಡಿ ಎಂಥವರೋ ಹೇಗೋ ಅನ್ನೋ ಡೌಟಾ, ಕುತ್ತಿಗೆ ನೋಡಿ ವ್ಯಕ್ತಿತ್ವ ತಿಳ್ಕೊಳ್ಳಿ
ಪರ್ಸನಾಲಿಟಿ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಒಬ್ಬರು ಹೀಗೆಯೇ ಇರುತ್ತಾರೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದ್ರೆ ವ್ಯಕ್ತಿಯ ಕುತ್ತಿಗೆ, ಕುತ್ತಿಗೆಯ ಉದ್ದ ನೋಡಿ ಇದನ್ನು ತಿಳಿದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಮನುಷ್ಯನ ಗುಣ, ಸ್ವಭಾವ, ಮಾತು ಎಲ್ಲವೂ ವ್ಯಕ್ತಿತ್ವವನ್ನು ನಿರ್ಧರಿಸುತ್ತೆ. ಆದರೆ ಈ ಪರ್ಸನಾಲಿಟಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಒಬ್ಬರ ಸ್ವಭಾವ ಇನ್ನೊಬ್ಬರಿಗೆ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಬಹುಶಃ ನಾವು ನಾವೇ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಕಷ್ಟ. ಇನ್ನೊಬ್ಬರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಾವು ನಿರ್ಧರಿಸುವುದು ಕಷ್ಟ. ಒಬ್ಬ ವ್ಯಕ್ತಿಯ ಜೊತೆಗೆ ಹೆಚ್ಚು ಬೆರೆತಾಗ ನಾವು ಆ ವ್ಯಕ್ತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ವ್ಯಕ್ತಿಯ ಕುತ್ತಿಗೆ, ಕುತ್ತಿಗೆಯ ಉದ್ದ ನೋಡಿ ಇದನ್ನು ತಿಳಿದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?
ನಿಮ್ಮ ಕುತ್ತಿಗೆ ನಿಮ್ಮ ಬಗ್ಗೆ ಏನು ಹೇಳುತ್ತದೆ?
ಹೌದು, ವ್ಯಕ್ತಿಯ ನೆಕ್ ಶೇಪ್ ನೋಡಿ ಆತನ ವ್ಯಕ್ತಿತ್ವ (Personality) ಹೇಗೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯ ಕತ್ತಿನ ಉದ್ದ ಮತ್ತು ವಕ್ರತೆಯು ಕೆಲವು ವ್ಯಕ್ತಿತ್ವ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನ (Study)ದಿಂದ ತಿಳಿದುಬಂದಿದೆ. ನೀವು ಉದ್ದವಾದ ಕುತ್ತಿಗೆಯನ್ನು ಹೊಂದಿದ್ದೀರಾ ಅಥವಾ ಚಿಕ್ಕ ಕುತ್ತಿಗೆಯನ್ನು ಹೊಂದಿದ್ದೀರಾ? ಉದ್ದನೆಯ ಕುತ್ತಿಗೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಚಿಕ್ಕ ಕುತ್ತಿಗೆ ಏನನ್ನು ಸೂಚಿಸುತ್ತದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಲವ್ ಅಂದ್ರೆ ನಿಮ್ಗೆ ಇಷ್ಟಾನ, ಕಷ್ಟಾನ, ಭಯಾನ; ಫೋಟೋ ನೋಡಿ ನಿಮ್ ಮನಸ್ಥಿತಿ ತಿಳ್ಕೊಳ್ಳಿ
1. ಸಣ್ಣ ಕುತ್ತಿಗೆ
ಚಿಕ್ಕ ಕುತ್ತಿಗೆ (Small neck)ಯನ್ನು ಹೊಂದಿರುವ ಜನರು ನಿಷ್ಠಾವಂತರು ಮತ್ತು ಶ್ರದ್ಧೆಯುಳ್ಳವರು. ಇವರು ಯಾವಾಗಲೂ ಸ್ನೇಹಿತರನ್ನು ಬೆಂಬಲಿಸಲು ಇಷ್ಟಪಡುತ್ತಾರೆ. ಇಂಥವರು ಯಾವಾಗಲೂ ಸಂಬಂಧ (Relationship)ವನ್ನು ಉಳಿಸಿಕೊಳ್ಳಬಲ್ಲರು. ಯಾಕೆಂದರೆ ಇವರು ದೀರ್ಘಾವಧಿಯ ಸಂಬಂಧಕ್ಕೆ ಬದ್ಧರಾಗಿರುವ ಕಾಳಜಿಯುಳ್ಳ ವ್ಯಕ್ತಿಯಾಗಿರುತ್ತಾರೆ. ಇವರು ಸಮುದಾಯಕ್ಕೆ ಸಹಾಯ ಮಾಡುವವರಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ಯಾಕೆಂದರೆ ಇವರು ಹೆಚ್ಚು ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಆದರೆ ಇಂಥವರು ಈ ಸಹಾಯಗುಣದಿಂದ ತೊಂದರೆ ಅನುಭವಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮತ್ತೊಬ್ಬರಿಗೆ ಸಮಯ ನೀಡುವ ಬದಲು ಸ್ವಆರೈಕೆಗೆ ಹೆಚ್ಚು ಸಮಯ ನೀಡುವ ಅಭ್ಯಾಸ ಒಳ್ಳೆಯದು. ಇದು ನೀವು ಹೆಚ್ಚು ಸಂತೋಷದಿಂದ ಇರಲು ನೆರವಾಗುತ್ತದೆ.
2. ಮಧ್ಯಮ ಉದ್ದ ಕುತ್ತಿಗೆ
ಮಧ್ಯಮ ಉದ್ದದ ಕುತ್ತಿಗೆ (Medium neck)ಯನ್ನು ಹೊಂದಿದ್ದರೆ, ನೀವು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇಷ್ಟಪಡುವ ವ್ಯಕ್ತಿ. ನೀವು ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿ ಮತ್ತು ಸಾಮರಸ್ಯವನ್ನು ಗೌರವಿಸುತ್ತೀರಿ. ಕಷ್ಟಕರ ಸಂದರ್ಭಗಳಲ್ಲಿ ನೀವು ಮಧ್ಯವರ್ತಿಯಾಗಿ ಗುರುತಿಸಿಕೊಳ್ಳುತ್ತೀರಿ. ಇದು ಸಂಘರ್ಷದ ಸಂದರ್ಭಗಳನ್ನು ನಿಭಾಯಿಸಲು ನೆರವಾಗುತ್ತದೆ. ನೀವು ಅನಗತ್ಯ ವಾದಗಳನ್ನು ತಪ್ಪಿಸಲು ಬಯಸುತ್ತೀರಿ. ಇದು ಸಂಗಾತಿ (Partner)ಯೊಂದಿಗೆ ನೀವು ಹೊಂದಾಣಿಕೆಯಿಂದ ಜೀವನ ನಡೆಸಲು ನೆರವಾಗುತ್ತದೆ. ಮಧ್ಯಮ ಉದ್ದ ಕುತ್ತಿಗೆ ಹೊಂದಿರುವವರು ಯಾವಾಗಲೂ ಮತ್ತೊಬ್ಬರ ಸಮಸ್ಯೆ, ಅದನ್ನು ಪರಿಹರಿಸುವ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಹೀಗಾಗಿ ಸ್ವತಃ ತಾವೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!
3. ಉದ್ದನೆಯ ಕುತ್ತಿಗೆ
ಉದ್ದನೆಯ ಕುತ್ತಿಗೆಯ ವ್ಯಕ್ತಿ (Long neck), ತನ್ನ ಸಮಸ್ಯೆಯನ್ನು ತಾನೇ ಪರಿಹರಿಸಿಕೊಳ್ಳಲು ಸಮರ್ಥನಾಗಿದ್ದೇನೆ ಎಂಬುದನ್ನು ತೋರಿಸುತ್ತದೆ. ಇಂಥವರು ತಮ್ಮ ಜೀವನದ ಸಮಸ್ಯೆಗೆ ಇತರರು ಮೂಗು ತೂರಿಸುವುದನ್ನು ಇಷ್ಟಪಡುವುದಿಲ್ಲ. ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಬೇಗನೇ ಯಾರನ್ನೂ ಸಹ ನಂಬುವುದಿಲ್ಲ. ತಮ್ಮನ್ನು ಅರ್ಥಮಾಡಿಕೊಳ್ಳುವ ಕೆಲವೇ ಕೆಲವು ಸ್ನೇಹಿತರನ್ನು ಮಾತ್ರ ಇಷ್ಟಪಡುತ್ತಾರೆ. ತಮ್ಮ ಸಂಗಾತಿಯಿಂದಲೂ ಅವರು ಪ್ರೈವೆಸಿಯನ್ನು ನಿರೀಕ್ಷಿಸುತ್ತಾರೆ.
ಇನ್ಯಾಕೆ ತಡ, ನಿಮ್ಮ ನೆಕ್ ಶೇಪ್ ನೋಡ್ಕೊಂಡು, ನಿಮ್ಮ ವ್ಯಕ್ತಿತ್ವ ಹೇಗೆ, ನಿಮ್ಮ ಸ್ನೇಹಿತರ ವ್ಯಕ್ತಿತ್ವ ಹೇಗೆ ಅರ್ಥ ಮಾಡ್ಕೊಳ್ಳಿ