ಪ್ರಶ್ನೆ: ನಮಗೆ ಮದುವೆಯಾಗಿ ಮೂರು ವರ್ಷಗಳಾಗಿವೆ. ಇತ್ತೀಚೆಗೆ ಸೆಕ್ಸ್‌ ಬಗ್ಗೆ ಅತೃಪ್ತಿ ಇತ್ತು. ಅದಕ್ಕೆ ಕಾರಣ ನಮ್ಮಿಬ್ಬರ ವೃತ್ತಿ ಜೀವನ. ಇಬ್ಬರೂ ದಿನವಿಡೀ ಬ್ಯುಸಿ ಆಗಿ ಇರುತ್ತಿದ್ದುದರಿಂದ, ರಾತ್ರಿ ಸಿಗುತ್ತಿದ್ದುದೇ ಅಪರೂಪ. ಹೀಗಾಗಿ ಸೆಕ್ಸ್‌ ಮೇಲೆ ಇಂಟರೆಸ್ಟ್‌ ಇರಲಿಲ್ಲ. ಆದರೆ ಕೊರೊನಾದಿಂದಾಗಿ ಲಾಕ್‌ಡೌನ್ ಶುರುವಾದ ಬಳಿಕ, ಇಬ್ಬರೂ ಮನೆಯಿಂದಲೇ ಕೆಲಸ ಮಾಡುವಂತಾಯಿತು. ಆಗ ಇಬ್ಬರಿಗೂ ಸಾಕಷ್ಟು ಏಕಾಂತ ಹಾಗೂ ಸಾಮೀಪ್ಯ ಸಿಕ್ಕಿತು. ಆಲ್‌ಮೋಸ್ಟ್‌ ಪ್ರತಿದಿನ ಎಂಬಂತೆ ನಾವು ಸೇರಲು ಆರಂಭಿಸಿದೆವು. ನಮ್ಮ ಸೆಕ್ಸ್ ಲೈಫ್‌ ಮರಳಿ ಹಳಿಗೆ ಬಂತು ಎಂದುಕೊಳ್ಳುವಷ್ಟರಲ್ಲೇ, ಹದಿನೈದು ದಿನದಲ್ಲೇ ಮತ್ತೆ ಬೋರ್‌ ಎನಿಸಲಾರಂಭಿಸಿತು. ಯಾಕೆ ಹೀಗೆ? ನಮ್ಮ ಮಿಲನವನ್ನು ಮತ್ತೆ ಸ್ಪೈಸೀ ಆಗಿಸಲು ಏನು ಮಾಡಬಹುದು?

ಅವಳು ಸೆಕ್ಸಿನಲ್ಲಿ ಅನುಭವಿಯಾಗಿರಬಹುದಾ?

ಉತ್ತರ: ನಿಮ್ಮ ಸಮಸ್ಯೆಯನ್ನೇ ಇತರ ಹಲವು ಮಂದಿ ದಂಪತಿಗಳೂ ಅನುಭವಿಸುತ್ತಿರಬಹುದು. ಹಾಗಾಗಿ ನಿಮಗೆ ಉತ್ತರಿಸಿದರೆ ಅವರಿಗೂ ಪರಿಹಾರ ಕೊಟ್ಟಂತಾಗಬಹುದು. ನಿಮ್ಮ ಸಮಸ್ಯೆಗೆ ಕಾರಣ, ಅತಿ ಸಾಮೀಪ್ಯ. ಇಬ್ಬರೂ ಜೊತೆಯಾಗಿ ಸಿಕ್ಕಿದಿರಿ ಎಂದು ಪ್ರತಿದಿನವೂ ಸೇರಲು ಆರಂಭಿಸಿದಿರಿ. ಇದು ಮದುವೆಯಾದ ಹೊಸದರಲ್ಲಿ ಸರಿಹೋಗುತ್ತದೆ. ಆದರೆ ಕೆಲವು ವರ್ಷಗಳ ಬಳಿಕ ಸಹಜವಾಗಿಯೇ ದೇಹಕ್ಕೂ ಮನಸ್ಸಿಗೂ ಸ್ವಲ್ಪ ಗ್ಯಾಪ್‌ ಬೇಕಾಗುತ್ತದೆ. ಹೀಗಾಗಿ ದಿನ ಬಿಟ್ಟು ದಿನ ಸೇರುವುದು ಒಳ್ಳೆಯದು. ಬಹುಶಃ ನಿಮ್ಮ ಬೋರ್‌ಡಮ್‌ಗೆ ಇನ್ನೊಂದು ಕಾರಣ ಏಕತಾನತೆ ಇರಬಹುದು. ಒಂದೇ ರೀತಿಯ ರೊಮ್ಯಾನ್ಸ್, ಒಂದೇ ರೀತಿಯ ಮುನ್ನಲಿವು, ಒಂದೇ ರೀತಿಯ ಭಂಗಿಗಳು ಸೆಕ್ಸ್‌ನಲ್ಲಿರುವ ರೋಮಾಂಚನವನ್ನು ಹಾಳು ಮಾಡುತ್ತವೆ. ಹೀಗಾಗಿ, ಸೆಕ್ಸ್‌ಗೆ ಒಂದು ಬಗೆಯ ಅನಿರೀಕ್ಷಿತತೆ, ಅಚ್ಚರಿಗಳನ್ನು ತನ್ನಿ. ಒಂದು ದಿನ ಬೆಡ್‌ರೂಂ ಬಿಟ್ಟು ಹಾಲ್‌ನಲ್ಲಿ ಸೇರಿ. ಅಥವಾ ನಿಮ್ಮ ಗ್ಯಾರೇಜ್‌ನಲ್ಲಿರುವ ಕಾರ್‌ ಆದರೂ ಪರವಾಗಿಲ್ಲ. ಒಂದೇ ಬಗೆಯ ಉಡುಗೆಯ ಬದಲು, ಬೇರೆ ಬಗೆಯ, ಸ್ವಲ್ಪ ಬಿಗಿಯಾದ ಮೈಕಟ್ಟು ಕಾಣುವ ಉಡುಗೆ ಧರಿಸಿ ಸಂಗಾತಿಯನ್ನು ಆಕರ್ಷಿಸಿ. ಸೆಕ್ಸ್‌ಗೆ ಮೊದಲಿನ ಮುನ್ನಲಿವಿನ ಚಟುವಟಿಕೆಗಳಲ್ಲಿ ಸ್ವಲ್ಪ ಭಿನ್ನತೆ ತನ್ನಿ. ರೊಮ್ಯಾಂಟಿಕ್‌ ಫಿಲಂ ನೋಡಿ, ಅಥವಾ ಆ ಬಗೆಯ ಸಾಹಿತ್ಯ ಓದಿ. ಸಂಗಾತಿಗೆ ರೊಮ್ಯಾಂಟಿಕ್‌ ಕತೆ ಹೇಳಿ. ನೀವೇ ಬೇರೊಬ್ಬರಾಗಿ ನಟಿಸುವ ರೋಲ್‌ ಪ್ಲೇ ಮಾಡುವುದರಿಂದಲೂ ಸಂಗಾತಿಯಲ್ಲಿ ರೋಚಕತೆ ಕೆರಳಿಸಬಹುದು. ಇವೆಲ್ಲವೂ ಬೋರೆದ್ದು ಹೋಗಿರುವ ನಿಮ್ಮ ಸೆಕ್ಸ್‌ ಲೈಫ್‌ನಲ್ಲಿ ಮಸಾಲೆ ತರಬಹುದು. ಪ್ರಯತ್ನಿಸಿ. 

ಪ್ರಶ್ನೆ: ನಮಗೆ ಮದುವೆಯಾಗಿ ಆರು ವರ್ಷವಾಗಿದೆ. ಒಬ್ಬ ಮಗನಿದ್ದಾನೆ. ಮನೆಯಲ್ಲಿ ನನ್ನ ಅಪ್ಪ- ಅಮ್ಮನೂ ಇರುತ್ತಾರೆ. ನಮ್ಮದು ಎರಡು ಬೆಡ್‌ರೂಮಿನ ಸಣ್ಣ ಮನೆ. ಎಲ್ಲರೂ ಒಂದೇ ಕಡೆ ಇರುತ್ತೇವೆ. ಮಗನೂ ರಾತ್ರಿ ನಮ್ಮ ಜೊತೆಯೇ ಮಲಗುತ್ತಾನೆ. ಈಗ ಲಾಕ್‌ಡೌನ್‌ ಸಮಯವಾದ್ದರಿಂದ ನಾವು ಗಂಡ ಹೆಂಡತಿ ಸೇರಿದಂತೆ ಎಲ್ಲರೂ ಮನೆಯಲ್ಲೇ ಇರುತ್ತೇವೆ. ಈ ಹಿಂದೆ ಕೆಲವೊಮ್ಮೆ ಅಪ್ಪ- ಅಮ್ಮನನ್ನು ವಾಕಿಂಗ್‌ಗೂ, ಮಗನನ್ನು ಆಟಕ್ಕೂ ಕಳಿಸಿ ನಾವು ಮಿಲನ ಮಹೋತ್ಸವ ನಡೆಸುತ್ತಿದ್ದೆವು. ಈಗ ಅದು ಸಾಧ್ಯವಾಗುತ್ತಿಲ್ಲ. ನಮಗಿಬ್ಬರಿಗೂ ಸೇರಬೇಕೆಂಬ ತೀವ್ರ ಆಸೆಯಿದ್ದರೂ ಮನೆಯಲ್ಲಿ ಜನ ಇರುವುದರಿಂದ ಸಾಧ್ಯವಾಗುತ್ತಿಲ್ಲ. ಏನು ಮಾಡೋಣ?

ಹಸ್ತ ಮೈಥುನದಿಂದ ಪ್ರೆಗ್ನೆಂಟ್ ಆಗಬಹುದಾ?

ಉತ್ತರ: ಇದು ಲಾಕ್‌ಡೌನ್‌ನ ಇನ್ನೊಂದು ಮುಖ. ಇದಕ್ಕೆ ಪರಿಹಾರವನ್ನೂ ನೀವೇ ಕಂಡುಕೊಳ್ಳಬೇಕು. ಉದಾಹರಣೆಗೆ, ಮಗನನ್ನು ಕೆಲವು ದಿನಗಳ ಮಟ್ಟಿಗೆ ಅಜ್ಜ- ಅಜ್ಜಿಯ ಜೊತೆಗೆ ಮಲಗಿಸಿ. ಅಥವಾ ರಾತ್ರಿ ಮಗ ನಿದ್ದೆ ಹೋದ ಬಳಿಕ ಆತನನ್ನು ಅವರ ಜೊತೆ ಮಲಗಿಸಿ. ನೀವು ಸ್ನಾನ ಮಾಡಲು ಹೋದಾಗ, ಬೆನ್ನು ಉಜ್ಜುವ ನೆವದಿಂದ ಹೆಂಡತಿಯನ್ನು ಬಾತ್‌ರೂಮಿಗೆ ಕರೆದರೆ, ಒಂದು ಸುತ್ತಿನ ಸೆಕ್ಸನ್ನು ಕ್ವಿಕ್‌ ಆಗಿ ಅಲ್ಲೇ ಮುಗಿಸಿಬಿಡಬಹುದು. ಸಂಜೆ ಅಜ್ಜ- ಅಜ್ಜಿ ಸೀರಿಯಲ್‌ ನೋಡುತ್ತಿರುವಾಗ ಮಗನನ್ನೂ ಅವರ ಜೊತೆಗೆ ಕುಳ್ಳಿರಿಸಿ, ನೀವು ವರ್ಕ್‌ ಫ್ರಂ ಹೋಮ್‌ ಎಂಬ ನೆವ ಹೇಳಿ ಬೆಡ್‌ರೂಮಿನ ಬಾಗಿಲು ಹಾಕಿಕೊಂಡು ನಿಮ್ಮ ಇಚ್ಛೆ ಪೂರೈಸಿಕೊಳ್ಳಬಹುದು. ಮನಸ್ಸಿದ್ದರೆ ಮಾರ್ಗಗಳು ಹಲವಾರು ಇವೆ. ನೀವು ಕಾರ್ಯಪ್ರವೃತ್ತರಾಗಬೇಕು ಅಷ್ಟೇ!

ಈ ಟೈಮಲ್ಲಿ ಸೆಕ್ಸ್ ಮಾಡಬಹುದಾ?