Asianet Suvarna News Asianet Suvarna News

Online Dating Apps: ವ್ಯಕ್ತಿತ್ವಕ್ಕಿಂತ ಲೈಂಗಿಕ ಸಾಮರ್ಥ್ಯದ ಬಗ್ಗೆ ತಿಳ್ಕೊಳ್ಳೋ ಕುತೂಹಲ ಹೆಚ್ಚಂತೆ !

ಆನ್‌ಲೈನ್ ಡೇಟಿಂಗ್‌ ಆ್ಯಪ್‌ಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಫೇಮಸ್ ಆಗುತ್ತಿವೆ. ಈ ಮೂಲಕವೇ ಜನರು ಸಂಗಾತಿಯನ್ನು ಹುಡುಕಿ ಮದ್ವೆಯಾಗುತ್ತಿದ್ದಾರೆ. ಆದ್ರೆ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿರೋ ವಿಚಾರವೆಂದ್ರೆ, ಅನೇಕ ಜನರು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ಲೈಂಗಿಕ ಸಾಮರ್ಥ್ಯದ ಬಗ್ಗೆ ತಿಳ್ಕೊಳ್ಳೋಕೆ ಯತ್ನಿಸ್ತಾರಂತೆ.

People Focus More On Sexual Capability Than Personality On Online Dating Apps Vin
Author
First Published Nov 3, 2022, 2:36 PM IST

ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಪ್ರೀತಿಯನ್ನು ಕಂಡುಕೊಳ್ಳಲು ಹುಡುಕಿರುವ ಸುಲಭ ದಾರಿಯೆಂದರೆ ಆನ್‌ಲೈನ್ ಡೇಟಿಂಗ್ ಆ್ಯಪ್‌. ಇದರಲ್ಲಿ ಸುಲಭವಾಗಿ ತಮ್ಮ ಮನಸ್ಸಿಗೆ ಒಪ್ಪುವ, ನೆಚ್ಚಿನ ಉದ್ಯೋಗದ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳ ಅಬ್ಬರದ ಈ ದಿನಗಳಲ್ಲಿ ಜನ ಆನ್‌ಲೈನ್‌ ಡೇಟಿಂಗ್‌. ಚಾಟಿಂಗ್‌, ಫ್ಲರ್ಟಿಂಗ್‌ ಅದೂ ಇದು ಅಂತ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ಉತ್ತಮ ಬಾಳ ಸಂಗಾತಿಗಳನ್ನೂ ಕಂಡುಕೊಂಡಿದ್ದಾರೆ, ಆದರೆ ಕೆಲವರು ಮೂರ್ಖರಾಗಿದ್ದಾರೆ. ಹಾಗೆಯೇ ಇಲ್ಲೊಂದು ಜೋಡಿ ಆನ್‌ಲೈನ್‌ನಲ್ಲಿ ಭೇಟಿಯಾಗಿ ಪ್ರೀತಿ ಕಂಡುಕೊಂಡಿದ್ದು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಆನ್‌ಲೈನ್‌ ಡೇಟಿಂಗ್ ಆ್ಯಪ್‌ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಏನು ಉತ್ತರ ಹೇಳಿದ್ದಾರೆ ತಿಳಿಯೋಣ.

ಪ್ರಶ್ನೆ: ಆನ್‌ಲೈನ್‌ನಲ್ಲಿ ಪ್ರೀತಿ ಕಂಡುಕೊಳ್ಳುತ್ತೀರಿ ಎಂದು ನೀವು ಎಂದಾದರೂ ಭಾವಿಸಿದ್ದೀರಾ?
ಉತ್ತರ: ನಿಜವಾಗಿಯೂ ಅಲ್ಲ, ನಾನು ಆನ್‌ಲೈನ್‌ನಲ್ಲಿ ಪ್ರೀತಿ (Love)ಯನ್ನು ಕಂಡುಕೊಳ್ಳುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಒತ್ತಡದ ಜೀವನಶೈಲಿಯಿಂದ ಆಫ್‌ಲೈನ್‌ನಲ್ಲಿ ಯಾರನ್ನಾದರೂ ಹುಡುಕುವುದು ಕಷ್ಟ ಎಂದು ಆನ್‌ಲೈನ್ ಡೇಟಿಂಗ್ ಆ್ಯಪ್‌ ಮೊರೆ ಹೋದೆ. ಆದರೆ ಇಲ್ಲಿ ಒಬ್ಬರು ಯಾವಾಗಲೂ ಸತ್ಯತೆ ಮತ್ತು ನೈಜ ವ್ಯಕ್ತಿತ್ವದ (Personality) ಬಗ್ಗೆ ಅನುಮಾನಗಳನ್ನು ಹೊಂದಿರುತ್ತಾರೆ.

ಮಹಿಳೆಯರು ಹೀಗೆಲ್ಲಾ ಮಾಡೋದು ಗಂಡಸರಿಗೆ ಇಷ್ಟಾನೇ ಆಗಲ್ವಂತೆ !

ಪ್ರಶ್ನೆ: ಆನ್‌ಲೈನ್ ಡೇಟಿಂಗ್ ಎಷ್ಟು ಭಿನ್ನವಾಗಿದೆ?
ಉತ್ತರ:  ಪರಸ್ಪರ ಸಂಪರ್ಕದ ಮೂಲಕ ನೀವು ಯಾರನ್ನಾದರೂ ಭೇಟಿಯಾದಾಗ, ಅವರನ್ನು ಪರಿಶೀಲಿಸಲು ನೀವು ಮೂಲಗಳನ್ನು ಹೊಂದಿರುತ್ತೀರಿ. ಅವರೊಂದಿಗೆ ಯಾವಾಗ ಹೊರಗೆ ಹೋಗಬೇಕು ಅಥವಾ ಅವರಿಗೆ ತೆರೆದುಕೊಳ್ಳುವುದು ಸುರಕ್ಷಿತವೇ ಎಂದು ನಿಮಗೆ ತಿಳಿದಿದೆ. ಆದರೆ ಆನ್‌ಲೈನ್ ಡೇಟಿಂಗ್‌ನಲ್ಲಿ, ಮುಂದುವರಿಯಲು ನಿಮಗೆ ಕಷ್ಟವಾಗುತ್ತದೆ. ಯಾರನ್ನು ನಂಬಬೇಕು ಮತ್ತು ಯಾರನ್ನು ನಂಬಬಾರದು ಎಂಬ ಸಂದಿಗ್ಧತೆ ಎದುರಾಗುತ್ತದೆ.

ಪ್ರಶ್ನೆ: ಆನ್‌ಲೈನ್‌ನಲ್ಲಿ ಡೇಟಿಂಗ್‌ನಲ್ಲಿ ನೀವು ಇಷ್ಟಪಡದ ವಿಷಯಗಳು ಯಾವುವು?
ಪಾರುಲ್: ಸಾಕಷ್ಟು ವಿಷಯಗಳಿವೆ. ಅಂತಹ ಒಂದು ಉದಾಹರಣೆಯೆಂದರೆ ಜನರು ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಲೈಂಗಿಕ ಸಾಮರ್ಥ್ಯದ (Sex capabilty) ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಸಾಮಾನ್ಯವಾಗಿ ಮಾತನಾಡುವ ವಿಷಯಗಳೆಂದರೆ ಮದುವೆಯ ಬಗ್ಗೆ ಅಭಿಪ್ರಾಯವೇನು ? ಮದುವೆ (Marriage) ನಂತರದ ಜೀವನ ಹೇಗಿರಬೇಕು ಎಂದು ಬಯಸುತ್ತೀರಿ ಎಂದೆಲ್ಲಾ ಕೇಳುತ್ತಾರೆ. ಆದ್ರೆ ಇದೆಲ್ಲಕ್ಕಿಂತ ವಿಚಿತ್ರವಾಗಿ ಲೈಂಗಿಕ ಸಾಮರ್ಥ್ಯದ ಬಗ್ಗೆ ಕೇಳಿದ್ದು ನನಗೆ ಅಚ್ಚರಿ ಮೂಡಿಸಿತು. 

ಪ್ರಶ್ನೆ: ಆನ್‌ಲೈನ್‌ನಲ್ಲಿ ಡೇಟಿಂಗ್‌ನಲ್ಲಿ ನಿಮ್ಮ ಬಗ್ಗೆ ಸಂಪೂರ್ಣವಾಗಿ ಹೇಳಿಕೊಳ್ಳುತ್ತೀರಾ ?
ಉತ್ತರ:  ಒಬ್ಬರು ವಿಭಿನ್ನ ವ್ಯಕ್ತಿತ್ವಗಳನ್ನು ಚಿತ್ರಿಸಲು ಪ್ರಯತ್ನಿಸಬಾರದು ಎಂದು ನಾನು ನಂಬುತ್ತೇನೆ. ಏಕೆಂದರೆ ಯಾರಾದರೂ ನಿಮ್ಮ ಬಗ್ಗೆ ನಿಜವಾಗಿಯೂ ಆಸಕ್ತಿ ಹೊಂದಿದ್ದರೆ, ಅವನು/ಅವಳು ನಿಮ್ಮನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇಲ್ಲದಿದ್ದರೆ ಅದು ಸರಳವಾದ 'ಹಾಯ್ ಮತ್ತು ಬೈ' ಆಗಿರುತ್ತದೆ.

ಲೈಂಗಿಕ ಜೀವನದಲ್ಲಿ ಖುಷೀನೆ ಇಲ್ವಾ ? ಇದೇ ಕಾರಣವಿರಬಹುದು!

ಪ್ರಶ್ನೆ: ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಸಂಪರ್ಕಿಸುವುದು ರೋಮಾಂಚನಕಾರಿಯೇ?
ಉತ್ತರ: ನಿಜ ಹೇಳಬೇಕೆಂದರೆ ಹೌದು. ಯಾರನ್ನಾದರೂ ಭೇಟಿಯಾಗುವುದು ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಂಪೂರ್ಣ ಅನುಭವವನ್ನು ನೀಡುತ್ತದೆ. ನೀವು ನಿಮ್ಮನ್ನು ಸಹ ತಿಳಿದುಕೊಳ್ಳುತ್ತೀರಿ ಮತ್ತು ಇದು ನಿಮಗೆ ಸಂತೋಷವನ್ನು (Happiness) ನೀಡುತ್ತದೆ. ಜೀವನವನ್ನು ವಿಭಿನ್ನವಾಗಿ ತೆಗೆದುಕೊಳ್ಳುವ ವಿಭಿನ್ನ ಜನರು ನಿಮಗೆ ದೃಷ್ಟಿಕೋನಗಳು ಮತ್ತು ಕಲಿಕೆಗಳನ್ನು ನೀಡುತ್ತಾರೆ. ನೀವು ಇನ್ನೂ ಹೆಚ್ಚಿನದನ್ನು ಕಲಿಯಬಹುದು ಮತ್ತು ಅರ್ಥಮಾಡಿಕೊಳ್ಳಬಹುದು.

ಪ್ರಶ್ನೆ: ಆನ್‌ಲೈನ್‌ನಲ್ಲಿ ಸಂಗಾತಿಯತ್ತ ನಿಮ್ಮನ್ನು ಸೆಳೆದದ್ದು ಯಾವುದು?
ಉತ್ತರ: ನಾನು ಆನ್‌ಲೈನ್‌ನಲ್ಲಿ ಭೇಟಿಯಾದ ಅತ್ಯಂತ ಕಾಳಜಿಯುಳ್ಳ ಮತ್ತು ಅರ್ಥಮಾಡಿಕೊಳ್ಳುವ ವ್ಯಕ್ತಿಯಾಗಿದ್ದರು ಎಂದು ತಿಳಿದುಕೊಂಡೆ. ಹುಡುಗಿಯ ಬಳಿ ಏನು ಕೇಳಬಹುದು ಮತ್ತು ಏನನ್ನು ಕೇಳಬಾರದು ಎಂದು ಅವರಿಗೆ ತಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅವರು ಮಾತನಾಡುವಾಗ ನನಗೆ ಆರಾಮದಾಯಕವಾಗಿದ್ದರು. ಅವರು ನನ್ನನ್ನು ಒಬ್ಬ ವ್ಯಕ್ತಿಯಾಗಿ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ಯುವತಿ ತಿಳಿಸಿದ್ದಾರೆ. ಒಟ್ನಲ್ಲಿ ಆನ್‌ಲೈನ್ ಡೇಟಿಂಗ್ ಆಪ್‌ನಲ್ಲಿ ಕೇವಲ ಉತ್ತಮ ಅನುಭವಗಳು ಮಾತ್ರ ಇಂಥಾ ಕೆಟ್ಟ ಅನುಭವಗಳೂ ಆಗುತ್ತವೆ ಎಂಬುದನ್ನು ಇದು ಸಾಬೀತುಪಡಿಸಿದೆ.

Follow Us:
Download App:
  • android
  • ios