ಮಕ್ಕಳಂತೆ ಮಮ್ಮಿ ಟೀ ಕೊಡು ಅಂತ ಕೇಳೋ ಗಿಣಿ: ವಿಡಿಯೋ ವೈರಲ್‌

ಗಿಳಿಯೊಂದು ಮನುಷ್ಯರಂತೆ ಮಾತನಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. 

Parrot talks to woman in Hindi  calls her mummy watch viral video akb

ಸಾಮಾಜಿಕ ಜಾಲತಾಣಗಳ ಬಳಕೆದಾರರಾದರೆ ನೀವು ಪ್ರಾಣಿ ಪಕ್ಷಿಗಳ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಪ್ರಾಣಿ ಪಕ್ಷಿಗಳು ಪರಸ್ಪರ ಮುದ್ದಾಡುವ ಪ್ರೀತಿ ತೋರುವ ಆಟವಾಡುವ ಜೊತೆ ಪ್ರಾಣಿ ಪಕ್ಷಿಗಳೆಂಬ ಬೇಧವನ್ನು ಮರೆತು ಪರಸ್ಪರ ಪ್ರೀತಿ ತೋರುವ ವಿಡಿಯೋಗಳನ್ನು ನೋಡಿರುತ್ತೀರಿ. ಅದೇ ರೀತಿ ಇಲ್ಲೊಂದು ಗಿಳಿ ಮನುಷ್ಯರಂತೆ ಮಾತನಾಡುತ್ತಿದೆ. 

ಗಿಣಿಗಳು ತುಂಬಾ ಬುದ್ಧಿವಂತ ಪಕ್ಷಿಗಳು, ನೋಡುವುದಕ್ಕೂ ಸುಂದರವಾಗಿರುವ ಈ ಪಕ್ಷಿಗಳು ಮನುಷ್ಯರನ್ನು ಅನುಕರಿಸುವುದರಲ್ಲೂ ಅಷ್ಟೇ ಹುಷಾರು. ಗಿಣಿಗಳು ಮನುಷ್ಯರಂತೆ ಮಾತನಾಡುವುದು ಮನುಷ್ಯರನ್ನು ಅನುಕರಿಸುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಹಾಗೆಯೇ ಇಲ್ಲೊಂದು ಗಿಣಿ ಮಮ್ಮಿ ಎಂದು ಕರೆದು ಟೀ ಕೊಡು ಚಾ ಕೊಡು ಎಂದು ಅರಚುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಕೆಂಪು ಬಣ್ಣದ ಗಿಣಿ ಮಮ್ಮಿ ಮಮ್ಮಿ ಎಂದು ಹಲವು ಬಾರಿ ಮಕ್ಕಳು ಅಮ್ಮನನ್ನು ಕರೆದಂತೆ ಕರೆಯುತ್ತದೆ. ಅಲ್ಲದೇ ಚಾ ಕೊಡು ಎಂದು ಕೇಳುತ್ತಿದೆ. ಹಿಂದಿ ಭಾಷೆಯಲ್ಲಿ ಈ ಗಿಳಿ ಮಾತನಾಡುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದು ಕೇವಲ ಮನುಷ್ಯರ ಮಾತನ್ನು ಅನುಕರಿಸುತ್ತಿರುವುದಲ್ಲದೇ ಅವರೊಂದಿಗೆ ಸಂವಹನ ಮಾಡುತ್ತಿದೆ. ಈ ವಿಡಿಯೋದಲ್ಲಿ ಕೆಂಪು ಬಣ್ಣದ ಗಿಣಿ ಸ್ಟೂಲ್ ಮೇಲೆ ಕುಳಿತಿದ್ದು, ಮಮ್ಮಿ ಮಮ್ಮಿ ಎಂದು ಅರಚುತ್ತಿದೆ. ಗಟ್ಟಿ ಸದ್ದಿನಲ್ಲಿ ಈ ಮುದ್ದಾದ ಗಿಳಿ ಅರಚುತ್ತಿದ್ದರೆ ಮಗುವೊಂದು ಅಮ್ಮನನ್ನು ಕರೆದಂತೆ ಕೇಳಿಸುತ್ತಿದೆ. ಅಲ್ಲದೇ ಈ ಗಿಣಿಯ ಮಾತಿಗೆ ಪ್ರತಿಕ್ರಿಯಿಸುವ ಮಹಿಳೆ 'ಆಯಿ ಬೇಟ' ಬರುತ್ತೇನೆ ಮಗನೇ ಎಂದು ಪ್ರತಿಕ್ರಿಯಿಸುತ್ತಾಳೆ. ಅಲ್ಲದೇ ಗಿಣಿಯೂ ಸುಮಾರು ಎರಡು ನಿಮಿಷಗಳ ಕಾಲ ತನ್ನ ಮನೆಯವರೊಡನೆ ಮಾತನಾಡುತ್ತದೆ.

GoPro ಕ್ಯಾಮರಾ ಕದ್ದು ಮೇಲೆ ಹಾರಿದ ಹಕ್ಕಿ... ವಿಹಂಗಮ ದೃಶ್ಯ ಸೆರೆ

ಈ ವಿಡಿಯೋವನ್ನು ಭಾರತೀಯ ಪೊಲೀಸ್‌ ಸೇವೆಯ ಅಧಿಕಾರಿ ದೀಪಾಂಶು ಕಬ್ರಾ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 49 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಜನ ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಅನೇಕರು ಮನೆಗಳಲ್ಲಿ ಲವ್‌ ಬರ್ಡ್ಸ್‌ಗಳನ್ನು ಗಿಣಿಗಳನ್ನು ಸಾಕುವುದು ಸಾಮಾನ್ಯವಾಗಿದೆ. 

ಐಫೋನ್‌ ರಿಂಗ್‌ಟೋನ್‌ ಉಲಿಯುವ ಗಿಳಿ... ವಿಡಿಯೋ ವೈರಲ್‌

ಕೆಲ ದಿನಗಳ ಹಿಂದೆ ಗಿಳಿಯೊಂದು ಐಫೋನ್ ರಿಂಗ್‌ಟೋನ್‌ ಅನ್ನು ಅನುಕರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಗಿಳಿ  ಐಫೋನ್‌ ರಿಂಗ್‌ಟೋನ್‌ ಅನ್ನು ಅನುಕರಿಸುವುದನ್ನು ಕೇಳಿದರೆ ನಿಮ್ಮ ಬಳಿ ಐಫೋನ್‌ ಇದೇ ಎಂದಾದಲ್ಲಿ ನೀವು ಫೋನ್‌ ರಿಂಗ್‌ ಆಗ್ತಿದೆ ಎಂದು ಕರೆ ಸ್ವೀಕರಿಸಲು ಫೋನಿಗಾಗಿ ತಡಕಾಡುವುದಂತು ನಿಜ. ಅಷ್ಟೊಂದು ಸುಂದರವಾಗಿ ನಿಜವಾದ ರಿಂಗ್‌ಟೋನ್‌ಗೆ ಸ್ಪರ್ಧೆ ಕೊಡುವಂತೆ ಈ ಗಿಳಿ ಐಫೋನ್ ರಿಂಗ್‌ಟೋನ್‌ ಅನ್ನು ಅನುಕರಿಸುತ್ತಿತ್ತು.

ಇದನ್ನು ನೋಡಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಗುಸ್ಸಿ ಗೌಡ( Gucci Gowda) ಎಂಬ ಹೆಸರಿನ ಇನ್ಸ್ಟಾಗ್ರಾಮ್‌ ಅಕೌಂಟ್‌ನಿಂದ ಈ ವಿಡಿಯೋ ವೈರಲ್‌ ಆಗಿದೆ. ಈ ಖಾತೆಯ ತುಂಬೆಲ್ಲಾ ಈ ಸುಂದರ ಗಿಳಿ ಗುಸ್ಸಿ ಗೌಡದೇ ಫೋಟೋಗಳಿವೆ. ಈ ಖಾತೆಯನ್ನು ಈ ಗಿಳಿಯ ಮಾಲೀಕರಾದ ಪೂಜಾ ದೇವರಾಜ್‌ (Pooja Devaraj)ಹಾಗೂ ಹರ್ಷಿತ್‌ ( Harshith) ಎಂಬವರು ನಿರ್ವಹಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios