Asianet Suvarna News Asianet Suvarna News

Parenting Tips: ಮಕ್ಕಳ ಉಜ್ವಲ ಭವಿಷ್ಯಕ್ಕೆ ಮನೆಯಲ್ಲಿ ಹೀಗೆ ಟ್ರೇನ್‌ ಮಾಡಿ

ಪೋಷಕರು ಮಗುವನ್ನು ಬೆಳೆಸುವುದರ ಜೊತೆಗೆ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪುಗೊಳಿಸುವ ಬಹು ದೊಡ್ಡ ಹೊಣೆ ಹೊತ್ತಿರುತ್ತಾರೆ. ಮಗುವಿನ ಭವಿಷ್ಯ ಸುಂದರವಾಗಿರಬೇಕೆAದರೆ ಅದಕ್ಕೆ ಚಿಕ್ಕ ವಯಸ್ಸಿನಲ್ಲೇ ಅಡಿಪಾಯ ಚೆನ್ನಾಗಿರಬೇಕು. ಮಕ್ಕಳನ್ನು ಪ್ರಭಾವಿಸುವ ಪಾಠಗಳನ್ನು ಕಲಿಸಿ. ಈ ಬಗ್ಗೆ ಇಲ್ಲಿದೆ ಮಾಹಿತಿ.

Parenting Tips: Train these basic things to your child for Better Future
Author
First Published Oct 19, 2022, 4:52 PM IST

ಇಂದು ಅನೇಕ ಪೋಷಕರು ತಮ್ಮ ಮಕ್ಕಳ Gradeಗಳ ಮತ್ತು ಪಠ್ಯೇತರ ಚಟುವಟಿಕೆಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ. ಉದಾಹರಣೆಗೆ ಮಕ್ಕಳು ಓದುವುದನ್ನು ಖಚಿತಪಡಿಸಿಕೊಳ್ಳುವುದು, ಅವರ ಮನೆಕೆಲಸವನ್ನು ಮಾಡುವುದು ಮತ್ತು ಸಮಯಕ್ಕೆ ಸರಿಯಾದ ಪಾಠಗಳನ್ನು ಪಡೆಯುವುದು. ಆದರೆ ಆಗಾಗ್ಗೆ ಮಗುವಿನ ಯಶಸ್ಸು ಮತ್ತು ಬೆಳವಣಿಗೆಯ ಮತ್ತೊಂದು ಅಂಶವನ್ನು ಪೋಷಿಸಲು ಸಮಯ ಮತ್ತು ಶ್ರಮವನ್ನು ಹಾಕಲು ದೊಡ್ಡವರೇ ಮರೆಯುತ್ತೇವೆ. ಪುಟ್ಟ ಮಗುವಿನಲ್ಲೇ ಮಗುವಿನ ಮೇಲೆ ಪ್ರಭಾವಿಸುವ ಅಂಶಗಳನ್ನು ಪೋಷಕರು ಮಾಡಿಕೊಡಬೇಕು. ಈ ಅಂಶಗಳು ಅವರ ಭವಿಷ್ಯವನ್ನು ಸುಂದರವಾಗಿಸಲು ಸಹಾಯ ಮಾಡುತ್ತದೆ. ಕೆಲವು ಅಂಕಿಅAಶಗಳ ಪ್ರಕಾರ, ಹೆಚ್ಚಿನ ಪೋಷಕರು ತಮ್ಮ ಕೌಶಲ್ಯಗಳಲ್ಲಿ ವಿಶ್ವಾಸ ಹೊಂದಿದ್ದಾರೆ. ಅದಾಗ್ಯೂ, ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುವ ತಪ್ಪು ಪಾಠಗಳನ್ನು ಕಲಿಸುತ್ತಾರೆ.

ಉತ್ತಮ ಪಾಲನೆ ಎಂದರೆ ನಿಮ್ಮ ಆಲೋಚನೆಗಳು ಮತ್ತು ಜೀವನದ ಕಲ್ಪನೆಯನ್ನು ಮಗುವಿನ ಮೇಲೆ ಹೇರುವುದಲ್ಲ. ಅವರು ವಿಭಿನ್ನ ಸಾಮಾಜಿಕ ಪರಿಸ್ಥಿತಿಗಳಲ್ಲಿ ವಿಭಿನ್ನ ಸಮಯಗಳಲ್ಲಿ ಜನಿಸಿರುವುದರಿಂದ, ಅವರಿಗೆ ಸಲಹೆ ನೀಡುವುದು ಮತ್ತು ವಿಭಿನ್ನವಾಗಿ ನಿರ್ವಹಿಸಬೇಕಾಗಿರುವುದು ಪೋಷಕರ ಕರ್ತವ್ಯ.

Parenting Tips: ಮಗುವಿನ ಗ್ರಹಿಕೆ ಬಲಗೊಳಿಸಲು ಹೀಗೆ ಮಾಡಿ

ಮಗುವಿನ ಉತ್ತಮ ಪಾಲನೆಗಾಗಿ ಪೋಷಕರಿಗೆ ಸಲಹೆಗಳು ಇಲ್ಲಿವೆ
1. ಮಕ್ಕಳಿಗೆ ಅನ್ಯಾಯದ ಅಥವಾ ಕಷ್ಟಕರ ಸಂದರ್ಭಗಳ ಬಗ್ಗೆ ಮುಕ್ತವಾಗಿ ಮಾತನಾಡುವುದನ್ನು ಪೋಷಕರು ಕಲಿಸಬೇಕು. ಮಕ್ಕಳು ಹೇಳುವ ಕೆಲವು ಕಥೆಗಳು ನಿಜವಾಗಿಯೂ ದೊಡ್ಡ ವಿಷಯವಾಗಿ ಕಾಣದಿದ್ದರೆ ತಾಳ್ಮೆಯಿಂದಿರಿ. 
2. ಮಗುವಿನ ಭಾವನೆಗಳನ್ನು ಸುರಕ್ಷಿತ ರೀತಿಯಲ್ಲಿ ವ್ಯಕ್ತಪಡಿಸಲು ಪ್ರೋತ್ಸಾಹಿಸಿ.
3. ಮಗುವು ಇತರರನ್ನು ಮೆಚ್ಚಿಸಲು ತಮ್ಮ ಸ್ವಂತ ಆಸಕ್ತಿಗಳು ಮತ್ತು ಗುರಿಗಳನ್ನು ತ್ಯಾಗ ಮಾಡಬಾರದು. ಅವರು ಮಾಡಲು ಬಯಸದ ಕೆಲಸವನ್ನು ಮಾಡುವಂತೆ ಯಾರೂ ಅವರನ್ನು ಒತ್ತಾಯಿಸಬಾರದು ಹಾಗೆ ನೋಡಿಕೊಳ್ಳಬೇಕು.
4. ನಿಮ್ಮ ಮಗುವಿಗೆ ಜ್ಞಾನವನ್ನು ಪಡೆಯಲು ಕಷ್ಟಪಟ್ಟು ಕೆಲಸ ಮಾಡಲು ಹೇಳಿ. ಆದರೆ ಉತ್ತಮ ಶ್ರೇಣಿಗಾಗಿ ತಮ್ಮನ್ನು ಸುತ್ತಿಕೊಳ್ಳುವುದು ಬೇಡ ಎಂದು ಮನವರಿಕೆ ಮಾಡಿ.
5. ಆರ್ಥಿಕವಾಗಿ ಜವಾಬ್ದಾರಿಯುತ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಮಾದರಿಯಾಗುತ್ತಾರೆ. ಮಕ್ಕಳು ಹಣದ ಮೌಲ್ಯವನ್ನು ಕಲಿಯುತ್ತಾರೆ ಮತ್ತು ಅದನ್ನು ಒಂದು ಸಾಧನವಾಗಿ ಬಳಸುತ್ತಾರೆ. ಮನರಂಜನೆಯಾಗಿ ಅಲ್ಲ.
6.ಪ್ರಾಮಾಣಿಕ ತಪ್ಪುಗಳಿಗೆ ಶಿಕ್ಷೆಯ ಅಗತ್ಯವಿಲ್ಲ. ನಿಮ್ಮ ಮಗುವು ಕಡಿಮೆ Grade ಅನ್ನು ಪಡೆದರೆ ಅಥವಾ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅವರಿಗೆ ಕಠಿಣ ವಿಷಯದ ಕುರಿತು ಪೋಷಕರು ಸಹಾಯ ಮಾಡಬೇಕು. 

ಮಕ್ಕಳು ಕಲಿಕೆಯಲ್ಲಿ ಹಿಂದಿದ್ದಾರೆಂದು ಚಿಂತೆನಾ ? ಈ ವಿಚಾರ ಹೇಳಿ ಕೊಡಿ ಮಾರ್ಕ್ಸ್‌ ಹೆಚ್ಚುತ್ತೆ

7.ಕೆಲ ಮನೋವಿಜ್ಞಾನಿಗಳ ಪ್ರಕಾರ ಪೋಷಕರು ಮಕ್ಕಳ ಕುರಿತು ಸಮಯ ನೀಡದಿದ್ದರೆ ಮಕ್ಕಳು ಕಲಿಯುವುದರ ಬಗ್ಗೆ ಆಸಕ್ತಿ ತೋರುವುದಿಲ್ಲ ಅಥವಾ ನಿರಾಸಕ್ತಿ ಹೊಂದುತ್ತಾರೆ ಎಂದು. ಮಕ್ಕಳಿಗೆ ಆಟಿಕೆ, ಪುಸ್ತಕ ಮತ್ತು ಇತರೆ ಚಟುವಟಿಕೆಗಳನ್ನು ಒದಗಿಸಿ. ಆದರೆ ಮಗು ತಮ್ಮನ್ನು ಹೇಗೆ ಮನರಂಜಿಸಬೇಕು ಎಂಬುದನ್ನು ಸ್ವತಃ ಆಯ್ಕೆ ಮಾಡಿಕೊಳ್ಳಲು ತಿಳಿಸಿ. 
8. ಮಕ್ಕಳು ಆಟಿಕೆಗಳನ್ನು ಹಂಚಿಕೊಳ್ಳಲು ಉತ್ತೇಜಿಸಿ. ಅವರಲ್ಲಿ ನ್ಯಾಯೋಚಿತ ಭಾವನೆಯನ್ನು ಮೂಡಿಸಿ. ನಿಮ್ಮ ಮಗು ಆಡುವ ಚೆಂಡನ್ನು ನೋಡಿ ಇನ್ನೊಂದು ಮಗು ಬಯಸಿದರೆ  ಮಕ್ಕಳು ಆ ಚೆಂಡಿನೊAದಿಗೆ ಒಟ್ಟಿಗೆ ಆಡುವಂತೆ ನೋಡಿಕೊಳ್ಳಿ. 
9. ಸೂಕ್ಷ್ಮವಾಗಿರುವುದು ಕೆಟ್ಟ ವಿಷಯವಲ್ಲ ಎಂದು ಅವರಿಗೆ ಕಲಿಸಿ. ವಾಸ್ತವವಾಗಿ, ಈ ಜಗತ್ತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಮುಖ್ಯವೆಂದು ತಿಳಿಸಿಕೊಡಿ.
10. ಮಕ್ಕಳು ತಮ್ಮ ಬದುಕಿನಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು ಮನೆಯ ಕೆಲಸವನ್ನು ಕಲಿಸಿ. Table ಜೋಡಿಸುವುದು, ಕಸ ಗುಡಿಸುವುದು, ನೆಲ ವರೆಸುವುದು, ತೊಳೆದ ಪಾತ್ರೆ ಜೋಡಿಸುವುದು ಹೀಗೆ. ಇದರಿಂದ ಮಕ್ಕಳಲ್ಲಿ ಜವಾಬ್ದಾರಿ ಮತ್ತು ಸಾಧನೆಯ ಅರ್ಥ ತಿಳಿಯುತ್ತಾರೆ. ಒಳ್ಳೆಯ ಕೆಲಸ ಮಾಡುವುದು ಮತ್ತು ಮನೆಗೆ ಅವರ ಕೊಡುಗೆ ಬಗ್ಗೆ ಮಕ್ಕಳಲ್ಲಿ ಹೆಮ್ಮೆಯ ಭಾವನೆ ಮೂಡುತ್ತದೆ. 

'ನಿನ್ನಿಂದ ಏನೇನೂ ಸಾಧ್ಯವಿಲ್ಲ', ಮಕ್ಕಳ ಬಗ್ಗೆ ಹೀಗೆಲ್ಲಾ ಕಾಮೆಂಟ್ ಮಾಡೋದು ಬಿಟ್ಬಿಡಿ !

11. ಮಗುವಿನಲ್ಲಿ ಸ್ವಯಂ ಸೇವೆಯ ಬಗ್ಗೆ ಕಲಿಸಿ. ಮಗುವು ವಯಸ್ಸಾದ ನೆರೆಹೊರೆಯವರಿಗೆ ಕಾಲುದಾರಿ ಸುಲಭ ಮಾಡುವುದು, ಇನ್ನೊಬ್ಬರ ಕಷ್ಟದಲ್ಲಿ ಸಹಾಯ ಮಾಡುವುದು ಹೇಳಿಕೊಡಿ. ಇದು ಮಗುವಿನ ಪಾತ್ರವನ್ನು ರೂಪಿಸುತ್ತದೆ. ಇತರರಿಗೆ ಸಹಾಯ ಮಾಡಿದಾಗ ಅವರು ತಮಗಿಂತ ಕಡಿಮೆ ಅದೃಷ್ಟಶಾಲಿಗಳ ಅಗತ್ಯತೆಗಳ ಬಗ್ಗೆ ಯೋಚಿಸುತ್ತಾರೆ. 
12. ಇನ್ನೊಬ್ಬರನ್ನು ಗೌರವಿಸುವುದನ್ನು ಕಲಿಸುವುದು ಬಹಳ ದೊಡ್ಡ ವಿಷಯ. ಇದು ಪೋಷಕರು ಮಕ್ಕಳಿಗೆ ಹೇಳಿಕೊಡಬೇಕಾದ ಪ್ರಮುಖ ಅಂಶವಾಗಿದೆ. ಧನ್ಯವಾದ, ದಯವಿಟ್ಟು ಎಂದು ಹೇಳುವಂತಹ ಉತ್ತಮ ನಡವಳಿಕೆಯ ಮೂಲಭೂತ ಅಂಶಗಳನ್ನು ವಾಡಿಕೆಯಂತೆ ಅಭ್ಯಾಸ ಮಾಡಿಸಿ. ಜನರ ಜೊತೆ ಸಭ್ಯತೆಯಿಂದ ನಡೆದುಕೊಳ್ಳುವುದು, ಹಿರಿಯರನ್ನು ಗೌರವಿಸುವುದನ್ನು ಕಲಿಸಿ. ಇದು ಅವರ ಬದುಕಿನ ಮೂಲಭೂತ ಅಂಶಗಳಾಗಿವೆ.

Follow Us:
Download App:
  • android
  • ios