ಮಕ್ಕಳು ಕಲಿಕೆಯಲ್ಲಿ ಹಿಂದಿದ್ದಾರೆಂದು ಚಿಂತೆನಾ ? ಈ ವಿಚಾರ ಹೇಳಿ ಕೊಡಿ ಮಾರ್ಕ್ಸ್ ಹೆಚ್ಚುತ್ತೆ
ಮನೆಯಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಅವರು ಹೇಗೆ ಅಧ್ಯಯನ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಪೋಷಕರು ಅವರ ಮಾರ್ಕ್ಸ್ ಕಾರ್ಡ್ ನೋಡುವುದು ಸಾಮಾನ್ಯವಾಗಿದೆ. ಹೀಗೆ ಮಾರ್ಕ್ಸ್ ಕಾರ್ಡ್ ನೋಡುವಾಗ ಮಕ್ಕಳು ಉತ್ತಮ ಮಾರ್ಕ್ಸ್ ಪಡೆದಿಲ್ಲವಾಗಿದ್ದರೆ ಪೋಷಕರು ನಿರಾಶೆಗೊಳ್ಳುತ್ತಾರೆ. ಮಕ್ಕಳ ಮೇಲೆ ಕಿರುಚಾಡಲು ಶುರು ಮಾಡುತ್ತಾರೆ. ಆದ್ರೆ ಹಾಗೆ ಮಾಡಬೇಡಿ. ಬದಲಿಗೆ ಮಕ್ಕಳಿಗೆ ಕೆಲವೊಂದು ವಿಚಾರಗಳನ್ನು ಹೇಳಿ ಕೊಡಿ. ಇದ್ರಿಂದ ಮಕ್ಕಳ ಮಾರ್ಕ್ಸ್ ತನ್ನಿಂದ ತಾನೇ ಹೆಚ್ಚುತ್ತೆ.
ಶಾಲೆಯಲ್ಲಿ ಪಡೆದ ಅಂಕಗಳು ನಿಮ್ಮ ಮಗು ಹೇಗೆ ಅಧ್ಯಯನ ಮಾಡುತ್ತಿದೆ ಮತ್ತು ಅವರು ಶಾಲೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆಯಾಗಿದೆ. ಆದರೆ ನೀವು ಮಗುವಿನ ಅಂಕಗಳ ಬಗ್ಗೆ ಮಾತ್ರ ನೀವು ಯೋಚಿಸಿದರೆ ಅದು ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವು ಪೋಷಕರು ತಮ್ಮ ಮಗು ಅಧ್ಯಯನದಲ್ಲಿ ಹಿಂದೆ ಬಿದ್ದರೆ, ಅದನ್ನು ತಮ್ಮ ಸ್ವಂತ ಯಶಸ್ಸು ಮತ್ತು ವೈಫಲ್ಯವೆಂದು ಪರಿಗಣಿಸುತ್ತಾರೆ. ಈ ಸಿಟ್ಟಿನಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಮಕ್ಕಳನ್ನು ಬೈಯುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಇದರ ಬದಲು ನಿಮ್ಮ ಮಕ್ಕಳಿಗೆ ಕೆಲವೊಂದು ವಿಚಾರಗಳನ್ನು ಹೇಳಿ ಕೊಡಿ. ಇದರಿಂದ ಮಕ್ಕಳ ಮಾರ್ಕ್ಸ್ ತನ್ನಿಂದ ತಾನೇ ಹೆಚ್ಚುತ್ತೆ.
ಮಾರ್ಕ್ಸ್ ಬಗ್ಗೆ ಮಕ್ಕಳ ಅಭಿಪ್ರಾಯ ಕೇಳಿ: ಮಕ್ಕಳ ಗ್ರೇಡ್‌ಗಳ ಬಗ್ಗೆಅವಹೇಳನ ಮಾಡುವುದನ್ನು ಬಿಟ್ಟುಬಿಡಿ. ಬದಲಿಗೆ ತೆಗೆದುಕೊಂಡಿರುವ ಗ್ರೇಡ್‌ಗಳ ಬಗ್ಗೆ ಏನು ಅನಿಸುತ್ತದೆ ಎಂದು ಮಕ್ಕಳ (Children) ಬಳಿಯೇ ಕೇಳಿ. ಅವರ ಮಾರ್ಕ್ಸ್ ಒಳ್ಳೆಯದು ಅಥವಾ ಕೆಟ್ಟದ್ದಾಗಿದೆಯೇ ಎಂದು ಅವರೇ ನಿರ್ಧರಿಸಲಿ. ಮಕ್ಕಳು ತೆಗೆದುಕೊಂಡಿರುವ ಅಂಕಗಳ (Marks) ಬಗ್ಗೆ ನೀವು ಹತಾಶೆಗೊಂಡಿದ್ದರೆ ಮಕ್ಕಳ ಮೇಲೆ ಕಿರುಚಾಡುವುನ್ನು ಮಾಡದಿರಿ. ಇದು ಮಗುವಿನ ಆತ್ಮವಿಶ್ವಾಸವನ್ನು (Confidence) ಕಡಿಮೆ ಮಾಡಬಹುದು ಮತ್ತು ಮಗುವಿನ ಕಲಿಕೆಯ ಮೇಲೆ ಪರಿಣಾಮ ಬೀರಬಹುದು. ಮಕ್ಕಳ ಮೇಲೆ ಸಿಟ್ಟಿಗೇಳುವ (Angry) ಬದಲು ಅವರಿಗೆ ವಿಷಯವನ್ನು ಬಿಡಿಸಿ ಹೇಳಿ, ಅರ್ಥ ಮಾಡಿಸಿ.
'ನಿನ್ನಿಂದ ಏನೇನೂ ಸಾಧ್ಯವಿಲ್ಲ', ಮಕ್ಕಳ ಬಗ್ಗೆ ಹೀಗೆಲ್ಲಾ ಕಾಮೆಂಟ್ ಮಾಡೋದು ಬಿಟ್ಬಿಡಿ !
ಏನು ಸಮಸ್ಯೆಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ: ಅಂಕ ಕಡಿಮೆಯಾದಾಗ ಮಗುವನ್ನು ದೂರುವ ಬದಲು ಏನು ಸಮಸ್ಯೆಯಾಗುತ್ತಿದೆ ಎಂಬುದನ್ನು ವಿಚಾರಿಸಿಕೊಳ್ಳಿ. ಏನಾದರೂ ಸಮಸ್ಯೆ (Problem)ಯಿದ್ದರೆ ಅದನ್ನು ಬಗೆಹರಿಸಲು ಮುಂದಾಗಿ. ಈ ಮೂಲಕ ಮಕ್ಕಳಿಗೆ ಮಾನಸಿಕವಾಗಿಯೂ ಬೆಂಬಲ ದೊರಕುತ್ತದೆ ಅವರು ಕಲಿಕೆಯತ್ತ (Studies) ಉತ್ತಮವಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ.
ಭಾವನಾತ್ಮಕ ಬುದ್ಧಿವಂತಿಕೆಯನ್ನು ಕಲಿಸಿ: ಗಣಿತದ ಪದದ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ, ನೀವು ಮಗುವಿನ ಜೀವನದ ಸಮಸ್ಯೆಗಳಿಗೆ ಇಣುಕಿ ನೋಡಬಹುದು. ಮಗುವಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯಲ್ಲಿ ಉತ್ತೀರ್ಣರಾಗುವುದು ಸಹ ಅಗತ್ಯವಾಗಿದೆ. ಎಮೋಷನಲ್ ಇಂಟೆಲಿಜೆನ್ಸ್ ಎಂದರೇನು ಎಂದು ನೀವು ಯೋಚಿಸುತ್ತಿದ್ದರೆ, ಇದರಲ್ಲಿ ಮಗು ಸ್ವತಃ ತನ್ನ ಭಾವನೆಗಳನ್ನು (Feelings) ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಅವುಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಮತ್ತು ಇತರರಿಗೆ ಸಹಾನುಭೂತಿ ತೋರಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಈ ವಿಚಾರಗಳನ್ನು ಹೇಳಿ ಕೊಡುವುದು ಜೀವನಕ್ಕೆ ಅಗತ್ಯವಾಗಿದೆ.
ಪಾಲಕರು ಮಕ್ಕಳಿಗಿಂತ ಮೊದ್ಲು ಈ ಅಭ್ಯಾಸ ಕಲಿತುಕೊಂಡಿರಬೇಕು
ಗ್ರೇಡ್ ಇದ್ದರಷ್ಟೇ ಯಶಸ್ವಿಯಾಗುತ್ತಾರೆ ಎಂಬ ವಿಚಾರ ಬಿಟ್ಟುಬಿಡಿ: ಮಕ್ಕಳ ಗ್ರೇಡ್‌ನ ಹಿಂದೆ ಬೀಳುವ ಅಭ್ಯಾಸವನ್ನು (Habit) ನೀವು ಬಿಟ್ಟುಬಿಡಬೇಕು. ಯಾಕೆಂದರೆ ಜೀವನದಲ್ಲಿ ಪರೀಕ್ಷೆ, ಮಾರ್ಕ್ಸ್ ಎಂಬುದೇ ಅಂತಿಮವಲ್ಲ. ಅದರಾಚೆಗೂ ಬದುಕಿದೆ. ಎಕ್ಸಾಂನಲ್ಲಿ ಫೇಲ್ ಆದವರು ಕೂಡಾ ಜೀವನದಲ್ಲಿ ಯಶಸ್ವಿಯಾಗುತ್ತಾರೆ (Successful). ಹೀಗಾಗಿ ನಿಮ್ಮ ಮಕ್ಕಳ ಅಂಕಗಳ ಬಗ್ಗೆ ಕೇಳುವ ಗೀಳನ್ನು ನೀವು ನಿಲ್ಲಿಸಬೇಕು. ಪರೀಕ್ಷೆ ಮತ್ತು ವಿಶೇಷವಾಗಿ ಫಲಿತಾಂಶದ ಬಗ್ಗೆ ಮಗುವಿನ ಮೇಲೆ ಹೆಚ್ಚು ಒತ್ತಡ (Pressure) ಹೇರಬೇಡಿ. ನೀವು ಮಗುವನ್ನು ನಂಬುತ್ತೀರಿ ಎಂಬ ನಂಬಿಕೆ ಅವರಲ್ಲಿ ಬರಲು ಬಿಡಿ.
ಪಠ್ಯೇತರ ಚಟುವಟಿಕೆಗಳು: ಪುಸ್ತಕಗಳನ್ನು ಮೀರಿದ ಪ್ರಪಂಚವಿದೆ: ಹೀಗಾಗಿ ನೀವು ನಿಮ್ಮ ಮಗುವಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನೂ ಕಲಿಸಬೇಕು. ಮಕ್ಕಳು ಅದನ್ನು ತುಂಬಾ ಆನಂದಿಸುತ್ತಾರೆ ಮತ್ತು ಕೆಲವರು ಅದರಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಅಧ್ಯಯನವನ್ನು ಮೀರಿ ನೃತ್ಯ, ಚಿತ್ರಕಲೆ ಅಥವಾ ಹಾಡುಗಾರಿಕೆಯಲ್ಲಿ ನಿಮ್ಮ ಮಗು ಯಶಸ್ವಿಯಾಗುವುದನ್ನು ನೀವು ನೋಡಬಹುದು. ಹೀಗೆ ಮಾಡಿದರೆ ಮಕ್ಕಳ ಭವಿಷ್ಯದ ಬಗ್ಗೆ ನೀವು ಚಿಂತಿಸುತ್ತಾ ಕೂರಬೇಕಿಲ್ಲ. ಮಕ್ಕಳು ಖಂಡಿತಾ ಯಶಸ್ವಿಯಾಗುತ್ತಾರೆ.