ಯಶಸ್ಸಿನ ಪಾಠ ಶುರುವಾಗಬೇಕು ಮನೆಯಲ್ಲಿ, ಈ ಅಭ್ಯಾಸಗಳು ಮಕ್ಕಳಿಗೆ ಆಗಲಿ ರೂಢಿ

ಮಕ್ಕಳ ಉತ್ತಮ ಭವಿಷ್ಯ ಪಾಲಕರ ಅಂತಿಮ ಗುರಿ. ವಿದ್ಯಾವಂತ, ಗುಣವಂತ, ಸಂಸ್ಕಾರವಂತ ಮಕ್ಕಳನ್ನು ಪಾಲಕರು ಬಯಸ್ತಾರೆ. ಇದು ಮ್ಯಾಜಿಕ್ ನಿಂದ ಆಗಲು ಸಾಧ್ಯವಿಲ್ಲ. ಪಾಲಕರ ಜವಾಬ್ದಾರಿ ಇದ್ರಲ್ಲಿರುತ್ತೆ. 
 

Parenting Tips Good Habits For Children to be succeeded in life roo

ಹಿರಿಯಕ್ಕನ ಛಾಳಿ ಮನೆ ಮಂದಿಗೆಲ್ಲ ಎನ್ನುವ ಗಾಧೆ ಒಂದಿದೆ. ಮನೆಯ ಹಿರಿಯರನ್ನೇ ಮಕ್ಕಳು ಪಾಲಿಸ್ತಾರೆ. ಪ್ರತಿಯೊಬ್ಬರಿಗೆ ಸಂಸ್ಕಾರ ಸಿಗೋದು ಕುಟುಂಬದಿಂದ. ಮಕ್ಕಳ ಮುಂದೆ ಕೆಟ್ಟ ಬೈಗುಳ ಬೈದಾಗ ಅದನ್ನು ಬೇಗ ಕ್ಯಾಚ್ ಮಾಡಿಕೊಳ್ಳುವ ಮಕ್ಕಳು, ತಾವೂ ಆ ಪದಗಳ ಬಳಕೆ ಶುರು ಮಾಡ್ತಾರೆ. ಅದೇ ಒಳ್ಳೆ ಸಂಸ್ಕಾರ, ಮಾತುಗಳು, ಕೆಟ್ಟ ಮಾತು, ಚಟದಂತೆ ಬೇಗ ಬರೋದಿಲ್ಲ. ಪ್ರತಿ ನಿತ್ಯ ಅಭ್ಯಾಸ ಮಾಡಿದ್ಮೇಲೆ ಅದು ರೂಢಿಗೆ ಬರೋದು. ಮಕ್ಕಳಿಗೆ ಪಾಲಕರಾದವರು ಒಳ್ಳೊಳ್ಳೆ ಅಭ್ಯಾಸ ಕಲಿಸ್ಬೇಕು.

ಮಕ್ಕಳು ಸ್ಕೂಲ್ (School) ನಲ್ಲಿ ಎಷ್ಟು ಮಾರ್ಕ್ಸ್ ತರ್ತಾರೆ ಅನ್ನೋದು ಈಗಿನ ದಿನಗಳಲ್ಲಿ ಮುಖ್ಯವಾಗಿದೆ. ಇಡೀ ದಿನ ಓದು ಓದು ಎನ್ನುವ ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಲು ಮರೆಯುತ್ತಾರೆ. ನಿಮ್ಮ ಮನೆಯಲ್ಲೂ ಮಕ್ಕಳಿದ್ರೆ ಕೆಲವೊಂದು ಒಳ್ಳೆ ಅಭ್ಯಾಸ (Practice) ಗಳನ್ನು ಅವರಿಗೆ ರೂಢಿ ಮಾಡ್ಸಿ. ಅದು ಮಕ್ಕಳ ಭದ್ರ ಭವಿಷ್ಯಕ್ಕೆ ಬುನಾದಿಯಾಗುತ್ತದೆ. ಮಕ್ಕಳು ಈ ಅಭ್ಯಾಸದ ಮೂಲಕವೇ ಅನೇಕ ವಿಷ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ತಾರೆ. ನಾವಿಂದು ಶಾಲೆಗೆ ಹೋಗುವ ಮಕ್ಕಳಿಗೆ ಕಲಿಸಬೇಕಾದ ಅಭ್ಯಾಸಗಳ ಬಗ್ಗೆ ನಿಮಗೆ ಹೇಳ್ತೇವೆ.

ಬೆಳಗ್ಗೆ ಬೇಗ ಎದ್ದು ನೋಡಿ… ನಿಮಗೆ ಗೊತ್ತಿಲ್ಲದೇನೆ ಪಾಸಿಟಿವ್ ಚೇಂಜಸ್ ಆಗುತ್ತೆ!

ಮಕ್ಕಳಿಗೆ ಕಲಿಸಿ ಈ ಅಭ್ಯಾಸ : 
ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡ್ಬೇಕು :
ಆರಂಭ ಚೆನ್ನಾಗಿದ್ರೆ ಇಡೀ ದಿನ ಸುಂದರವಾಗಿ ಕಳೆಯುತ್ತೆ. ಹಾಗಾಗಿ ಮಕ್ಕಳಿ (Children) ಗೆ ಹಾಸಿಗೆಯಿಂದ ಏಳೋದು ಹೇಗೆ ಎಂಬುದನ್ನು ಪಾಲಕರು ಕಲಿಸ್ಬೇಕು. ಬಲ ಮಗ್ಗುಲಿನಿಂದ ಏಳುವಂತೆ ಮಕ್ಕಳಿಗೆ ಹೇಳಿ. ಎದ್ದ ತಕ್ಷಣ ಹಸ್ತಗಳನ್ನು ನೋಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸೋದನ್ನು ಕಲಿಸಿ.

ದೇವರಿಗೆ ನಮಸ್ಕಾರ : ಮಕ್ಕಳು ಸಿದ್ಧರಾಗಿ ಮನೆ ಬಿಡುವ ಮೊದಲು ದೇವರಿಗೆ ನಮಸ್ಕಾರ ಮಾಡಿ ಹೋಗುವಂತೆ ಸಲಹೆ ನೀಡಿ. ಕೆಲ  ಮಕ್ಕಳು ಮುಖ ತೊಳೆದ ನಂತ್ರ ದೇವರಿಗೆ ನಮಸ್ಕರಿಸಿ ನಂತ್ರ ಆಹಾರ ಸೇವನೆ ಮಾಡ್ತಾರೆ. ನಿಮ್ಮ ಮಕ್ಕಳಿಗೆ ನೀವು ಆಹಾರ ಸೇವನೆ ಮೊದಲು ಅಥವಾ ಮನೆಯಿಂದ ಶಾಲೆಗೆ ಹೋಗುವ ಮೊದಲು ಒಟ್ಟಿನಲ್ಲಿ ಬೆಳಿಗ್ಗೆ ದೇವರಿಗೆ ನಮಸ್ಕಾರ ಮಾಡಲು ಕಲಿಸಿ.

ಬಾಯ್ ಫ್ರೆಂಡನ್ನು ಇಂಪ್ರೆಸ್ ಮಾಡಲು ಗಿಫ್ಟ್ ಬೇಡ… ನೀವು ಈ ರೀತಿ ಇದ್ರೆ ಸಾಕು ಬಿಡಿ

ಬ್ಯಾಗ್ ಸರಿಯಾದ ಜಾಗದಲ್ಲಿಡಲು ಕಲಿಸಿ : ಶಾಲೆಯಿಂದ ಮನೆಗೆ ಬರ್ತಿದ್ದಂತೆ ಮಕ್ಕಳ ಬ್ಯಾಗ್ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ. ಇದು ಸಭ್ಯತೆಯಲ್ಲ. ಮಕ್ಕಳಿಗೆ ಅವರ ವಸ್ತುಗಳನ್ನು ಎಲ್ಲಿ ಇಟ್ಕೊಳ್ಳಬೇಕು ಎಂಬುದನ್ನು ನೀವು ಕಲಿಸಬೇಕು. ಶಾಲೆ ಪುಸ್ತಕ, ಬ್ಯಾಗ್ ಇಡಲು ಒಂದು ಜಾಗ ಫಿಕ್ಸ್ ಮಾಡಿ. ಅಲ್ಲಿಯೇ ಬ್ಯಾಗ್ ಇಡಲು ಕಲಿಸಿ.

ಊಟವಾದ್ಮೇಲೆ ಏನು ಮಾಡ್ಬೇಕು? : ಮಕ್ಕಳಿಗೆ ಆಹಾರದ ಬಗ್ಗೆ ಸರಿಯಾದ ಮಾಹಿತಿ ನೀಡೋದು ಪಾಲಕರ ಜವಾಬ್ದಾರಿ. ಅನೇಕ ಮಕ್ಕಳು ತಟ್ಟೆಯಲ್ಲಿ ಆಹಾರ ಬಿಟ್ಟು ಹಾಗೆ ಎದ್ದೇಳ್ತಾರೆ. ಪ್ರತಿ ದಿನ ಒಂದಿಷ್ಟು ಆಹಾರ ಕಸ ಸೇರಿತ್ತೆ. ತಟ್ಟೆಯಲ್ಲಿ ಆಹಾರ ಬಿಡೋದ್ರಿಂದ ಆಗುವ ನಷ್ಟವನ್ನು ಮಕ್ಕಳಿಗೆ ವಿವರಿಸಿ. ಹಾಗೆ ಊಟವಾದ್ಮೇಲೆ ಅವರ ಪ್ಲೇಟನ್ನು ಸಿಂಕ್ ಗೆ ಹಾಕೋ ಅಭ್ಯಾಸ ಮಾಡಿಸಿ.

ದಿನದಲ್ಲಿ ಎರಡು ಬಾರಿ ಬ್ರೆಷ್ : ಹಲ್ಲು ನಮ್ಮ ಇಡೀ ಆರೋಗ್ಯವನ್ನು ನಿಯಂತ್ರಿಸುತ್ತೆ. ಹಲ್ಲಿನ ಸ್ವಚ್ಛತೆ ಬಹಳ ಮುಖ್ಯ. ದಿನದಲ್ಲಿ ಎರಡು ಬಾರಿ ಬ್ರೆಷ್ ಮಾಡೋಕೆ ಮಕ್ಕಳಿಗೆ ಕಲಿಸಿ.

ಮಲಗುವ ಮುನ್ನ ಮಕ್ಕಳು ಮಾಡ್ಬೇಕು ಈ ಕೆಲಸ : ಇನ್ನು ಮಲಗುವ ಮೊದಲು ಮತ್ತೆ ದೇವರಿಗೆ ನಮಸ್ಕರಿಸಲು ಮಕ್ಕಳಿಗೆ ಕಲಿಸಿ. ಜೊತೆಗೆ ನಿದ್ರೆಗೆ ಜಾರುವ ಮುನ್ನ ಒಂದು ಒಳ್ಳೆಯ ಪುಸ್ತಕ ಓದಿ ಮಲಗುವಂತೆ ಅವರಿಗೆ ತಿಳಿಸಿ. 
 

Latest Videos
Follow Us:
Download App:
  • android
  • ios