ಸಾಮಾನ್ಯವಾಗಿ ಅಕ್ಕ ತಮ್ಮ, ಅಣ್ಣ ತಂಗಿ ಜೊತೆಯಾಗಿ ಹೋದಾಗ ಕೆಲವರು ಪ್ರೇಮಿಗಳು ಎಂದು ಭಾವಿಸುತ್ತಾರೆ. ಇದು ಅಸಹ್ಯ ಮೂಡಿಸುತ್ತದೆ. ಅದೇ ರೀತಿಯ ಅನುಭವ ಈಗ ನಟಿ ರಿಯಾ ಚಕ್ರವರ್ತಿಗೆ ಆಗಿದೆ. 

ಸಾಮಾನ್ಯವಾಗಿ ಅಕ್ಕ ತಮ್ಮ, ಅಣ್ಣ ತಂಗಿ ಜೊತೆಯಾಗಿ ಹೋದಾಗ ಕೆಲವರು ಪ್ರೇಮಿಗಳು ಎಂದು ಭಾವಿಸುತ್ತಾರೆ. ಇದು ಅಸಹ್ಯ ಮೂಡಿಸುತ್ತದೆ. ಅದೇ ರೀತಿಯ ಅನುಭವ ಈಗ ನಟಿ ರಿಯಾ ಚಕ್ರವರ್ತಿಗೆ ಆಗಿದೆ. 

ಸಿನಿಮಾ ನಟ ನಟಿಯರೆಂದ ಮೇಲೆ ಆಫೇರ್‌ಗಳು ಹಲವರ ಜೊತೆ ಪ್ರೇಮ ಸಂಬಂಧಗಳು ಕಾಮನ್ ಎನಿಸಿಬಿಟ್ಟಿದೆ. ಯಾರ ಜೊತೆ ಹೋದರೂ ಕೆಲವೊಮ್ಮೆ ಪ್ರೇಮಿಗಳು ಎಂಬಂತೆ ಗಾಸಿಪ್ ಆಗಿ ಬಿಡುತ್ತದೆ. ಕೆಲವೊಮ್ಮೆ ಅವರ ಜೊತೆ ಇರುವವರು ಯಾರೂ ಎಂಬುದು ಕೂಡ ಫೋಟೋಗ್ರಾಫರ್‌ಗಳಿಗೆ ಗೊತ್ತಿರುವುದಿಲ್ಲ, ಇಂತಹ ಸಮಯದಲ್ಲೇ ಕೆಲವೊಮ್ಮೆ ಎಡವಟ್ಟುಗಳಾಗುತ್ತವೆ. ಅದೇ ರೀತಿ ಈಗ ಸುಶಾಂತ್ ಮಾಜಿ ಗೆಳತಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಸೋದರನ ಜೊತೆ ಕಾಣಿಸಿಕೊಂಡ ವೇಳೆ ಫೋಟೋಗ್ರಾಫರ್ ಒಬ್ಬರು ಈ ಅಕ್ಕ ತಮ್ಮನಿಗೆ ನೈಸ್ ಜೋಡಿ ಎಂದಿದ್ದು, ಇದರಿಂದ ರಿಯಾ ಫುಲ್ ಕೆಂಡಮಂಡಲರಾಗಿದ್ದಾರೆ. ನಿಮ್ಮಂತ ಜನರಿಂದಲೇ ಸಂಬಂಧಗಳು ಗಾಸಿಪ್‌ಗಳು ಸೃಷ್ಟಿಯಾಗುವುದು ಎಂದು ದೂರಿದ್ದಾರೆ.

ಮುಂಬೈನಲ್ಲಿ ಆಮೀರ್ ಖಾನ್ ಪುತ್ರಿ ಇರಾ ಖಾನ್ ಹಾಗೂ ಫಿಟ್‌ನೆಸ್‌ ಟ್ರೈನರ್ ನೂಪುರ್ ಶಿಖರೆ ಮದ್ವೆ ಅರತಕ್ಷತೆ ಬಹಳ ಅದ್ಧೂರಿಯಾಗಿ ನಡೆದಿದ್ದು, ಈ ಮದುವೆಗೆ ನಟಿ ರಿಯಾ ಚಕ್ರವರ್ತಿ, ತನ್ನ ಕಿರಿಯ ಸೋದರ ಸೋವಿಕ್ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ಅಲ್ಲಿ ಪಪಾರಾಜಿ ಕ್ಯಾಮರಾಗಳಿಗೆ ಫೋಸ್ ನೀಡುವ ವೇಳೆ ಪಪಾರಾಜಿಗಳು ನೈಸ್ ಜೋಡಿ ಎಂದಿದ್ದಾರೆ ಎನ್ನಲಾಗಿದ್ದು, ಇದರಿಂದ ಮಖ ಸಿಂಡರಿಸಿಕೊಂಡ ರಿಯಾ ನಿಮ್ಮಂತಹವರಿಂದಲೇ ಗಾಸಿಪ್‌ಗಳು ಹುಟ್ಟಿಕೊಳ್ಳುವುದು ಎಂದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇನ್ನು ಬಾಲಿವುಡ್ ನಟ ಸುಶಾಂತ್ ರಾಜ್‌ಪೂತ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ಈ ಸಾವಿನ ಕಳಂಕದಿಂದ ಗೆಳತಿ ರಿಯಾ ಚಕ್ರವರ್ತಿಗೆ ಇನ್ನು ಹೊರ ಬರಲಾಗಲಿಲ್ಲ, ಆಕೆಯ ವೀಡಿಯೋ ಕಾಣಿಸಿಕೊಂಡಾಗಲೆಲ್ಲಾ ಸುಶಾಂತ್ ಅಭಿಮಾನಿಗಳು ಸುಶಾಂತ್ ಕೊಲೆಗಾತಿ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸುಶಾಂತ್ ಸಾವಿಗೀಡಾದ ಸಮಯದಲ್ಲಿ ರಿಯಾ ಚಕ್ರವರ್ತಿ ಹೆಸರು ವ್ಯಾಪಕವಾಗಿ ಕೇಳಿ ಬಂದಿತ್ತು. ಅನೇಕರು ಆಕೆಯನ್ನು ಸುಶಾಂತ್ ಕೊಲೆಗಾತಿ ಎಂದೇ ಹೀಯಾಳಿಸುತ್ತಿದ್ದಾರೆ. ಸುಶಾಂತ್ ಸಾವಿಗಾಗಿ ರಿಯಾ ಮಾಟಮಂತ್ರ ಮಾಡಿಸಿದ್ದಳು ಎಂಬ ಆರೋಪವೂ ಕೇಳಿ ಬಂದಿತ್ತು. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಯಾ ಚಕ್ರವರ್ತಿಯನ್ನು ಬಂಧಿಸಲಾಯಿತು. ಆಗ ರಿಯಾ ಸುಮಾರು 6 ವಾರಗಳ ಕಾಲ ಜೈಲಿನಲ್ಲಿದ್ದರು. ಇತ್ತೀಚಿಗೆ ರಿಯಾ ತಮ್ಮ ಜೈಲಿನ ಅನುಭವಗಳ ಬಗ್ಗೆ ತೆರೆದುಕೊಂಡಿದ್ದರು. 

ಸುಶಾಂತ್ ಸಾವಿನ ನಂತರ ಜೈಲಲ್ಲಿ ಕಳೆದ ದಿನಗಳ ಕರಾಳತೆ ತೆರೆದಿಟ್ಟ ರಿಯಾ ಚಕ್ರವರ್ತಿ

ಇತ್ತೀಚೆಗೆ ಜೈಲಿನಿಂದ ಹೊರಬಂದ ನಂತರ ತಾವು ಜೈಲಿನಲ್ಲಿ ಕಳೆದ ಅನುಭವವನ್ನು ರಿಯಾ ಹೇಳಿಕೊಂಡಿದ್ದರು. ಆ ದಿನಗಳು ನನ್ನ ಜೀವನದ ಅತ್ಯಂತ ನರಕಯಾತನೆಯ ದಿನಗಳು ಎಂದು ಅವರು ಹೇಳಿಕೊಂಡಿದ್ದಾರೆ. 'ನಿಮ್ಮನ್ನು ಸಮಾಜ ಹೊರಹಾಕಿದೆ. ಮತ್ತು ಜೈಲಿನಲ್ಲಿ ನಿಮ್ಮನ್ನು ಕೈದಿ ಸಂಖ್ಯೆಯ ಮೂಲಕ ಗುರುತಿಸಲಾಗುತ್ತದೆ. ಏಕೆಂದರೆ ನೀವು ಸಮಾಜಕ್ಕೆ ಅನರ್ಹರೆಂದು ಪರಿಗಣಿಸಲ್ಪಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗಾಗಿ ಸಿದ್ಧಪಡಿಸಿದ ವ್ಯಕ್ತಿತ್ವ ಅಥವಾ ವಸ್ತುಗಳು ಚೂರು ಚೂರಾಗುತ್ತವೆ. ಸಂಪೂರ್ಣವಾಗಿ ಕುಸಿದು ಹೋಗುವಿರಿ. ತಾನು ವಿಚಾರಣಾಧೀನ ಕೈದಿಯಾಗಿ ಕಂಬಿ ಎಣಿಸುತ್ತಿದ್ದೆ. ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಎಲ್ಲರೂ ನಿರಪರಾಧಿಗಳು ಎಂದು ಸಮಾರಂಭವೊಂದರಲ್ಲಿ, ಜೈಲಿನಲ್ಲಿ ಕಳೆದ ಸಮಯದ ಬಗ್ಗೆ ಕೇಳಿದಾಗ ರಿಯಾ ಚಕ್ರವರ್ತಿ ಉತ್ತರಿಸಿದರು. 2020ರ ಜೂನ್‌ 14 ರಂದು ಸುಶಾಂತ್ ಸಿಂಗ್ ರಾಜಪುತ್ ನಿಗೂಢವಾಗಿ ಮುಂಬೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಸಾವನ್ನಪ್ಪಿದ್ದರು. 

ಇನ್ನೂ ಈ ರಿಯಾ ಚಕ್ರವರ್ತಿ ಸಿನಿಮಾಗಿಂತ ಹೆಚ್ಚಾಗಿ ಬೇರೆಯದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಸುಶಾಂತ್ ಸಾವಿನ ನಂತರವೇ ರಿಯಾ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿದ್ದರು. ಟುನೀಗ ಟುನೀಗ ಎಂಬ ತೆಲುಗು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ರಿಯಾ, ಬಳಿಕ ಮೆರೆ ಡಾಡ್ ಕೀ ಮಾರುತಿ, ಸೋನಾಲಿ ಕೇಬಲ್, ದೊಬಾರ ಸೀ ಯುವರ್ ಇವಿಲ್ , ಹಾಫ್ ಗರ್ಲ್ಫ್ರೆಂಡ್ , ಬ್ಯಾಂಕ್ ಚೋರ್, ಜಲೇಬಿ, ಚೆಹ್ರೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಸುಶಾಂತ್‌ ಸಿಂಗ್‌ ಸಾವಿಗಾಗಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಮಾಟ-ಮಂತ್ರ ಮಾಡಿದ್ರಾ?

Scroll to load tweet…