MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸುಶಾಂತ್ ಸಾವಿನ ನಂತರ ಜೈಲಲ್ಲಿ ಕಳೆದ ದಿನಗಳ ಕರಾಳತೆ ತೆರೆದಿಟ್ಟ ರಿಯಾ ಚಕ್ರವರ್ತಿ

ಸುಶಾಂತ್ ಸಾವಿನ ನಂತರ ಜೈಲಲ್ಲಿ ಕಳೆದ ದಿನಗಳ ಕರಾಳತೆ ತೆರೆದಿಟ್ಟ ರಿಯಾ ಚಕ್ರವರ್ತಿ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ (Rhea Chakraborty) ಜೈಲಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದರೊಂದಿಗೆ ಆ ದಿನಗಳನ್ನು ತನ್ನ ಜೀವನದ ಅತ್ಯಂತ ನರಕಯಾತನೆಯ ದಿನಗಳು ಎಂದು ಹೇಳಿದ್ದಾರೆ. 

2 Min read
Suvarna News
Published : Oct 28 2023, 05:32 PM IST
Share this Photo Gallery
  • FB
  • TW
  • Linkdin
  • Whatsapp
16

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಯಾ ಚಕ್ರವರ್ತಿಯನ್ನು ಬಂಧಿಸಲಾಯಿತು. ಆಗ ರಿಯಾ ಸುಮಾರು 6 ವಾರಗಳ ಕಾಲ ಜೈಲಿನಲ್ಲಿದ್ದರು. ಇತ್ತೀಚಿಗೆ  ರಿಯಾ ತಮ್ಮ ಜೈಲಿನ ಅನುಭವಗಳ ಬಗ್ಗೆ ತೆರೆದುಕೊಂಡಿದ್ದಾರೆ

26

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಇತ್ತೀಚೆಗೆ ತಮ್ಮ ಜೈಲುವಾಸದ ಬಗ್ಗೆ ತೆರೆದುಕೊಂಡರು ಮತ್ತು ಅದನ್ನು ನಿರಾಶಾದಾಯಕ ಎಂದು ಕರೆದರು. ಇದರೊಂದಿಗೆ ಜೈಲಿನಲ್ಲಿ ಅತ್ಯಂತ ಸಂತೋಷವಾಗಿರುವ ವ್ಯಕ್ತಿಗಳನ್ನೂ ಭೇಟಿಯಾಗಿದ್ದೆ ಎಂದು ಆಕೆ ಬಹಿರಂಗಪಡಿಸಿದ್ದಾರೆ. 

36

'ನಿಮ್ಮನ್ನು ಸಮಾಜ ಹೊರಹಾಕಿದೆ. ಮತ್ತು ಜೈಲಿನಲ್ಲಿ ನಿಮ್ಮನ್ನು ಸಂಖ್ಯೆ (ಕೈದಿ ಸಂಖ್ಯೆ) ಎಂದು ಗುರುತಿಸಲಾಗುತ್ತದೆ. ಏಕೆಂದರೆ ನೀವು ಸಮಾಜಕ್ಕೆ ಅನರ್ಹರೆಂದು ಪರಿಗಣಿಸಲ್ಪಟ್ಟಿದ್ದೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮಗಾಗಿ ಸಿದ್ಧಪಡಿಸಿದ ವ್ಯಕ್ತಿತ್ವ ಅಥವಾ ವಸ್ತುಗಳು ಚೂರು ಚೂರಾಗುತ್ತವೆ. ಸಂಪೂರ್ಣವಾಗಿ ಕುಸಿದು ಹೋಗುವಿರಿ. ತಾನು ವಿಚಾರಣಾಧೀನ ಕೈದಿಯಾಗಿ ಕಂಬಿ ಎಣಿಸುತ್ತಿದ್ದೆ. ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಎಲ್ಲರೂ ನಿರಪರಾಧಿಗಳು ಎಂದು  ಸಮಾರಂಭವೊಂದರಲ್ಲಿ, ಜೈಲಿನಲ್ಲಿ ಕಳೆದ ಸಮಯದ ಬಗ್ಗೆ ಕೇಳಿದಾಗ ರಿಯಾ ಚಕ್ರವರ್ತಿ ಉತ್ತರಿಸಿದರು.
 

46

ಜೈಲಲ್ಲಿ ಒಬ್ಬರನ್ನು ನೋಡಿದ ನಂತರ ಮತ್ತು ಅವರೊಂದಿಗೆ ಮಾತನಾಡಿದ ನಂತರ, ಆ ಮಹಿಳೆಯರಲ್ಲಿ ನನಗೊಂದು ಅನನ್ಯ ಅನುಭವವಾಯಿತು. ಸಣ್ಣಪುಟ್ಟ ವಿಷಯಗಳಲ್ಲಿ ಸಂತೋಷವನ್ನು ಕಂಡು ಕೊಂಡಿದ್ದರು ಅವರು. ಒಂದು ಕ್ಷಣದಲ್ಲಿ ಸಂತೋಷ ಹೇಗೆ ಪಡೆಯುವುದು ಎಂದು ಆ ಮಹಿಳೆಯರು ತಿಳಿದುಕೊಂಡಿದ್ದರು. ಅವರನ್ನು ಭೇಟಿಯಾದ ನಂತರ, ನಾನು ಭೇಟಿಯಾದ ಅತ್ಯಂತ ಸಂತೋಷದಾಯಕ ವ್ಯಕ್ತಿಗಳು ಅವರೇ ಎಂದೆನಿಸಿತು. ಜೈಲುವಾಸ ನಿರಾಶಾದಾಯಕವಾಗಿದೆ. ಆದರೆ ಆ ಸಂತೋಷವನ್ನು ಯಾವಾಗ ಮತ್ತು ಹೇಗೆ ಪಡೆಯಬೇಕೆಂದು ಅವರಿಗೆ ತಿಳಿದಿದೆ ಎಂದು ರಿಯಾ ಹೇಳಿಕೊಂಡಿದ್ದಾರೆ.
. 

56

ಜೈಲಿನಲ್ಲಿದ್ದ ದಿನಗಳು ನರಕಕ್ಕಿಂತಲೂ ಕೆಟ್ಟದಾಗಿತ್ತು. ಜಾಮೀನು ಮಂಜೂರಾದ ದಿನ ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದೇನೆ ಎಂದು  ಈ ಹಿಂದೆ ಬಹಿರಂಗ ಪಡಿಸಿದ್ದರು.
 

66

ಜೈಲಿನ ದಿನಗಳು ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು. ಸ್ವರ್ಗ ಅಥವಾ ನರಕವು ನಿಮ್ಮ ಮನಸ್ಸಿನಲ್ಲಿ ಒಂದು ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. ಆದರೆ ನೀವು ಪ್ರತಿ ಬಾರಿಯೂ ಸ್ವರ್ಗವನ್ನು ಆಯ್ಕೆ ಮಾಡುವುದು ಕಷ್ಟ. ಯುದ್ಧವು ಮನಸ್ಸಿನಲ್ಲಿದೆ ಮತ್ತು  ಹೃದಯದಲ್ಲಿ ಶಕ್ತಿ ಮತ್ತು ಬಯಕೆ ಇದ್ದರೆ ನೀವು ಖಂಡಿತವಾಗಿಯೂ ಮನಸ್ಸಿನೊಂದಿಗೆ ಹೋರಾಡುತ್ತೀರಿ ಎಂದು ರಿಯಾ ಮತ್ತಷ್ಟು  ತೆರದುಕೊಂಡರು.
 

About the Author

SN
Suvarna News
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved