ಪತ್ನಿಗಾಗಿ ಗಡಿ ದಾಟಿ ಬಂದು ಹೈದರಾಬಾದ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ವ್ಯಕ್ತಿ!

ಪ್ರೀತಿಸಿ ಮದುವೆಯಾದ ಪತ್ನಿಗಾಗಿ ಪಾಕಿಸ್ತಾನದ ವ್ಯಕ್ತಿಯೊಬ್ಬ ದೇಶದ ಗಡಿ ದಾಟಿದ ಘಟನೆ ವರದಿಯಾಗಿದೆ. ಕಳೆದ 9 ತಿಂಗಳಿಂದ ಹೈದರಾಬಾದ್‌ನ ಪತ್ನಿಯೊಂದಿಗೆ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ವರ್ಷದ ಪಾಕಿಸ್ತಾನಿ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Pakistani man crosses Nepal border for wife in Hyderabad, held Vin

ಹೈದರಾಬಾದ್: ಕಳೆದ 10 ತಿಂಗಳಿಂದ ಹೈದರಾಬಾದ್‌ನ ಪತ್ನಿಯೊಂದಿಗೆ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ವರ್ಷದ ಪಾಕಿಸ್ತಾನಿ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ. ಶಾರ್ಜಾದಲ್ಲಿ ಕೆಲಸ ಮಾಡುತ್ತಿದ್ದಾಗ ಯುಎಇಯಲ್ಲಿ ಮೂರು ವರ್ಷಗಳ ಹಿಂದೆ ದಂಪತಿಗಳು ವಿವಾಹವಾಗಿದ್ದರು. ನಂತರ ಇಬ್ಬರೂ ದೂರ ದೂರವಾಗಿದ್ದರು. ಇತ್ತೀಚಿಗೆ ಪತಿ, ಪಾಕಿಸ್ತಾನದಿಂದ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಬಳಿಕ ಹೈದರಾಬಾದ್ ತಲುಪಿದ್ದ. ಒಂಬತ್ತು ತಿಂಗಳ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈತ ತನ್ನ ಪತ್ನಿಯ ಸಹೋದರನ ಸೋಗಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಪಶ್ಚಿಮ ವಲಯ ಡಿಸಿಪಿ ಸಾಯಿ ಚೈತನ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೈದರಾಬಾದ್‌ನಿಂದ ತನ್ನ ಎರಡನೇ ಪತ್ನಿ (Second wife)ಯನ್ನು ಹುಡುಕಿಕೊಂಡು ಇಂಡೋ-ನೇಪಾಳ ಗಡಿಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನದ ಪ್ರಜೆಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಭಾರತಕ್ಕೆ ಪ್ರವೇಶಿಸಿದ ನಂತರ ಆರೋಪಿಗಳು ಸ್ಥಳೀಯ ಜನರ ಸಹಾಯದಿಂದ ನಕಲಿ ಗುರುತಿನ ದಾಖಲೆ (Fake documents)ಗಳನ್ನು ಪಡೆದು ಹೈದರಾಬಾದ್‌ನಲ್ಲಿ ನೆಲೆಸಿದ್ದರು. 41 ವರ್ಷದ ಆರೋಪಿ ಮೊಹಮ್ಮದ್ ಉಸ್ಮಾನ್ ಇಕ್ರಮ್ ಅಲಿಯಾಸ್ ಮೊಹಮ್ಮದ್ ಅಬ್ಬಾಸ್ ಇಕ್ರಮ್,  ಪಾಕಿಸ್ತಾನದ ಪಂಜಾಬ್‌ನ ಮಿಯಾನ್‌ವಾಲಿಯ ಸ್ಥಳೀಯ.

ಇಬ್ಬರು ಮಕ್ಕಳು ಪತಿಯನ್ನು ಬಿಟ್ಟು ಪ್ರಿಯಕರನಿಗಾಗಿ ಕುವೈಟ್‌ಗೆ ಹಾರಿದ ಮಹಿಳೆ, ಇಸ್ಲಾಂಗೆ ಮತಾಂತರ!

ಶಾರ್ಜಾದಲ್ಲಿ ವಿವಾಹವಾಗಿದ್ದ ಜೋಡಿ
ಸುಮಾರು ಎಂಟು ವರ್ಷಗಳ ಹಿಂದೆ, ಇಕ್ರಮ್ ಅವರು ದುಬೈನಲ್ಲಿರುವಾಗ ಹೈದರಾಬಾದ್‌ನ 35 ವರ್ಷದ ವಿಚ್ಛೇದಿತ ಮಹಿಳೆಯನ್ನು ಭೇಟಿಯಾದರು ಮತ್ತು ತಾನು ದೆಹಲಿಯವನು ಎಂದು ಹೇಳಿಕೊಂಡು ಅವಳನ್ನು ವಿವಾಹವಾದರು. 2019ರಲ್ಲಿ ಹೈದರಾಬಾದ್‌ನ ಬಹದ್ದೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶನ್‌ಬಾಗ್‌ನ ನೇಹಾ ಫಾತಿಮಾ (29) ಉದ್ಯೋಗಕ್ಕಾಗಿ ಶಾರ್ಜಾಕ್ಕೆ ಹೋಗಿದ್ದರು. ಫಯಾಜ್ ಆಕೆಗೆ ಅಲ್ಲಿನ ಮಿಲೇನಿಯಮ್ ಫ್ಯಾಶನ್ ಇಂಡಸ್ಟ್ರಿಯಲ್ಲಿ ಕೆಲಸ ಕೊಡಿಸಲು ಸಹಾಯ ಮಾಡಿದ್ದ. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ 2019ರಲ್ಲಿ ಶಾರ್ಜಾದಲ್ಲಿ ವಿವಾಹವಾಗಿದ್ದರು. ಇವರಿಗೆ ಒಬ್ಬ ಗಂಡು ಮಗುವಿದೆ. ಮಹಿಳೆ ತನ್ನ ಹಿಂದಿನ ಮದುವೆಯಿಂದ ಮಕ್ಕಳನ್ನು ಹೊಂದಿದ್ದಳು. 

ಇಕ್ರಮ್ ಪಾಕಿಸ್ತಾನಿ ಎಂದು ತಿಳಿದ ಆಕೆ ಏಳು ವರ್ಷಗಳ ಹಿಂದೆ ಹೈದರಾಬಾದ್‌ಗೆ ಮರಳಿದ್ದಳು. 2011ರಲ್ಲಿ ಇಕ್ರಮ್ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ವಿಮಾನದ ಮೂಲಕ ನೇಪಾಳ ತಲುಪಿದ್ದ. ನೇಪಾಳದಿಂದ ಅಕ್ರಮವಾಗಿ ಗಡಿ ದಾಟಿ ಭಾರತ ಪ್ರವೇಶಿಸಿದ್ದ. ಇಕ್ರಮ್ ನಂತರ ಹೈದರಾಬಾದ್ ತಲುಪಿ ಆರು ತಿಂಗಳ ವಿಸಿಟ್ ವೀಸಾದಲ್ಲಿ ಭಾರತಕ್ಕೆ ಬಂದಿರುವುದಾಗಿ ಪತ್ನಿಗೆ ತಿಳಿಸಿದ್ದಾನೆ. ಹೈದರಾಬಾದ್‌ಗೆ ಬಂದ ನಂತರ ಇಕ್ರಂ ಸ್ಥಳೀಯ ಮೂವರ ನೆರವಿನೊಂದಿಗೆ ನಕಲಿ ವಸತಿ ದಾಖಲಾತಿ ಮತ್ತು ಶಿಕ್ಷಣ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಕೆಲಸ ಕೊಡಿಸಿದ್ದಾನೆ. ನಕಲಿ ಪ್ರಮಾಣಪತ್ರಗಳನ್ನು ಬಳಸಿ, ಇಕ್ರಮ್ ಚಾದರ್‌ಘಾಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದನು ಮತ್ತು ಖಾಸಗಿ ಸಂಸ್ಥೆಯನ್ನು ಸಹ ಸೇರಿಕೊಂಡನು.

ಸೀಮಾ, ಅಂಜು ಬಳಿಕ ಅಮೀನಾ ಸರದಿ, ವಿಡಿಯೋ ಕಾಲ್ ಮೂಲಕ ಭಾರತೀಯನ ವರಿಸಿದ ಪಾಕ್ ಯುವತಿ! 

ವಿಸಿಟಿಂಗ್ ವೀಸಾದಲ್ಲಿ ಪಾಕಿಸ್ತಾನದಿಂದ ನೇಪಾಳಕ್ಕೆ ಬಂದಿದ್ದ ವ್ಯಕ್ತಿ
ಫಾತಿಮಾ ಒಬ್ಬಳೇ ಕಳೆದ ವರ್ಷ ಹೈದರಾಬಾದ್‌ಗೆ ಬಂದು ಕಿಶನ್‌ಬಾಗ್‌ನ ಅಸಫ್ ಬಾಬಾನಗರದಲ್ಲಿ ನೆಲೆಸಿದ್ದರು. ಫಯಾಜ್ ಪಾಕಿಸ್ತಾನಕ್ಕೆ ಹೋಗಿದ್ದ. ಬಳಿಕ ಫಯಾಜ್ ಫಾತಿಮಾ ಪೋಷಕರಾದ ಜುಬೇರ್ ಶೇಖ್ ಮತ್ತು ಅಫ್ಜಲ್ ಬೇಗಂ ಅವರನ್ನು ಸಂಪರ್ಕಿಸಿದ್ದ. ಅವರು ಹೈದರಾಬಾದ್‌ಗೆ ಬರಲು ಗುರುತಿನ ದಾಖಲೆ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಫಯಾಜ್ ನವೆಂಬರ್ 2022ರಲ್ಲಿ 30 ದಿನಗಳ ವಿಸಿಟಿಂಗ್ ವೀಸಾದಲ್ಲಿ ಪಾಕಿಸ್ತಾನದಿಂದ ನೇಪಾಳಕ್ಕೆ ಬಂದಿದ್ದ. ಫಾತಿಮಾ ಪೋಷಕರು ನೇಪಾಳದ ಕಠ್ಮಂಡುವಿಗೆ ಹೋಗಿ ಫಯಾಜ್​ನನ್ನು ಭೇಟಿಯಾಗಿದ್ದರು. ಬಳಿಕ ಅಲ್ಲಿನ ಕೆಲವರ ಸಹಾಯದಿಂದ ಗಡಿ ದಾಟಿ ಭಾರತಕ್ಕೆ ಕರೆತಂದಿದ್ದರು. ನಂತರ ಕಿಶನ್‌ಬಾಗ್‌ನಲ್ಲಿ ಅಕ್ರಮವಾಗಿ ನೆಲೆಸುವಂತೆ ವ್ಯವಸ್ಥೆ ಮಾಡಿದ್ದರು.

ಅವನು ದುಬೈನಲ್ಲಿದ್ದಾಗ, ಇಕ್ರಮ್ ತನ್ನ 12 ವರ್ಷದ ಮಲಮಗಳ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಮತ್ತು ಕೆಲವು ಜನರಿಗೆ ಕ್ಲಿಪ್ಪಿಂಗ್ಗಳನ್ನು ಮಾರಾಟ ಮಾಡಿದ್ದನು. ಅದೇ ವಿಡಿಯೋವನ್ನು ಹೈದರಾಬಾದ್‌ನಲ್ಲಿರುವ ಪತ್ನಿಯ ಸಂಬಂಧಿಯೊಬ್ಬರಿಗೆ ಕಳುಹಿಸಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದ. ಇಕ್ರಂನ ಚಿತ್ರಹಿಂಸೆಯನ್ನು ಸಹಿಸಲಾಗದೆ ಆತನ ಪತ್ನಿ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಚಾದರ್‌ಘಾಟ್‌ನಲ್ಲಿರುವ ಆತನ ಮನೆಯಲ್ಲಿ ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios