ಇದು ಡಿಜಿಟಲ್ ಇಂಡಿಯಾ, ಮಳೆಯಿಂದ ಆನ್‌ಲೈನ್ ಮೂಲಕ ವರ್ಚುವಲ್ ಮದುವೆಯಾದ ನವ ಜೋಡಿ!
ಭಾರಿ ಮಳೆ, ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದೆ. ಮದುವೆ ಮಂಟಪಕ್ಕೆ ತೆರಳಲು ಯಾವುದೇ ಮಾರ್ಗಗಳಿಲ್ಲ. ಮನೆಯಿಂದ ಹೊರಬಂದರೆ ಪ್ರವಾಹದಲ್ಲಿ ಕೊಚ್ಚಿ ಹೋಗುವ ಭೀತಿ. ಆದರೆ ನಿಶ್ಚಯಿಸಿದ ಮೂಹೂರ್ತದಲ್ಲಿ ಮದುವೆ ನಡೆಯದಿದ್ದರೆ ಹೇಗೆ? ಹೀಗಾಗಿ ನವ ಜೋಡಿ ವರ್ಚುವಲ್ ಮದುವೆಯಾಗಿದ್ದಾರೆ.
ಶಿಮ್ಲಾ(ಜು.12) ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ. ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯತ್ತಿದೆ. ಮನೆಯಿಂದ ಹೊರಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಏನೇ ಬೇಕಿದ್ದರೂ, ಏನೇ ಆಗಬೇಕಿದ್ದರೂ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕವೇ ಮಾಡಲು ಸಾಧ್ಯ. ಆದರೆ ಭಾರತದ ಡಿಜಿಟಲ್ ಕ್ರಾಂತಿ ಈ ಮಟ್ಟಗಿದೆ ಅನ್ನೋದು ನಿಮಗೂ ಆಶ್ಚರ್ಯವಾಗಬಹುದು. ಭಾರಿ ಮಳೆ ಹಾಗೂ ಪ್ರವಾಹ ಕಾರಣ ನವ ಜೋಡಿ ಆನ್‌ಲೈನ್ ಮೂಲಕ ವರ್ಚುವಲ್ ಆಗಿ ಮದುವೆಯಾಗಿದ್ದಾರೆ. ವರ ಹಾಗೂ ವಧು ತಮ್ಮ ತಮ್ಮ ಮನೆಯಲ್ಲೇ ಕುಳಿತು ವಿವಾಹದ ಸಂಪೂರ್ಣ ಸಂಪ್ರದಾಯ ಪಾಲಿಸಿ ವರ್ಚುವಲ್ ಆಗಿ ತಾಳಿ ಕಟ್ಟಿಲಾಗಿದೆ.ಈ ಮದುವೆ ಹಿಮಾಚಲ ಪ್ರದೇಶದ ಕುಲು ಹಾಗೂ ಶಿಮ್ಲಾದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದಲ್ಲಿ ಮಳೆ ಅವಾಂತರಕ್ಕೆ 10ಕ್ಕೂ ಹೆಚ್ಚು ಜಿಲ್ಲೆಗಳು ಕೊಚ್ಚಿ ಹೋಗಿದೆ. ಹಲವು ಜಿಲ್ಲೆಗಳು ಮುಳುಗಡೆಯಾಗಿದೆ. ಶಿಮ್ಲಾ, ಕುಲು, ಮನಾಲಿ ಸೇರಿದಂತೆ ಪ್ರವಾಸಿ ತಾಣಗಳ ಗುರುತೇ ಸಿಗುತ್ತಿಲ್ಲ. ಶಿಮ್ಲಾದ ವರ ಆಶಿಶ್ ಸಿಂಘಾ ಹಾಗೂ ಕುಲುವಿನ ಶಿವಾನಿ ಠಾಕೂರ್ ಮದುವೆ ಇಂದು ನಿಶ್ಚಯವಾಗಿತ್ತು. ಅದ್ಧೂರಿ ಮುದುವೆಗೆ ಕೆಲ ತಿಂಗಳಿನಿಂದ ತಯಾರಿ ನಡೆದಿದೆ. ಇಂದು ಬೆಳಗ್ಗೆ ವರ ಆಶಿಶ್ ಸಿಂಘಾ ಶಿಮ್ಲಾದ ಕೊತಾಘರ್ ಗ್ರಾಮದಿಂದ ಮರೆವಣಿಗೆ ಮೂಲಕ ಸಾಗಿ ಕುಲು ಜಿಲ್ಲೆಯ ಬುಂತಾರ್ ಗ್ರಾಮದ ವಧುವಿನ ಮನಗೆ ಆಗಮಿಸಬೇಕಿತ್ತು.
ಇಳಿ ವಯಸ್ಸಿನಲ್ಲಿ ಅದೇ ಉತ್ಸಾಹ, ಅದೇ ಚೈತನ್ಯ, ಅಜ್ಜಿಯ ಘೂಮರ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ!
ಆದರೆ ಮಳೆ, ಭೂಕುಸಿತದಿಂದ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತಗಳೇ ಕೋಚ್ಚಿ ಹೋಗಿದೆ. ಸೇತುವೆಗಳು ಜಲಸಮಾಧಿಯಾಗಿದೆ. ಇಷ್ಟೇ ಅಲ್ಲ ನಿರಂತವಾಗಿ ಮಳೆಯೂ ಸುರಿಯುತ್ತಿದೆ. ಹೀಗಾಗಿ ವರ, ವಧುವಿನ ಮನೆಗೆ ತಲುಪುವುದು ಅಸಧ್ಯವಾಗಿತ್ತು. ಇತ್ತ ವಧುವಿನ ಗ್ರಾಮ ಕೂಡ ಸಂಪರ್ಕ ಕಡಿದುಕೊಂಡಿದೆ. ಕಳೆದ ಒಂದು ವಾರದಿಂದ ನಿಶ್ಚಯಿಸಿದ ಮೂಹೂರ್ತದಲ್ಲಿ ವಿವಾಹ ಸಮಾರಂಭ ಆಯೋಜಿಸುವುದು ಹೇಗೆ ಅನ್ನೋದು ಎರಡು ಕುಟುಂಬದ ಚಿಂತೆಯಾಗಿತ್ತು.
ಇದೇ ವೇಳೆ ಮದುವೆ ಮದುವೆ ಮುಂದೂಡುವ ಸಲಹೆಗಳು ಬಂದಿತ್ತು. ಆದರೆ ಹಲವು ಹುಡುಕಾಟ, ಕಾಯುವಿಕೆ ಬಳಿಕ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ನಿಗದಿ ಮಾಡಿದ ಮೂಹೂರ್ತದಲ್ಲಿ ವಿವಾಹ ನೆರವೇರಿಸಲು ನಿರ್ಧರಿಸಲಾಯಿತು. ಆದರೆ ಹೇಗೆ ಅನ್ನೋ ಪ್ರಶ್ನೆ ಎದುರಾಯಿತು. ಕೊನೆಗೆ ವಧು ಹಾಗೂ ವರ ಮಾತನಾಡಿ ವರ್ಚುವಲ್ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದಕ್ಕೆ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ.
ಅಯ್ಯಯ್ಯೋ..ತಾಳಿ ಕಟ್ಟೋದು ಹೇಗಪ್ಪಾ..ಕನ್‌ಫ್ಯೂಸ್ ಆದ ವರ; ವಿಡಿಯೋ ವೈರಲ್
ವರ ತನ್ನ ಮನೆಯಲ್ಲಿ ಕುಟುಂಬಸ್ಥರ ಜೊತೆಗಿದ್ದರೆ, ವಧು ತನ್ನ ಮನೆಯಲ್ಲಿ ಪೋಷಕರು ಹಾಗೂ ಕುಟುಂಬಸ್ಥರ ಜೊತೆಗಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪ್ರದಾಯ ಆರಂಭಿಸಲಾಯಿತು. ಎಲ್ಲಾ ಶಾಸ್ತ್ರಗಳನ್ನು ಅಷ್ಟೇ ಶ್ರದ್ಧೆಯಿಂದ ಮಾಡಲಾಗಿದೆ. ನಿಶ್ಟಿಯಿಸಿದ ಸಮಯದಲ್ಲೇ ವರ ವರ್ಚುವಲ್ ಆಗಿ ತಾಳಿ ಕಟ್ಟಿದ್ದಾನೆ. ಶಾಸ್ತ್ರೋಕ್ತವಾಗಿ ಮದುವೆ ನೆರವೇರಿದೆ. ಇದೀಗ ಈ ಮದುವೆ ದಾಖಲೆ ಪುಟ ಸೇರಿದೆ. ಕಾರಣ ಭಾರತದಲ್ಲಿ ಆನ್‌ಲೈನ್ ಮೂಲಕ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು ಇದೇ ಮೊದಲು. ಇಂದು ವರ ಹಾಗೂ ವಧು ಮನೆಯಲ್ಲಿ ಔತಣಕೂಟ ಆಯೋಜಿಸಲಾಗಿದೆ. ಇದನ್ನೂ ಕೂಡ ವರ್ಚುವಲ್ ಆಗಿ ಆಯೋಜಿಸಲಾಗಿದೆ.