Asianet Suvarna News Asianet Suvarna News

ವರ್ಷ 36 ಆದ್ರೂ ವರ್ಜಿನ್… ಎಷ್ಟು ಬೇಜಾರಾಗುತ್ತೆ ಗೊತ್ತಾ ಎಂತಾನೆ ಈ ಭೂಪ

ಸ್ನೇಹಿತರಿಗೆಲ್ಲ ಮದುವೆಯಾಗಿ ಮಕ್ಕಳಾದ್ರೂ, ಪ್ರೀತಿಸೋಕೆ ಹೋಗ್ಲಿ ಡೇಟ್ ಗೆ ಕೂಡ ಒಂದು ಹುಡುಗಿ ಸಿಕ್ಕಿಲ್ಲವೆಂದ್ರೆ ಎಷ್ಟು ಟೆನ್ಷನ್ ಆಗುತ್ತೆ ಹೇಳಿ? ಇದಕ್ಕೆಲ್ಲ ನಮ್ಮ ಸ್ವಭಾವವೇ ಕಾರಣ ಎಂಬುದು ತಿಳಿದ್ರೆ ಮತ್ತಷ್ಟು ನೋವಾಗುತ್ತೆ. 
 

No Girlfriend He Feel Very Lonely
Author
First Published Nov 9, 2022, 2:43 PM IST

ಒಂದು ವಯಸ್ಸಿನ ನಂತ್ರ ಮನಸ್ಸು ಸಂಗಾತಿಯನ್ನು ಬಯಸುವುದು ಸಹಜ. ದೇಹ ಸಂಭೋಗ ಸುಖ ಬಯಸಿದ್ರೆ ಮನಸ್ಸು ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಆಪ್ತರನ್ನು ಹುಡುಕುತ್ತಿರುತ್ತದೆ. ಸ್ನೇಹಿತರು ಎಷ್ಟೇ ಇರಲಿ, ಸಂಗಾತಿಯಿಂದ ಸಿಗುವ ಆಪ್ತತೆ, ಪ್ರೀತಿ, ಗೌರವ ಭಿನ್ನವಾಗಿರುತ್ತದೆ. ವರ್ಷ 25 ದಾಟುತ್ತಿದ್ದಂತೆ ಬಹುತೇಕರು ಮದುವೆಗೆ ನಿರ್ಧಾರ ತೆಗೆದುಕೊಳ್ತಾರೆ. ಇತ್ತೀಚಿನ ದಿನಗಳಲ್ಲಿ ವೃತ್ತಿಯ ಕಾರಣಕ್ಕೆ ಮದುವೆ ವಯಸ್ಸು 30ರ ಗಡಿ ದಾಟಿದ್ದರೂ ಅಷ್ಟರೊಳಗೆ ಪ್ರೀತಿಯ ಹುಡುಕಾಟ ನಡೆದಿರುವುದಂತೂ ಸತ್ಯ. ವರ್ಷ 36 ಆದ್ರೂ ಸಂಗಾತಿ ಸಿಕ್ಕಿಲ್ಲ ಎಂದಾಗ ನೋವಾಗುವುದು ಸಹಜ. ಇಲ್ಲೊಬ್ಬ ವ್ಯಕ್ತಿ ಈಗ ಪ್ರೀತಿಯ ಹುಡುಕಾಟಕ್ಕೆ ತಜ್ಞರ ಸಲಹೆ ಕೇಳಿದ್ದಾನೆ.

ಆತನಿಗೆ ಈಗ 36 ವರ್ಷ ವಯಸ್ಸು. ಭಾರತ (India)ದ ನೂರಾರು ಅವಿವಾಹಿತ (Unmarried) ಪುರುಷರ ನೋವು ನನಗೂ ಇದೆ ಎನ್ನುತ್ತಾನೆ ಆತ. ನನ್ನ ಜೀವನದಲ್ಲಿ ಎಲ್ಲವೂ ಇದ್ದು ನಾನು ಒಂಟಿ. ಯಾಕೆಂದ್ರೆ ಪ್ರೀತಿ (love) ಸುವ ಜೀವವೊಂದು ಇನ್ನೂ ನನಗೆ ಸಿಕ್ಕಿಲ್ಲ ಎನ್ನುತ್ತಾನೆ ಆತ. ನನ್ನ ಈ ಕಷ್ಟಕ್ಕೆ ನಾನೇ ಕಾರಣ ಎಂಬುದು ಆತನ ಅಭಿಪ್ರಾಯ.

ಆತನಿಗೆ ಮಾತಿನ ಕಲೆ ತಿಳಿದಿಲ್ಲವಂತೆ. ಹುಡುಗಿಯರೊಂದಿಗೆ ಮಾತನಾಡಲು ಆತ್ಮವಿಶ್ವಾಸ (Confidence) ಸಾಕಾಗ್ತಿಲ್ಲವಂತೆ. ಹುಡುಗಿಯರು ಎದುರಿಗೆ ಬರ್ತಿದ್ದಂತೆ ಮೌನಕ್ಕೆ ಶರಣಾಗುತ್ತಾನಂತೆ. ಅನೇಕ ಬಾರಿ ಅವನ ಸ್ನೇಹಿತರು, ಬ್ಲೈಂಡ್ ಡೇಟ್ಸ್ (Blind Dates) ಪ್ರಯತ್ನ ಕೂಡ ಮಾಡಿದ್ದಾರಂತೆ. ಡೇಟ್ ಗೆ ಹೋದಾಗ ಹುಡುಗಿಯರು ಹೇಳಿದ ಮಾತುಗಳು ಮತ್ತಷ್ಟು ನೋವು ನೀಡಿತ್ತು ಎನ್ನುತ್ತಾನೆ ಆತ. ಕೆಲ ಹುಡುಗಿಯರು, ನಿನಗೆ ಮಾತನಾಡಲು ಬರೋದಿಲ್ಲ ಎಂದ್ರೆ ಮತ್ತೆ ಕೆಲ ಹುಡುಗಿಯರು, ನೀನು ಬೋರಿಂಗ್ (Boring) ಎಂದಿದ್ದರಂತೆ. ನಾನು ಒಂಟಿತನ (Loneliness)ದ ನೋವಿನಲ್ಲಿ ಬೇಯುತ್ತಿದ್ದೇನೆ. ನನಗೆ ಈವರೆಗೂ ಒಂದೇ ಒಂದು ಹುಡುಗಿ ಸ್ನೇಹಿತೆ (Friend) ಯಾಗಿಲ್ಲ. ವ್ಯಕ್ತಿತ್ವ ವಿಕಸನ ಹಾಗೂ ಹುಡುಗಿಯರ ಜೊತೆ ಮಾತನಾಡುವುದು ಹೇಗೆ ಎಂಬುದನ್ನು ನನಗೆ ಕಲಿಯಬೇಕಿದೆ ಎನ್ನುತ್ತಾನೆ ಆತ. 

ನನ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ನನ್ನ ಮಾಜಿ ಗೆಳತಿಯನ್ನೇ ಅಣ್ಣ ಮದ್ವೆಯಾಗ್ತಿದ್ದಾನೆ, ಏನ್ಮಾಡ್ಲಿ ?

ತಜ್ಞರ ಸಲಹೆ : ಈ ವಯಸ್ಸಿನಲ್ಲಿ ಒಂಡಿಯಾಗಿರುವುದು ಸಹಜವಾಗಿಯೇ ನೋವು ನೀಡಿತ್ತದೆ ಎನ್ನುತ್ತಾರೆ ತಜ್ಞರು. ಸ್ನೇಹಿತರೆಲ್ಲ ಮದುವೆಯಾಗಿ, ಸಂಸಾರ ಸುಖದಲ್ಲಿರುವಾಗ ಒಂಟಿ ಜೀವನ ನಡೆಸುವುದು ಸುಲಭವಲ್ಲ. ಮೊದಲನೇಯದಾಗಿ, ನಿಮಗ್ಯಾಕೆ ಹುಡುಗಿಯರು ಸ್ನೇಹಿತರಾಗ್ತಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎನ್ನುತ್ತಾರೆ ತಜ್ಞರು. ಈಗಾಗಲೇ ಡೇಟ್ ಗೆ ಬಂದ ಹುಡುಗಿಯರ ಜೊತೆ ನಿಮಗೆ ಏಕೆ ಮಾತನಾಡಲು ಸಾಧ್ಯವಾಗಿಲ್ಲ ಎಂಬುದನ್ನು ನೀವು ಅರಿಯಬೇಕು ಎಂಬುದು ತಜ್ಞರ ಸಲಹೆ. 

ಆತ್ಮವಿಶ್ವಾಸದ ಬಗ್ಗೆ ಗಮನ ನೀಡಿ : ಬ್ಲೈಂಡ್ ಡೇಟ್ಸ್ (Blind Dates) ನಿರಾಸೆ ಮೂಡಿಸುತ್ತದೆ. ಅನೇಕರು ಈ ಡೇಟ್ ನಲ್ಲಿ ಪರ್ಫೆಕ್ಟ್ ಪಾರ್ಟನರ್ ಹುಡುಕಾಟ ನಡೆಸ್ತಾರೆ. ಅಲ್ಲಿ ಅವರು ಸಿಗೋದು ಕಷ್ಟ. ಹಾಗಾಗಿ ಬ್ಲೈಂಡ್ ಡೇಟ್ಸ್ ಆಯ್ಕೆ ಬದಲು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎನ್ನುತ್ತಾರೆ ತಜ್ಞರು. ಹುಡುಗಿಯರಿಗೆ ಬೋರ್ ಆಗುವಂತೆ ನೀವೇನು ಮಾಡ್ತಿದ್ದೀರಿ ಎಂಬುದನ್ನು ಪತ್ತೆ ಮಾಡ್ಬೇಕು. ನಿಮ್ಮ ನಗುವಿನಿಂದ ಹಿಡಿದು ನಡೆದಾಡುವ ಶೈಲಿಯವರೆಗೆ ಎಲ್ಲವನ್ನೂ ಗಮನಿಸಿ. ಅದ್ರಲ್ಲಿ ಬದಲಾವಣೆ ತರಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು. 

MARRIAGE ASTROLOGY: ಕೆಟ್ಟ ಮುಹೂರ್ತದಲ್ಲಿ ಮದುವೆಯಾದ್ರೆ ಏನಾಗುತ್ತೆ ?

ಹುಡುಗಿಯರನ್ನು ಆಕರ್ಷಿಸುವುದು ಸುಲಭದ ಕೆಲಸವಲ್ಲ. ಮೊದಲು ಸಾಮಾಜಿಕ ಶಿಷ್ಟಾಚಾರವನ್ನು ಕಲಿಯುವುದು ಬಹಳ ಮುಖ್ಯ. ಬೇಕಿದ್ದರೆ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಬಹುದು. ಇದ್ರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಬ್ಯಾಚುಲರ್ ಎಂಬುದು ಮಾತ್ರ ಮುಖ್ಯವಲ್ಲ. ನಿಮಗೆ ಇನ್ನೂ ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ನೆನಪಿಡಿ. ನಿಮ್ಮಲ್ಲಿ ಬದಲಾವಣೆ ತರಲು ಸಾಧ್ಯವಾಗ್ತಿಲ್ಲ ಎಂದಾದ್ರೆ ನೀವು ಕೌನ್ಸಲಿರ್ ಸಲಹೆ ಪಡೆಯಬಹುದು ಎನ್ನುತ್ತಾರೆ ತಜ್ಞರು. 

Follow Us:
Download App:
  • android
  • ios