ನನ್‌ ಲೈಫ್‌ ಚೆಸ್‌ ಥರ ಎಂದು ಹೇಳಿರುವ ನಿಕ್‌, ನನಗೆ ಮೂವರು ಪತ್ನಿಯರು. ನಾವೆಲ್ಲರೂ ಒಂದೇ ಮನೆಯಲ್ಲಿದ್ದೇವೆ. ನನಗೆ ಕೆಲಸವಿಲ್ಲ ಇಡೀ ಮನೆಯನ್ನು ಅವರೇ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ನವದೆಹಲಿ (ಫೆ.18): ಒಬ್ಬೊಬ್ಬರಿಗೆ ಜೀವನದಲ್ಲಿ ಮಾಡಿಕೊಂಡ ಒಂದೇ ಮದುವೆ ಅವರ ಇಡೀ ಬದುಕನ್ನೇ ಬರ್ಬಾದ್‌ ಮಾಡಿರುತ್ತದೆ. ಇನ್ನೂ ಕೆಲವರಿಗೆ ಒಂದು ಮದುವೆ ಅವರ ಇಡೀ ಜೀವನವನ್ನೇ ಬದಲಿಸಿರುತ್ತದೆ. ಒಂದೇ ಮದುವೆಗೆ ಜೀವನದಲ್ಲಿ ಸುಸ್ತಾದವರಿದ್ದಾರೆ. ಆದರೆ, ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ, ಮೂವರು ಹೆಂಡ್ತಿಯರೊಂದಿಗೆ ಬದುಕು ಸಾಗಿಸುತ್ತಿದ್ದಾನೆ. 'ಎರಡು ನದಿಗಳನ್ನ ಬೇಕಾದ್ರೆ ಒಂದು ಮಾಡ್ಬಹುದು. ಆದರೆ, ಎರಡು ಜಡೆಗಳನ್ನು ಮಾತ್ರ ಒಂದು ಮಾಡೋಕಾಗಲ್ಲ' ಎನ್ನೋ ಮಾತಿಗೆ ಅಪವಾದ ಎನ್ನುವಂತೆ ಈ ವ್ಯಕ್ತಿ ತನ್ನ ಮೂವರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ. ಹಾಗಾಗಿ ಈತನ ವಿಚಾರವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಹುತೇಕರು ನಿಮ್ಮ ಜೀವನ ಪರಮಾದ್ಬುತ ಎಂದು ಹೇಳಿದ್ದರೆ, ಇನ್ನೂ ಕೆಲವರು ಬಹುಶಃ ಇದೇ ವಿಶ್ವದ ಇನ್ನೊಂದು ಅದ್ಭುತ ಎಂದು ಹೇಳುತ್ತಿದ್ದಾರೆ. ಈ ವ್ಯಕ್ತಿಯ ಹೆಸರು ನಿಕ್‌ ಡೇವಿಸ್‌. ಈತ ಮೂವರು ಪತ್ನಿಯ ಹೆಸರು ಏಪ್ರಿಲ್‌, ಡೆನಿಯಲ್‌ ಹಾಗೂ ಜೆನಿಫರ್‌. ತನ್ನನ್ನು ತಾನು 'ಟ್ರೋಫಿ ಹಸ್ಬಂಡ್‌' ಎಂದು ಹೇಳಿಕೊಳ್ಳುವ ನಿಕ್‌ ಡೇವಿಸ್‌, ತನಗೆ ಮೂವರು ಪತ್ನಿಯರು ಮಾತ್ರವಲ್ಲ, ತನ್ನನ್ನು ಈ ಮೂವರೇ ಸಾಕುತ್ತಿದ್ದಾರೆ. ನಾನೇನೂ ಕೆಲಸ ಮಾಡುತ್ತಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

Add Asianetnews Kannada as a Preferred SourcegooglePreferred

ತನ್ನ ಜೀವನವನ್ನು ನಿಕ್‌ ಡೇವಿಸ್‌, ಚೆಸ್‌ ಬೋರ್ಡ್‌ ಎಂದು ಹೇಳಿಕೊಂಡಿದ್ದಾರೆ. ನನಗೆ ಯಾವುದೇ ಕೆಲಸವಿಲ್ಲ. ಚೆಸ್‌ ಬೋರ್ಡ್‌ನಲ್ಲಿರುವ ಕಿಂಗ್‌ ಕೂಡ ಹೆಚ್ಚಿನ ಚಲನೆ ಮಾಡೋದಿಲ್ಲ. ನನ್ನ ಜೀವನ ಕೂಡ ಅದೇ ರೀತಿ.ಮಹಿಳೆಯರಿಗೆ ಹೆಚ್ಚಿನ ಪವರ್‌ ಎಂದು ಈತ ಹೇಳಿದ್ದಾನೆ. ಇನ್ನೊಂದೆಡೆ ಆತನ ಮೂವರೂ ಪತ್ನಿಯರು ಪೂರ್ಣ ಪ್ರಮಾಣದ ವೃತ್ತಿಪರರಾಗಿದ್ದಾರೆ. ತನ್ನ ಮೊದಲ ಪತ್ನಿ ಏಪ್ರಿಲ್‌ಳನ್ನು 15 ವರ್ಷದ ಹಿಂದೆ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ ಎನ್ನುವ ನಿಕ್‌ ಡೇವಿಸ್‌ ನಮ್ಮಿಬ್ಬರ ಸಂಸಾರಕ್ಕೆ ಜೆನಿಫರ್‌ ಬಂದು 9 ವರ್ಷಗಳಾಗಿವೆ ಎಂದಿದ್ದಾರೆ.

ಇದು ಅಚ್ಚರಿಯ ರೀತಿ ತೋರುತ್ತದೆಯಾದರೂ, 38 ವರ್ಷದ ಎಪ್ರಿಲ್ ಅವರು ನಿಕ್ ಅವರ ಅಗತ್ಯ ಪೂರೈಸಲು, ಇನ್ನೊಂದು ಮಹಿಳೆಯನ್ನು ಹೊಂದಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಹೇಳುತ್ತಾರೆ. ಟಿಎಲ್‌ಸಿ ಸೀಕಿಂಗ್‌ ಸ್ಟಿಸ್ಟರ್‌ ವೈಫ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಏಪ್ರಿಲ್‌, 'ನಿಕ್‌ರನ್ನು ನಿಭಾಯಿಸೋದು ಬಹಳ ಕಷ್ಟ. ಅದಲ್ಲದೆ, ಬೆಡ್‌ರೂಮ್‌ನಲ್ಲಿ ಅವರನ್ನು ನಿಭಾಯಿಸೋದು ಇನ್ನೂ ಕಷ್ಟ' ಎಂದು ಹೇಳಿದ್ದಾರೆ. ನಿಕ್‌ನಂಥ ವ್ಯಕ್ತಿಯನ್ನು ಒಬ್ಬರಿಂದ ನಿಭಾಯಿಸೋದು ಬಹಳ ಕಷ್ಟ. ಇಂಥ ಸಂದರ್ಭದಲ್ಲಿ ಮೂವರಿಂದ ಸಹಾಯ ಹಸ್ತ ಸಿಕ್ಕಿದ್ದರಿಂದ ಬಹಳ ಸಂತೋಷವಾಗಿದೆ ಎಂದಿದ್ದಾರೆ.

ಅದಲ್ಲದೆ, 39 ವರ್ಷದ ತನ್ನ ಪತಿ ನಿಕ್‌ಗೆ 25 ವರ್ಷದ ಜೆನಿಫರ್‌ಳನ್ನು ಪರಿಚಯಿಸಿದ್ದ ಸ್ವತಃ ಏಪ್ರಿಲ್‌. ಜೆನಿಫರ್‌ 19 ವರ್ಷದವಳಾಗಿದ್ದಾಗ ನಿಕ್‌ಗೆ ಜೆನಿಫರ್‌ ಅವರನ್ನು ಭೇಟಿ ಮಾಡಿಸಿದೆ. ಆಕೆ ನಮ್ಮ ಕುಟುಂಬಕ್ಕೆ ಸೂಕ್ತ ಎನ್ನುವ ತೀರ್ಮಾನವನ್ನು ಆಗಲೇ ಮಾಡಿದ್ದೆ ಎಂದಿದ್ದಾರೆ. 'ಜೆನಿಫರ್‌ ತುಂಬಾ ಒಳ್ಳೆಯ ಹುಡುಗಿ. ಬುದ್ದಿವಂತೆ ಕೂಡ. ಆಕೆಯನ್ನು ನಿಕ್‌ ಇಷ್ಟಪಟ್ಟೇ ಪಡುತ್ತಾನೆ ಎನ್ನುವುದು ನನಗೆ ಗೊತ್ತಿತ್ತು' ಎಂದು ಏಪ್ರಿಲ್‌ ಹೇಳಿದ್ದಾರೆ. ಮೂವರು ಪತ್ನಿಯರ ನಡುವೆ ಒಂದೇ ಬೆಡ್‌ನಲ್ಲಿ ಮಲಗೋದು ಬಹಳ ಇಷ್ಟ ಎಂದು ನಿಕ್‌ ಹೇಳುತ್ತಾರೆ. 

ಡೆಲಿವರಿ ಆದ್ಮೇಲೆ ಹೆಚ್ಚಾಗಿತ್ತು ಮೊಡವೆ ಕಾಟ: ಗುಟ್ಟು ಬಿಚ್ಚಿಟ್ಟ ನಟಿ ALIA BHATT

ಕಳೆದ ವರ್ಷ ಇವರ ಕುಟುಂಬಕ್ಕೆ 22 ವರ್ಷದ ಡೇನಿಯಲ್‌ ಎನ್ನುವ ಇನ್ನೊಂದು ಹುಡುಗಿ ಸೇರಿಕೊಂಡಿದ್ದಾಳೆ. ಒಂದು ಮದುವೆ ಸಮಾರಂಭಕ್ಕೆ ತನ್ನ ಇಬ್ಬರು ಪತ್ನಿಯರೊಂದಿಗೆ ತೆರಳಿದ್ದ ನಿಕ್‌ ಅಲ್ಲಿ, ಡೇನಿಯಲ್‌ಅನ್ನು ನೋಡಿದ್ದಾನೆ. ಆಕೆಯನ್ನು ಇಷ್ಟಪಟ್ಟ ಕಾರಣ, ಅವಳನ್ನೂ ವಿವಾಹವಾಗಿದ್ದಾನೆ. 'ಮೂವರು ಪತ್ನಿಯನ್ನು ಹೊಂದಿದ್ದು ಒಂದು ಕುಟುಂಬವಾಗಿ ಬದುಕುತ್ತಿದ್ದೇವೆ. ಇದು ಅಚ್ಚರಿಯ ವಿಚಾರವಾದರೂ ಸತ್ಯ. ನನ್ನ ಕನಸು ನನಸಾಗಿದೆ ಎಂದಷ್ಟೇ ಭಾವಿಸುತ್ತೇನೆ' ಎಂದು ನಿಕ್‌ ಹೇಳಿದ್ದಾರೆ. "ನಾನು ಇಷ್ಟು ಸಂತೋಷವಾಗಿರಬಹುದೆಂದು ನಾನು ಪ್ರಾಮಾಣಿಕವಾಗಿ ಯೋಚಿಸಿರಲಿಲ್ಲ" ಎಂದು ಡೇನಿಯಲ್ ಹೇಳಿದ್ದಾಳೆ.

ಅಕ್ಕಿ, ಗೋಧಿ ಶೇಖರಿಸಿಡೋ ಗೋಣಿಚೀಲದ ಪ್ಯಾಂಟ್, ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಮತ್ತೊಂದು ವಿಚಾರವೆಂದರೆ ಡೇವಿಸ್‌ ಅವರ ಕುಟುಂಬ ಈಗ ಇನ್ನಷ್ಟು ದೊಡ್ಡದಾಗಿದೆ. ಜೆನಿಫರ್‌ ಹಾಗೂ ನಿಕ್‌ ತಮ್ಮ ಮೊದಲ ಮಗು ವೆರಾಳನ್ನು ಕಳೆದ ವರ್ಷದ ಜೂನ್‌ನಲ್ಲಿ ಪಡೆದುಕೊಂಡಿದ್ದಾರೆ. ಇನ್ನು ಮೊದಲ ಪತ್ನಿ ಏಪ್ರಿಲ್‌ ಜೊತೆಗಿನ ಸಂಬಂಧದಲ್ಲಿ ಒಬ್ಬ ಹುಡುಗ ಇದ್ದಾನೆ.