ನವದಂಪತಿ ಫಸ್ಟ್‌ನೈಟ್ ರೂಮಿಗೆ ಹೋಗಲೂ ಪ್ರೈವೆಸಿ ಇಲ್ವಾ: ವಿಡಿಯೋ ಮಾಡಿ ಹರಿಬಿಟ್ಟ ಕುಟುಂಬಸ್ಥರು!
ನವದಂಪತಿಯ ಮೊದಲ ರಾತ್ರಿ ಕೋಣೆಗೆ ಕಳಿಸುವ ಮುನ್ನ ಶಿಳ್ಳೆ, ಚಪ್ಪಾಳೆ, ಹಾಡು, ಕುಣಿತದ ಮೂಲಕ ಮುಜುಗರ ಉಂಟು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ನೆಟ್ಟಿಗರು ಈ ನಡೆಯನ್ನು ಖಂಡಿಸಿದ್ದಾರೆ.
ಬೆಂಗಳೂರು (ಸೆ.15): ನವದಂಪತಿ ನಾಚಿಕೆಯಿಂದ ಮನೆಯವರಿಗೆ ತಿಳಿಯದಂತೆ ಮೊದಲ ರಾತ್ರಿ ಕೋಣೆಗೆ ಹೋಗುತ್ತಾರೆ. ಇದನ್ನು ಶಾಸ್ತ್ರದ ರೀತಿ ಮಾಡಿದರೂ ನಾಚಿಕೆ ಸ್ವಭಾವ ಇದ್ದೇ ಇರುತ್ತದೆ. ಆದರೆ, ಇಲ್ಲೊಂದು ಕುಟುಂಬ ಸದಸ್ಯರು ನವ ವಿವಾಹಿತರು ಮೊದಲ ರಾತ್ರಿಯನ್ನ ಹಬ್ಬದಂತೆ ಆಚರಣೆ ಮಾಡಿ ಶಿಳ್ಳೆ ಹಾಕುತ್ತಾ, ಚಪ್ಪಾಳೆ ಹೊಡಿಯುತ್ತಾ, ಬಾಯಿ ಬಡಿದುಕೊಳ್ಳುತ್ತಾ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು, ಇದೇನ್ ಜಾತ್ರೆ ಕೆಟ್ಟೋಯ್ತಾ.? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಜೀವನದ ಪ್ರಮುಖ ಕ್ಷಣಗಳನ್ನು ಕೂಡ ರಸವತ್ತಾಗಿ ಕಟ್ಟಿಕೊಡಲಾಗುತ್ತದೆ. ಕೆಲವೊಂದು ಘಟನೆಗಳನ್ನು ಹಾಸ್ಯಾತ್ಮಕವಾಗಿ ತೋರಿಸಲಾಗುತ್ತವೆ. ಇನ್ನು ಕೆಲವು ಘಟನೆಗಳು ನಿಜ ಜೀವನದಲ್ಲಿ ನಾಚಿಕೆಪಟ್ಟುಕೊಳ್ಳುವ ವಿಷಯಗಳಾಗಿದ್ದರೂ ಅವುಗಳನ್ನು ಹಬ್ಬದಂತೆ ಆಚರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಇದೇ ರೀತಿ ಇಲ್ಲೊಂದು ಕುಟುಂಬದವರು ತಮ್ಮ ಮನೆಗೆ ಬಂದ ಸೊಸೆ ಹಾಗೂ ಮಗನ ಮೊದಲ ರಾತ್ರಿಯ ಶಾಸ್ತ್ರವನ್ನು ಹಬ್ಬದಂತೆ ಆಚರಣೆ ಮಾಡಿದ್ದಾರೆ. ಇನ್ನು ಮನೆಯವರೆಲ್ಲರೂ ಸೇರಿ (ಚಿಕ್ಕ ಮಕ್ಕಳು, ಹದಿ ಹರೆಯದವರು, ಸ್ನೇಹಿತರು, ಹಿರಿಯರು) ಎಲ್ಲರ ಸಮ್ಮುಖದಲ್ಲಿ ನವದಂಪತಿಯನ್ನು ಗೇಲಿ ಮಾಡುತ್ತಾ ಮೊದಲ ರಾತ್ರಿ ಕೋಣೆ ಕಳುಹಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿಯ ನವ ವಿವಾಹಿತ ಮಗಳು ನಾಪತ್ತೆ: ಸಿಕ್ಕಲ್ಲಿ ಮಾಹಿತಿ ಕೊಡಿ!
ನಮ್ಮ ದೇಶ ವಿವಿಧ ಭಾಷೆ, ಸಂಪ್ರದಾಯ ಹಾಗೂ ಧರ್ಮಗಳಿಂದ ಕೂಡಿದ ದೇಶವಾಗಿದ್ದು, ಮದುವೆಯ ಬಗ್ಗೆ ವಿಭಿನ್ನ ಆಚರಣೆಗಳಿರುತ್ತವೆ. ಆದರೆ, ಮೊದಲ ರಾತ್ರಿಗೆ ಕಳಿಸುವಾಗ ಸಣ್ಣ ಮಕ್ಕಳಿಗೆ ತಿಳಿಯದಂತೆ ಗಂಡು-ಹೆಣ್ಣು ಇಬ್ಬರನ್ನು ಸಿಂಗರಿಸಿರುವ ಕೋಣೆಗೆ ಕಳುಹಿಸುತ್ತಾರೆ. ಇನ್ನು ಕೆಲವರು ಮನೆಗಳಲ್ಲಿ ಚಿಕ್ಕ ಮಕ್ಕಳಿರುತ್ತಾರೆಂದು ಹೋಟೆಲ್ ರೂಮ್‌ಗಳನ್ನು ಬುಕ್ ಮಾಡುತ್ತಾರೆ. ಅಲ್ಲಿ ಅವರಿಗೆ ಪ್ರೈವೆಸಿ ಕೊಡಲು ಮುಂದಾಗುತ್ತಾರೆ. ಆದರೆ, ಇದೀಗ ಟ್ರೆಂಡ್ ಬದಲಾಗಿದ್ದು, ಮೊದಲ ರಾತ್ರಿ ಶಾಸ್ತ್ರವನ್ನು ಮನೆಯಲ್ಲಿಯೇ ಆಯೋಜಿಸಿ ನವದಂಪತಿಗೆ ಮುಜುಗರ ಉಂಟಾಗುವಂತೆ ಗೇಲಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಜೀವನದ ಅವಿಭಾಜ್ಯ ಭಾಗವೂ ಆಗಿರುವ ಮೊದಲ ರಾತ್ರಿಯ ಬಗ್ಗೆ ಮುಜುಗರ ಇರುತ್ತದೆ. ಇನ್ನು ಕೆಲವರಿಗೆ ಆತಂಕವೂ ಇರುತ್ತದೆ. ಹೊಸ ಮನೆ, ಹೊಸ ಜಾಗ ಹಾಗೂ ಕೆಲವು ದಿನಗಳ ಹಿಂದಷ್ಟೇ ಪರಿಚಿತವಾದ ಕುಟುಂಬ ಹಾಗೂ ವ್ಯಕ್ತಿಯೊಂದಿಗೆ ಮದುವೆಯಾಗಿ ಬಂದ ಹೆಣ್ಣಿನ ತೊಳಲಾಟ ಹೆಚ್ಚಾಗಿರುತ್ತದೆ. ಮುಂದುವರೆದು ಒಬ್ಬ ಗಂಡಸಿನ ಜೊತೆಗೆ ಮನಸ್ಸಿನ ಹೊಂದಾಣಿಕೆ ಆಗುವುದಕ್ಕೂ ಮುನ್ನವೇ ದೇಹ ಹಂಚಿಕೊಳ್ಳುವುದಕ್ಕೆ ಸಂಕೋಚ ಮನೋಭಾವವೂ ಇರುತ್ತದೆ. ಇಷ್ಟೆಲ್ಲಾ ಸಂಕಷ್ಟದಲ್ಲಿರುವ ನವದಂಪತಿಗೆ ಖಾಸಗಿತನವನ್ನು ಕಿತ್ತುಕೊಳ್ಳುವಂತೆ ಮೊದಲ ರಾತ್ರಿಯ ದಿನವನ್ನು ಹಬ್ಬದಂತೆ ಆಚರಿಸಿ ಮುಜುಗರಕ್ಕೆ ಉಂಟುಮಾಡಿದ್ದರ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಒಲಿಂಪಿಕ್ಸ್‌ಗಿಂತ ಎತ್ತರಕ್ಕೆ ಹೈಜಂಪ್ ಜಿಗಿದ ಗ್ರಾಮೀಣ ಯುವಕ: ವಿಡಿಯೋ ವೈರಲ್
ಈ ಕಾಲದಲ್ಲಿ ಎಲ್ಲ ತೋರ್ಪಡಿಕೆ ಅಷ್ಟೇ,, ಯಾವುದರಲ್ಲಿ ಪ್ರೀತಿ, ಸತ್ಯ , ನಂಬಿಕೆ ಇಲ್ಲ,, ಮೇಲೆ ತಳುಕು ಒಳಗೆ ಹುಳುಕು ಅಂತಾರಲ್ಲ ಹಾಗೆ ಎಂದು ಮಹಿಳೆಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಇದು ನವದಂಪತಿಯ ಫಸ್ಟ್ ನೈಟ್, ಇದೇನ್ ಜಾತ್ರೆ ಕೆಟ್ಟೋಯ್ತಾ.? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇದು ಆರೇಂಜ್ಡ್ ಮ್ಯಾರೇಜ್‌ಗಿರುವ ಶಕ್ತಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಮೊದಲ ರಾತ್ರಿ ಎಂದರೆ ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ರಾತ್ರಿ ಆಗಿದೆ. ಇದು ಎರಡು ಕುಟುಂಬಗಳ ಸಂಬಂಧ, ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಭಾವನೆ ಹುಟ್ಟುಹಾಕುವ ವೇದಿಕೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ, ಒಂದು ಮದುವೆ ಶಾಸ್ತ್ರ ಎಲ್ಲ ವಿಡಿಯೋಗಳನ್ನು ಹಂಚಿಕೊಂಡರೂ ಪರವಾಗಿಲ್ಲ. ಆದರೆ, ಮೊದಲ ರಾತ್ರಿ ಕೋಣೆಗೆ ಹೋಗುವುದನ್ನೂ ವಿಡಿಯೋ ಮಾಡಿ ಹಂಚಿಕೊಂಡಿದ್ದಕ್ಕೆ ಕೆಲವು ನೆಟ್ಟಿಗರು ಗರಂ ಆಗಿದ್ದಾರೆ.