ನಾವು ಅಂದುಕೊಳ್ಳೋದೆ ಒಂದು ಆಗೋದೇ ಇನ್ನೊಂದು. ಈ ವ್ಯಕ್ತಿ ಬಾಳಲ್ಲೂ ಹಾಗೇ ಆಗಿದೆ. ಹನಿಮೂನ್ (Honeymoon) ಎಂಜಾಯ್ ಮಾಡ್ಬೇಕೆಂದು ರಜೆ ಪಡೆದು ಪತ್ನಿ ಜೊತೆ ಹೋದ್ರೆ ಅಲ್ಲಿ ಆಗಿದ್ದೇ ಬೇರೆ. ಹೆಂಡ್ತಿ ನೋಡಿದ್ರೆ ಮದ್ವೇನೆ (Marriage) ಬೇಡ್ವಾಗಿತ್ತು ಅಂತಿದ್ದಾಳೆ. 

ನವಜೋಡಿಗೆ ಹನಿಮೂನ್ (Honeymoon) ಬಹಳ ಮುಖ್ಯವಾದದ್ದು. ಹನಿಮೂನ್ ನ ಪ್ರತಿ ದಿನವನ್ನೂ, ಪ್ರತಿ ಕ್ಷಣವನ್ನೂ ಆನಂದಿಸಲು ದಂಪತಿ (Couple) ಇಷ್ಟಪಡ್ತಾರೆ. ಆ ದಿನಗಳು ಜೀವನ (Life) ಪರ್ಯಂತ ನೆನಪಿರಲಿ ಎಂದು ಬಯಸ್ತಾರೆ. ಮದುವೆ (Marriage)ಗೆ ಮೊದಲೇ ಹನಿಮೂನ್ ಗೆ ಪ್ಲಾನ್ (Plan) ಮಾಡಿರುತ್ತಾರೆ. ಬಿಡುವಿಲ್ಲದ ಕೆಲಸ (Work)ದ ಮಧ್ಯೆಯೂ ಮಧುಚಂದ್ರಕ್ಕೆ ಹೋಗಲು ಸಿದ್ಧವಾಗ್ತಾರೆ. ಹನಿಮೂನ್ ನಂತ್ರ ಜೀವನದಲ್ಲಿ ಅನೇಕ ಬದಲಾವಣೆಯಾಗುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಜೋಡಿ, ಜೀವನ ಪರ್ಯಂತ ಆ ದಿನವನ್ನು ನೆನಪಿನಲ್ಲಿಟ್ಟುಕೊಳ್ತಾರೆ.

ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಹನಿಮೂನ್ ಅನುಭವ ಹಂಚಿಕೊಂಡಿದ್ದಾನೆ. ಹನಿಮೂನ್ ನಲ್ಲಿ ನಡೆದ ಘಟನೆಯಿಂದ ಕೋಪ (Anger) ಗೊಂಡ ವ್ಯಕ್ತಿ, ಮದುವೆಯಾಗಿದ್ದೇ ತಪ್ಪಾಯ್ತು ಎಂದು ಕೂಗಾಡಿದ್ದಾನೆ. ಅಷ್ಟಕ್ಕೂ ವ್ಯಕ್ತಿ ಜೀವನದಲ್ಲಿ ನಡೆದಿದ್ದು ಏನು ಎಂಬುದನ್ನು ನಾವಿಂದು ಹೇಳ್ತೇವೆ. 

ಹನಿಮೂನ್ ನಲ್ಲಿ ಬಂತು ಬಾಸ್ (Boss) ಕರೆ : ವ್ಯಕ್ತಿ ರೆಡಿಟ್ (Reddit) ನಲ್ಲಿ ತನ್ನ ವಿಷ್ಯವನ್ನು ಹಂಚಿಕೊಂಡಿದ್ದಾನೆ. ಹನಿಮೂನ್ ಗಾಗಿ ಜೋಡಿ ಈ ವರ್ಷ ಜನವರಿಯಲ್ಲಿ ಕಾಂಬೋಡಿಯಾ (Cambodia) ಕ್ಕೆ ಹೋಗಿದ್ದರಂತೆ. ಹನಿಮೂನ್ ಗಾಗಿಯೇ ವ್ಯಕ್ತಿ ರಜೆ (Vacation) ಪಡೆದಿದ್ದನಂತೆ. ಆದ್ರೆ ಮಧ್ಯದಲ್ಲಿ ಬಾಸ್ ಕರೆ ಬಂದಿದೆ. ಹನಿಮೂನ್ ನಲ್ಲಿದ್ದಾರೆ ಎಂಬುದು ಗೊತ್ತಿದ್ದೂ ಬಾಸ್ ಕೆಲಸ ಮಾಡುವಂತೆ ಹೇಳಿದ್ದಾನೆ. ಬರೀ ಕೆಲಸ ಮಾಡುವಂತೆ ಹೇಳಿಲ್ಲ. ಅಮೆರಿಕಾ (America) ಕ್ಕೆ ಬರುವಂತೆ ಹೇಳಿದ್ದಾನೆ. ಹನಿಮೂನ್ ಗಾಗಿ ರಜೆ (Vacation) ಕೇಳಿದಾಗ ರಜೆ ಕೊಟ್ಟ ಬಾಸ್ ಈಗ ಕೆಲಸಕ್ಕೆ ಕರೆಯುತ್ತಿರುವುದು ಉದ್ಯೋಗಿ (Employee) ಕೋಪಕ್ಕೆ ಕಾರಣವಾಗಿದೆ. 

Relationship Tips : ಸಂಗಾತಿಗೆ ಪ್ರತಿ ಬಾರಿ ಕ್ಷಮೆ ಕೇಳುವ ಮುನ್ನ ಇದು ನೆನಪಿರಲಿ…

ಬೇಜವಾಬ್ದಾರಿ (Irresponsible) ಉದ್ಯೋಗಿ ಎಂದ ಬಾಸ್ : ಹನಿಮೂನ್ ಮಧ್ಯೆ ಮತ್ತೆ ಕೆಲಸಕ್ಕೆ ಬರಲು ಒಪ್ಪದ ವ್ಯಕ್ತಿಗೆ ಬಾಸ್ ಬೈದಿದ್ದಾನೆ. ಬೇಜವಾಬ್ದಾರಿ ಉದ್ಯೋಗಿ ಎಂದ ಬಾಸ್, ಕೆಲಸದಿಂದ ತೆಗೆಯುವ ಧಮಕಿ ಹಾಕಿದ್ದಾನೆ. ರೆಡಿಟ್ ಪೋಸ್ಟ್ ನಲ್ಲಿ ತನ್ನ ನೋವು (ನೋವು) ತೋಡಿಕೊಂಡ ವ್ಯಕ್ತಿ, ಕೆಲ ದಿನಗಳ ಹಿಂದಷ್ಟೆ ನನ್ನ ಮದುವೆಯಾಗಿತ್ತು. ಕಾಂಬೋಡಿಯಾಕ್ಕೆ ಹನಿಮೂನ್ ಗೆಂದು ಹೋಗಿದ್ದೆವು. ನನಗೆ ಹಾಗೂ ನನ್ನ ಪತ್ನಿಗೆ ರಜೆ ಸಿಗುವುದೇ ಅಪರೂಪ. ಹಾಗಾಗಿ ನಾವಿಬ್ಬರೂ ಖುಷಿಯಾಗಿದ್ದೆವು. ಹನಿಮೂನ್ ಗಾಗಿ ರಜೆ ಅಪ್ಲೈ ಮಾಡಿದ್ದೆ. ರಜೆ ಅಪ್ಲೈ ಮಾಡಿದ ಮರುದಿನವೇ ಬಾಸ್ ನನಗೆ ರಜೆ ನೀಡಿದ್ದ. ಜನವರಿ ಒಂದರಂದು ನಾನು ರಜೆಗೆ ಅರ್ಜಿ ಸಲ್ಲಿಸಿದ್ದೆ. ಜನವರಿ 2ರಂದು ನನಗೆ ರಜೆಯ ಒಪ್ಪಿಗೆ ಸಿಕ್ಕಿತ್ತು. 

ರಜೆ ಸಿಗ್ತಿದ್ದಂತೆ ಸಂತೋಷಗೊಂಡ ನಾನು ಹನಿಮೂನ್ ಗೆ ಹೊರಟಿದ್ದೆ. ಹನಿಮೂನ್ ಗೆ ಹೋಗಿ ಮೂರನೇ ದಿನವೇ ಬಾಸ್ ನಿಂದ ಕರೆ ಬಂದಿತ್ತು. ಕ್ಲೈಂಟ್ ಒಬ್ಬರ ಇಂಪಾರ್ಟೆಂಟ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳುವಂತೆ ನನಗೆ ಹೇಳಿದ್ದರು. ಈ ಡೀಲ್ ತುಂಬಾ ಇಂಪಾರ್ಟೆಂಟ್. ಹಾಗಾಗಿ ಮಧ್ಯದಲ್ಲೇ ಬನ್ನಿ ಎಂದಿದ್ದರಂತೆ ಬಾಸ್. ಒಂದು ದಿನಕ್ಕೆ ಬಂದು ಹೋಗಿ ಎಂಬ ಬಾಸ್ ಬೇಡಿಕೆಗೆ ವ್ಯಕ್ತಿ ಇಲ್ಲವೆಂದಿದ್ದಾನಂತೆ. ನಾನು ಹನಿಮೂನ್ ನಲ್ಲಿದ್ದೇನೆ. ಮಧ್ಯದಲ್ಲಿ ಬರಲು ಸಾಧ್ಯವಿಲ್ಲ ಎಂದಿದ್ದಾನಂತೆ. ಇದ್ರಿಂದ ಕೋಪಗೊಂಡ ಬಾಸ್, ಒಂದು ಕೆಲಸ ಮಾಡೋಕೆ ಆಗಲ್ಲ ಅಂದ್ಮೇಲೆ ಟೀಂನಲ್ಲಿ ಹೇಗೆ ಮುಂದುವರೆಯಲು ಸಾಧ್ಯ ಎಂದಿದ್ದಾನೆ. 

PARENTING AN ANGRY TEEN: ಹರೆಯದ ಮಕ್ಕಳು ಕೋಪ ತರಿಸುತ್ತಾರೆಯೇ? ಹೀಗ್ಮಾಡಿ

ಇದ್ರಿಂದ ವ್ಯಕ್ತಿ ಟೆನ್ಷನ್ ಹೆಚ್ಚಾಗಿತ್ತಂತೆ. ಆ ಕಡೆ ಹನಿಮೂನ್ ಖುಷಿಯಿಲ್ಲ. ಈ ಕಡೆ ಕಚೇರಿಗೆ ಬರಲು ಆಗ್ತಿಲ್ಲ. ಈ ಎಲ್ಲದರ ಮಧ್ಯೆ ಪತಿಯ ಕೆಲಸ ನೋಡಿ ಪತ್ನಿಗೆ ಕೋಪ ಬಂದಿದೆ. ಯಾಕಾದ್ರೂ ಇಂಥ ವ್ಯಕ್ತಿಯನ್ನು ಮದುವೆಯಾದ್ನೋ ಎಂದು ಆಕೆ ಬೇಸರಗೊಂಡಿದ್ದಾಳಂತೆ.