ಐವರು ಯುವಕರ ಜೊತೆ ವಧುವಿನ ಫಸ್ಟ್ ನೈಟ್- ಶಾಕಿಂಗ್ ನ್ಯೂಸ್ ಬೆಳಕಿಗೆ
ಈ ವಿಷಯ ತಿಳಿದು ಪೊಲೀಸರು ಸಹ ಶಾಕ್ ಆಗಿದ್ದಾರೆ. ಇದೀಗ ಯುವತಿ ಜೊತೆ ಫಸ್ಟ್‌ನೈಟ್ ಮಾಡಿಕೊಂಡ ಯುವಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಮೀರತ್: ಮದುವೆ ಬಳಿಕ ಹಣ, ಆಭರಣಗಳ ಜೊತಯೆ ವಧು ಪರಾರಿಯಾಗಿರುವ (Bride Elope Case) ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತೇವೆ. ಇಂತಹ ಪ್ರಕರಣಗಳಲ್ಲಿ ಓಡಿ ಹೋದ ವಧುವನ್ನು ಹುಡುಕುತ್ತಾರೆ. ಇದೀಗ ಇದೇ ಮಾದರಿಯ ಕೊಂಚ ಭಿನ್ನ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಪೊಲೀಸರು ವಧುವಿನ ಬದಲಾಗಿ ಆಕೆಯಿಂದ ಮೋಸಕ್ಕೊಳಾಗಾದ ಯುವಕರನ್ನು (Grooms) ಹುಡುಕುತ್ತಿದ್ದಾರೆ. ಆದಷ್ಟು ಬೇಗ ವಧುವಿನ ಜೊತೆ ಫಸ್ಟ್‌ನೈಟ್ ಮಾಡಿಕೊಂಡವರಿಗೆ ಚಿಕಿತ್ಸೆ ಕೊಡಿಸಬೇಕಿದೆ. ಏನಿದು ಪ್ರಕರಣ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
20 ವರ್ಷದ ಯುವತಿ ಐವರು ಯುವಕರೊಂದಿಗೆ ಮದುವೆಯಾಗಿ ಹಣ ಮತ್ತು ಚಿನ್ನಾಭರಣ ಜೊತೆ ಪರಾರಿಯಾಗಿದ್ದಾಳೆ. ಮದುವೆಯಾದ ಕೆಲ ದಿನಗಳ ನಂತರ ರಾತ್ರೋರಾತ್ರಿ ಹಣ ಹಾಗೂ ಚಿನ್ನದ ಜೊತೆ ಈ ವಧು ಪರಾರಿಯಾಗುತ್ತಿದ್ದಳು. ಯುವತಿಯನ್ನು ಬಂಧಿಸಿದ ಬಳಿಕ ಶಾಕಿಂಗ್ ವಿಷಯವೊಂದು ಹೊರ ಬಂದಿದೆ. ಈ ವಿಷಯ ತಿಳಿದು ಪೊಲೀಸರು ಸಹ ಶಾಕ್ ಆಗಿದ್ದಾರೆ. ಇದೀಗ ಯುವತಿ ಜೊತೆ ಫಸ್ಟ್‌ನೈಟ್ ಮಾಡಿಕೊಂಡ ಯುವಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಮೊಬೈಲ್‌ನಲ್ಲಿ ಏನು ಡೌನ್‌ಲೋಡ್ ಮಾಡಿದ್ದೀಯಾ? ತಂದೆ ಬೈದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ ಮಗಳು
ವಿಷಯ ಕೇಳಿ ಪೊಲೀಸರು ಶಾಕ್!
ಮೋಸ ಮಾಡಿ ಪರಾರಿಯಾಗುತ್ತಿದ್ದ ಯುವತಿ ಬಗ್ಗೆ ಮೀರತ್ ಭಾಗದಲ್ಲ ದೂರು ದಾಖಲಾಗಿತ್ತು. ಪೊಲೀಸರು 6ನೇ ಮೇ 2024ರಂದು ಯುವತಿಯನ್ನು ಬಂಧಿಸಿದಾಗ ಆಕೆ ಗರ್ಭಿಣಿಯಾಗಿದ್ದಳು. ಬಂಧನದ ಬಳಿಕ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಹೆಚ್ಐವಿ ಪಾಸಿಟಿವ್ ಎಂಬ ವಿಷಯ ಗೊತ್ತಾಗಿದೆ. ಇದೀಗ ಯಾರೆಲ್ಲಾ ಜೊತೆ ಸಂಬಂಧ ಹೊಂದಿದ್ದಾಳೆ ಅವರಿಗೂ ಹೆಚ್‌ಐವಿ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಆದ್ದರಿಂದ ಪೊಲೀಸರು ಯುವತಿಯಿಂದ ಮೋಸಕ್ಕೊಳಗಾದವರನ್ನು ಹುಡುಕಲು ಆರಂಭಿಸಿದ್ದಾರೆ.
ಯುವಕರ ಪತ್ತೆಗೆ ಮುಂದಾದ ಪೊಲೀಸರು!
ಪೊಲೀಸರ ಮುಂದೆ ತಾನು ಐವರ ಜೊತೆ ಮದುವೆಯಾಗಿರೋದಾಗಿ ಹೇಳಿಕೊಂಡಿದ್ದಾಳೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಜನರನ್ನು ಮೋಸ ಮಾಡುತ್ತಿದ್ದಳು. ಯುವತಿ ಹೆಚ್‌ಐವಿ ಪಾಸಿಟಿವ್ ಎಂಬ ವಿಷಯ ತಿಳಿಯುತ್ತಲೇ ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೂಡಲೇ ಯುವಕರನ್ನು ಪತ್ತೆ ಮಾಡಿ ಹೆಚ್ಐವಿ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಜ್ಜನ 90 ಲಕ್ಷ ಕದ್ದು, ದೇವರ ಹುಂಡಿಗೆ 1 ಲಕ್ಷ ಹಾಕಿ ಎಂಜಾಯ್ ಮಾಡಲು ಮನಾಲಿಗೆ ಹೋದಳು!