ಗಂಡನಿಗೆ ಗರ್ಲ್‌ಫ್ರೆಂಡ್‌, ಹೆಂಡತಿಗೆ ಬಾಯ್‌ಫ್ರೆಂಡ್‌! ಏನಿದು ಓಪನ್‌ ಮ್ಯಾರೇಜ್?‌

ಜನರೇಷನ್ಮು‌ ಝೀ ಅಥವಾ ಈಗಿನ ತಲೆಮಾರು ಅಂತ ನಾವು ಹೇಳ್ತೀವಲ್ಲಾ ಅದು, ಕೆಲವು ವಿಚಿತ್ರ ಸಂಬಂಧಗಳನ್ನು ಸೃಷ್ಟಿಸಿಕೊಳ್ತಾ ಇದೆ. ಅವುಗಳಲ್ಲಿ ಓಪನ್‌ ಮ್ಯಾರೇಜ್‌ ಕೂಡ ಒಂದು. ಏನಿದು ಓಪನ್‌ ಮ್ಯಾರೇಜ್?‌ ಹೇಗಾಗುತ್ತೆ ಇದು? ಇಲ್ಲಿದೆ ವಿವರ.

New generation and culture of open marriage what is that bni

ಓಪನ್ ಮ್ಯಾರೇಜ್ ಅನ್ನು ಮುಕ್ತ ವಿವಾಹ ಎಂದು ಕನ್ನಡದಲ್ಲಿ ಹೇಳಬಹುದೇನೋ. ಆದರೆ ಓಪನ್‌ ಮ್ಯಾರೇಜ್‌ ಎನ್ನುವ ಇಂಗ್ಲಿಷ್‌ನ ಧ್ವನಿ ಇದರಲ್ಲಿ ಬರುವುದಿಲ್ಲ. ಯಾಕೆಂದರೆ ಈ ಸಂಸ್ಕೃತಿ ಬಂದಿರುವುದೇ ಇಂಗ್ಲಿಷ್‌ ಕಡೆಯಿಂದ. ಅಮೆರಿಕ ಮುಂತಾದ ಕಡೆಗಳ ಓಪನ್‌ ಕಲ್ಚರ್‌ನ ಪರಿಣಾಮ ಇದು. ಇಂದಿನ ಜನರೇಶನ್‌ನಲ್ಲಿ‌ ಬಹು ಮಂದಿಗೆ ಸಮ್ಮತವಾಗಿರುವ ಕಲ್ಚರ್‌ ಈ ಓಪನ್‌ ಮ್ಯಾರೇಜ್.‌ ಇಷ್ಟಕ್ಕೂ ಏನಿದು ಓಪನ್‌ ಮ್ಯಾರೇಜ್‌ ಅಂದ್ರೆ?

ಮದುವೆ ಅಂದ್ರೆ ಎರಡು ಹೃದಯಗಳನ್ನು ಸಂಪರ್ಕಿಸುವ ಬಂಧನ ಎಂಬುದು ನಮ್ಮ ನಂಬಿಕೆ. ಈ ವ್ಯವಸ್ಥೆಯಲ್ಲಿ ಗಂಡ ಹೆಂಡತಿ ಒಟ್ಟಿಗೆ ವಾಸಿಸುತ್ತಾರೆ. ಸಂತೋಷ ಮತ್ತು ದುಃಖದಲ್ಲಿ ಇವರು ಪರಸ್ಪರ ಇರುತ್ತಾರೆ. ಮುಕ್ತ ವಿವಾಹ ಇದರ ನಡುವಿನ ಒಂದು ಟ್ರೆಂಡ್‌. ಇದು ಹೊಸ ಜನರೇಶನ್‌ನಲ್ಲಿ ಹೆಚ್ಚುತ್ತಿದೆ. ಇದರ ಅರ್ಥ ಸಿಂಪಲ್.‌ ಪತಿ ಮತ್ತು ಪತ್ನಿ ಇಬ್ಬರೂ ವಿವಾಹಿತರೂ ಪರಸ್ಪರರ ವಿವಾಹೇತರ ಸಂಬಂಧವನ್ನು ಒಪ್ಪಿಕೊಳ್ಳುವುದು ಎಂದು. 

ಅಂದರೆ ಮದುವೆಯ ನಂತರವೂ ಅವರಲ್ಲಿ ಒಬ್ಬ ಅಥವಾ ಇಬ್ಬರೂ ಆ ವಿವಾಹದಾಚಿನ ಬೇರೊಬ್ಬರ ಜೊತೆಗೆ ಪ್ರಣಯ ಸಂಬಂಧ ಹೊಂದಿದ್ದರೆ, ಅದು ಓಕೆ. ಅದನ್ನು ದಾಂಪತ್ಯ ದ್ರೋಹ ಎಂದು ಪರಿಗಣಿಸಲಾಗುವುದಿಲ್ಲ. ಅಂದರೆ ಹೆಂಡತಿ ಬಾಯ್‌ಫ್ರೆಂಡ್‌ ಇಟ್ಟುಕೊಳ್ಳಬಹುದು. ಗಂಡ ಗರ್ಲ್‌ಫ್ರೆಂಡ್‌ ಇಟ್ಟುಕೊಳ್ಳಬಹುದು. 

ಮುಕ್ತ ದಾಂಪತ್ಯದಲ್ಲಿ ಪರಸ್ಪರ ತಿಳುವಳಿಕೆ ಇರುತ್ತದೆ. ಇಬ್ಬರಲ್ಲಿ ಯಾರೂ ಅನ್ಯ ಸಂಬಂಧ ಆಕ್ಷೇಪಿಸುವುದಿಲ್ಲ. ಗಂಡನಲ್ಲಿ ಸಿಗದ ಸಾಂಗತ್ಯ ಅಥವಾ ಸುಖವನ್ನು ಹೆಂಡತಿ ಇನ್ನೊಬ್ಬನಲ್ಲಿ ಕಂಡುಕೊಳ್ಳಬಹುದು. ಹೆಂಡತಿಯಲ್ಲಿ ಸಿಗದ ಪ್ರೇಮ ಅಥವಾ ಆನಂದವನ್ನು ಗಂಡ ಬೇರೊಬ್ಬ ಗೆಳತಿಯಲ್ಲಿ ಅನ್ವೇಷಿಸಬಹುದು. ಹಾಗಂತ ಇಬ್ಬರೂ ದಾಂಪತ್ಯ ಮುರಿದುಕೊಳ್ಳುವುದಿಲ್ಲ. ಅದು ಹಾಗೇ ಮುಂದುವರಿಯುತ್ತದೆ. 

ಮುಕ್ತ ವಿವಾಹದಲ್ಲಿ ಪ್ರಾಮಾಣಿಕತೆ ಮುಖ್ಯ. ಕೆಲವು ಜನರು ಮುಕ್ತ ವಿವಾಹ ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ನಂಬುತ್ತಾರೆ. ನಿಮ್ಮ ಸಂಗಾತಿಗೆ ನೀವು ಸುಳ್ಳು ಹೇಳುತ್ತಿಲ್ಲ, ಮೋಸ ಮಾಡುತ್ತಿಲ್ಲ ಎಂದು ಇದು ತೋರಿಸುತ್ತದೆ. ಸಂಬಂಧ ಬೇರೆ, ನಂಬಿಕೆ ಬೇರೆ. ದೈಹಿಕ ಸಂಬಂಧ ಇಲ್ಲದೆಯೂ ಗಂಡ- ಹೆಂಡತಿ ನಡುವೆ ನಂಬಿಕೆ ಇರಲು ಸಾಧ್ಯ. ಹಾಗಂತ ವಿವಾಹದಾಚೆಗಿನ ಸಂಬಂಧದಲ್ಲಿ ದೈಹಿಕ ಸಂಬಂಧವೂ ಇರಲೇಬೇಕೆಂದಿಲ್ಲ. ಇದ್ದರೆ ತಪ್ಪಲ್ಲ. ಓಪನ್‌ ಮ್ಯಾರೇಜ್‌ನಲ್ಲಿ ಜೋಡಿ ಯಾವುದೇ ನಿರ್ಬಂಧವಿಲ್ಲದೆ ಅವರ ದೈಹಿಕ ಅಥವಾ ಮಾನಸಿಕ ಆಸೆಗಳನ್ನು ಪೂರೈಸಬಹುದು. 

ಮದುವೆ ಆಗೋದಿಲ್ಲ ಎಂದಿದ್ದ ಅನಂತ್ ಅಂಬಾನಿ ರಾಧಿಕಾ ಕೈ ಹಿಡಿದ್ರು, ಪತ್ನಿ‌ ಮೇಲೆ ಅಂಬಾನಿ ಮಗನಿಗೆ ಬೆಟ್ಟದಷ್ಟು ಪ್ರೀತಿ

ಆದರೆ ಕೆಲವು ಅನಾನುಕೂಲಗಳೂ ಇದರಲ್ಲಿ ಇವೆ. ವೈವಾಹಿಕ ಜೀವನದ ನಡುವೆ ಓಪನ್‌ ಮ್ಯಾರೇಜ್‌ ಪ್ರಸಕ್ತಿ ಬಂದರೆ, ಇವರಲ್ಲಿ ಒಬ್ಬರು, ಇನ್ನೊಬ್ಬರ ಬಗೆಗೆ ಅಸೂಯೆ ಹೊಂದಬಹುದು. ಅಂದರೆ ಒಬ್ಬರಿಗೆ ಬೇರೊಬ್ಬರು ಸಂಗಾತಿ ಸಿಕ್ಕಿ ಇನ್ನೊಬ್ಬರಿಗೆ ಸಿಗದೇ ಹೋದಾಗ, ಅವರಿಗೆ ಅಸೂಯೆ ಉಂಟಾಗಬಹುದು. ಅಥವಾ ಅಸುರಕ್ಷಿತ ಭಾವನೆ ಇರಬಹುದು. ಇಷ್ಟೇ ಅಲ್ಲ, ದಂಪತಿಗಳ ವಿಶ್ವಾಸವೂ ಮುರಿದುಹೋಗಬಹುದು ಮತ್ತು ಕಂದಕವನ್ನು ಸೃಷ್ಟಿಸಬಹುದು.

ಇನ್ನೂ ಒಂದು ಸಮಸ್ಯೆ ಎಂದರೆ ಲೈಂಗಿಕ ಕಾಯಿಲೆ ಅಥವಾ ಸೋಂಕಿನದು. ಇದು ಓಪನ್‌ ಆಗಿರುವ ಅಪಾಯದ ಸಾಧ್ಯತೆ. 

ಈ ಸಂಬಂಧದಲ್ಲಿ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಇಬ್ಬರೂ ಈ ರೀತಿಯ ಸಂಬಂಧವನ್ನು ನಿಭಾಯಿಸಲು ಸಿದ್ಧರಿದ್ದರೆ ಮಾತ್ರ , ಇದರ ಕುರಿತ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಜೊತೆಗೆ ಇಬ್ಬರೂ ಆ ಕುರಿತ ಸಾಮಾಜಿಕ ಒತ್ತಡವನ್ನು ಎದುರಿಸಲೂ ಸಿದ್ಧರಿರಬೇಕು. 

ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್​ ಮಾತಿಗೆ ಪತ್ನಿ ಶಾಕ್​!
 

Latest Videos
Follow Us:
Download App:
  • android
  • ios