ಮದುವೆಗೂ ಮೊದಲು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕಾಮನ್. ಯೋಚನೆ ಮಾಡದ ರೀತಿಯಲ್ಲಿ ಹಲವರು ಶೂಟ್ ಮಾಡಿದ್ದಾರೆ. ಇಲ್ಲೊಂದು ಜೋಡಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ನಲ್ಲಿ ಎಲ್ಲಾ ಮುಗಿಸಿ ಬಿಟ್ಟಿದೆ. ಈ ವಿಡಿಯೋ ನೋಡಿದ ಜನ, ಮದುವೆ ದಿನ ಬೆಡ್ ರೂಂ ಶೂಟ್ ಇದೆಯಾ ಎಂದು ಪ್ರಶ್ನಿಸಿದ್ದಾರೆ. 

ಭಾರತದಲ್ಲಿ ಮದುವೆಗೆ ವಿಶೇಷ ಸ್ಥಾನ. ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಸ್ಮರಣೀಯವಾಗಿಸಲು ಹಲವರು ಪ್ರಯತ್ನಿಸುತ್ತಾರೆ. ಇದೀಗ ಮದುವೆಯನ್ನು ಮತ್ತಷ್ಟು ಕಲರ್‌ಫುಲ್ ಮಾಡಲಾಗಿದೆ. ಈ ಪೈಕಿ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಸೇರಿದಂತೆ ಹಲವು ಫೋಟೋಶೂಟ್‌ಗಳನ್ನು ಮಾಡುತ್ತಾರೆ. ಪ್ರೀ ವೆಡ್ಡಿಂಗ್ ಇದೀಗ ಸಾಮಾನ್ಯವಾಗಿದೆ. ನೀರು, ಬೆಟ್ಟ, ಕಾಡು, ಸೇರಿದಂತೆ ಹಲೆವೆಡೆ ಪ್ರಿ ವೆಡ್ಡಿಂಗ್ ಶೂಟ್ ಮಾಡಿ ಗಮನಸೆಳೆದವರು ಇದ್ದಾರೆ. ಆದರೆ ಇಲ್ಲೊಂದು ಜೋಡಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನಲ್ಲೇ ಹದ್ದು ಮೀರಿದೆ. ರೊಮ್ಯಾಂಟಿಕ್ ವಿಡಿಯೋವನ್ನು ಶೂಟ್ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರರಿದಾಡುತ್ತಿದ್ದು, ಜನ ದಂಗಾಗಿದ್ದಾರೆ.

ಜೋಡಿಯ ಮದುವೆಗೂ ಮುನ್ನ ಪ್ರೀ ಶೂಟ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಜೋಡಿಯೊಂದು ಸಿಂಗರಿಸಿಕೊಂಡು ಫೋಟೋ ಶೂಟ್ ಮಾಡಿದೆ. ಆದರೆ ಈ ವಿಡಿಯೋ ಆರಂಭಗೊಳ್ಳುತ್ತಿರುವುದು ಲಿಪ್ ಲಾಕ್ ಮೂಲಕ, ಅಷ್ಟೇ ಅಲ್ಲ ಅಂತ್ಯಗೊಳ್ಳುತ್ತಿರುವುದು ಲಿಪ್ ಲಾಕ್ ಮೂಲಕ. ಈ ಶಾರ್ಟ್ ವಿಡಿಯೋದಲ್ಲಿ ಜೋಡಿಗಳ ಲಿಪ್‌ಲಾಕ್ ಮಾತ್ರವಿದೆ. ಇದು ಪ್ರಿ ವೆಡ್ಡಿಂಗ್ ಫೋಟೋಶೂಟ್‌ನ ಸಣ್ಣ ತುಣುಕು ಮಾತ್ರ.

ಚಾಣಕ್ಯ ನೀತಿ: ಪತಿಯಿಂದ ಪತ್ನಿಗೆ ಸಿಗಬೇಕಾದ 5 ಸುಖಗಳು

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಪಾಶ್ಟಾತ್ಯದಲ್ಲಿನ ಸಂಸ್ಕೃತಿಗಳನ್ನು ಯುವ ಸಮೂಹ ಭಾರತದಲ್ಲಿ ಅನುಸರಿಸುತ್ತಿದ್ದಾರೆ. ಇದು ಭಾರತಕ್ಕೆ ಸೂಕ್ತವಾಗಿಲ್ಲ. ಈ ರೀತಿ ಮಿತಿ ಮೀರಿದ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಯಾಕೆ ಬೇಕು? ಮದುವೆಯಾಗಿ ಸುಖ ಸಂಸಾರ ನಡೆಸಿ, ಅದನ್ನು ಬಿಟ್ಟು ಈ ರೀತಿಯ ವಿಡಿಯೋಗಳು ಕೆಟ್ಟ ಸಂದೇಶ ನೀಡುತ್ತಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. 

Scroll to load tweet…

ಜೋಡಿಯ ಕುಟುಂಬ ಈ ರೀತಿಯ ಫೋಟೋಶೂಟ್‌ಗೆ ಅನುಮತಿ ನೀಡಿದ್ದೆ ಅಚ್ಚರಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಫುಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಇದರ ಜೊತೆಗೆ ಮದುವೆ ದಿನದ ವಿಡಿಯೋ ಪೋಸ್ಟ್ ಮಾಡಲು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ. ಇದು ಪ್ರೀ ವೆಡ್ಡಿಂಗ್ ಶೂಟ್ ರೀತಿ ಇಲ್ಲ, ಮಂದುವರಿದ ಜೋಡಿ ಇದು. ಇವರಿಗೆ ಈಗಾಗಲೇ ಮಕ್ಕಳಿರುವ ಸಾಧ್ಯತೆ ಇದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಕಣ್ಣಿನಿಂದ ಇನ್ನೇನು ಏನೇನು ನೋಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. 

ಪ್ರೀ ವೆಡ್ಡಿಂಗ್ ಶೂಟ್ ಕುರಿತು ಪರ ವಿರೋಧಗಳು ಕೇಳಿಬರುತ್ತಿರುವುದು ಹೊಸದೇನಲ್ಲ. ಇದೇ ರೀತಿಯ ಹಲವರು ಜೋಡಿಗಳು ತಮ್ಮ ಪ್ರೀ ವೆಡ್ಡಿಂಗ್ ಶೂಟ್ ಮಾಡಿಕೊಂಡಿದೆ. ಈ ವಿಡಿಯೋಗಳು ಬಾರಿ ವಿರೋಧಕ್ಕೂ, ಟ್ರೋಲ್‌ಗೂ ಕಾರಣವಾಗಿದೆ. ಇದೀಗ ಈ ವಿಡಿಯೋ ಸೇರಿಕೊಂಡಿದೆ.

ಪ್ರೀತಿ ಅತಿಯಾದಾಗ ಹೀಗೆ ಆಗೋದು? ಕಾರ್‌ನಲ್ಲಿಯೇ ಮುಖಕ್ಕೆ ಪಟ ಪಟ ಅಂತ ಹೊಡೆದಾಡಿಕೊಂಡ ಗಂಡ ಹೆಂಡತಿ